‘ದೊಡ್ಡ ಸೆಲೆಬ್ರಿಟಿಗಳು ಬೇರೆಯವರ ವಾಟ್ಸಾಪ್ ಹ್ಯಾಕ್ ಮಾಡುತ್ತಿದ್ದಾರೆ’; ಶಾಕಿಂಗ್ ಹೇಳಿಕೆ ಕೊಟ್ಟ ಕಂಗನಾ  

ಕಂಗನಾ ಅವರು ಯಾವುದೇ ವಿಚಾರವನ್ನು ನೇರವಾಗಿ ಹೇಳುತ್ತಾರೆ. ತಮ್ಮ ಮನಸ್ಸಿಗೆ ಬಂದ ವಿಚಾರವನ್ನು ಓಪನ್ ಆಗಿ ಹಂಚಿಕೊಳ್ಳುತ್ತಾರೆ. ಈ ಮೂಲಕ ಎಲ್ಲರ ಗಮನ ಸೆಳೆಯುವ ಪ್ರಯತ್ನ ಮಾಡುತ್ತಾರೆ. ಈಗ ಕಂಗನಾ ಅವರು ನೀಡಿರುವ ಹೇಳಿಕೆ ಗಮನ ಸೆಳೆದಿದೆ.

‘ದೊಡ್ಡ ಸೆಲೆಬ್ರಿಟಿಗಳು ಬೇರೆಯವರ ವಾಟ್ಸಾಪ್ ಹ್ಯಾಕ್ ಮಾಡುತ್ತಿದ್ದಾರೆ’; ಶಾಕಿಂಗ್ ಹೇಳಿಕೆ ಕೊಟ್ಟ ಕಂಗನಾ  
ಕಂಗನಾ
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Feb 24, 2024 | 8:49 AM

ನಟಿ ಕಂಗನಾ ರಣಾವತ್ (Kangana Ranaut) ಅವರು ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿ ಆಗುತ್ತಲೇ ಇರುತ್ತಾರೆ. ಅವರು ಸದಾ ವಿವಾದಗಳ ಮೂಲಕ ಸುದ್ದಿ ಆಗುತ್ತಾರೆ. ಅವರಿಗೂ ವಿವಾದಕ್ಕೂ ಎಲ್ಲಿಲ್ಲದ ನಂಟು. ಬಾಲಿವುಡ್​ನಲ್ಲಿ ಅನೇಕರನ್ನು ಕಂಡರೆ ಅವರಿಗೆ ಆಗೋದಿಲ್ಲ. ರಣಬೀರ್ ಕಪೂರ್, ಆಲಿಯಾ ಭಟ್, ಕರಣ್ ಜೋಹರ್ ಸೇರಿ ಅನೇಕರ ವಿರುದ್ಧ ಅವರು ಹೇಳಿಕೆ ನೀಡುತ್ತಾ ಇರುತ್ತಾರೆ. ಈಗ ಕಂಗನಾ ಅವರು ಮತ್ತೊಂದು ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಕೇಂದ್ರ ಸರ್ಕಾರ ಈ ವಿಚಾರದಲ್ಲಿ ತನಿಖೆ ನಡೆಸಬೇಕು ಎಂದು ಕೂಡ ಅವರು ಮನವಿ ಮಾಡಿಕೊಂಡಿದ್ದಾರೆ. ಎಂದಿನಂತೆ ಕೆಲವರು ಕಂಗಾನಾರನ್ನು ಟೀಕೆ ಮಾಡಿದರೆ ಇನ್ನೂ ಕೆಲವರು ಕಂಗನಾ ಅವರನ್ನು ಬೆಂಬಲಿಸಿದ್ದಾರೆ.

ಕಂಗನಾ ಅವರು ಯಾವುದೇ ವಿಚಾರವನ್ನು ನೇರವಾಗಿ ಹೇಳುತ್ತಾರೆ. ತಮ್ಮ ಮನಸ್ಸಿಗೆ ಬಂದ ವಿಚಾರವನ್ನು ಓಪನ್ ಆಗಿ ಹಂಚಿಕೊಳ್ಳುತ್ತಾರೆ. ಈ ಮೂಲಕ ಎಲ್ಲರ ಗಮನ ಸೆಳೆಯುವ ಪ್ರಯತ್ನ ಮಾಡುತ್ತಾರೆ. ಈಗ ಕಂಗನಾ ಅವರು ನೀಡಿರುವ ಹೇಳಿಕೆ ಗಮನ ಸೆಳೆದಿದೆ. ಕೆಲವು ಖ್ಯಾತ ಸೆಲೆಬ್ರಿಟಿಗಳು ಬೇರೆ ಸೆಲೆಬ್ರಿಟಿಗಳ ವಾಟ್ಸಾಪ್ ಹ್ಯಾಕ್ ಮಾಡುವ ಕೆಲಸವನ್ನು ಮಾಡುತ್ತಿದ್ದಾರಂತೆ. ಈ ವಿಚಾರ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ.

