‘ನಮಗಿಂತ ದಕ್ಷಿಣ ಭಾರತದವರು ಶಿಸ್ತಿನ ಕೆಲಸ ಮಾಡುತ್ತಾರೆ’ ಎಂದ ಇಮ್ರಾನ್ ಹಶ್ಮಿ
2022ರಲ್ಲಿ ಹಿಂದಿಯಲ್ಲಿ ಸಾಲು ಸಾಲು ಸಿನಿಮಾಗಳು ಸೋಲು ಕಂಡವು. ಈ ಸಂದರ್ಭದಲ್ಲಿ ದಕ್ಷಿಣದ ಸಿನಿಮಾಗಳು ಮಿಂಚಿದವು. ‘ಕೆಜಿಎಫ್ 2’, ‘ಆರ್ಆರ್ಆರ್’ ಚಿತ್ರಗಳು ದೊಡ್ಡ ಗೆಲುವು ಕಂಡವು. ಆ ಸಂದರ್ಭದಲ್ಲಿ ದಕ್ಷಿಣ vs ಬಾಲಿವುಡ್ ಎನ್ನುವ ಚರ್ಚೆ ಹುಟ್ಟಿಕೊಂಡಿತ್ತು. ಈಗ ಈ ಬಗ್ಗೆ ಇಮ್ರಾನ್ ಮಾತನಾಡಿದ್ದಾರೆ.

ಕೆಲವು ಬಾಲಿವುಡ್ ಹೀರೋಗಳು ದಕ್ಷಿಣ ಭಾರತದವರ ಕೆಲಸವನ್ನು ಮೆಚ್ಚಿಕೊಳ್ಳುತ್ತಿದ್ದಾರೆ. ಈ ಕಾರಣಕ್ಕೆ ಅನೇಕರು ಇಲ್ಲಿ ಬಂದು ಕೆಲಸ ಮಾಡುತ್ತಾರೆ. ಈ ಸಾಲಿನಲ್ಲಿ ಅನೇಕ ಹೀರೋಗಳು ಇದ್ದಾರೆ. ಬಾಲಿವುಡ್ ನಟ ಇಮ್ರಾನ್ ಹಶ್ಮಿ (Imran Hasmi) ಕೂಡ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಅವರು ಇಲ್ಲಿಯವರ ಕೆಲಸವನ್ನು ಮೆಚ್ಚಿಕೊಂಡಿದ್ದಾರೆ. ಈ ಬಗ್ಗೆ ಅವರು ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದಾರೆ. ದಕ್ಷಿಣ ಭಾರತದವರ ಕೆಲಸವನ್ನು ಹಾಡಿ ಹೊಗಳಿದ್ದಾರೆ.
2022ರಲ್ಲಿ ಹಿಂದಿ ಚಿತ್ರರಂಗ ಈ ರೀತಿ ಇರಲಿಲ್ಲ. ಸಾಲು ಸಾಲು ಸಿನಿಮಾಗಳು ಸೋಲು ಕಂಡವು. ದೊಡ್ಡ ಮಟ್ಟದಲ್ಲಿ ಸಿನಿಮಾ ಬಿಸ್ನೆಸ್ ಇರಲಿಲ್ಲ. ಈ ಸಂದರ್ಭದಲ್ಲಿ ದಕ್ಷಿಣದ ಸಿನಿಮಾಗಳು ಮಿಂಚಿದವು. ‘ಕೆಜಿಎಫ್ 2’, ‘ಆರ್ಆರ್ಆರ್’ ಚಿತ್ರಗಳು ದೊಡ್ಡ ಗೆಲುವು ಕಂಡವು. ಆ ಸಂದರ್ಭದಲ್ಲಿ ದಕ್ಷಿಣ vs ಬಾಲಿವುಡ್ ಎನ್ನುವ ಚರ್ಚೆ ಹುಟ್ಟಿಕೊಂಡಿತ್ತು. ಈಗ ಈ ಬಗ್ಗೆ ಇಮ್ರಾನ್ ಮಾತನಾಡಿದ್ದಾರೆ.
