ದೀಪಿಕಾ ಹಾಗೂ ಫರಾ ಖಾನ್ ಮಧ್ಯೆ ಬಿರುಕು? ಸಿಕ್ಕಿತು ಸ್ಪಷ್ಟನೆ

ನಟಿ ದೀಪಿಕಾ ಪಡುಕೋಣೆ ಜೊತೆಗಿನ ಸಂಬಂಧ ಸರಿ ಇಲ್ಲ ಎಂಬ ವದಂತಿಗಳಿಗೆ ನಿರ್ದೇಶಕಿ ಫರಾ ಖಾನ್ ಸ್ಪಷ್ಟನೆ ನೀಡಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ತಾವು ಎಂದಿಗೂ ಪರಸ್ಪರ ಫಾಲೋ ಮಾಡಿರಲಿಲ್ಲ ಎಂದು ಫರಾ ಹೇಳಿದ್ದಾರೆ. 8 ಗಂಟೆಗಳ ಶಿಫ್ಟ್ ಬಗ್ಗೆ ನೀಡಿದ್ದ ಹೇಳಿಕೆ ದೀಪಿಕಾಗೆ ಅಪಮಾನವಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ. ದೀಪಿಕಾ ಕೂಡ ಫರಾಹ್ ವಿವರಣೆಗೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ.

ದೀಪಿಕಾ ಹಾಗೂ ಫರಾ ಖಾನ್ ಮಧ್ಯೆ ಬಿರುಕು? ಸಿಕ್ಕಿತು ಸ್ಪಷ್ಟನೆ
ಫರಾ-ದೀಪಿಕಾ
Edited By:

Updated on: Oct 02, 2025 | 8:25 AM

ನಟಿ ದೀಪಿಕಾ ಪಡುಕೋಣೆ ಮತ್ತು ನಿರ್ದೇಶಕಿ ಫರಾ ಖಾನ್ ನಡುವೆ ಬಿರುಕು ಮೂಡಿದೆ ಎಂಬ ವದಂತಿಗಳು ಬಲವಾಗಿವೆ. ದೀಪಿಕಾ 8 ಗಂಟೆ ಮಾತ್ರ ಕೆಲಸ ಮಾಡೋದು ಎಂದಿದ್ದರು. ಆ ಬಳಿಕ ಫರಾ ತನ್ನ ವ್ಲಾಗ್‌ಗಳಲ್ಲಿ ಒಂದರಲ್ಲಿ ಈ ಬಗ್ಗೆ ಟೀಕೆ ಮಾಡಿದ್ದರು. ಅದರ ನಂತರ, ಇಬ್ಬರೂ ಇನ್‌ಸ್ಟಾಗ್ರಾಮ್‌ನಲ್ಲಿ ಪರಸ್ಪರ ಅನ್‌ಫಾಲೋ ಮಾಡಿದ್ದಾರೆ ಎಂದು ಹೇಳಲಾಗಿತ್ತು. ಈಗ ಫರಾ ಈ ವದಂತಿಗಳಿಗೆ ಪ್ರತಿಕ್ರಿಯಿಸಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ, ಫರಾ ಖಾನ್ ದೀಪಿಕಾ ಅವರೊಂದಿಗಿನ ಬಿರುಕು ಮೂಡಿದೆ ಎಂಬ ವದಂತಿಗಳ ಬಗ್ಗೆ ಮೌನ ಮುರಿದಿದ್ದಾರೆ. ನಾವು ಇನ್‌ಸ್ಟಾಗ್ರಾಮ್‌ನಲ್ಲಿ ಎಂದಿಗೂ ಒಬ್ಬರನ್ನೊಬ್ಬರು ಫಾಲೋ ಮಾಡುತ್ತಿರಲಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಸಂದರ್ಶನದಲ್ಲಿ ಫರಾ ಖಾನ್ ಮಾತನಾಡಿದ್ದಾರೆ. ‘ನಾವು ಮೊದಲು ಇನ್‌ಸ್ಟಾಗ್ರಾಮ್‌ನಲ್ಲಿ ಒಬ್ಬರನ್ನೊಬ್ಬರು ಅನುಸರಿಸುತ್ತಿರಲಿಲ್ಲ. ‘ಹ್ಯಾಪಿ ನ್ಯೂ ಇಯರ್ ಚಿತ್ರದ ಚಿತ್ರೀಕರಣದ ಸಮಯದಲ್ಲಿ, ನಾವು ಇನ್‌ಸ್ಟಾಗ್ರಾಮ್ ಮೂಲಕ ಬೇಟ, ಬದಲಾಗಿ ನೇರ ಸಂದೇಶಗಳು ಅಥವಾ ಕರೆಗಳ ಮೂಲಕ ಸಂಪರ್ಕಿಸಲು ನಿರ್ಧರಿಸಿದ್ದೇವೆ. ದೀಪಿಕಾಗೆ ಅದು ಇಷ್ಟವಿಲ್ಲದ ಕಾರಣ ನಾವು ಇನ್‌ಸ್ಟಾಗ್ರಾಮ್‌ನಲ್ಲಿ ಪರಸ್ಪರ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರುವ ಪೋಸ್ಟ್‌ಗಳನ್ನು ಸಹ ಬರೆಯುವುದಿಲ್ಲ’ ಎಂದು ಹೇಳಿದರು. ಈ ವೇಳೆ 8 ಗಂಟೆಗಳ ಶಿಫ್ಟ್ ಬಗ್ಗೆ ಫರಾಹ್ ತನ್ನ ಕಾಮೆಂಟ್ ಅನ್ನು ಸ್ಪಷ್ಟಪಡಿಸಿದರು. ಇದು ದೀಪಿಕಾಗೆ ಮಾಡಿದ ಅವಮಾನವಲ್ಲ ಎಂದು ಅವರು ಹೇಳಿದರು.

