ಕಾಶ್ಮೀರದಲ್ಲಿ ಸೃಷ್ಟಿಯಾಯ್ತು ಇತಿಹಾಸ; 38 ವರ್ಷಗಳ ಬಳಿಕ ಸಿನಿಮಾ ಪ್ರದರ್ಶನ

‘ಗ್ರೌಂಡ್ ಜೀರೋ’ ಚಿತ್ರದಲ್ಲಿ ಗಡಿ ಭದ್ರತಾ ಪಡೆಯ ಯೋಧನಾಗಿ ಇಮ್ರಾನ್ ಹಷ್ಮಿ ನಟಿಸಿದ್ದಾರೆ. ಕಾಶ್ಮೀರಕ್ಕೆ ಸಂಬಂಧಿಸಿದ ಕಥೆ ಈ ಸಿನಿಮಾದಲ್ಲಿದೆ. ವಿಶೇಷ ಏನೆಂದರೆ, ಈ ಸಿನಿಮಾದ ಪ್ರದರ್ಶನವನ್ನು ಕಾಶ್ಮೀರದಲ್ಲೇ ಮಾಡಲಾಗಿದೆ. ಈ ಮೂಲಕ 38 ವರ್ಷಗಳ ನಂತರ ಕಾಶ್ಮೀರದಲ್ಲಿ ಸಿನಿಮಾ ಪ್ರದರ್ಶನ ಆದಂತಾಗಿದೆ.

ಕಾಶ್ಮೀರದಲ್ಲಿ ಸೃಷ್ಟಿಯಾಯ್ತು ಇತಿಹಾಸ; 38 ವರ್ಷಗಳ ಬಳಿಕ ಸಿನಿಮಾ ಪ್ರದರ್ಶನ
Emraan Hashmi

Updated on: Apr 19, 2025 | 3:40 PM

ಕಾಶ್ಮೀರ (Kashmir) ಎಂದಕೂಡಲೇ ಗುಂಡಿನ ಸದ್ದು ನೆನಪಾಗುತ್ತದೆ. ಅಷ್ಟರಮಟ್ಟಿಗೆ ಭಯೋತ್ಪಾದಕ ಚಟುವಟಿಕೆಗಳು ಅಲ್ಲಿ ನಡೆದಿವೆ. ಆದರೆ ಇತ್ತೀಚೆಗೆ ಪರಿಸ್ಥಿತಿ ಸುಧಾರಿಸುತ್ತಿದೆ. ಹಾಗಾಗಿ ಜನಜೀವನದಲ್ಲಿ ಕೂಡ ಬದಲಾವಣೆ ಕಾಣುತ್ತಿದೆ. ಕಳೆದ ನಾಲ್ಕು ದಶಕದಿಂದ ಅಲ್ಲಿ ಯಾವುದೇ ಸಿನಿಮಾ ಪ್ರದರ್ಶನ ಆಗಿರಲಿಲ್ಲ. ಈಗ ಬಾಲಿವುಡ್ನ್ ‘ಗ್ರೌಂಡ್ ಜೀರೋ’ (Ground Zero) ಸಿನಿಮಾ ಇತಿಹಾಸ ಸೃಷ್ಟಿ ಮಾಡಿದೆ. ಬರೋಬ್ಬರಿ 38 ವರ್ಷಗಳ ಬಳಿಕ ಕಾಶ್ಮೀರದ ಶ್ರೀನಗರದಲ್ಲಿ ಸಿನಿಮಾ ಪ್ರದರ್ಶನ ಮಾಡಲಾಗಿದೆ. ಇಷ್ಟು ವರ್ಷಗಳ ಬಳಿಕ ಪ್ರದರ್ಶನ ಕಂಡ ಮೊದಲ ಸಿನಿಮಾ ಎಂಬ ಕೀರ್ತಿ ‘ಗ್ರೌಂಡ್ ಜೀರೋ’ ಚಿತ್ರಕ್ಕೆ ಸಿಕ್ಕಿದೆ. ಈ ಸಿನಿಮಾದಲ್ಲಿ ಇಮ್ರಾನ್ ಹಷ್ಮಿ (Emraan Hashmi) ಅವರು ನಟಿಸಿದ್ದಾರೆ.

ಕಾಶ್ಮೀರದಲ್ಲಿ ನಡೆದ ನೈಜ ಘಟನೆಗಳನ್ನು ಆಧರಿಸಿ ‘ಗ್ರೌಂಡ್ ಜೀರೋ’ ಸಿನಿಮಾ ಸಿದ್ಧವಾಗಿದೆ. ಈ ಸಿನಿಮಾದಲ್ಲಿ ಇಮ್ರಾನ್ ಹಷ್ಮಿ ಅವರು ಗಡಿ ಭದ್ರತಾ ಪಡೆಯ ಯೋಧನ ಪಾತ್ರ ಮಾಡಿದ್ದಾರೆ. ಇದು ಅವರ ವೃತ್ತಿ ಜೀವನದ ಡಿಫರೆಂಟ್ ಸಿನಿಮಾ ಆಗಿದೆ. ದೇಶಭಕ್ತಿಯ ಕಹಾನಿ ಈ ಸಿನಿಮಾದಲ್ಲಿದೆ. ಕಾಶ್ಮೀರದ ಹೊಸ ಐನಾಕ್ಸ್ ಚಿತ್ರಮಂದಿರದಲ್ಲಿ ‘ಗ್ರೌಂಡ್ ಜೀರೋ’ ಸಿನಿಮಾದ ವಿಶೇಷ ಪ್ರದರ್ಶನ ಮಾಡಲಾಗಿದೆ.

‘ಗ್ರೌಂಡ್ ಜೀರೋ’ ಸಿನಿಮಾದ ಟ್ರೇಲರ್ ನೋಡಿದ ಪ್ರೇಕ್ಷಕರು ಮೆಚ್ಚುಗೆ ಸೂಚಿಸಿದ್ದಾರೆ. ಈ ಸಿನಿಮಾ ಏಪ್ರಿಲ್ 25ರಂದು ಬಿಡುಗಡೆ ಆಗಲಿದೆ. ಅದಕ್ಕೂ ಮುನ್ನ ಕಾಶ್ಮೀರದಲ್ಲಿ ಸ್ಪೆಷಲ್ ಸ್ಕ್ರೀನಿಂಗ್ ಮೂಲಕ ಸದ್​ದು ಮಾಡಿದೆ. ನಟ ಇಮ್ರಾನ್ ಹಷ್ಮಿ, ನಿರ್ಮಾಪಕ ಫರ್ಹಾನ್ ಅಖ್ತರ್ ಸೇರಿದಂತೆ ಚಿತ್ರತಂಡ ಅನೇಕರು ವಿಶೇಷ ಪ್ರದರ್ಶನಲ್ಲಿ ಭಾಗಿಯಾಗಿದ್ದರು.

ಇದನ್ನೂ ಓದಿ
ಹೈದರಾಬಾದ್​ನಲ್ಲಿ ನಟ ಇಮ್ರಾನ್ ಹಷ್ಮಿ ಕತ್ತಿಗೆ ಆಯ್ತು ದೊಡ್ಡ ಗಾಯ
ಇಮ್ರಾನ್ ಹಶ್ಮಿ ಕಿಸ್ಸಿಂಗ್ ದೃಶ್ಯ ಮಾಡಿದಾಗಲೆಲ್ಲ ಪತ್ನಿಗೆ ಸಿಟ್ಟು
ಇಮ್ರಾನ್ ಹಶ್ಮಿ ಬರ್ತ್ಡೇ: ನಟ ಈವರೆಗೆ ಸಂಪಾದಿಸಿದ್ದು ಎಷ್ಟು ಕೋಟಿ ರೂಪಾಯಿ?
ನಮಗಿಂತ ದಕ್ಷಿಣ ಭಾರತದವರು ಶಿಸ್ತಿನ ಕೆಲಸ ಮಾಡುತ್ತಾರೆ ಎಂದ ಇಮ್ರಾನ್ ಹಶ್ಮಿ

ಇದನ್ನೂ ಓದಿ: ಕಾಶ್ಮೀರದ ಕುರಿತು ಪಾಕ್ ಸೇನಾ ಮುಖ್ಯಸ್ಥರ ಹೇಳಿಕೆಗೆ ಭಾರತ ತಿರುಗೇಟು

ತೇಜಸ್ ಪ್ರಭಾ ವಿಜಯ್ ಅವರು ‘ಗ್ರೌಂಡ್ ಜೀರೋ’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. 38 ವರ್ಷದ ನಂತರ ಕಾಶ್ಮೀರದಲ್ಲಿ ಸಿನಿಮಾ ಪ್ರದರ್ಶನ ಆಗಿರುವುದು ಈ ಚಿತ್ರತಂಡಕ್ಕೆ ಖುಷಿ ತಂದಿದೆ. ಇನ್ಮುಂದೆ ಬೇರೆ ಬೇರೆ ಸಿನಿಮಾಗಳು ಕೂಡ ಇಲ್ಲಿ ಪ್ರದರ್ಶನ ಆಗಲಿ ಎಂದು ಜನರು ಆಶಿಸುತ್ತಿದ್ದಾರೆ. ‘ಉರಿ: ದಿ ಸರ್ಜಿಕಲ್ ಸ್ಟ್ರೈಕ್’ ರೀತಿಯೇ ‘ಗ್ರೌಂಡ್ ಜೀರೋ’ ಸಿನಿಮಾ ಕೂಡ ಬಾಕ್ಸ್ ಆಫೀಸ್​ನಲ್ಲಿ ಯಶಸ್ಸು ಕಾಣುತ್ತಾ ಎಂಬುದನ್ನು ಕಾದು ನೋಡಬೇಕು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.