ಹನುಮಂತನ ಪಾತ್ರ ಮಾಡ್ತಾರಾ ಸನ್ನಿ ಡಿಯೋಲ್​? ‘ರಾಮಾಯಣ’ ಚಿತ್ರದ ಬಗ್ಗೆ ಬಿಗ್​ ನ್ಯೂಸ್​

|

Updated on: Jan 28, 2024 | 4:02 PM

ಹಲವು ಪಾರ್ಟ್​ಗಳಲ್ಲಿ ‘ರಾಮಾಯಣ’ ಸಿನಿಮಾ ಮೂಡಿಬರಲಿದೆ. ಮೊದಲ ಪಾರ್ಟ್​ನಲ್ಲಿ ಆಂಜನೇಯನ ಪಾತ್ರ ಕೆಲವೇ ದೃಶ್ಯಗಳಲ್ಲಿ ಮಾತ್ರ ಕಾಣಿಸಿಕೊಳ್ಳಲಿದೆ. ಎರಡು ಮತ್ತು ಮೂರನೇ ಪಾರ್ಟ್​​ನಲ್ಲಿ ಆ ಪಾತ್ರಕ್ಕೆ ಹೆಚ್ಚು ಸ್ಕ್ರೀನ್​ ಸ್ಪೇಸ್​ ಸಿಗಲಿದೆ. ಈ ರೀತಿಯಾಗಿ ನಿರ್ದೇಶಕ ನಿತೇಶ್​ ತಿವಾರಿ ಅವರು ಸ್ಕ್ರೀನ್​ಪ್ಲೇ ಸಿದ್ಧಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಹನುಮಂತನ ಪಾತ್ರ ಮಾಡ್ತಾರಾ ಸನ್ನಿ ಡಿಯೋಲ್​? ‘ರಾಮಾಯಣ’ ಚಿತ್ರದ ಬಗ್ಗೆ ಬಿಗ್​ ನ್ಯೂಸ್​
ಸನ್ನಿ ಡಿಯೋಲ್​
Follow us on

ನಟ ಸನ್ನಿ ಡಿಯೋಲ್​ (Sunny Deol) ಅವರು ಈಗ ಗೆಲುವಿನ ಟ್ರ್ಯಾಕ್​ಗೆ ಮರಳಿದ್ದಾರೆ. 2023ರಲ್ಲಿ ತೆರೆಕಂಡ ‘ಗದರ್​ 2’ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ 500 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್​ ಮಾಡಿತು. ಆ ಬಳಿಕ ಸನ್ನಿ ಡಿಯೋಲ್​ ಅವರ ಡಿಮ್ಯಾಂಡ್​ ಹೆಚ್ಚಿತು. ಈಗ ಅವರನ್ನು ಹುಡುಕಿಕೊಂಡು ದೊಡ್ಡ ದೊಡ್ಡ ಆಫರ್​ಗಳು ಬರುತ್ತಿವೆ. ನಿತೇಶ್​ ತಿವಾರಿ ನಿರ್ದೇಶನ ಮಾಡಲಿರುವ ರಾಮಾಯಣ’ (Ramayan) ಸಿನಿಮಾದಲ್ಲಿ ಸನ್ನಿ ಡಿಯೋಲ್​ ಅವರು ಹನುಮಂತನ (Lord Hanuman) ಪಾತ್ರ ಮಾಡಲು ಒಪ್ಪಿಕೊಂಡಿದ್ದಾರೆ ಎಂದು ‘ಪಿಂಕ್​ವಿಲ್ಲಾ’ ವರದಿ ಮಾಡಿದೆ. ಈ ಬಗ್ಗೆ ಚಿತ್ರತಂಡದವರು ಇನ್ನಷ್ಟೇ ಅಧಿಕೃತ ಮಾಹಿತಿ ಹಂಚಿಕೊಳ್ಳಬೇಕಿದೆ. ಈ ಸಿನಿಮಾದ ಬಗ್ಗೆ ​ಪ್ರೇಕ್ಷಕರ ವಲಯದಲ್ಲಿ ಭಾರಿ ಹೈಪ್​ ಸೃಷ್ಟಿ ಆಗಿದೆ.

