AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಪುಷ್ಪ 2’ ಚಿತ್ರೀಕರಣ ಮತ್ತೆ ಆರಂಭಿಸಿದ ಅಲ್ಲು ಅರ್ಜುನ್: ತಡವಾಗಲಿದೆಯೇ ಬಿಡುಗಡೆ?

Pushpa 2: ಅಲ್ಲು ಅರ್ಜುನ್ ನಟನೆಯ 'ಪುಷ್ಪ 2' ಸಿನಿಮಾದ ಚಿತ್ರೀಕರಣದ ಎರಡನೇ ಹಂತ ಹೈದರಾಬಾದ್​ನಲ್ಲಿ ಆರಂಭಗೊಂಡಿದೆ.

'ಪುಷ್ಪ 2' ಚಿತ್ರೀಕರಣ ಮತ್ತೆ ಆರಂಭಿಸಿದ ಅಲ್ಲು ಅರ್ಜುನ್: ತಡವಾಗಲಿದೆಯೇ ಬಿಡುಗಡೆ?
ಪುಷ್ಪ 2
ಮಂಜುನಾಥ ಸಿ.
|

Updated on: Aug 06, 2023 | 4:22 PM

Share

ಬಾಹುಬಲಿ‘ (Bahubali) ಸಿನಿಮಾಗಳ ಬಳಿಕ ಪ್ಯಾನ್ ಇಂಡಿಯಾ (Pan India) ಸಿನಿಮಾ ಆಗಿ ಪ್ರೆಸೆಂಟ್ ಆದ ದಕ್ಷಿಣ ಭಾರತದ ಸಿನಿಮಾಗಳು ಬೆರಳೆಣಿಕೆಯಷ್ಟು ಮಾತ್ರ. ಆದರೆ ಪ್ಯಾನ್ ಇಂಡಿಯಾ ಲೆವೆಲ್​ನಲ್ಲಿ ಬಿಡುಗಡೆ ಮಾಡುವುದರಿಂದ ಸಿನಿಮಾಗಳು ದೊಡ್ಡ ಬಾಕ್ಸ್ ಆಫೀಸ್ ಗೆಲುವು ಸಾಧಿಸಬಲ್ಲವೆ ಎಂದು ತೋರಿಸಿಕೊಟ್ಟ ಸಿನಿಮಾ ‘ಪುಷ್ಪ’. ಅಲ್ಲು ಅರ್ಜುನ್ (Allu Arjun) ನಟನೆಯ ‘ಪುಷ್ಪ’ ಸಿನಿಮಾ ಕೋವಿಡ್ ಬಳಿಕ ಬಿಡುಗಡೆ ಆಗಿ ಮೊತ್ತ ಮೊದಲ ಸೂಪರ್-ಡೂಪರ್ ಹಿಟ್ ಆದ ಸಿನಿಮಾ.

‘ಪುಷ್ಪ’ ಸಿನಿಮಾ ದಕ್ಷಿಣ ಭಾರತದ ಸಿನಿಮಾಗಳ ಬಗ್ಗೆ ಉತ್ತರ ಭಾರತದ ಪ್ರೇಕ್ಷಕರಿಗೆ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟಲು ಕಾರಣವಾಯ್ತು. ಅದರ ಬಳಿಕ ಬಂದ ‘ಕೆಜಿಎಫ್ 2’, ‘ಕಾಂತಾರ’, ‘RRR’, ‘ವಿಕ್ರಂ’, ‘ಸೀತಾ ರಾಮಂ’ ಇನ್ನೂ ಕೆಲವು ಸಿನಿಮಾಗಳು ಆ ನಿರೀಕ್ಷೆಯನ್ನು ಉಳಿಸಿಕೊಂಡವು. ದಕ್ಷಿಣ ಭಾರತ ಸಿನಿಮಾಗಳ ಬಗ್ಗೆ ಭರವಸೆ ಹುಟ್ಟಿಸಿದ್ದ ಸಿನಿಮಾ ‘ಪುಷ್ಪ’ ಎರಡನೇ ಭಾಗ ತಯಾರಾಗುತ್ತಿದ್ದು, ಮೊದಲ ಭಾಗಕ್ಕಿಂತಲೂ ಹೆಚ್ಚು ಕಾಳಜಿ, ಆಸ್ತೆ ಹಾಗೂ ಅದ್ಧೂರಿಯಾಗಿ ಸಿನಿಮಾವನ್ನು ನಿರ್ಮಾಣ ಮಾಡಲಾಗುತ್ತಿದೆ.

