ಶ್ರೀದೇವಿ ಪುಣ್ಯತಿಥಿ: ಅಂದು ದುಬೈನಲ್ಲಿ ನಿಜಕ್ಕೂ ನಡೆದಿದ್ದು ಏನು?
ಶ್ರೀದೇವಿ ಮೃತಪಡುವಾಗ ಅವರಿಗೆ 54 ವರ್ಷ ವಯಸ್ಸಾಗಿತ್ತು. ಅವರು ಮೃತಪಟ್ಟಿದ್ದದಾರೆ ಎನ್ನುವ ವಿಚಾರ ಅನೇಕರಿಗೆ ಶಾಕಿಂಗ್ ಎನಿಸಿದೆ. ಶ್ರೀದೇವಿ ಮದುವೆ ಅಟೆಂಡ್ ಮಾಡಲು ದುಬೈಗೆ ತೆರಳಿದ್ದರು. ಅವರ ಸಂಬಂಧಿ ಮೋಹಿತ್ ಮರ್ವಾ ಅವರ ಮದುವೆ ದುಬೈನಲ್ಲಿತ್ತು. ಅವರ ಜೊತೆ ಬೋನಿ ಕಪೂರ್ ಹಾಗೂ ಖುಷಿ ಕಪೂರ್ ಕೂಡ ಇದ್ದರು.
ಇಂದು (ಫೆಬ್ರವರಿ 23) ಬಾಲಿವುಡ್ನ ಖ್ಯಾತ ನಟಿ ಹಾಗೂ ಪದ್ಮಶ್ರೀ ವಿಜೇತೆ ನಟಿ ಶ್ರೀದೇವಿ (Sridevi) ಅವರ ಪುಣ್ಯತಿಥಿ. ಅವರು ಮೃತಪಟ್ಟು ಇಂದಿಗೆ ಆರು ವರ್ಷ. ಅವರು ಮೃತಪಟ್ಟಿದ್ದಾರೆ ಎಂಬುದನ್ನು ಒಪ್ಪಿಕೊಳ್ಳೋಕೆ ಅನೇಕರಿಗೆ ಸಾಧ್ಯವೇ ಆಗುತ್ತಿಲ್ಲ. ಶ್ರೀದೇವಿ ಅವರನ್ನು ಕುಟುಂಬದವರು ಹಾಗೂ ಫ್ಯಾನ್ಸ್ ನೆನಪಿಸಿಕೊಳ್ಳುತ್ತಿದ್ದಾರೆ. ಅವರು ದುಬೈನ ಹೋಟೆಲ್ ರೂಂನಲ್ಲಿ ಮುಳುಗಿ ಸತ್ತಿದ್ದು ನಿಜಕ್ಕೂ ಬೇಸರದ ವಿಚಾರ. ಅಂದು ಆಗಿದ್ದೇನು? ಬೋನಿ ಕಪೂರ್ ಹೇಳಿದ್ದು ಏನು ಎಂಬ ಬಗ್ಗೆ ಇಲ್ಲಿದೆ ವಿವರ.
ಶ್ರೀದೇವಿ ಅವರು ಮೃತಪಡುವಾಗ ಅವರಿಗೆ 54 ವರ್ಷ ವಯಸ್ಸಾಗಿತ್ತು. ಅವರು ಮೃತಪಟ್ಟಿದ್ದದಾರೆ ಎನ್ನುವ ವಿಚಾರ ಅನೇಕರಿಗೆ ಶಾಕಿಂಗ್ ಎನಿಸಿದೆ. ಶ್ರೀದೇವಿ ಅವರು ಮದುವೆ ಅಟೆಂಡ್ ಮಾಡಲು ದುಬೈಗೆ ತೆರಳಿದ್ದರು. ಅವರ ಸಂಬಂಧಿ ಮೋಹಿತ್ ಮರ್ವಾ ಅವರ ಮದುವೆ ದುಬೈನಲ್ಲಿತ್ತು. ಅವರ ಜೊತೆ ಬೋನಿ ಕಪೂರ್ ಹಾಗೂ ಖುಷಿ ಕಪೂರ್ ಕೂಡ ಇದ್ದರು. ಸಿನಿಮಾ ಕೆಲಸಗಳಿಂದ ಜಾನ್ವಿ ಕಪೂರ್ ಅವರಿಗೆ ದುಬೈಗೆ ಬರೋಕೆ ಸಾಧ್ಯವಾಗಿರಲಿಲ್ಲ.
ಶ್ರೀದೇವಿ ಕುಟುಂಬದವರು ಮದುವೆ ಮುಗಿಸಿ ಮುಂಬೈಗೆ ಆಗಮಿಸಿದ್ದರು. ಆದರೆ, ಶ್ರೀದೇವಿ ಅವರು ಶಾಪಿಂಗ್ ಕಾರಣಕ್ಕೆ ದುಬೈನಲ್ಲೇ ಇದ್ದರು. ಬೋನಿ ಕಪೂರ್ ಅವರು ಭಾರತದಿಂದ ಅಲ್ಲಿಗೆ ತೆರಳುವವರಿದ್ದರು. ಆದರೆ, ಶ್ರೀದೇವಿ ಮೃತಪಟ್ಟಾಗಿತ್ತು. ಅವರು ಹೋಟೆಲ್ ರೂಂನ ಬಾತ್ಟಬ್ನಲ್ಲಿ ಮುಳುಗಿ ಮೃತಪಟ್ಟಾಗಿತ್ತು. ಇದು ಸುಳ್ಳು ಸುದ್ದಿ ಇರಬಹುದು ಎಂದು ಅನೇಕರು ಭಾವಿಸಿದ್ದರು. ಆದರೆ, ಈ ವಿಚಾರವನ್ನು ಕುಟುಂಬದವರು ಖಚಿತಪಡಿಸಿದರು.
