ಭಾರತದಲ್ಲಿ ಹಾಲಿವುಡ್ ಚಿತ್ರಗಳಿಗೂ ಬಹುದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳಿದ್ದಾರೆ. ಅದರಲ್ಲೂ ಸೂಪರ್ ಹೀರೋ ಪರಿಕಲ್ಪನೆಯ ಮಾರ್ವೆಲ್ ಸೀರೀಸ್ನ ಸಿನಿಮಾಗಳು ಸಖತ್ ಸದ್ದು ಮಾಡುತ್ತವೆ. ಅಭಿಮಾನಿಗಳು ಅವುಗಳನ್ನು ಭಾರತದ ಹೀರೋಗಳೊಂದಿಗೆ ಅಥವಾ ಅವರ ಹಳೆಯ ಚಿತ್ರಗಳೊಂದಿಗೆ ಸಮೀಕರಿಸಿ ವಿಡಿಯೊಗಳನ್ನು ಹರಿಬಿಡುವುದಿದೆ. ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ಮಾರ್ವೆಲ್ ಸೀರೀಸ್ನ ‘ಶಾಂಗ್ ಚಿ ಆಂಡ್ ದಿ ಲೆಜೆಂಡ್ ಆಫ್ ದಿ ಟೆನ್ ರಿಂಗ್ಸ್’ ಚಿತ್ರಕ್ಕೂ, ಅಜಯ್ ದೇವಗನ್ರ ಹಳೆಯ ಚಿತ್ರವೊಂದಕ್ಕೂ ಬಹು ದೊಡ್ಡ ಸಾಮ್ಯತೆಯನ್ನು ಅಭಿಮಾನಿಗಳು ಗುರುತಿಸಿದ್ದಾರೆ. ಅಷ್ಟೇ ಅಲ್ಲದೆ ಮಜವಾದ ವಿಡಿಯೊಗಳನ್ನು ಹರಿಬಿಡುತ್ತಿದ್ದಾರೆ.
1992ರಲ್ಲಿ ಬಿಡುಗಡೆಯಾದ ‘ಜಿಗರ್’ ಚಿತ್ರದಲ್ಲಿ ಅಜಯ್ ದೇವಗನ್ ಕಾಣಿಸಿಕೊಂಡಿದ್ದರು. ಅದರಲ್ಲಿ ಬರುವ ‘ಅತೀಂದ್ರಿಯ ಮಾರ್ಷಲ್ ಆರ್ಟ್ಸ್’ ದೃಶ್ಯವೊಂದರಲ್ಲಿ ಅಜಯ್ ಧರಿಸಿದ್ದ ರಿಂಗ್ಗಳಿಗೂ ಹಾಗೂ ‘ಶಾಂಗ್ ಚಿ’ ಪಾತ್ರ ಧರಿಸಿರುವ ರಿಂಗ್ಗಳಿಗೂ ಇರುವ ಸಾಮ್ಯತೆಯನ್ನು ಅಭಿಮಾನಿಗಳು ಗುರುತಿಸಿದ್ದಾರೆ. ಇದನ್ನೇ ಆಧಾರವಾಗಿಟ್ಟುಕೊಂಡು ಅಭಿಮಾನಿಗಳು ತಮಾಷೆಯ ವಿಡಿಯೊಗಳನ್ನು ಹರಿಬಿಟ್ಟಿದ್ದಾರೆ. ‘ಫಿಲ್ಟರ್ ಕಾಪಿ’ ಇತ್ತೀಚೆಗೆ ಹಂಚಿಕೊಂಡ ವಿಡಿಯೊದಲ್ಲಿ ‘ಹೊಸ ಚಿತ್ರ 3Dಯಲ್ಲಿ ನಿಮ್ಮ ಹತ್ತಿರದ ಚಿತ್ರಮಂದಿರದಲ್ಲಿ ಬರಲಿದೆ’ ಎಂದು ಬರೆದುಕೊಂಡು ವಿಡಿಯೊ ಹಂಚಿಕೊಂಡಿದೆ.
