ನಟಿ ಸೋನಾಲಿ ಸಾವಿಗೆ ಬಿಗ್ ಟ್ವಿಸ್ಟ್​; ಮರಣೋತ್ತರ ಪರೀಕ್ಷೆಯಿಂದ ಹೊರ ಬಂತು ಶಾಕಿಂಗ್ ವಿಚಾರ

ಸೋನಾಲಿ ಅವರದ್ದು ಸಹಜ ಸಾವಲ್ಲ ಕೊಲೆ ಎಂಬ ಆರೋಪವನ್ನು ಕುಟುಂಬದವರು ಮಾಡಿದ್ದರು. ಈ ಸಂಬಂಧ ಪೊಲೀಸರು ಕೇಸ್ ದಾಖಲಿಸಿಕೊಂಡು ವಿಚಾರಣೆ ಆರಂಭಿಸಿದ್ದಾರೆ. ಈ ವೇಳೆ ಹಲವು ವಿಚಾರಗಳು ಬೆಳಕಿಗೆ ಬರುತ್ತಿವೆ.

ನಟಿ ಸೋನಾಲಿ ಸಾವಿಗೆ ಬಿಗ್ ಟ್ವಿಸ್ಟ್​; ಮರಣೋತ್ತರ ಪರೀಕ್ಷೆಯಿಂದ ಹೊರ ಬಂತು ಶಾಕಿಂಗ್ ವಿಚಾರ
ಸೋನಾಲಿ
Edited By:

Updated on: Aug 26, 2022 | 2:49 PM

ಬಿಜೆಪಿ ನಾಯಕಿ, ನಟಿ ಸೋನಾಲಿ ಪೋಗಟ್ (Sonali Phogat) ಸಾವಿನ ಪ್ರಕರಣಕ್ಕೆ ದೊಡ್ಡ ಟ್ವಿಸ್ಟ್​ ಸಿಕ್ಕಿದೆ. ನಟಿಯ ಸಾವು ಸಹಜವಾದದ್ದಲ್ಲ, ಕೊಲೆ ಎಂಬುದಕ್ಕೆ ಪೊಲೀಸರಿಗೆ ಕೆಲವು ಸಾಕ್ಷಿ ಸಿಕ್ಕಿದೆ. ಹೌದು, ಸೋನಾಲಿ ಅವರ ದೇಹದ ಮೇಲೆ ಹಲವು ಗಾಯಗಳು ಆಗಿದ್ದವು ಎಂಬುದು ಮರಣೋತ್ತರ ಪರೀಕ್ಷೆಯ ವರದಿಯಿಂದ ಗೊತ್ತಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಗೋವಾ ಪೊಲೀಸರು ಸೋನಾಲಿ ಅವರ ಇಬ್ಬರು ಸಹಚರರ ವಿರುದ್ಧ ಕೇಸ್ ದಾಖಲಿಸಿಕೊಂಡಿದ್ದಾರೆ. ಈ ವಿಚಾರ ಸಾಕಷ್ಟು ಸಂಚಲನ ಸೃಷ್ಟಿ ಮಾಡಿದೆ.

ಸೋನಾಲಿ ಅವರಿಗೆ 42 ವರ್ಷ ವಯಸ್ಸಾಗಿತ್ತು. ಆಗಸ್ಟ್ 22ರಂದು ಅವರು ಗೋವಾದಲ್ಲಿ ನಿಧನ ಹೊಂದಿದರು. ಅವರ ಸಾವಿಗೆ ಹೃದಯಾಘಾತ ಕಾರಣ ಎಂದು ಆರಂಭದಲ್ಲಿ ಹೇಳಲಾಗಿತ್ತು. ಇದು ಸಹಜ ಸಾವಲ್ಲ ಕೊಲೆ ಎಂಬ ಆರೋಪವನ್ನು ಕುಟುಂಬದವರು ಮಾಡಿದ್ದರು. ಈ ಸಂಬಂಧ ಪೊಲೀಸರು ಕೇಸ್ ದಾಖಲಿಸಿಕೊಂಡು ವಿಚಾರಣೆ ಆರಂಭಿಸಿದ್ದಾರೆ. ಈ ವೇಳೆ ಹಲವು ವಿಚಾರಗಳು ಬೆಳಕಿಗೆ ಬರುತ್ತಿವೆ.

ಸೋನಾಲಿ ಅವರ ಮರಣೋತ್ತರ ಪರೀಕ್ಷೆಯ ವರದಿ ಬಂದಿದೆ. ಈ ವೇಳೆ ಸೋನಾಲಿ ಅವರ ದೇಹದ ಮೇಲೆ ಗಾಯದ ಗುರುತು ಕಂಡಿದೆ. ಇದು ಸಾಕಷ್ಟು ಅನುಮಾನ ಹುಟ್ಟು ಹಾಕಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಸುಧೀರ್ ಸಾಗ್ವಾನ್ ಹಾಗೂ ಸುಖ್ವಿಂದರ್ ವಾಸಿ ವಿರುದ್ಧ್ ಕೇಸ್ ದಾಖಲಾಗಿದೆ. ಆಗಸ್ಟ್ 22ರಂದು ಸೋನಾಲಿ ಗೋವಾಗೆ ಬಂದ ಸಂದರ್ಭದಲ್ಲಿ ಅವರ ಜತೆ ಸುಧೀರ್ ಹಾಗೂ ಸುಖ್ವಿಂದರ್ ಇದ್ದರು.