ಕಂಗನಾ ರಣಾವತ್ ಅವರು ಇತ್ತಿಚೆಗೆ ಇನ್​ಸ್ಟಾಗ್ರಾಮ್​ನಲ್ಲಿ ಸ್ಟೇಟಸ್ ಒಂದನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಅವರು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ‘ಅಮೇಜಿಂಗ್. ಕೇಂದ್ರ ಸರ್ಕಾರ ಡಾರ್ಕ್ ವೆಬ್ ವಿಚಾರದಲ್ಲೂ ಏನಾದರೂ ಮಾಡಬೇಕು. ಹಲವು ಸಿನಿಮಾ ಸೆಲೆಬ್ರಿಟಿಗಳು ಅಕ್ರಮ ಸ್ಟಫ್​ಗಳನ್ನು ಡಾರ್ಕ್​ ವೆಬ್​ನಿಂದ ತರಿಸಿಕೊಳ್ಳುತ್ತಿಲ್ಲ. ಇದರ ಜೊತೆಗೆ ವಾಟ್ಸಾಪ್​ ಹಾಗೂ ಮೇಲ್​ಗಳನ್ನು ಹ್ಯಾಕ್ ಮಾಡುತ್ತಿದ್ದಾರೆ. ಇದನ್ನು ಕೇಂದ್ರ ಪತ್ತೆ ಹೆಚ್ಚಿದರೆ ದೊಡ್ಡ ಸೆಲೆಬ್ರಿಟಿಗಳ ಹೆಸರು ಹೊರ ಬರುತ್ತದೆ’ ಎಂದಿದ್ದಾರೆ ಕಂಗನಾ.

ಇದನ್ನೂ ಓದಿ: ಕಂಗನಾ ಕುಟುಂಬದ ಆಸ್ತಿ ಖರೀದಿಸಿದ ಮೃಣಾಲ್​ ಠಾಕೂರ್​; ಇದಪ್ಪ ಬೆಳವಣಿಗೆ ಅಂದ್ರೆ

ಕಂಗನಾ ಅವರು ಈ ರೀತಿಯ ಅನೇಕ ಹೇಳಿಕೆ ನೀಡುತ್ತಲೇ ಇರುತ್ತಾರೆ. ಹೀಗಾಗಿ, ಯಾರೂ ಈ ಬಗ್ಗೆ ಅಷ್ಟು ಗಮನ ನೀಡಿಲ್ಲ. ಕೆಲವರು ಇದನ್ನು ಸುಳ್ಳು ಎಂದು ಕರೆದಿದ್ದಾರೆ. ಸಿನಿಮಾ ವಿಚಾರಕ್ಕೆ ಬರೋದಾದರೆ ಕಂಗನಾಗೆ ಇತ್ತೀಚೆಗೆ ದೊಡ್ಡ ಗೆಲುವು ಸಿಕ್ಕಿಲ್ಲ. ‘ಎಮರ್ಜೆನ್ಸಿ’ ಸಿನಿಮಾದ ಕೆಲಸದಲ್ಲಿ ಅವರು ಬ್ಯುಸಿ ಇದ್ದಾರೆ. ಈ ಸಿನಿಮಾಗೆ ಅವರದ್ದೇ ನಿರ್ದೇಶನ ಇದೆ. ಈ ಚಿತ್ರದಲ್ಲಿ ಅವರು ಇಂದಿರಾ ಗಾಂಧಿ ಪಾತ್ರ ಮಾಡಿದ್ದಾರೆ. ಈ ಸಿನಿಮಾ ಬಗ್ಗೆ ಚರ್ಚೆ ಜೋರಾಗಿದೆ. ಕಂಗನಾ ಅವರನ್ನು ಕಾಂಗ್ರೆಸ್​ನವರು ವಿರೋಧಿಸುತ್ತಿದ್ದಾರೆ. ‘ಇದರಲ್ಲಿ ವಿವಾದಾತ್ಮಕ ವಿಚಾರ ಏನೂ ಇಲ್ಲ’ ಎಂದು ಕಂಗನಾ ಹೇಳಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಕಳೆದ ವರ್ಷವೇ ಸಿನಿಮಾ ರಿಲೀಸ್ ಆಗಬೇಕಿತ್ತು. ಆದರೆ, ಸಿನಿಮಾ ರಿಲೀಸ್ ದಿನಾಂಕ ಮುಂದಕ್ಕೆ ಹೋಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಸಿದ್ದರಾಮಯ್ಯ ಬಹಳ ಸಲ ನನ್ನ ಮನೆಗೆ ಬಂದಿದ್ದಾರೆ: ಸತೀಶ್ ಜಾರಕಿಹೊಳಿ
ಸಿದ್ದರಾಮಯ್ಯ ಬಹಳ ಸಲ ನನ್ನ ಮನೆಗೆ ಬಂದಿದ್ದಾರೆ: ಸತೀಶ್ ಜಾರಕಿಹೊಳಿ