‘ಅಣ್ಣ ನೀನು ಬೆಸ್ಟ್’ ಎಂದ ಇಶಾ ಡಿಯೋಲ್, ಯಾವ ಹಾಡಿಗೆ ಕುಣಿಯುತ್ತಿದ್ದಾರೆ?

|

Updated on: Dec 15, 2023 | 7:51 PM

Esha Deol: ನೃತ್ಯ ಮಾಡುತ್ತಿರುವ ವಿಡಿಯೋ ಅಪ್​ಲೋಡ್ ಮಾಡಿರುವ ಇಶಾ ಡಿಯೋಲ್, ಹಳೆಯ ಸಿಟ್ಟು, ವೈಮಸ್ಯ ಮರೆತು, ಅಣ್ಣನಿಗೆ ಭೇಷ್ ಎಂದಿದ್ದಾರೆ.

‘ಅಣ್ಣ ನೀನು ಬೆಸ್ಟ್’ ಎಂದ ಇಶಾ ಡಿಯೋಲ್, ಯಾವ ಹಾಡಿಗೆ ಕುಣಿಯುತ್ತಿದ್ದಾರೆ?
ಇಶಾ ಡಿಯೋಲ್
Follow us on

ಡಿಯೋಲ್ (Deol) ಕುಟುಂಬಕ್ಕೆ ಮತ್ತೆ ಶುಕ್ರದೆಸೆ ಬಂದಂತಿದೆ. ಹಲವು ವಿಫಲ ಯತ್ನಗಳ ಬಳಿಕ ಚಿತ್ರರಂಗದಿಂದ ಬಹುತೇಕ ಮೂಲೆಗುಂಪಾದಂತಿದ್ದ ಡಿಯೋಲ್ ಕುಟುಂಬದ ಸನ್ನಿ ಡಿಯೋಲ್ ಹಾಗೂ ಬಾಬಿ ಡಿಯೋಲ್ ಅವರುಗಳು ಕಳೆದ ಎರಡು ವರ್ಷಗಳಲ್ಲಿ ಭರ್ಜರಿ ಕಮ್​ಬ್ಯಾಕ್ ಮಾಡಿದ್ದಾರೆ. ‘ಗದ್ದರ್ 2’ ಸಿನಿಮಾ ಮೂಲಕ ಸನ್ನಿ ಡಿಯೋಲ್ ಭರ್ಜರಿ ಕಮ್​ಬ್ಯಾಕ್ ಮಾಡಿದರೆ, ‘ಅನಿಮಲ್’ ಸಿನಿಮಾ ಮೂಲಕ ಮತ್ತೆ ಸ್ಟಾರ್ ಆಗಿದ್ದಾರೆ ಬಾಬಿ ಡಿಯೋಲ್. ಇದೀಗ ಡಿಯೋಲ್ ಕುಟುಂಬದ ಮತ್ತೊಂದು ಕುಡಿ ಇಶಾ ಡಿಯೋಲ್ ಹಳೆಯ ಸಿಟ್ಟು ಮರೆತು ‘ಅಣ್ಣ ನೀನು ಗ್ರೇಟ್’ ಎಂದು ಹೊಗಳಿದ್ದಾರೆ.

ಧರ್ಮೇಂದ್ರ ಅವರ ಎರಡನೇ ಪತ್ನಿ ಹೇಮಾ ಮಾಲಿನಿಯ ಪುತ್ರಿ ಇಶಾ ಡಿಯೋಲ್, ಇನ್​ಸ್ಟಾಗ್ರಾಂನಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದು, ವಿಡಿಯೋದಲ್ಲಿ ಗುಂಪಿನೊಟ್ಟಿಗೆ ನೃತ್ಯ ಮಾಡುತ್ತಿದ್ದಾರೆ. ವಿಡಿಯೋಕ್ಕೆ ತಮ್ಮ ಅಣ್ಣ ಬಾಬಿ ಡಿಯೋಲ್​ನ ‘ಅನಿಮಲ್’ ಎಂಟ್ರಿ ಹಾಡಾಗಿರುವ ಜಮಲ್ ಕಾಡು ಅನ್ನು ಹಾಕಿಕೊಂಡಿದ್ದಾರೆ. ಸನ್ನಿ ಡಿಯೋಲ್​ಗೆ ವಿಡಿಯೋ ಟ್ಯಾಗ್ ಮಾಡಿರುವ ಇಶಾ. ‘ನೀನು ದಿ ಬೆಸ್ಟ್’ ಎಂದು ಬರೆದುಕೊಂಡಿದ್ದಾರೆ.


ಅಸಲಿಗೆ, ವಿಡಿಯೋದಲ್ಲಿ ಇಶಾ ನೃತ್ಯ ಮಾಡುತ್ತಿರುವುದು ‘ಅನಿಮಲ್’ ಎಂಟ್ರಿ ಹಾಡಿಗಲ್ಲ, ಬದಲಿಗೆ ಅವರು ನಟಿಸಿದ್ದ ಸೂಪರ್-ಡೂಪರ್ ಹಿಟ್ ಸಿನಿಮಾ ‘ಧೂಮ್​’ನ ಟೈಟಲ್ ಹಾಡಿಗೆ. ಆದರೆ ಆ ಹಾಡಿನ ಬದಲಿಗೆ ‘ಅನಿಮಲ್’ ಸಿನಿಮಾನಲ್ಲಿ ಬಳಸಲಾಗಿರುವ ಹಾಡನ್ನು ಹಾಕಿಕೊಂಡಿದ್ದಾರೆ. ಇಶಾ ಡಿಯೋಲ್, ಚಿತ್ರರಂಗದಿಂದ ತುಸು ದೂರಾಗಿದ್ದಾರೆ, ಹೊಸ ಸಿನಿಮಾದ ಅವಕಾಶಗಳು ಕಡಿಮೆಯಾಗಿವೆ. ಆದರೆ ಸ್ಟೇಜ್ ಶೋಗಳನ್ನು ಇಶಾ ನೀಡುತ್ತಿದ್ದಾರೆ. ಅಂಥಹುದೇ ಒಂದು ಸ್ಟೇಜ್ ಶೋಗಾಗಿ ಇಶಾ ನೃತ್ಯ ಪ್ರಾಕ್ಟಿಸ್ ಮಾಡುವ ವಿಡಿಯೋವನ್ನು ಇದೀಗ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:Shreyas Talpade: ಬಾಲಿವುಡ್ ನಟ ಶ್ರೇಯಸ್ ತಲ್ಪಡೆಗೆ ಹೃದಯಾಘಾತ; ಈಗ ಹೇಗಿದೆ ಪರಿಸ್ಥಿತಿ?

ಧರ್ಮೇಂದ್ರರ ಮೊದಲ ಪತ್ನಿ ಮಕ್ಕಳು ಹಾಗೂ ಎರಡನೇ ಪತ್ನಿ ಹೇಮಾಮಾಲಿನಿ ಅವರಿಗೂ ವೈಮನಸ್ಯವಿತ್ತು. ಪರಸ್ಪರರ ಮನೆಗಳಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಇವರು ಹಾಜರಾಗುತ್ತಿರಲಿಲ್ಲ, ಆದರೆ ಇತ್ತೀಚೆಗೆ ಈ ವೈಮನಸ್ಯ ಕರಗಿದೆ. ಇದೀಗ ಇಶಾ ಡಿಯೋಲ್, ಬಾಬಿ ಡಿಯೋಲ್​ಗೆ ಸ್ಟೋರಿ ಟ್ಯಾಗ್ ಮಾಡಿ ‘ನೀನು ದಿ ಬೆಸ್ಟ್’ ಎಂದಿರುವುದು ಇಬ್ಬರ ನಡುವಿನ ವೈಮನಸ್ಯ ಸಂಪೂರ್ಣ ಕರಗಿದೆ ಎಂಬುದಕ್ಕೆ ಸಾಕ್ಷಿ.

ಇಶಾ ಡಿಯೋಲ್, 2002ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟರು. ಆರಂಭದಲ್ಲಿ ಕೆಲವು ಒಳ್ಳೆಯ ಸಿನಿಮಾಗಳಲ್ಲಿ ಇಶಾ ನಟಿಸಿದರು. ‘ಧೂಮ್’, ಮಣಿರತ್ನಂ ನಿರ್ದೇಶನದ ‘ಯುವ’, ‘ಎಲ್​ಓಸಿ’, ‘ಕಾಲ್’, ‘ದಸ್’, ‘ನೋ ಎಂಟ್ರಿ’ ಇನ್ನೂ ಕೆಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ಇಶಾ ನಟಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