ಬಾಲಿವುಡ್ನಲ್ಲಿ ಪ್ರಸ್ತುತ ಸಖತ್ ಬ್ಯುಸಿಯಿರುವ ನಟಿಯರ ಪೈಕಿ ಕೃತಿ ಸನೋನ್ ಕೂಡ ಒಬ್ಬರು. ಅವರು ದಕ್ಷಿಣ ಭಾರತದ ಚಿತ್ರಗಳ ಜೊತೆಗೆ ಬಾಲಿವುಡ್ನಲ್ಲೂ ಸಖತ್ ಬ್ಯುಸಿಯಿದ್ದಾರೆ. ಇತ್ತೀಚೆಗೆ ರಿಲೀಸ್ ಆದ ‘ಮಿಮಿ’ ಚಿತ್ರ ಮೆಚ್ಚುಗೆ ಪಡೆದುಕೊಂಡಿತ್ತು. ಬಿಗ್ ಬಜೆಟ್ ಚಿತ್ರಗಳ ನಾಯಕಿಯಾಗಿಯೂ ಗುರುತಿಸಿಕೊಳ್ಳುತ್ತಿರುವುದು ಅವರ ಹೆಚ್ಚುಗಾರಿಕೆ. ಪ್ರಭಾಸ್ ನಟಿಸುತ್ತಿರುವ ಬಹುನಿರೀಕ್ಷಿತ ‘ಆದಿಪುರುಷ್’ ಚಿತ್ರದಲ್ಲಿ ನಾಯಕಿಯ ಪಾತ್ರದಲ್ಲಿ ಕೃತಿ ಬಣ್ಣ ಹಚ್ಚುತ್ತಿದ್ದಾರೆ. ಇದಲ್ಲದೆ, ಇನ್ನೂ ಕೆಲ ಸಿನಿಮಾ ಕೆಲಸಗಳಲ್ಲಿ ಅವರು ಬ್ಯುಸಿ ಇದ್ದಾರೆ. ಅಚ್ಚರಿ ಎಂದರೆ, ಕೃತಿ ವಿರುದ್ಧ ಈಗ ಆರೋಪವೊಂದು ಕೇಳಿ ಬಂದಿದೆ. ಇದಕ್ಕೆ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಜುಲೈನಲ್ಲಿ ರಿಲೀಸ್ ಆದ ‘ಮಿಮಿ’ ಸಿನಿಮಾ ಮೆಚ್ಚುಗೆ ಗಳಿಸಿಕೊಂಡಿತ್ತು. ಬಾಡಿಗೆ ತಾಯ್ತನದ (Surrogate Mother) ಕುರಿತು ಸಿನಿಮಾದ ಇದೆ. ಕೃತಿ ನಟನೆಯನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ಈ ಚಿತ್ರದಲ್ಲಿ ಬರುವ ‘ಪರಮ ಸುಂದರಿ..’ ಎಂಬ ವಿಶೇಷ ಹಾಡನ್ನು ಕೇಳಿ ಅನೇಕರು ಹುಚ್ಚೆದ್ದು ಕುಣಿದಿದ್ದಾರೆ. ಈ ಹಾಡಿನಲ್ಲಿ ಅವರು ಸ್ಟೆಪ್ ಹಾಕಿದ ಪರಿ ಅನೇಕರಿಗೆ ಇಷ್ಟವಾಗಿದೆ. ಈ ಸಾಂಗ್ಅನ್ನು ಅಭಿಮಾನಿಯೋರ್ವ 1000 ಬಾರಿ ನೋಡಿದ್ದಾನೆ. ಈ ಬಗ್ಗೆ ಆತ ಬರೆದುಕೊಂಡಿದ್ದಾನೆ.
ಪರಮ್ ಛಾಯ ಹೆಸರಿನ ಅಭಿಮಾನಿ ಈ ಹಾಡನ್ನು ನೋಡಿ ಎಷ್ಟು ಇಷ್ಟಪಟ್ಟಿದ್ದೇನೆ ಎಂದು ಬರೆದುಕೊಂಡಿದ್ದಾನೆ. ‘ಬಾಲ್ಯದಲ್ಲಿ, ಶಾಲೆಯಲ್ಲಿ ನನಗೆ ಏನೂ ತೊಂದರೆ ಎದುರಾಗಿಲ್ಲ. ನನ್ನ ಕೊನೆಯ ಹೆಸರನ್ನು ಅಥವಾ ನನ್ನ ಹೆಸರನ್ನು ಕೀಟಲೆ ಮಾಡಿದವರ ಮೇಲೂ ನನಗೆ ಕೋಪ ಬಂದಿರಲಿಲ್ಲ. ಕೃತಿ ಸನೋನ್ ಅವರ ‘ಪರಮ ಸುಂದರಿ..’ ಹಾಡು ರಿಲೀಸ್ ಆದಾಗಿನಿಂದ ನನ್ನ ಬದುಕು ಬದಲಾಗಿದೆ. ನಾನು ಈಗಾಗಲೇ ಈ ಸಾಂಗ್ಅನ್ನು ಕನಿಷ್ಠ 1,000 ಬಾರಿ ನೋಡಿದ್ದೇನೆ. ಈ ಹಾಡಿನಿಂದ ಡಿಸ್ಟರ್ಬ್ ಆಗಿದ್ದೇನೆ. ಯಾಕೆ ಹೀಗೆ ಮಾಡಿದಿರಿ ಕೃತಿ? ನನ್ನ ಜೀವನವನ್ನು ಏಕೆ ಹಾಳುಮಾಡಿದಿರಿ? ಎಂದು ಅಭಿಮಾನಿ ಪ್ರಶ್ನೆ ಮಾಡಿದ್ದಾನೆ. ಇದಕ್ಕೆ ಅವರು ‘“Oops! ಕ್ಷಮೆ ಇರಲಿ’ ಎಂದು ಕೋರಿದ್ದಾರೆ.
As a kid nothing ever bothered me in school. I wasn’t angry on anyone who teased my last name or my name itself.
Since the time Kriti Sanon’s Param Sundri dropped, I have been bullied by the song atleast 1000 times already.
Why did you do this @kritisanon
Why ruin my life ??— ParamChhaya (@maijadoohoon) November 25, 2021
????oops!! Sorry! ??
— Kriti Sanon (@kritisanon) November 26, 2021
ಸದ್ಯ, ಈ ಟ್ವೀಟ್ ಸಾಕಷ್ಟು ವೈರಲ್ ಆಗಿದೆ.
ಇದನ್ನೂ ಓದಿ: ಆಹಾರಕ್ಕಿಂತಲೂ ನನಗೆ ಸೆಕ್ಸ್ ಮುಖ್ಯ ಎಂದು ಹೇಳಿದ್ದ ಸಮಂತಾ; ವಿಡಿಯೋ ವೈರಲ್
Published On - 9:59 pm, Wed, 1 December 21