ಬಾಲಿವುಡ್​ನಲ್ಲಿ ಕಡಿಮೆ ಆಗುತ್ತಿದೆ ಸಲ್ಮಾನ್ ಖಾನ್​ ವರ್ಚಸ್ಸು? ಕಲೆಕ್ಷನ್ ಇಲ್ಲದೆ ಸೊರಗಿದ ‘ಗಾಡ್​ಫಾದರ್’

| Updated By: ರಾಜೇಶ್ ದುಗ್ಗುಮನೆ

Updated on: Oct 07, 2022 | 8:01 PM

ಸಲ್ಮಾನ್ ಖಾನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿರುವುದರಿಂದ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆ ಇತ್ತು. ಆದರೆ, ಹಿಂದಿ ವರ್ಷನ್​ನಿಂದ ಚಿತ್ರಕ್ಕೆ ದೊಡ್ಡ ಮೊತ್ತದ ಗಳಿಕೆ ಆಗಿಲ್ಲ ಎನ್ನಲಾಗುತ್ತಿದೆ.

ಬಾಲಿವುಡ್​ನಲ್ಲಿ ಕಡಿಮೆ ಆಗುತ್ತಿದೆ ಸಲ್ಮಾನ್ ಖಾನ್​ ವರ್ಚಸ್ಸು? ಕಲೆಕ್ಷನ್ ಇಲ್ಲದೆ ಸೊರಗಿದ ‘ಗಾಡ್​ಫಾದರ್’
ಸಲ್ಮಾನ್ ಖಾನ್
Follow us on

ಸಲ್ಮಾನ್ ಖಾನ್ (Salman Khan) ಬಾಲಿವುಡ್​ನಲ್ಲಿ ಗೆಲ್ಲುವ ಕುದುರೆ ಎಂದೇ ಫೇಮಸ್ ಆದವರು. ಅವರ ನಟನೆಯ ಸಿನಿಮಾಗಳು ತೆರೆಗೆ ಬರುತ್ತಿವೆ ಎಂದರೆ ಫ್ಯಾನ್ಸ್​ಗೆ ದೊಡ್ಡ ಮಟ್ಟದ ನಿರೀಕ್ಷೆ ಇರುತ್ತದೆ. ಸಿನಿಮಾ ಕೋಟಿಕೋಟಿ ಕಲೆಕ್ಷನ್ ಮಾಡುತ್ತದೆ. ಅವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡರೂ ಆ ಚಿತ್ರಕ್ಕೆ ಮೈಲೇಜ್ ಸಿಗುತ್ತದೆ. ಆದರೆ, ಇತ್ತೀಚೆಗೆ ಅವರ ವರ್ಚಸ್ಸು ಕಡಿಮೆ ಆಗುತ್ತಿರುವ ಸೂಚನೆ ಸಿಕ್ಕಿದೆ. ಅವರ ನಟನೆಯ ಯಾವ ಸಿನಿಮಾಗಳೂ ಗೆಲ್ಲುತ್ತಿಲ್ಲ. ಇದು ಅವರ ಅಭಿಮಾನಿಗಳ ಚಿಂತೆಗೆ ಕಾರಣವಾಗಿದೆ. ಈ ಮಧ್ಯೆ ಚಿರಂಜೀವಿ ಹಾಗೂ ಸಲ್ಮಾನ್ ಖಾನ್ ನಟನೆಯ ‘ಗಾಡ್​ಫಾದರ್’ ಸಿನಿಮಾ (GodFather Movie) ಬಾಲಿವುಡ್​​ ಬೆಲ್ಟ್​ನಲ್ಲಿ ಅಷ್ಟಾಗಿ ಕಲೆಕ್ಷನ್ ಮಾಡುತ್ತಿಲ್ಲ. ಇದು ಸಲ್ಲು ಅಭಿಮಾನಿಗಳ ಬೇಸರಕ್ಕೆ ಕಾರಣ ಆಗಿದೆ.

ಮಲಯಾಳಂನ ‘ಲೂಸಿಫರ್’ ಚಿತ್ರದ ತೆಲುಗು ರಿಮೇಕ್ ‘ಗಾಡ್​ಫಾದರ್’. ದಸರಾ ಪ್ರಯುಕ್ತ ಈ ಚಿತ್ರ ಅಕ್ಟೋಬರ್ 5ರಂದು ತೆರೆಗೆ ಬಂತು. ತೆಲುಗು ಹಾಗೂ ಹಿಂದಿಯಲ್ಲಿ ಚಿತ್ರ ರಿಲೀಸ್ ಆಗಿದೆ. ಸಲ್ಮಾನ್ ಖಾನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿರುವುದರಿಂದ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆ ಇತ್ತು. ಆದರೆ, ಹಿಂದಿ ವರ್ಷನ್​ನಿಂದ ಚಿತ್ರಕ್ಕೆ ದೊಡ್ಡ ಮೊತ್ತದ ಗಳಿಕೆ ಆಗಿಲ್ಲ ಎನ್ನಲಾಗುತ್ತಿದೆ.