‘ನಾನು ಎಂಟು ಗಂಟೆಗಳ ಶಿಫ್ಟ್ ಬಗ್ಗೆ ಹೇಳಿದ್ದು ತಮಾಷೆಯಲ್ಲ. ಅದನ್ನು ಗಂಭೀರವಾಗಿಯೇ ಹೇಳಿದ್ದೇನೆ. ನನ್ನ ಹಾಗೂ ದೀಪಿಪಾ ಮಧ್ಯೆ ಎಲ್ಲವೂ ಸರಿ ಇದೆ. ದುವಾ ಹುಟ್ಟಿದಾಗ, ದೀಪಿಕಾಳನ್ನು ಮೊದಲು ಭೇಟಿಯಾದದ್ದು ನಾನೇ ಎಂದು ಯಾರಿಗೂ ತಿಳಿದಿಲ್ಲ. ಎಲ್ಲವೂ ಇನ್‌ಸ್ಟಾಗ್ರಾಮ್ ಮತ್ತು ಪಾಪರಾಜಿಗಳಿಗೆ ತಿಳಿಯಲ್ಲ’ ಎಂದು ಫರಾ ಹೇಳಿದರು.

ಇದನ್ನೂ ಓದಿ
ಕ್ಲೈಮ್ಯಾಕ್ಸ್​ನಲ್ಲಿ ‘ಕಾಂತಾರ: ಚಾಪ್ಟರ್ 2’ ಬಗ್ಗೆ ಘೋಷಣೆ
ಪ್ರೀಮಿಯರ್ ಶೋಗಳಿಂದಲೇ ಕೋಟಿ ಕೋಟಿ ಬಾಚಿದ ‘ಕಾಂತಾರ: ಚಾಪ್ಟರ್ 1’
‘ಕಾಂತಾರ: ಚಾಪ್ಟರ್1’ ವಿಮರ್ಶೆ: ದಂತಕಥೆಯಲ್ಲಿ ಅದ್ದೂರಿತನ; ಇದು ದೈವದ ಕಥನ
ರಕ್ಷಿತ್ ಶೆಟ್ಟಿ ಹಾಗೂ ರುಕ್ಮಿಣಿ ವಸಂತ್ ಮಧ್ಯೆ ಎಷ್ಟು ಸಾಮ್ಯತೆ ಇದೆ ನೋಡಿ

ಇದನ್ನೂ ಓದಿ: ಮಿತಿ ಮೀರಿದ ಡಿಮ್ಯಾಂಡ್: ಕಷ್ಟದಲ್ಲಿದೆ ದೀಪಿಕಾ ಪಡುಕೋಣೆ ಭವಿಷ್ಯ?

ಫರಾಹ್ ಅವರ ವಿವರಣೆಯನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮೂಲಕ ಹಂಚಿಕೊಳ್ಳಲಾಗಿದೆ. ನಂತರ ದೀಪಿಕಾ ಅದಕ್ಕೆ ಪ್ರತಿಕ್ರಿಯಿಸಿದರು. ಅವರು ‘ಆಮೆನ್’ ಎಂದು ಹೇಳುವ ಕೈಗಳನ್ನು ಮಡಚಿದ ಎಮೋಜಿಯನ್ನು ಪೋಸ್ಟ್ ಮಾಡಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.