ಬೋನಿ ಕಪೂರ್ ಮೇಲೆ ಮೂಡಿತು ಅನುಮಾನ
ಬೋನಿ ಕಪೂರ್ ಅವರ ಮೇಲೆ ಅನೇಕರು ಅನುಮಾನ ಹೊರಹಾಕಿದರು. ವಿಮೆ ಹಣಕ್ಕಾಗಿ ಅವರು ಪತ್ನಿಯನ್ನು ಕೊಲೆ ಮಾಡಿಸಿದರು ಎನ್ನುವ ಅನುಮಾನವನ್ನು ಕೆಲವರು ಹೊರಹಾಕಿದ್ದರು. ಇನ್ನೂ ಕೆಲವರು ಶ್ರೀದೇವಿ ಅವರ ಬಗ್ಗೆಯೇ ಅನುಮಾನಪಟ್ಟರು. ಅವರು ಡ್ರಗ್ಸ್ ಸೇವಿಸಿದ್ದರಿಂದ ಮೃತಪಟ್ಟರು ಎಂದು ಕೆಲವರು ಊಹಿಸಿದರು. ಆದರೆ, ಇದೊಂದು ಆಕಸ್ಮಿಕ ಸಾವು ಎಂದು ಪೊಲೀಸರ ತನಿಖೆಯಿಂದ ವಿಚಾರ ಹೊರಬಿತ್ತು. ಇದರಿಂದ ಬೋನಿ ಕಪೂರ್ ಮೇಲೆ ಬಂದ ಆರೋಪ ದೂರವಾಯಿತು. ಪತ್ನಿಯನ್ನುಸ ಕಳೆದುಕೊಂಡು ಅವರು ಸಾಕಷ್ಟು ದುಃಖಕ್ಕಕ್ಕೆ ಒಳಗಾಗಿದ್ದರು. ಇದರ ಜೊತೆಗೆ ಅವರ ಮೇಲೆ ಬಂದ ಈ ಆರೋಪ ಅವರನ್ನು ಮತ್ತಷ್ಟು ಕಂಗಾಲು ಮಾಡಿತು.
ಇದನ್ನೂ ಓದಿ: ರಾಮ್ ಚರಣ್ಗೆ ಜಾನ್ವಿ ಕಪೂರ್ ಜೋಡಿ ಆಗೋದು ಖಚಿತ ಎಂದ ಬೋನಿ ಕಪೂರ್
ಮೌನ ಮುರಿದಿದ್ದ ಬೋನಿ ಕಪೂರ್
ಬೋನಿ ಕಪೂರ್ ಅವರು ಇತ್ತೀಚೆಗೆ ಈ ಬಗ್ಗೆ ಮಾತನಾಡಿದ್ದರು. ಶ್ರೀದೇವಿ ಅವರು ಫಿಟ್ನೆಸ್ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿದ್ದರು. ಈ ಕಾರಣಕ್ಕೆ ಅವರು ಉಪವಾಸ ಇರುತ್ತಿದ್ದರು. ಈ ಕಾರಣದಿಂದಲೇ ಅವರು ಪ್ರಜ್ಞೆ ತಪ್ಪಿದರು ಅನ್ನೋದು ಬೋನಿ ಕಪೂರ್ ಅವರ ಅಭಿಪ್ರಾಯ. ಬೋನಿ ಹಾಗೂ ಶ್ರೀದೇವಿಗೆ ಖುಷಿ ಹಾಗೂ ಜಾನ್ವಿ ಹೆಸರಿನ ಮಕ್ಕಳಿದ್ದಾರೆ. ಅವರು ಚಿತ್ರರಂಗದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ.
ಶ್ರೀದೇವಿ ಸಿನಿಮಾ ರಂಗದ ಬಗ್ಗೆ
ಶ್ರೀದೇವಿ ಅವರು ಕೇವಲ ಹಿಂದಿ ಮಾತ್ರವಲ್ಲದೆ ದಕ್ಷಿಣ ಭಾರತದ ಸಿನಿಮಾಗಳಲ್ಲೂ ನಟಿಸಿ ಫೇಮಸ್ ಆಗಿದ್ದಾರೆ. ಅವರು ಕನ್ನಡದಲ್ಲೂ ನಟಿಸಿದ್ದಾರೆ. 70ರ ದಶಕದಲ್ಲಿ ಕನ್ನಡದ ಕೆಲವು ಸಿನಿಮಾಗಳಲ್ಲಿ ನಟಿಸಿದ್ದರು. ಇದಾದ ಬಳಿಕ ಅವರು ಕನ್ನಡದ ಚಿತ್ರಗಳಲ್ಲಿ ನಟಿಸಿಲ್ಲ. ‘ಮಾಮ್’ ಅವರ ನಟನೆಯ ಕೊನೆಯ ಹಿಂದಿ ಸಿನಿಮಾ. ಇದಾದ ಬಳಿಕ ಅವರ ನಟನೆಯ ಯಾವುದೇ ಚಿತ್ರ ರಿಲೀಸ್ ಆಗಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:45 am, Sat, 24 February 24