ಸಲ್ಮಾನ್ ಖಾನ್ ಇದ್ದ ಹೊರತಾಗಿಯೂ ಚಿರಂಜೀವಿ ಅವರು ಬಾಲಿವುಡ್​ನಲ್ಲಿ ಈ ಚಿತ್ರಕ್ಕೆ ದೊಡ್ಡ ಮಟ್ಟದಲ್ಲಿ ಪ್ರಮೋಷನ್ ನೀಡಿಲ್ಲ. ಇದು ಚಿತ್ರಕ್ಕೆ ದೊಡ್ಡ ಮಟ್ಟದಲ್ಲಿ ಹೊಡೆತ ನೀಡಿದೆ. ಬಾಲಿವುಡ್​ನಲ್ಲಿ 500ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಈ ಸಿನಿಮಾ ರಿಲೀಸ್ ಆದ ಹೊರತಾಗಿಯೂ ಈ ಚಿತ್ರ ಕಮಾಲ್ ಮಾಡಿಲ್ಲ ಎಂಬುದು ಬೇಸರದ ಸಂಗತಿ. ಬಾಲಿವುಡ್ ಬಾಕ್ಸ್​ ಆಫೀಸ್​ನಲ್ಲಿ ಈ ಸಿನಿಮಾ ಸೊರಗುತ್ತಿರುವುದು ಸಲ್ಲು ಅಭಿಮಾನಿಗಳ ಚಿಂತೆಗೆ ಕಾರಣ ಆಗಿದೆ. ಟಾಲಿವುಡ್​ನಲ್ಲಿ ಈ ಚಿತ್ರ ಒಳ್ಳೆಯ ಕಲೆಕ್ಷನ್ ಮಾಡುತ್ತಿದೆ.

ಇದನ್ನೂ ಓದಿ
‘ವಿಕ್ರಾಂತ್​ ರೋಣ’ ಪ್ರೀ-ರಿಲೀಸ್​ ಇವೆಂಟ್​ನಲ್ಲಿ ಕತ್ರಿನಾ ಜಪ ಮಾಡಿದ ಸಲ್ಮಾನ್​ ಖಾನ್​; ಕಾರಣ ಏನು?
Salman Khan: ‘ವಿಕ್ರಾಂತ್​ ರೋಣ’ ವೇದಿಕೆಯಲ್ಲಿ ಸುದೀಪ್​-ಸಲ್ಮಾನ್​​; ಕಿಚ್ಚನ ಜತೆಗಿನ ಬಾಂಧವ್ಯದ ಬಗ್ಗೆ ಸಲ್ಲು ಮಾತು
Kichcha Sudeep: ಮುಂಬೈ, ಚೆನ್ನೈನಿಂದಲೂ ಸುದೀಪ್​ ಕಟೌಟ್​ಗೆ ಬಂತು ಬೇಡಿಕೆ; ಹೇಗಿದೆ ನೋಡಿ ‘ವಿಕ್ರಾಂತ್​ ರೋಣ’ ಕ್ರೇಜ್​
Kichcha Sudeep: ಕೆಲವೇ ಗಂಟೆಗಳಲ್ಲಿ ಕೋಟ್ಯಂತರ ಬಾರಿ ವೀಕ್ಷಣೆ ಕಂಡ ‘ವಿಕ್ರಾಂತ್​ ರೋಣ’ ಟ್ರೇಲರ್​

ಇದನ್ನೂ ಓದಿ: ‘ದಕ್ಷಿಣ ಹಾಗೂ ಬಾಲಿವುಡ್ ಒಂದಾದರೆ ಪ್ರತಿ ಸಿನಿಮಾ 4000 ಕೋಟಿ ಬಿಸ್ನೆಸ್​ ಮಾಡುತ್ತೆ’- ಸಲ್ಮಾನ್ ಖಾನ್

ಬಾಲಿವುಡ್​ ಇತ್ತೀಚೆಗೆ ಸೊರಗುತ್ತಿದೆ. ‘ಬ್ರಹ್ಮಾಸ್ತ್ರ’ ಹೊರತುಪಡಿಸಿ ಮತ್ತಾವ ಚಿತ್ರಗಳೂ ಹೇಳಿಕೊಳ್ಳುವಂತಹ ಕಲೆಕ್ಷನ್ ಮಾಡಿಲ್ಲ. ಇತ್ತೀಚೆಗೆ ತೆರೆಗೆ ಬಂದ ‘ವಿಕ್ರಂ ವೇದ’ ಚಿತ್ರಕ್ಕೆ ವಿಮರ್ಶಕರಿಂದ ಹಾಗೂ ಪ್ರೇಕ್ಷಕರಿಂದ ಒಳ್ಳೆಯ ವಿಮರ್ಶೆ ಸಿಕ್ಕಿತು. ಆದರೂ ಸಿನಿಮಾ ದೊಡ್ಡ ಮೊತ್ತದಲ್ಲಿ ಗಳಿಕೆ ಮಾಡಿಯೇ ಇಲ್ಲ. ಈ ರೀತಿಯ ವಿಚಾರಗಳು ‘ಗಾಡ್​ಫಾದರ್’ ಸಿನಿಮಾ ಮೇಲೆ ಪ್ರಭಾವ ಬೀರಿರಬಹುದು ಎನ್ನಲಾಗುತ್ತಿದೆ.

Published On - 8:00 pm, Fri, 7 October 22