ಇದನ್ನೂ ಓದಿ
Sonali Phogat: ಸೋನಾಲಿ ಪೋಗಟ್ ಸಾವಿಗೆ ಟ್ವಿಸ್ಟ್​; ‘ಇದು ಹಾರ್ಟ್​ ಅಟ್ಯಾಕ್​ ಅಲ್ಲ, ಕೊಲೆ’ ಎಂದು ಪುತ್ರಿಯ ಆರೋಪ
ಯೋಗರಾಜ್ ಭಟ್ ಮಾವ, ಸ್ಯಾಂಡಲ್​ವುಡ್ ಕಲಾವಿದ ಸತ್ಯ ನಾರಾಯಣ್ ಹೃದಯಾಘಾತದಿಂದ ನಿಧನ
KK Death: ಸಾವಿಗಿಂತ ಕೆಲವೇ ನಿಮಿಷಗಳ ಮುನ್ನ ವೇದಿಕೆ ತೊರೆದಿದ್ದ ಗಾಯಕ ಕೆಕೆ; ಇಲ್ಲಿದೆ ವೈರಲ್​ ವಿಡಿಯೋ
Edava Basheer Death: ಹಾಡುವಾಗಲೇ ವೇದಿಕೆಯಲ್ಲಿ ಕುಸಿದು ಬಿದ್ದು ಆರ್ಕೆಸ್ಟ್ರಾ ಗಾಯಕ ಎಡವ ಬಶೀರ್​ ನಿಧನ; ವಿಡಿಯೋ ವೈರಲ್​

‘ಸೋನಾಲಿ ಸಾವಿಗೆ ಕಾರಣ ಏನು ಎಂಬುದನ್ನು ನಾವು ಪರೀಕ್ಷಿಸುತ್ತಿದ್ದೇವೆ. ಅವರ ದೇಹದ ಮೇಲೆ ಗಾಯಗಳು ಕಂಡು ಬಂದಿದೆ. ಈ ಕಾರಣದಿಂದ ಸಾಕಷ್ಟು ಅನುಮಾನ ಮೂಡಿದೆ’ ಎಂದು ಮರಣೋತ್ತರ ಪರೀಕ್ಷೆ ನಡೆಸಿದ ಡಾಕ್ಟರ್ ಸುನೀಲ್​ ಶ್ರೀಕಾಂತ್ ಹೇಳಿದ್ದಾರೆ.

ಸೋದರ ಸಂಬಂಧಿ ಮೋಹಿಂದರ್ ಅವರು ಪಿಟಿಐ ಜತೆ ಮಾತನಾಡುತ್ತಾ ಸೋನಾಲಿ ಅವರ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ‘ಫೋಗಟ್ ಅವರು ಸಾಯುವುದಕ್ಕೂ ಮೊದಲು ಅಮ್ಮ, ಸಹೋದರಿ ಮೊದಲಾದವರ ಜತೆ ಮಾತನಾಡಿದ್ದರು. ಮಾತನಾಡುವ ವೇಳೆ ಅವರು ಡಿಸ್ಟರ್ಬ್ ಆದಂತೆ ಕಂಡುಬಂತು. ಅವರ ಸಹಚರರಿಂದಲೇ ಸೋನಾಲಿ ಕೊಲೆ ಆಗಿದೆ’ ಎಂದು ದೂರಿದ್ದರು.

ಇದನ್ನೂ ಓದಿ: ಸೋನಾಲಿ ಪೋಗಟ್ ಸಾವಿಗೆ ಟ್ವಿಸ್ಟ್​; ‘ಇದು ಹಾರ್ಟ್​ ಅಟ್ಯಾಕ್​ ಅಲ್ಲ, ಕೊಲೆ’ ಎಂದು ಪುತ್ರಿಯ ಆರೋಪ

ಸೋನಾಲಿ ಪೋಗಟ್ ಟಿಕ್​ ಟಾಕ್ ಮೂಲಕ ಫೇಮಸ್ ಆದರು. ಹಿಂದಿ ಬಿಗ್ ಬಾಸ್​ಗೆ ಎಂಟ್ರಿ ಕೊಟ್ಟು ಅವರು ಮಿಂಚಿದ್ದರು. 2019ರಲ್ಲಿ ಚುನಾವಣೆಯಲ್ಲಿ ಹರಿಯಾಣದ ಆದಂಪುರ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕುಲದೀಪ್ ಬಿಷ್ಣೋಯ್ ವಿರುದ್ಧ ಸೋನಾಲಿ ಕಣಕ್ಕಿಳಿದಿದ್ದರು.

Published On - 2:47 pm, Fri, 26 August 22