ಆಮಿರ್ ಖಾನ್ ಹೊಂದಿದ್ದ ಅಕ್ರಮ ಸಂಬಂಧ ಬಹಿರಂಗ ಮಾಡಿದ ಸಹೋದರ ಫೈಸಲ್ ಖಾನ್

ಆಮಿರ್ ಖಾನ್ ರೀತಿ ಅವರ ಸಹೋದರ ಫೈಸಲ್ ಖಾನ್ ಕೂಡ ನಟನಾಗಲು ಪ್ರಯತ್ನಿಸಿದ್ದರು. ಆದರೆ ಅವರಿಗೆ ಯಶಸ್ಸು ಸಿಗಲಿಲ್ಲ. ಕುಟುಂಬದ ಜೊತೆ ಅವರಿಗೆ ಮನಸ್ತಾಪ ಕೂಡ ಇದೆ. ಆಮಿರ್ ಖಾನ್ ಬಗ್ಗೆ ಫೈಸಲ್ ಖಾನ್ ಅವರು ಹಲವು ಆರೋಪ ಮಾಡಿದ್ದಾರೆ. ಸುದ್ದಿಗೋಷ್ಠಿ ನಡೆಸಿ ಅನೇಕ ವಿಚಾರಗಳನ್ನು ಬಯಲಿಗೆ ಎಳೆದಿದ್ದಾರೆ.

ಆಮಿರ್ ಖಾನ್ ಹೊಂದಿದ್ದ ಅಕ್ರಮ ಸಂಬಂಧ ಬಹಿರಂಗ ಮಾಡಿದ ಸಹೋದರ ಫೈಸಲ್ ಖಾನ್
Faisal Khan, Aamir Khan

Updated on: Aug 20, 2025 | 7:48 PM

ನಟ ಆಮಿರ್ ಖಾನ್ (Aamir Khan) ಅವರ ವೈಯಕ್ತಿಕ ಜೀವನದ ವಿಚಾರ ಸದಾ ಚರ್ಚೆಗೆ ಆಸ್ಪದ ನೀಡುವಂತಿದೆ. ಈವರೆಗೂ 2 ಮದುವೆ ಆಗಿ ವಿಚ್ಛೇದನ ಪಡೆದಿರುವ ಅವರು 3ನೇ ಮದುವೆಗೆ ಸಜ್ಜಾಗಿದ್ದಾರೆ. ಅಲ್ಲದೇ ಮಾಜಿ ಪತ್ನಿಯರ ಜೊತೆಗೂ ಚೆನ್ನಾಗಿದ್ದಾರೆ. ಆಗಾಗ ಅವರು ಮಾಜಿ ಪತ್ನಿಯರನ್ನು ಭೇಟಿ ಆಗುತ್ತಾರೆ. ಒಟ್ಟಿಗೆ ಕೆಲಸ ಮಾಡುತ್ತಾರೆ. ಆದರೂ ಕೂಡ ಹೊಸ ಬಾಳ ಸಂಗಾತಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಇದರ ನಡುವೆ ಅವರ ಸಹೋದರ (Aamir Khan Brother) ಫೈಸಲ್ ಖಾನ್ ಅವರು ಒಂದು ಬಾಂಬ್ ಸಿಡಿಸಿದ್ದಾರೆ. ಆಮಿರ್ ಖಾನ್ ಅವರು ಹೊಂದಿದ್ದರು ಎನ್ನಲಾದ ಅಕ್ರಮ ಸಂಬಂಧಗಳ ಬಗ್ಗೆ ಫೈಸಲ್ ಖಾನ್ (Faisal Khan) ಬಾಯಿ ಬಿಟ್ಟಿದ್ದಾರೆ.

ಆಮಿರ್ ಖಾನ್ ಮತ್ತು ಫೈಸಲ್ ಖಾನ್ ನಡುವೆ ಜಟಾಪಟಿ ಜೋರಾಗಿದೆ. ಹಾಗಾಗಿ ಕುಟುಂಬದವರಿಂದ ಎಲ್ಲ ಸಂಬಂಧ ಕಡಿತಗೊಳಿಸಿಕೊಳ್ಳಲು ಫೈಸಲ್ ಖಾನ್ ತೀರ್ಮಾನಿಸಿದ್ದಾರೆ. ಈ ಬಗ್ಗೆ ಅವರು ಸೋಶಿಯಲ್ ಮೀಡಿಯಾದಲ್ಲಿ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಅಲ್ಲದೇ, ಮುಂಬೈನಲ್ಲಿ ಸುದ್ದಿಗೋಷ್ಠಿ ನಡೆಸಿ ಆಮಿರ್ ಖಾನ್ ಮೇಲೆ ಹಲವು ಆರೋಪಗಳನ್ನು ಮಾಡಿದ್ದಾರೆ.