ಆ ವಿಡಿಯೊ ಇಲ್ಲಿದೆ:
ಮತ್ತೆ ಕೆಲವು ಅಭಿಮಾನಿಗಳಿಗೆ ಅಜಯ್ ದೇವಗನ್ರ ವಿಮಲ್ ಜಾಹಿರಾತಿಗೂ ಶಾಂಗ್ ಚಿ ಸಿನಿಮಾಕ್ಕೂ ಸಂಬಂಧ ಕಲ್ಪಿಸಿದ್ದಾರೆ. ಒಬ್ಬ ಅಭಿಮಾನಿ ‘ಶಾಂಗ್ ಚಿ ಆಂಡ್ ದಿ ಲೆಜೆಂಡ್ ಆಫ್ ಟೆನ್ ವಿಮಲ್ ಪ್ಯಾಕೆಟ್ಸ್’ ಎಂದು ಹೆಸರು ನೀಡಿದ್ದರೆ, ಮತ್ತೊಬ್ಬ ಫ್ಯಾನ್, ‘ವಿಮಲ್: ಲೆಜೆಂಡ್ಸ್ ಆಫ್ ದಿ ಅಜಯ್ ದೇವಗನ್’ ಎಂದು ಹೆಸರು ನೀಡಿದ್ದಾರೆ. ಒಟ್ಟಿನಲ್ಲಿ ಅಜಯ್ ಕಾಣಿಸಿಕೊಂಡಿರುವ ವಿಮಲ್ ಕಂಪನಿಯ ಜಾಹಿರಾತಿಗೂ, ಮಾರ್ವೆಲ್ ಚಿತ್ರಕ್ಕೂ ಬಹುದೊಡ್ಡ ಸಾಮ್ಯತೆ ಕಂಡುಕೊಂಡಿರುವ ಅಭಿಮಾನಿಗಳು ಶಾಂಗ್ ಚಿ ಬಾಲಿವುಡ್ ನಲ್ಲಿ ಕಾಣಿಸಿಕೊಂಡರೆ ಹೇಗಿರುತ್ತದೆ ಎಂದು ಚರ್ಚಿಸುತ್ತಿದ್ದಾರೆ. ಅಂತಹ ಒಂದು ವಿಡಿಯೊ ಇಲ್ಲಿದೆ.
ಜಿಗರ್ ಚಿತ್ರವನ್ನು ಫಾರೂಖ್ ಸಿದ್ದಿಕಿ ನಿರ್ದೇಶಿಸಿದ್ದು, 1992ರಲ್ಲಿ ಬಿಡುಗಡೆಯಾಗಿತ್ತು. ಈ ಚಿತ್ರದಲ್ಲಿ ಕರಿಷ್ಮಾ ಕಪೂರ್ ಕಾಣಿಸಿಕೊಂಡಿದ್ದರು. ‘ಶಾಂಗ್ ಚಿ ಆಂಡ್ ಲೆಜೆಂಡ್ ಆಫ್ ದಿ ಟೆನ್ ರಿಂಗ್ಸ್’ ಚಿತ್ರವು ಏಷಿಯಾದ ಮೂಲದ ಪಾತ್ರವೊಂದು ನಾರ್ವೆಲ್ ಸರಣಿಯ ನಾಯಕನಾಗಿರುವ ಮೊದಲ ಚಿತ್ರವಾಗಿದೆ. ಈ ಚಿತ್ರ ಭಾರತದಲ್ಲಿ ಸೆಪ್ಟೆಂಬರ್ 3ರಂದು ಬಿಡುಗಡೆಯಾಗಿತ್ತು. ಬಾಕ್ಸಾಫೀಸ್ ನಲ್ಲೂ ಉತ್ತಮ ಸದ್ದು ಮಾಡುತ್ತಿರುವ ಈ ಚಿತ್ರ, ಇದುವರೆಗೆ ವಿಶ್ವದಾದ್ಯಂತ ಸುಮಾರು 250 ಮಿಲಿಯನ್ ಡಾಲರ್ ಗೂ ಅಧಿಕ ಹಣವನ್ನು ಬಾಚಿಕೊಂಡಿದೆ.
ಇದನ್ನೂ ಓದಿ:
ರಶ್ಮಿಕಾ ಮಂದಣ್ಣಗೆ ಪೈಪೋಟಿ ನೀಡಲು ಬಂದಿರುವ ಕನ್ನಡತಿ ಕೃತಿ ಶೆಟ್ಟಿಗೆ ಪರಭಾಷೆಯಲ್ಲಿ ಫುಲ್ ಡಿಮ್ಯಾಂಡ್
ಸಾಯಿ ಪಲ್ಲವಿ-ನಾಗ ಚೈತನ್ಯ ಲವ್ ಸ್ಟೋರಿ ಬಗ್ಗೆ ಮೌನ ಮುರಿದ ಸಮಂತಾ; ಡಿವೋರ್ಸ್ ವದಂತಿಗೆ ಬ್ರೇಕ್
(Fans find the similarity between Ajay Devgan s Jigar and the marvel film Shang Chi and the legend of the ten rings)
Published On - 10:30 am, Tue, 14 September 21