ಹಲವು ಪಾರ್ಟ್​ಗಳಲ್ಲಿ ‘ರಾಮಾಯಣ’ ಸಿನಿಮಾ ಮೂಡಿಬರಲಿದೆ. ರಾಮನಾಗಿ ರಣಬೀರ್​ ಕಪೂರ್​, ಸೀತೆಯಾಗಿ ಸಾಯಿ ಪಲ್ಲವಿ, ರಾವಣನಾಗಿ ಯಶ್​ ಅವರು ಈ ಸಿನಿಮಾದಲ್ಲಿ ನಟಿಸುತ್ತಾರೆ ಎಂದು ಸುದ್ದಿ ಆಗಿದೆ. ಪಾತ್ರವರ್ಗದ ಪಟ್ಟಿಯಲ್ಲಿ ಈಗ ಸನ್ನಿ ಡಿಯೋಲ್​ ಅವರ ಹೆಸರು ಕೂಡ ಕೇಳಿಬಂದಿದೆ. ಹಲವು ಸುತ್ತಿನ ಮಾತುಕಥೆ ಮಾಡಿದ ಬಳಿಕ ಅವರು ಈ ಪಾತ್ರವನ್ನು ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಸಲ್ಮಾನ್ ಖಾನ್ ಜೊತೆ ಹೊಸ ಸಿನಿಮಾ ಮಾಡ್ತಾರೆ ಸನ್ನಿ ಡಿಯೋಲ್?

ರಾಮಾಯಣದಲ್ಲಿ ಆಂಜನೇಯನ ಪಾತ್ರ ಬಹಳ ಮುಖ್ಯವಾದದ್ದು. ಅದಕ್ಕೆ ಸೂಕ್ತ ನಟರನ್ನೇ ಆಯ್ಕೆ ಮಾಡಿಕೊಳ್ಳಬೇಕು. ಹಾಗಾಗಿ ಚಿತ್ರತಂಡದವರು ಈ ಬಗ್ಗೆ ಸಾಕಷ್ಟು ಕಾಳಜಿ ವಹಿಸಿದ್ದಾರೆ. ಇನ್ನು, ವಿಭೀಷಣನ ಪಾತ್ರಕ್ಕೆ ದಕ್ಷಿಣ ಭಾರತದ ಖ್ಯಾತ ನಟ ವಿಜಯ್​ ಸೇತುಪತಿ ಜೊತೆ ಮಾತುಕಥೆ ಮಾಡಲಾಗುತ್ತಿದೆ ಎಂದು ವರದಿ ಆಗಿದೆ. ಸದ್ಯಕ್ಕಂತೂ ಈ ಎಲ್ಲ ವಿಚಾರಗಳು ಅಂತೆ-ಕಂತೆಯ ಹಂತದಲ್ಲೇ ಇವೆ.

ಇದನ್ನೂ ಓದಿ: ‘ಅನಿಮಲ್ ಸಿನಿಮಾದ ಕೆಲ ದೃಶ್ಯಗಳು ನನಗೆ ಇಷ್ಟ ಆಗಿಲ್ಲ’; ನೇರವಾಗಿ ಹೇಳಿದ ಸನ್ನಿ ಡಿಯೋಲ್

ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಸಿದ್ಧವಾಗಲಿರುವ ‘ರಾಮಾಯಣ’ ಸಿನಿಮಾದ ಮೊದಲ ಪಾರ್ಟ್​ನಲ್ಲಿ ಆಂಜನೇಯನ ಪಾತ್ರ ಕೆಲವೇ ದೃಶ್ಯಗಳಲ್ಲಿ ಮಾತ್ರ ಬರಲಿದೆ. ಎರಡು ಮತ್ತು ಮೂರನೇ ಪಾರ್ಟ್​​ನಲ್ಲಿ ಆ ಪಾತ್ರಕ್ಕೆ ಹೆಚ್ಚು ಸ್ಕ್ರೀನ್​ ಸ್ಪೇಸ್​ ಸಿಗಲಿದೆ. ಈ ರೀತಿಯಾಗಿ ನಿರ್ದೇಶಕ ನಿತೇಶ್​ ತಿವಾರಿ ಅವರು ಸ್ಕ್ರೀನ್​ಪ್ಲೇ ಸಿದ್ಧಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಪಾತ್ರವರ್ಗದ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಇನ್ನು, ಕೆಲವೇ ತಿಂಗಳಲ್ಲಿ ಈ ಸಿನಿಮಾದ ಶೂಟಿಂಗ್ ಆರಂಭಿಸಬೇಕು ಎಂಬ ಗುರಿ ಇಟ್ಟುಕೊಳ್ಳಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