ನಟ ಆಮಿರ್ ಖಾನ್ (Aamir Khan) ಅವರ ವೈಯಕ್ತಿಕ ಜೀವನದ ಬಗ್ಗೆ ಅನೇಕ ಅಂತೆ-ಕಂತೆಗಳು ಹರಿದಾಡುತ್ತಿವೆ. ಕಿರಣ್ ರಾವ್ (Kiran Rao) ಅವರಿಗೆ ವಿಚ್ಛೇದನ ನೀಡಿ, 15 ವರ್ಷಗಳ ದಾಂಪತ್ಯಕ್ಕೆ ಅಂತ್ಯಹಾಡಿದ ಬಳಿಕ ಅವರು ಬೇರೊಂದು ನಟಿಯ ಜತೆ ಸುತ್ತುತ್ತಿದ್ದಾರೆ ಎಂಬ ಗುಸುಗುಸು ಕೇಳಿಬಂದಿದೆ. ಆ ನಟಿ ಬೇರಾರೂ ಅಲ್ಲ, ಫಾತಿಮಾ ಸನಾ ಶೇಕ್. ಬ್ಲಾಕ್ಬಸ್ಟರ್ ಹಿಟ್ ಆದ ‘ದಂಗಲ್’ (Dangal Movie) ಸಿನಿಮಾದಲ್ಲಿ ಆಮಿರ್ ಖಾನ್ ಮತ್ತು ಫಾತಿಮಾ ಸನಾ ಶೇಕ್ (Fatima Sana Shaikh) ಅವರು ತಂದೆ-ಮಗಳ ಪಾತ್ರ ಮಾಡಿದ್ದರು. ಈಗ ಅವರಿಬ್ಬರು ರಹಸ್ಯವಾಗಿ ಮದುವೆ ಆಗಿದ್ದಾರೆ ಎಂಬ ಸುಳ್ಳು ಸುದ್ದಿ ಹಬ್ಬಿದೆ. ಅದಕ್ಕೆ ಕಾರಣ ಆಗಿರುವುದು ಒಂದು ನಕಲಿ ಫೋಟೋ! ಸದ್ಯಕ್ಕಂತೂ ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೋ ಸಖತ್ ವೈರಲ್ ಆಗಿದೆ.
ಆಮಿರ್ ಖಾನ್ ಮತ್ತು ಫಾತಿಮಾ ಸನಾ ಶೇಕ್ ಅವರು ಆಪ್ತವಾಗಿದ್ದಾರೆ ಎಂಬುದು ನಿಜ. ಆ ಕಾರಣಕ್ಕಾಗಿ ಅವರಿಬ್ಬರ ನಡುವೆ ಏನೋ ನಡೆಯುತ್ತಿದೆ ಎಂಬ ಗಾಸಿಪ್ ಈ ಮೊದಲೇ ಕೇಳಿಬಂದಿತ್ತು. ಅದನ್ನು ಫಾತಿಮಾ ಅವರು ತಿರಸ್ಕರಿಸಿದ್ದರು ಕೂಡ. ಆದರೂ ಗಾಳಿಸುದ್ದಿ ನಿಂತಿಲ್ಲ. ಇತ್ತೀಚೆಗೆ ಒಂದು ಫೋಟೋದಲ್ಲಿ ಆಮಿರ್ ಖಾನ್ ಮತ್ತು ಫಾತಿಮಾ ಜೊತೆಯಾಗಿ ಪೋಸ್ ನೀಡಿದ್ದು ಎಲ್ಲರ ಅಚ್ಚರಿಗೆ ಕಾರಣ ಆಗಿದೆ. ಆದರೆ ಅದು ಫೇಕ್ ಫೋಟೋ ಎಂಬುದು ಕೆಲವೇ ನಿಮಿಷಗಳಲ್ಲಿ ಬಯಲಾಯಿತು. ಅಷ್ಟರಲ್ಲಾಗಲೇ ಅದು ವೈರಲ್ ಆಗಿತ್ತು.
ಈ ಹಿಂದೆ ಆಮಿರ್ ಖಾನ್ ಮತ್ತು ಕಿರಣ್ ರಾವ್ ಅವರು ಸಮಾರಂಭವೊಂದರಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದ ಫೋಟೋವನ್ನೇ ಎಡಿಟ್ ಮಾಡಲಾಗಿದೆ. ಕಿರಣ್ ರಾವ್ ಮುಖದ ಬದಲಿಗೆ ಫಾತಿಮಾ ಸನಾ ಶೇಕ್ ಮುಖವನ್ನು ಎಡಿಟ್ ಮಾಡಿ ಹರಿಬಿಡಲಾಗಿದೆ. ಅಲ್ಲದೇ ಅವರಿಬ್ಬರು ರಹಸ್ಯವಾಗಿ ಮದುವೆ ಆಗಿದ್ದಾರೆ ಎಂಬ ಸುದ್ದಿಯನ್ನೂ ಹಬ್ಬಿಸಲಾಗಿದೆ. ಸತ್ಯಾಸತ್ಯತೆಯನ್ನು ಪರಿಶೀಲಿಸದ ಕೆಲವರು ಇದನ್ನು ನಿಜ ಎಂದೇ ನಂಬಿದ್ದಾರೆ.
ಈ ವೈರಲ್ ಫೋಟೋ ಬಗ್ಗೆ ಆಮಿರ್ ಖಾನ್ ಅವರು ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅವರ ಮೂರನೇ ಪತ್ನಿಯಾಗಿ ಯಾರು ಬರುತ್ತಾರೆ ಎಂಬ ಕೌತುಕ ಪ್ರಶ್ನೆ ಅಭಿಮಾನಿಗಳ ಮನದಲ್ಲಿ ಕೊರೆಯುತ್ತಿದೆ. ಸದ್ಯ ಅವರು ‘ಲಾಲ್ ಸಿಂಗ್ ಚೆಡ್ಡಾ’ ಸಿನಿಮಾದ ಕೊನೇ ಹಂತದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಆ ಚಿತ್ರದಲ್ಲಿ ಅವರಿಗೆ ಜೋಡಿಯಾಗಿ ಕರೀನಾ ಕಪೂರ್ ಖಾನ್ ಅಭಿನಯಿಸಿದ್ದಾರೆ. 2022ರ ಏಪ್ರಿಲ್ 14ರಂದು ಆ ಸಿನಿಮಾ ಬಿಡುಗಡೆ ಆಗಲಿದೆ.
ಇದನ್ನೂ ಓದಿ:
ಸ್ವಂತ ತಮ್ಮನನ್ನೇ ಬೆಳೆಸಲಿಲ್ಲ ಆಮಿರ್ ಖಾನ್; ನಟನೆ ಬರಲ್ಲ ಅಂತ ಬೈಯಿಸಿಕೊಂಡಿದ್ದ ಫೈಸಲ್ ಖಾನ್ ಬಿಚ್ಚಿಟ್ಟ ರಹಸ್ಯ
ಆಮಿರ್ ಖಾನ್ 3ನೇ ಮದುವೆ ಬಗ್ಗೆ ಬಿಗ್ ನ್ಯೂಸ್; ಅಧಿಕೃತವಾಗಿ ಘೋಷಣೆ ಯಾವಾಗ?
Published On - 1:56 pm, Fri, 24 December 21