ಶೂಟಿಂಗ್ ನಡೆಯುತ್ತಿದ್ದ ನನ್ನ ಸಿನಿಮಾವನ್ನು ಕಸಿದುಕೊಂಡಿದ್ದ ಸಲ್ಮಾನ್ ಖಾನ್: ನಟ ಗೋವಿಂದ

|

Updated on: Aug 06, 2023 | 7:50 PM

Salman Khan: ಬಾಲಿವುಡ್​ನ ಬ್ಯಾಡ್ ಬಾಯ್ ಸಲ್ಮಾನ್ ಖಾನ್, ಹಿಂದೊಮ್ಮೆ ಚಿತ್ರೀಕರಣ ನಡೆಯುತ್ತಿದ್ದ ಸಿನಿಮಾವನ್ನು ನಟ ಗೋವಿಂದರಿಂದ ಕಸಿದುಕೊಂಡಿದ್ದರಂತೆ. ಸ್ವತಃ ಗೋವಿಂದ ಈ ಬಗ್ಗೆ ಹೇಳಿಕೊಂಡಿದ್ದಾರೆ.

ಶೂಟಿಂಗ್ ನಡೆಯುತ್ತಿದ್ದ ನನ್ನ ಸಿನಿಮಾವನ್ನು ಕಸಿದುಕೊಂಡಿದ್ದ ಸಲ್ಮಾನ್ ಖಾನ್: ನಟ ಗೋವಿಂದ
ಸಲ್ಮಾನ್-ಗೋವಿಂದ
Follow us on

ಸಲ್ಮಾನ್ ಖಾನ್ (Salman Khan), ಬಾಲಿವುಡ್​ನ ಸೂಪರ್ ಸ್ಟಾರ್ ಮಾತ್ರವಲ್ಲ ‘ಬ್ಯಾಡ್ ಬಾಯ್’ ಸಹ. ತಮಗೆ ಆಪ್ತರಾಗಿರುವವರಿಗೆ ಅವಕಾಶ ಕೊಡಿಸುವುದು, ತಮಗೆ ಆಪ್ತರಲ್ಲದವರಿಗೆ ಅವಕಾಶ ಸಿಗದಂತೆ ನೋಡಿಕೊಳ್ಳುವುದು, ಅಂಥಹವರಿಗೆ ಚಿತ್ರರಂಗದಲ್ಲಿ ಬಿಗುವಿನ ವಾತಾವರಣ ಸೃಷ್ಟಿಸುವುದು ಇಂಥಹಾ ಹಲವು ಆರೋಪಗಳು ಸಲ್ಮಾನ್ ಖಾನ್ ಮೇಲೆ ಈಗಲೂ ಇವೆ. ಸಲ್ಮಾನ್ ಖಾನ್, ಹಿಂದೊಮ್ಮೆ ಬಾಲಿವುಡ್​ನ ಖ್ಯಾತ ನಟರೊಬ್ಬರ ಕೈಯಿಂದ ಅದಾಗಲೇ ಚಿತ್ರೀಕರಣ (Shooting) ಆಗುತ್ತಿದ್ದ ಸಿನಿಮಾವನ್ನು ಕಿತ್ತುಕೊಂಡಿದ್ದರಂತೆ. ಆ ಬಗ್ಗೆ ಸ್ವತಃ ಆ ನಟರೇ ಹೇಳಿಕೊಂಡಿದ್ದಾರೆ.

ನಟ ಗೋವಿಂದ, 90ರ ದಶಕದಲಿ ಬಾಲಿವುಡ್​ ಅನ್ನು ಆಳಿದ ನಟ. ಶಾರುಖ್, ಸಲ್ಮಾನ್, ಅಮಿತಾಬ್ ಬಚ್ಚನ್​ಗಿಂತಲೂ ಹೆಚ್ಚು ಹಿಟ್​ಗಳನ್ನು ನೀಡುತ್ತಿದ್ದ ಹಾಗೂ ದುಬಾರಿ ಸಂಭಾವನೆಯನ್ನೂ ಪಡೆಯುತ್ತಿದ್ದ ನಟರಾಗಿದ್ದರು. ಗೋವಿಂದ 90ರ ದಶಕದ ಸೂಪರ್ ಸ್ಟಾರ್ ಆಗಿದ್ದರು. ಒಂದರ ಹಿಂದೊಂದು ಹಾಸ್ಯಪ್ರಧಾನ ರೊಮ್ಯಾಂಟಿಕ್ ಸಿನಿಮಾಗಳನ್ನು ಮಾಡಿ ಹಿಟ್ ಮೇಲೆ ಹಿಟ್ ನೀಡುತ್ತಿದ್ದ ಗೋವಿಂದ ಜೊತೆ ಸಿನಿಮಾ ಮಾಡಲು ನಿರ್ಮಾಪಕರು ತುದಿ ಗಾಲಲ್ಲಿ ನಿಂತಿರುತ್ತಿದ್ದರು.

ಅದೇ ಸಮಯದಲ್ಲಿ ಗೋವಿಂದ ‘ಜುಡ್ವಾ’ ಹೆಸರಿನ ಸಿನಿಮಾ ಪ್ರಾರಂಭಿಸಿದ್ದರು. ಈಗ ಸಲ್ಮಾನ್ ಖಾನ್​ರ ಆತ್ಮೀಯ ಗೆಳೆಯರಾಗಿರುವ ಸಾಜಿದ್ ನಾಡಿಯಾವಾಲ ಆ ಸಿನಿಮಾಕ್ಕೆ ನಿರ್ಮಾಪಕ. ತೆಲುಗಿನ ‘ಹಲೋ ಬ್ರದರ್’ ಸಿನಿಮಾ ರೀಮೇಕ್ ಆಗಿದ್ದ ಆ ಸಿನಿಮಾವನ್ನು ಡೇವಿಡ್ ಧವನ್ ನಿರ್ದೇಶನ ಮಾಡುತ್ತಿದ್ದರು. ಸಿನಿಮಾಕ್ಕೆ ಒಪ್ಪಂದವೆಲ್ಲ ಆಗಿ ಚಿತ್ರೀಕರಣವೂ ಶುರುವಾಗಿತ್ತು. ಆಗ ಸಲ್ಮಾನ್ ಖಾನ್ ಆ ಸಿನಿಮಾವನ್ನು ಗೋವಿಂದರಿಂದ ಕಸಿದುಕೊಂಡರಂತೆ.

ಇದನ್ನೂ ಓದಿ:ಎರಡು ಸಾವಿರ ಕೋಟಿ ಒಡೆಯ ಸಲ್ಮಾನ್ ಖಾನ್; ಎಲ್ಲೆಲ್ಲಿ ಹೂಡಿಕೆ ಮಾಡಿದ್ದಾರೆ ಸಲ್ಲು?

ಯೂಟ್ಯೂಬ್ ಸಂದರ್ಶನವೊಂದರಲ್ಲಿ ಸ್ವತಃ ಗೋವಿಂದ ಈ ಬಗ್ಗೆ ಹೇಳಿಕೊಂಡಿದ್ದು, ”ನಾನು ‘ಜುಡ್ವಾ’ ಸಿನಿಮಾ ಪ್ರಾರಂಭ ಮಾಡಿದ್ದೆ. ಆಗ ಸಲ್ಮಾನ್ ಖಾನ್ ಒಮ್ಮ ಮಧ್ಯರಾತ್ರಿ ಕರೆ ಮಾಡಿ, ಏನು ಗೋವಿಂದ್, ನೀವು ದೊಡ್ಡ ಸ್ಟಾರ್ ಆಗಿಬಿಟ್ಟಿದ್ದೀರಿ, ಹಿಟ್ ಮೇಲೆ ಹಿಟ್ ಸಿನಿಮಾಗಳನ್ನು ಕೊಡುತ್ತಿದ್ದೀರಿ. ಈಗ ‘ಜುಡ್ವಾ’ ಹೆಸರಿನ ಸಿನಿಮಾ ಪ್ರಾರಂಭ ಮಾಡಿದ್ದೀರಂತೆ, ಆ ಸಿನಿಮಾವನ್ನು ನನಗೆ ಬಿಟ್ಟುಕೊಡಿ” ಎಂದರಂತೆ. ಮಾತ್ರವಲ್ಲದೆ, ‘ಜುಡ್ವಾ’ ಸಿನಿಮಾದ ನಿರ್ದೇಶಕ, ನಿರ್ಮಾಪಕರನ್ನು ತಮ್ಮೊಟ್ಟಿಗೆ ಕರೆದುಕೊಂಡು ಹೋಗಿ, ಸಿನಿಮಾ ಮಾಡಿಸಿಕೊಂಡರಂತೆ.

1997 ರಲ್ಲಿ ಸಲ್ಮಾನ್ ಖಾನ್​ರ ‘ಜುಡ್ವಾ’ ಸಿನಿಮಾ ಬಿಡುಗಡೆ ಆಗಿ ಸೂಪರ್ ಹಿಟ್ ಆಯಿತು. ಆ ಸಿನಿಮಾದಲ್ಲಿ ಸಲ್ಮಾನ್ ಖಾನ್ ದ್ವಿಪಾತ್ರದಲ್ಲಿ ನಟಿಸಿದ್ದರು. ಸಿನಿಮಾಕ್ಕೆ ನಾಯಕಿಯಾಗಿ ಕರಿಶ್ಮಾ ಕಪೂರ್ ಹಾಗೂ ರಂಭಾ ನಟಿಸಿದ್ದರು. 90ರ ದಶಕದಲ್ಲಿ ಗೋವಿಂದ ಸ್ಟಾರ್ ಆಗಿದ್ದರಾದರೂ ಆ ನಂತರ ಅವರ ಫೇಮು ಇಳಿಯುತ್ತಾ ಬಂತು. ಒಂದು ಹಂತದಲ್ಲಂತೂ ಸಿನಿಮಾಗಳೇ ಸಿಗದಂತಾದವು. ಆಗ ಗೋವಿಂದಾಗೆ ಅವಕಾಶ ಕೊಟ್ಟಿದ್ದು ಸಲ್ಮಾನ್ ಖಾನ್. ಗೋವಿಂದಾರನ್ನು ತಮ್ಮ ನಟನೆಯ ‘ಪಾರ್ಟನರ್’ ಸಿನಿಮಾಕ್ಕೆ ಹಾಕಿಕೊಂಡರು. ಆ ಸಿನಿಮಾ ಸೂಪರ್ ಹಿಟ್ ಆಯಿತು. ಅದಾದ ಬಳಿಕ ಗೋವಿಂದಗೆ ಹಲವು ಅವಕಾಶಗಳು ಬರಲು ಆರಂಭವಾದವು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