ಇತ್ತೀಚಿನ ವರ್ಷಗಳಲ್ಲಿ ಯಾವುದೇ ಸಿನಿಮಾ 100 ಕೋಟಿ ರೂಪಾಯಿ ಗಳಿಕೆ ಮಾಡಿತು ಎಂದರೆ ಅದು ನಿಜಕ್ಕೂ ದೊಡ್ಡ ವಿಚಾರವೇ ಸರಿ. ಮೊದಲ ದಿನ ಎರಡಂಕಿ ಕಲೆಕ್ಷನ್ ಮಾಡಿದ ಹೊರತಾಗಿಯೂ ನಂತರದ ದಿನಗಳಲ್ಲಿ ಶತಕೋಟಿ ಗಳಿಕೆ ಮಾಡಲು ಒದ್ದಾಡಿದ ಅನೇಕ ಸಿನಿಮಾಗಳಿವೆ. ಆದರೆ, ಸನ್ನಿ ಡಿಯೋಲ್ ನಟನೆಯ ‘ಗದರ್ 2’ (Gadar 2) ಸಿನಿಮಾ ಮ್ಯಾಜಿಕ್ ಮಾಡಿದೆ. ಐದು ದಿನಗಳಲ್ಲಿ ಈ ಚಿತ್ರ ಬರೋಬ್ಬರಿ 229 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಮೂಲಕ ‘ಗದರ್ 2’ ಹೊಸ ದಾಖಲೆ ಸೃಷ್ಟಿ ಮಾಡಿದೆ. ಸನ್ನಿ ಡಿಯೋಲ್ ವೃತ್ತಿ ಜೀವನದಲ್ಲಿ ಈ ಚಿತ್ರ ಹೊಸ ಮೈಲಿಗಲ್ಲು ಸ್ಥಾಪಿಸಿದೆ.
ಹಬ್ಬದ ಸಂದರ್ಭದಲ್ಲಿ ಸಿನಿಮಾ ರಿಲೀಸ್ ಆದರೆ ಅದು ನಿರ್ಮಾಪಕರಿಗೆ ಹೆಚ್ಚು ಲಾಭ ತಂದುಕೊಡುತ್ತದೆ. ರಜಾ ಇರುವುದರಿಂದ ಸಿನಿಮಾಗೆ ಹೆಚ್ಚು ಕಲೆಕ್ಷನ್ ಆಗುತ್ತದೆ. ‘ಗದರ್ 2’ ಚಿತ್ರಕ್ಕೆ ಲಾಂಗ್ ವೀಕೆಂಡ್ ಸಹಕಾರಿ ಆಗಿದೆ. ಆಗಸ್ಟ್ 11ರಂದು ಈ ಚಿತ್ರ ರಿಲೀಸ್ ಆಯಿತು. ಅಲ್ಲಿಂದ ಇಲ್ಲಿಯವರೆಗೆ ಸಿನಿಮಾ ಬಂಗಾರದ ಬೆಳೆ ತೆಗೆದಿದೆ. ಎರಡನೇ ವೀಕೆಂಡ್ ವೇಳೆಗೆ ಸಿನಿಮಾದ ಗಳಿಕೆ ಅನಾಯಾಸವಾಗಿ 300 ಕೋಟಿ ರೂಪಾಯಿ ದಾಟಲಿದೆ.
ಶುಕ್ರವಾರ ಈ ಸಿನಿಮಾ 40.10 ಕೋಟಿ ಬಾಚಿಕೊಂಡಿತು. ಶನಿವಾರ 43.08 ಕೋಟಿ ರೂಪಾಯಿ, ಭಾನುವಾರ 51.70 ಕೋಟಿ ರೂಪಾಯಿ, ವಾರದ ದಿನವಾದ ಸೋಮವಾರ 38.70 ಕೋಟಿ ರೂಪಾಯಿ ಗಳಿಸಿತು. ಆಗಸ್ಟ್ 15ರ ಪ್ರಯುಕ್ತ ಮಂಗಳವಾರ ಈ ಚಿತ್ರ 55.40 ಕೋಟಿ ರೂಪಾಯಿ ಗಳಿಸಿದೆ. ಈ ಮೂಲಕ ಚಿತ್ರದ ಕಲೆಕ್ಷನ್ 229 ಕೋಟಿ ರೂಪಾಯಿ ಆಗಿದೆ.
CREATES HISTORY ON INDEPENDENCE DAY… Highest-ever biz on *15 August*… Yes, #Gadar2 hits the ball out of the stadium on #IndependenceDay… Fri 40.10 cr, Sat 43.08 cr, Sun 51.70 cr, Mon 38.70 cr, Tue 55.40 cr. Total: ₹ 228.98 cr. #India biz… BLOCKBUSTER RUN continues.#Gadar2… pic.twitter.com/u3jJZpa5Je
— taran adarsh (@taran_adarsh) August 16, 2023
ಇದನ್ನೂ ಓದಿ: 173 ಕೋಟಿ ರೂ. ದಾಟಿದರೂ ನಿಲ್ಲುತ್ತಲೇ ಇಲ್ಲ ‘ಗದರ್ 2’ ಅಬ್ಬರ; ದೊಡ್ಡ ಸ್ಟಾರ್ಗಳ ದಾಖಲೆ ಕೂಡ ಉಡೀಸ್
ಪಾಕ್ ಹಾಗೂ ಭಾರತದ ಮಧ್ಯೆ ಇರುವ ದ್ವೇಷ ತುಂಬಾನೇ ದೊಡ್ಡದು. ‘ಗದರ್ 2’ ಸಿನಿಮಾದಲ್ಲಿ ಈ ವಿಚಾರ ಹೈಲೈಟ್ ಮಾಡಲಾಗಿದೆ. ಕಥಾ ನಾಯಕನ ಸನ್ನಿ ಡಿಯೋಲ್ ಮಗ ಪಾಕಿಗಳ ಕೈಗೆ ಸಿಕ್ಕಿ ಬೀಳುತ್ತಾನೆ. ಆತನ ರಕ್ಷಣೆಗೆ ಸನ್ನಿ ತೆರಳುತ್ತಾರೆ. ಸಾಕಷ್ಟು ಆ್ಯಕ್ಷನ್ ದೃಶ್ಯಗಳು, ಮಾಸ್ ಡೈಲಾಗ್ ಸಿನಿಮಾದಲ್ಲಿದೆ. ಇದು ಪ್ರೇಕ್ಷಕರಿಗೆ ಇಷ್ಟವಾಗಿದೆ. ‘ಗದರ್’ ಸಿನಿಮಾ 2001ರಲ್ಲಿ ಬಂದು ಯಶಸ್ಸು ಕಂಡಿತ್ತು. ಅದರ ಸೀಕ್ವೆಲ್ ಎನ್ನುವ ಕಾರಣಕ್ಕೂ ಈ ಸಿನಿಮಾ ಗಮನ ಸೆಳೆಯಿತು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