ವಿಡಿಯೋ: ಕಾರ್ಯಕ್ರಮದಲ್ಲಿ ಪ್ರೇಕಕನೊಂದಿಗೆ ಗಾಯಕ ಆದಿತ್ಯ ದುರ್ವರ್ತನೆ

Adithya Narayan: ಗಾಯಕ ಆದಿತ್ಯಾ ನಾರಾಯಣ್, ಲೈವ್ ಕಾನ್ಸರ್ಟ್​ನಲ್ಲಿ ಅಭಿಮಾನಿಯೊಬ್ಬರೊಟ್ಟಿಗೆ ದುರ್ವರ್ತನೆ ತೋರಿದ್ದಾರೆ. ಇಲ್ಲಿದೆ ನೋಡಿ ವಿಡಿಯೋ...

ವಿಡಿಯೋ: ಕಾರ್ಯಕ್ರಮದಲ್ಲಿ ಪ್ರೇಕಕನೊಂದಿಗೆ ಗಾಯಕ ಆದಿತ್ಯ ದುರ್ವರ್ತನೆ
Follow us
ಮಂಜುನಾಥ ಸಿ.
|

Updated on: Feb 13, 2024 | 5:51 PM

ಜನಪ್ರಿಯ ಗಾಯಕ ಉದಿತ್ ನಾರಾಯಣ್ (Udith Narayan) ಪುತ್ರ ಆದಿತ್ಯ ನಾರಾಯಣ್ ಸಹ ಒಳ್ಳೆಯ ಗಾಯಕರಾಗಿದ್ದು ಈಗಾಗಲೇ ಹಲವು ಸಿನಿಮಾಗಳಲ್ಲಿ ಹಾಡಿದ್ದಾರೆ. ತಮ್ಮದೇ ಬ್ಯಾಂಡ್ ಕಟ್ಟಿಕೊಂಡು ಲೈವ್ ಶೋಗಳನ್ನು ಸಹ ಮಾಡುತ್ತಾರೆ. ಲೈವ್ ಶೋಗಳಿಂದ ಭಾರಿ ಪ್ರಮಾಣದ ಹಣ ಗಾಯಕರಿಗೆ ಸಂಗೀತಕಾರರಿಗೆ ಇತ್ತೀಚಿನ ವರ್ಷಗಳಲ್ಲಿ ಹರಿದು ಬರುತ್ತಿದೆ. ಆದರೆ ಈ ಲೈವ್​ ಶೋಗಳಲ್ಲಿ ಒಮ್ಮೊಮ್ಮೆ ಪ್ರೇಕ್ಷಕರು ದುರ್ವರ್ತನೆ ತೋರುವುದುಂಟು, ಆದರೆ ಈ ಬಾರಿ ಗಾಯಕ ಆದಿತ್ಯ ನಾರಾಯವಣ್ ಅಹಂಕಾರದಿಂದ ವರ್ತಿಸಿದ್ದಾರೆ. ಘಟನೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಲೈವ್ ಶೋಗಳಲ್ಲಿ ಪ್ರೇಕ್ಷಕರೊಟ್ಟಿಗೆ ಸಂವಾದ ಮಾಡಿಕೊಂಡು ಗಾಯಕರು ಹಾಡು ಹಾಡುತ್ತಾರೆ. ಕೆಲವೊಮ್ಮೆ ವೇದಿಕೆ ಮೇಲಿನಿಂದಲೇ ಸೆಲ್ಫಿ ಸಹ ನೀಡುತ್ತಾರೆ. ಆದಿತ್ಯ ನಾರಾಯಣ್ ಚತ್ತೀಸ್​ಘಡದ ಬಿಲಾಲಿಯಲ್ಲಿ ಲೈವ್ ಕಾನ್ಸರ್ಟ್ ಮಾಡುತ್ತಿದ್ದರು. ವೇದಿಕೆ ಮೇಲೆ ಓಡಾಡುತ್ತಾ ಹಾಡು ಹಾಡಿದರು. ಜನರನ್ನು ರಂಜಿಸಿದರು. ಆದರೆ ಈ ವೇಳೆ ವೇದಿಕೆಯ ಕೆಳಗಿದ್ದ ಅಭಿಮಾನಿಯೊಬ್ಬ ಅವನ ಫೋನ್ ನೀಡಿ ಸೆಲ್ಫಿ ತೆಗೆದುಕೊಡುವಂತೆ ಕೇಳಿದ್ದಾನೆ. ಇದರಿಂದ ಸಿಟ್ಟಾದ ಆದಿತ್ಯ, ಮೊದಲು ಮೈಕ್​ನಿಂದ ಆ ವ್ಯಕ್ತಿಯ ಕೈಗೆ ಹೊಡೆದಿದ್ದಾನೆ, ಬಳಿಕ ಆತನ ಫೋನ್ ಕಿತ್ತುಕೊಂಡು ಅದನ್ನು ದೂರ ಬಿಸಾಡಿದ್ದಾರೆ. ಈ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ಇದನ್ನೂ ಓದಿ:ಆಟೋಗ್ರಾಫ್ ನೀಡಲು ಹೆಲಿಕ್ಯಾಪ್ಟರ್​ನಲ್ಲಿ ಬರುತ್ತಿದ್ದ ಗಾಯಕ ಕುಮಾರ್ ಸಾನು

ಆದಿತ್ಯ ಬಿಸಾಡಿದ ಫೋನು ಎರಡು ಭಾಗವಾಗಿ ಒಡೆದು ಹೋಗಿದೆ. ಆ ಫೋನ್​ನ ಚಿತ್ರವೂ ಸಹ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಸೆಲ್ಫಿ ಕೇಳಲೆಂದು ಆ ಯುವಕ ತನ್ನ ಫೋನ್​ನಿಂದ ವೇದಿಕೆ ಮೇಲಿದ್ದ ಆದಿತ್ಯನ ಕಾಲಿಗೆ ಮೆತ್ತಗೆ ಹೊಡೆದಿದ್ದಾನಷ್ಟೆ, ಇದಕ್ಕೆ ಕೋಪಗೊಂಡು ಫೋನ್ ಅನ್ನು ಎತ್ತಿ ಬಿಸಾಡಿದ್ದಾರೆ ಆದಿತ್ಯ ನಾರಾಯಣ್.

ಆದಿತ್ಯಾರ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಹಲವರು ಆದಿತ್ಯಾ ನಾರಾಯಣ್​ರ ವರ್ತನೆ ಬಗ್ಗೆ ಟೀಕೆ ವ್ಯಕ್ತಪಡಿಸಿದ್ದಾರೆ. ಆದಿತ್ಯಾ ನಾರಾಯಣ್ ಅಭಿಮಾನಿಗಳಿಂದಲೇ ಬೆಳೆದವರು, ಈಗ ಅಹಂಕಾರದಿಂದ ಅಭಿಮಾನಗಳ ಮೇಲೆ ಅಹಂಕಾರ ತೋರುತ್ತಿದ್ದಾರೆ. ಈತನಿಗೆ ಸರಿಯಾಗಿ ಬುದ್ಧಿಕಲಿಸಬೇಕು ಈತನ ಲೈವ್ ಕಾನ್ಸರ್ಟ್ ಗೆ ಅವಕಾಶ ನೀಡಬಾರದು. ಯಾರೂ ಸಹ ಈತನಿಂದ ಲೈವ್ ಕಾನ್ಸರ್ಟ್ ಮಾಡಿಸಬೇಡಿ ಎಂದು ಒತ್ತಾಯಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