‘ದಕ್ಷಿಣ ಭಾರತದ ನಿರ್ಮಾಪಕರು ನಮಗಿಂತ (ಹಿಂದಿ ಚಿತ್ರರಂಗಕ್ಕಿಂತ) ಹೆಚ್ಚು ಶಿಸ್ತುಬದ್ಧರಾಗಿದ್ದಾರೆ ಎಂದು ನಾನು ಭಾವಿಸುತ್ತೇನೆ. ಅವರು ತಮ್ಮ ಸಿನಿಮಾಗಾಗಿ ಖರ್ಚು ಮಾಡುವ ಪ್ರತಿ ಪೈಸೆಯನ್ನೂ ತೆರೆಯ ಮೇಲೆ ತೋರಿಸುತ್ತಾರೆ’ ಎಂದಿದ್ದಾರೆ ಇಮ್ರಾನ್ ಹಶ್ಮಿ. ‘ನಾವು ತಪ್ಪಾದ ವಿಭಾಗದ ಮೇಲೆ ಹಣವನ್ನು ಹಾಕುತ್ತಿದ್ದೇವೆ. ಹೀಗಾಗಿ ಅದು ತೆರೆಮೇಲೆ ಕಾಣುವುದಿಲ್ಲ. ದಕ್ಷಿಣದವರಿಂದ ನಾವು ಕಲಿಯಬೇಕಿದೆ’ ಎಂದಿದ್ದಾರೆ ಅವರು.
ಇಮ್ರಾನ್ ಹಶ್ಮಿ ಅವರು ಪವನ್ ಕಲ್ಯಾಣ್ ನಟನೆಯ ‘ಒಜಿ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಅವರು ವಿಲನ್ ಪಾತ್ರ ಮಾಡುತ್ತಿದ್ದಾರೆ. ‘ಟೈಗರ್ 3’ ಸಿನಿಮಾದಲ್ಲಿ ವಿಲನ್ ರೋಲ್ ಮಾಡಿದ್ದ ಅವರು ಈಗ ಮತ್ತೊಮ್ಮೆ ನೆಗೆಟಿವ್ ಪಾತ್ರಕ್ಕೆ ಸಹಿ ಹಾಕಿದ್ದಾರೆ. ಈ ಚಿತ್ರದ ಶೂಟಿಂಗ್ ನಿಧಾನಗತಿಯಲ್ಲಿ ಸಾಗುತ್ತಿದೆ.
ಇದನ್ನೂ ಓದಿ: ಹೊಸ ಇಮೇಜ್ ಪಡೆಯಲು ಮುಂದಾದ ಇಮ್ರಾನ್ ಹಷ್ಮಿ; ‘ಡಾನ್ 3’ ಚಿತ್ರದಲ್ಲಿ ನೆಗೆಟಿವ್ ಪಾತ್ರ?
ಇಮ್ರಾನ್ ರೀತಿ ಅನೇಕ ಬಾಲಿವುಡ್ ನಟರು ದಕ್ಷಿಣದಲ್ಲಿ ನಟಿಸುತ್ತಿದ್ದಾರೆ. ಸೈಫ್ ಅಲಿ ಖಾನ್ ಅವರು ಜೂನಿಯರ್ ಎನ್ಟಿಆರ್ ನಟನೆಯ ‘ದೇವರ’ ಸಿನಿಮಾದಲ್ಲಿ ಬಣ್ಣ ಹಚ್ಚುತ್ತಿದ್ದಾರೆ. ಈ ಚಿತ್ರಕ್ಕೆ ಹಿಂದಿಯ ಜಾನ್ವಿ ಕಪೂರ್ ನಾಯಕಿ. ಬಾಬಿ ಡಿಯೋಲ್ ‘ಕಂಗುವ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಶಿಲ್ಪಾ ಶೆಟ್ಟಿ ಅವರು ಕನ್ನಡದ ‘ಕೆಡಿ’ ಚಿತ್ರದಲ್ಲಿದ್ದಾರೆ. ಸಂಜಯ್ ದತ್ ಈಗಾಗಲೇ ದಕ್ಷಿಣದಲ್ಲಿ ಮಿಂಚುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ




