ನಟ ಇಮ್ರಾನ್ ಹಷ್ಮಿ (Emran Hashmi) ವಿವಾದಗಳಿಂದ ದೂರವೇ ಇರಲು ಬಯಸುತ್ತಾರೆ. ಹಷ್ಮಿ ಸಂದರ್ಶನ ನೀಡೋದು ಬಹಳ ಕಡಿಮೆ. ಪಾರ್ಟಿಗಳಲ್ಲಿ ಭಾಗಿ ಆಗುವುದಿಲ್ಲ. 2013ರಲ್ಲಿ ‘ಕಾಫಿ ವಿತ್ ಕರಣ್ ಸೀಸನ್ 4’ರಲ್ಲಿ ಅವರು ಭಾಗಿ ಆಗಿದ್ದರು. ಈ ವೇಳೆ ಐಶ್ವರ್ಯಾ ರೈ ಅವರನ್ನು ‘ಪ್ಲಾಸ್ಟಿಕ್’ ಎಂದು ಕರೆದಿದ್ದರು. ಇದು ದೊಡ್ಡ ಮಟ್ಟದಲ್ಲಿ ವಿವಾದ ಆಗಿತ್ತು. ಈ ಬಗ್ಗೆ ಕರಣ್ ಜೋಹರ್ ಅವರು ಮಾತನಾಡಿದ್ದಾರೆ. ಈ ಘಟನೆ ನಡೆದು 10 ವರ್ಷಗಳೇ ಕಳೆದಿವೆ. ಈಗ ಅವರು ಆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
‘ಕಾಫಿ ವಿತ್ ಕರಣ್’ ಶೋನಲ್ಲಿ ವಿವಾದಗಳು ಹುಟ್ಟಿಕೊಳ್ಳುತ್ತವೆ. ಇಮ್ರಾನ್ ಹಷ್ಮಿ ಕೂಡ ಈ ರೀತಿ ವಿವಾದ ಮಾಡಿಕೊಂಡಿದ್ದರು. ರ‍್ಯಾಪಿಡ್ ಫೈರ್ ವೇಳೆ ಕರಣ್ ಜೋಹರ್ ಒಂದಷ್ಟು ಪ್ರಶ್ನೆ ಕೇಳಿದ್ದರು. ‘ಪ್ಲಾಸ್ಟಿಕ್’ ಎಂದು ಕೇಳಿದಾಗ ಐಶ್ವರ್ಯಾ ರೈ ಅವರ ಹೆಸರನ್ನು ತೆಗೆದುಕೊಂಡಿದ್ದರು. ಇದಾದ ಬಳಿಕ ಅವರು ಸಾಕಷ್ಟು ಟೀಕೆಗೆ ಒಳಗಾದರು. ಓವರ್ ರೇಟೆಡ್ ಎಂದಾಗ ತಮ್ಮ ಹೆಸರನ್ನೇ ಅವರು ತೆಗೆದುಕೊಂಡಿದ್ದರು ಅನ್ನೋದು ವಿಶೇಷ.
‘ಐಶ್ವರ್ಯಾ ರೈ ಅವರನ್ನು ಪ್ಲಾಸ್ಟಿಕ್ ಎಂದು ಕರೆದಿದ್ದಕ್ಕೆ ಆ ಭಾರವನ್ನು ಹೊರಲು ನಾನು ಸಿದ್ಧನಿದ್ದೇನೆ’ ಎಂದು ಇಮ್ರಾನ್ ಹಷ್ಮಿ ಹೇಳಿದ್ದಾರೆ. ಇಮ್ರಾನ್ ಹಷ್ಮಿ ಅವರ ಹೇಳಿಕೆಯಿಂದ ಕರಣ್ ಜೋಹರ್ ಕೂಡ ಸರ್ಪ್ರೈಸ್ಗೆ ಒಳಗಾಗಿದ್ದರು. ಈ ಮೊದಲು ಕರಣ್ ಜೋಹರ್ ಅವರು ಈ ಬಗ್ಗೆ ಮಾತನಾಡಿದ್ದರು. ‘ರ್ಯಾಪಿಡ್ ಫೈರ್ ಆಗಿದ್ದಕ್ಕಾಗಿ ನಾನು ಆ ಹೇಳಿಕೆ ನೀಡಿದ್ದೆ’ ಎಂದಿದ್ದರು ಅವರು.
ಇದನ್ನೂ ಓದಿ:ಹೊಸ ಇಮೇಜ್ ಪಡೆಯಲು ಮುಂದಾದ ಇಮ್ರಾನ್ ಹಷ್ಮಿ; ‘ಡಾನ್ 3’ ಚಿತ್ರದಲ್ಲಿ ನೆಗೆಟಿವ್ ಪಾತ್ರ?
ಇಮ್ರಾನ್ ಹಷ್ಮಿ ಅವರು ಸೀರಿಯಲ್ ಕಿಸ್ಸರ್ ಆಗಿ ಕಾಣಿಸಿಕೊಂಡಿದ್ದರು. ಅವರ ಸಿನಿಮಾಗಳು ಈ ರೀತಿ ಆಗಿಯೇ ಹೈಲೈಟ್ ಆಗಿದ್ದರು. ಆದರೆ, ಇತ್ತೀಚೆಗೆ ಅವರ ಪಾತ್ರಗಳ ಆಯ್ಕೆಯಲ್ಲಿ ಬದಲಾಗಿದ್ದಾರೆ. ‘ಟೈಗರ್ 3’ ಸಿನಿಮಾದಲ್ಲಿ ಇಮ್ರಾನ್ ಅವರು ವಿಲನ್ ಪಾತ್ರ ಮಾಡಿದ್ದಾರೆ. ಪವನ್ ಕಲ್ಯಾಣ್ ನಟನೆಯ ‘ಒಜಿ’ ಸಿನಿಮಾದಲ್ಲಿ ವಿಲನ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಅವರ ನಟನೆಯ ಮೊದಲ ತೆಲುಗು ಸಿನಿಮಾ. ‘ಜಿ2’ ಚಿತ್ರಕ್ಕೂ ಇಮ್ರಾನ್ ಹಷ್ಮಿ ವಿಲನ್. ಅವರನ್ನು ವಿಲನ್ ಆಗಿ ಜನರು ಇಷ್ಟಪಡುತ್ತಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