ಯುಕೆ ಮೂಲದ ಪತ್ರಕರ್ತೆ ಮತ್ತು ಲೇಖಕಿ ಜೆಸ್ಸಿಕಾ ಹೈನ್ಸ್ ಜೊತೆ ಆಮಿರ್ ಖಾನ್ ಅವರು ಅಕ್ರಮ ಸಂಬಂಧ ಹೊಂದಿದ್ದರು ಎಂಬುದು ಫೈಸಲ್ ಖಾನ್ ಅವರ ಆರೋಪ. ಅಲ್ಲದೇ. ಜೆಸ್ಸಿಕಾ ಹೈನ್ಸ್ ಮತ್ತು ಆಮಿರ್ ಖಾನ್ ಅವರಿಗೆ ಒಂದು ಮಗು ಕೂಡ ಜನಿಸಿತ್ತು ಎಂದು ಅವರು ಹೇಳಿದ್ದಾರೆ. 2ನೇ ಪತ್ನಿ ಕಿರಣ್ ರಾವ್ ಜೊತೆ ಇರುವಾಗಲೇ ಆಮಿರ್ ಖಾನ್ ಅವರು ಈ ಸಂಬಂಧ ಇಟ್ಟುಕೊಂಡಿದ್ದರು ಎಂದಿದ್ದಾರೆ ಫೈಸಲ್ ಖಾನ್.

ಇದನ್ನೂ ಓದಿ
ಆಮಿರ್ ಖಾನ್-ರಣ್​ಬೀರ್ ಕಪೂರ್ ಜಗಳ, ಮಧ್ಯಸ್ಥಿಕೆ ವಹಿಸಿದ ರೋಹಿತ್ ಶರ್ಮಾ
ಹೊಸ ಪ್ರಾಜೆಕ್ಟ್​ಗಾಗಿ ಒಂದಾದ ಆಮಿರ್-ರಣಬೀರ್; ವಿಚಾರ ರಿವೀಲ್ ಮಾಡಿದ ಆಲಿಯಾ
59ನೇ ವಯಸ್ಸಲ್ಲಿ ಬೆಂಗಳೂರು ಹುಡುಗಿ ಮೇಲೆ ಆಮಿರ್​​​ಗೆ ಲವ್? ಯಾರು ಈ ಗೌರಿ?
ಆಮಿರ್ ಖಾನ್ ಈ ರೀತಿ ವೇಷ ಹಾಕಿದ್ದು ದುಡ್ಡಿಗಾಗಿ; ಅಸಲಿ ವಿಚಾರ ರಿವೀಲ್

ಮದುವೆ ಆಗುವಂತೆ ಕುಟುಂಬದವರು ಫೈಸಲ್ ಖಾನ್​​ಗೆ ಒತ್ತಾಯಿಸಿದ್ದರು. ಆಗ ಕುಟುಂಬದವರಿಗೆ ಫೈಸಲ್ ಖಾನ್ ಒಂದು ಪತ್ರ ಬರೆದಿದ್ದರು. ‘ನಮ್ಮ ಕುಟುಂಬದಲ್ಲಿ ಬಹುತೇಕ ಎಲ್ಲರಿಗೂ 2-3 ಮದುವೆ ಆಗಿದೆ. ನಿಮ್ಮಂಥವರು ನನಗೆ ಮದುವೆ ಬಗ್ಗೆ ಯಾಕೆ ಸಲಹೆ ಕೊಡುತ್ತೀರಿ? ನನ್ನ ಇಷ್ಟದಂತೆ ನಾನು ಬದುಕುತ್ತಿದ್ದೇನೆ’ ಎಂದು ಮುಖಕ್ಕೆ ಹೊಡೆದಂತೆ ಅವರು ಪತ್ರ ಬರೆದಿದ್ದರು.

ಇದನ್ನೂ ಓದಿ: ಆಮಿರ್ ಖಾನ್ ಜೊತೆ ಸಿನಿಮಾ: ಲೋಕೇಶ್ ಆಯ್ಕೆ ಮಾಡಿರುವ ಕತೆ ಯಾವುದು?

‘ನಾನು ಆ ಪತ್ರದಲ್ಲಿ ಕೆಟ್ಟ ಭಾಷೆ ಕೂಡ ಬಳಸಿದ್ದೆ. ನನಗೆ ಬಹಳ ಸಿಟ್ಟು ಬಂದಿತ್ತು. ಸತ್ಯ ಯಾವಾಗಲೂ ಹಾಗೆಯೇ ಇರುತ್ತದೆ. ಅದನ್ನು ಅವರು ಸಹಿಸಲಿಲ್ಲ. ಹಾಗಾಗಿ ಅವರು ನನ್ನನ್ನು ಮಾನಸಿಕ ಅಸ್ವಸ್ಥ ಎಂದು ಬಿಂಬಿಸಿದರು. ಕುಟುಂಬದ ಒಳಗಿನ ರಾಜಕೀಯದಿಂದ ಈ ರೀತಿ ಆಯಿತು’ ಎಂದು ಫೈಸಲ್ ಖಾನ್ ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.