AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೂರು ಚಕ್ರದ ಸೈಕಲ್ ಓಡಿಸುತ್ತಿರುವ ಈ ಬಾಲಕಿ ಈಗ ಸ್ಟಾರ್ ನಟಿ; ಯಾರೆಂದು ಗುರುತಿಸಿ

ಕಿಯಾರಾ ಈಗ ಸಖತ್ ಕ್ಯೂಟ್ ಆಗಿ ಕಾಣಿಸುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಹಲವು ಫೋಟೋಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ. ಅವರು ಈಗಷ್ಟೇ ಅಲ್ಲ ಬಾಲ್ಯದಲ್ಲೂ ಸಖತ್ ಕ್ಯೂಟ್ ಆಗಿದ್ದರು. ಇದಕ್ಕೆ ಸಾಕ್ಷಿ ಎಂಬಂತೆ ಹೊಸ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋ ಗಮನ ಸೆಳೆಯುತ್ತಿದೆ.

ಮೂರು ಚಕ್ರದ ಸೈಕಲ್ ಓಡಿಸುತ್ತಿರುವ ಈ ಬಾಲಕಿ ಈಗ ಸ್ಟಾರ್ ನಟಿ; ಯಾರೆಂದು ಗುರುತಿಸಿ
ಮೂರು ಚಕ್ರದ ಸೈಕಲ್ ಓಡಿಸುತ್ತಿರುವ ಈ ಬಾಲಕಿ ಈಗ ಸ್ಟಾರ್ ನಟಿ
ರಾಜೇಶ್ ದುಗ್ಗುಮನೆ
|

Updated on: Feb 07, 2024 | 12:10 PM

Share

ಸೆಲೆಬ್ರಿಟಿಗಳ ಚೈಲ್ಡ್​​ವುಡ್ ಫೋಟೋ ಎಂದರೆ ಅಭಿಮಾನಿಗಳಿಗೆ ಒಂತರಾ ಕ್ರೇಜ್. ಸೆಲೆಬ್ರಿಟಿಗಳು ಬಾಲ್ಯದ ಫೋಟೋಗಳನ್ನು ಶೇರ್​ ಮಾಡಿಕೊಳ್ಳಲಿ ಎಂದು ಫ್ಯಾನ್ಸ್ ಕಾಯುತ್ತಾ ಇರುತ್ತಾರೆ. ಸೆಲೆಬ್ರಿಟಿಗಳು ಯಾವಾಗಲೋ ಹಂಚಿಕೊಂಡಿದ್ದ ಬಾಲ್ಯದ ಫೋಟೋಗಳನ್ನು ಅಭಿಮಾನಿಗಳು ಆಗಾಗ ಶೇರ್ ಮಾಡಿಕೊಳ್ಳುತ್ತಾರೆ. ಈಗ ಸ್ಟಾರ್ ನಟಿಯ ಬಾಲ್ಯದ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಮೂರು ಚಕ್ರದ ಸೈಕಲ್ ಹೊಡೆಯುತ್ತಾ ಬಾಲಕಿ ಎಂಜಾಯ್ ಮಾಡಿದ್ದಾಳೆ. ಅವರು ಬೇರಾರೂ ಅಲ್ಲ ನಟಿ ಕಿಯಾರಾ ಅಡ್ವಾಣಿ (Kiara Advani).

ಕಿಯಾರಾ ಅವರು ಈಗ ಸಖತ್ ಕ್ಯೂಟ್ ಆಗಿದ್ದಾರೆ. ಅವರು ಹಲವು ಫೋಟೋಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ. ಅವರು ಈಗಷ್ಟೇ ಅಲ್ಲ ಬಾಲ್ಯದಲ್ಲೂ ಸಖತ್ ಕ್ಯೂಟ್ ಆಗಿದ್ದರು. ಇದಕ್ಕೆ ಸಾಕ್ಷಿ ಎಂಬಂತೆ ಹೊಸ ವಿಡಿಯೋ ವೈರಲ್ ಆಗಿದೆ. ಕಿಯಾರಾ ಅವರ ಮೊದಲ ಹೆಸರು ಆಲಿಯಾ ಎಂದು. ವಿಡಿಯೋದಲ್ಲಿ ಆ ಹೆಸರಿನಲ್ಲೇ ಅವರನ್ನು ಕರೆಯಲಾಗಿದೆ.

ಕಿಯಾರಾ ಅವರು ಭರತನಾಟ್ಯ ಮಾಡುತ್ತಿರುವುದು ವಿಡಿಯೋದಲ್ಲಿದೆ. ಮತ್ತೊಂದು ವಿಡಿಯೋದಲ್ಲಿ ಮೂರು ಚಕ್ರದ ಸೈಕಲ್​ನ ಅವರು ಚಾಲನೆ ಮಾಡುತ್ತಿದ್ದಾರೆ. ಈ ವಿಡಿಯೋಗಳನ್ನು ಸೇರಿಸಿ ವೈರಲ್ ಮಾಡಲಾಗಿದೆ. ಅವರ ಅಭಿಮಾನಿಗಳು ಇದನ್ನು ಹಂಚಿಕೊಳ್ಳುತ್ತಿದ್ದಾರೆ.

ಕಿಯಾರಾ ವೈರಲ್ ವಿಡಿಯೋ..

View this post on Instagram

A post shared by Akn creator (@akncreator)

ಕಿಯಾರಾ ಸಿನಿಮಾ ರಂಗದ ಜೊತೆ ಸಂಪರ್ಕ ಹೊಂದಿರುವ ಕುಟುಂಬದಿಂದಲೇ ಬಂದಿದ್ದಾರೆ. ಅವರ ತಾಯಿಯ ಕುಟುಂಬದ ಅನೇಕರಿಗೆ ಸಿನಿಮಾ ರಂಗದವರ ಜೊತೆ ಕನೆಕ್ಷನ್ ಇತ್ತು. ಈ ಕಾರಣದಿಂದ ಕಿಯಾರಾಗೆ ಸಿನಿಮಾ ರಂಗಕ್ಕೆ ಬರೋದು ಸುಲಭ ಆಯಿತು. ಅವರು ಚಿತ್ರರಂಗದಲ್ಲಿ ಸಾಕಷ್ಟು ಮಿಂಚುತ್ತಿದ್ದಾರೆ.

ಇದನ್ನೂ ಓದಿ: ವಿವಾಹ ವಾರ್ಷಿಕೋತ್ಸವದ ಖುಷಿಯಲ್ಲಿ ಕಿಯಾರಾ-ಸಿದ್ದಾರ್ಥ್; ಮಂಡಿಯೂರಿ ಪ್ರಪೋಸ್ ಮಾಡಿದ್ದ ನಟ

ಕಿಯಾರಾ ಅವರಿಗೆ ಇಂದು (ಫೆಬ್ರವರಿ 7) ಮೊದಲ ವಿವಾಹ ವಾರ್ಷಿಕೋತ್ಸವದ ಸಂಭ್ರಮ. ಸಿದ್ದಾರ್ಥ್ ಮಲ್ಹೋತ್ರ ಜೊತೆ ಅವರು 2023ರ ಫೆಬ್ರವರಿ 7ರಂದು ವಿವಾಹ ಆದರು. ಅವರಿಗೆ ಅನೇಕ ಸೆಲೆಬ್ರಿಟಿಗಳು ಶುಭಾಶಯ ಕೋರುತ್ತಿದ್ದಾರೆ. ‘ಗೇಮ್ ಚೇಂಜರ್’, ‘ಡಾನ್ 3’ ಅಂಥ ಸಿನಿಮಾಗಳಲ್ಲಿ ಕಿಯಾರಾ ನಟಿಸುತ್ತಿದ್ದಾರೆ. ಇತ್ತೀಚೆಗೆ ಅವರಿಗೆ ಬ್ಯಾಕ್ ಟು ಬ್ಯಾಕ್ ಗೆಲುವು ಸಿಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