2022ರ ಅಕ್ಟೋಬರ್ ತಿಂಗಳಲ್ಲಿ ಸಿನಿಮಾದ ಚಿತ್ರೀಕರಣ ಪ್ರಾರಂಭವಾಗಿದೆ. ಸತತವಾಗಿ ಚಿತ್ರೀಕರಣ ನಡೆಯುತ್ತಿದೆಯಾದರೂ ಸಿನಿಮಾದ ಚಿತ್ರೀಕರಣ ಇನ್ನೂ ಮುಗಿದಿಲ್ಲ. ಆಗಾಗ್ಗೆ ಸಿನಿಮಾದ ಕತೆ, ಚಿತ್ರಕತೆಯಲ್ಲಿ ನಿರ್ದೇಶಕ ಸುಕುಮಾರ್ ಬದಲಾವಣೆ ಮಾಡುತ್ತಲೇ ಬಂದಿದ್ದರಿಂದ ಸಿನಿಮಾದ ಚಿತ್ರೀಕರಣ ವಿಳಂಬವಾಗಿತ್ತು. ‘ಪುಷ್ಪ 2’ ಸಿನಿಮಾದ ಟ್ರೈಲರ್ ಮೂರು ತಿಂಗಳ ಹಿಂದೆಯೇ ಬಿಡುಗಡೆ ಆಗಿತ್ತು. ಟ್ರೈಲರ್ ನೋಡಿದ ಹಲವರು ಸಿನಿಮಾದ ಚಿತ್ರೀಕರಣ ಮುಗಿದಿದೆ ಎಂದೇ ಭಾವಿಸಿದ್ದರು. ಆದರೆ ಸಿನಿಮಾದ ಚಿತ್ರೀಕರಣ ಇನ್ನೂ ಪೂರ್ಣಗೊಂಡಿಲ್ಲ, ಇದೀಗಷ್ಟೆ ಎರಡನೇ ಹಂತದ ಚಿತ್ರೀಕರಣ ಪ್ರಾರಂಭಗೊಂಡಿದೆ.

ಇದನ್ನೂ ಓದಿ:Sakshi Dhoni: ‘ಅಲ್ಲು ಅರ್ಜುನ್​ ಅವರ ಎಲ್ಲ ಸಿನಿಮಾ ನೋಡಿದ್ದೇನೆ’: ಅಭಿಮಾನ ಮೆರೆದ ಧೋನಿ ಪತ್ನಿ ಸಾಕ್ಷಿ

ಹೈದರಾಬಾದ್​ನ ರಾಮೋಜಿರಾವ್ ಫಿಲಂ ಸಿಟಿಯಲ್ಲಿ ಸಿನಿಮಾದ ಎರಡನೇ ಹಂತದ ಚಿತ್ರೀಕರಣ ಪ್ರಾರಂಭವಾಗಿದೆ. ಕೆಲವು ಮೂಲಗಳ ಪ್ರಕಾರ ಸಿನಿಮಾದ ಟಾಕಿ ಭಾಗದ ಚಿತ್ರೀಕರಣ ಪೂರ್ಣಗೊಂಡಿದ್ದು, ಹಾಡುಗಳು ಹಾಗೂ ಕೆಲವು ಪ್ಯಾಚ್ ವರ್ಕ್​ ಚಿತ್ರೀಕರಣವಷ್ಟೆ ಬಾಕಿ ಇದೆ ಎನ್ನಲಾಗುತ್ತಿದೆ. ಜೊತೆಗೆ ಕೆಲ ಫೈಟ್ ಚಿತ್ರೀಕರಣವೂ ಆಗಬೇಕಿದೆ ಎನ್ನಲಾಗುತ್ತಿದೆ. ಇದೇ ಕಾರಣಕ್ಕೆ ರಾಮೋಜಿ ರಾವ್ ಫಿಲಂ ಸಿಟಿಯಲ್ಲಿ ಸೆಟ್​ಗಳನ್ನು ಹಾಕಿ ಸಿನಿಮಾದ ಚಿತ್ರೀಕರಣ ಮಾಡಲಾಗುತ್ತಿದೆ.

ಎರಡನೇ ಹಂತದ ಚಿತ್ರೀಕರಣದಲ್ಲಿ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಫಹಾದ್ ಪಾಸಿಲ್ ಅವರುಗಳ ಜೊತೆಗೆ ಡಾಲಿ ಧನಂಜಯ್ ಸಹ ಭಾಗಿಯಾಗಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ರಾಮೋಜಿ ರಾವ್ ಫಿಲಂ ಸಿಟಿಯಲ್ಲಿ ಚಿತ್ರೀಕರಣ ಮುಗಿದ ಬಳಿಕ ಹೊರಾಂಗಣದಲ್ಲಿ ಕೆಲವು ದೃಶ್ಯಗಳ ಚಿತ್ರೀಕರಣವನ್ನು ಚಿತ್ರತಂಡ ಮಾಡಲಿದೆ. ಆ ನಂತರ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕಾರ್ಯ ಪ್ರಾರಂಭವಾಗಲಿದೆ.

‘ಪುಷ್ಪ’ ಸಿನಿಮಾವನ್ನು ಸುಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ. ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣ ಮಾಡಿದ್ದಾರೆ. ಸಿನಿಮಾಕ್ಕೆ ದೇವಿಶ್ರೀ ಪ್ರಸಾದ್ ಸಂಗೀತ ನೀಡಿದ್ದಾರೆ. ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ, ಫಹಾದ್ ಪಾಸಿಲ್, ಡಾಲಿ ಧನಂಜಯ್, ಅನುಸೂಯಾ, ರಾವ್ ರಮೇಶ್, ಸುನಿಲ್ ಇನ್ನೂ ಹಲವು ನಟರಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!