‘ಸೈಮಾ’ ರೇಸ್​ನಲ್ಲಿ ಕನ್ನಡದ ಆರು ಸ್ಟಾರ್ ಹೀರೋಗಳು; ಪ್ರಶಸ್ತಿ ಯಾರಿಗೆ ಎಂದು ಹೇಳೋದೇ ಕಷ್ಟ

ಕನ್ನಡ ಸಿನಿಮಾ ಪಾಲಿಗೆ 2022 ಎನಿಸಿಕೊಂಡಿದೆ. ಹಲವು ಸೂಪರ್ ಹಿಟ್​ ಚಿತ್ರಗಳು ಆ ವರ್ಷ ರಿಲೀಸ್ ಆಗಿವೆ. ಅತ್ಯುತ್ತಮ ನಟ ಅವಾರ್ಡ್​ಗೆ ಭರ್ಜರಿ ಪೈಪೋಟಿ ಇದೆ.

‘ಸೈಮಾ’ ರೇಸ್​ನಲ್ಲಿ ಕನ್ನಡದ ಆರು ಸ್ಟಾರ್ ಹೀರೋಗಳು; ಪ್ರಶಸ್ತಿ ಯಾರಿಗೆ ಎಂದು ಹೇಳೋದೇ ಕಷ್ಟ
ಸೈಮಾ ಅವಾರ್ಡ್​ ನಾಮಿನೇಷನ್
Follow us
|

Updated on:Aug 06, 2023 | 1:17 PM

2023ನೇ ಸಾಲಿನ ‘ಸೈಮಾ’ (SIIMA) ಅವಾರ್ಡ್​ ರ್ಯಕ್ರಮಕ್ಕೆ ಈಗಿನಿಂದಲೇ ಸಿದ್ಧತೆ ಆರಂಭ ಆಗಿದೆ. ಸೈಮಾ ಕಡೆಯಿಂದ ನಾಮಿನೇಷನ್ ಪಟ್ಟಿ ಬಿಡುಗಡೆ ಮಾಡಲಾಗುತ್ತಿದೆ. ಇತ್ತೀಚೆಗೆ ಅತ್ಯುತ್ತಮ ಸಿನಿಮಾಗಳ ಪಟ್ಟಿ ರಿಲೀಸ್ ಮಾಡಲಾಗಿತ್ತು. ಈಗ ಅತ್ಯುತ್ತಮ ನಟ ಹಾಗೂ ಅತ್ಯುತ್ತಮ ನಿರ್ದೇಶಕ ನಾಮಿನೇಷನ್ ಲಿಸ್ಟ್​ ಬಿಡುಗಡೆ ಮಾಡಲಾಗಿದೆ. ಕನ್ನಡದ ಸ್ಟಾರ್ ನಟರು ಹಾಗೂ ನಿರ್ದೇಶಕರು ಇದರಲ್ಲಿ ಸ್ಪರ್ಧೆ ಮಾಡುತ್ತಿದ್ದಾರೆ. ಸೆಪ್ಟೆಂಬರ್ 15 ಹಾಗೂ 16ರಂದು ಪ್ರಶಸ್ತಿ ಸಮಾರಂಭ ದುಬೈನಲ್ಲಿ ಅದ್ದೂರಿಯಾಗಿ ನಡೆಯಲಿದೆ.

ಕನ್ನಡ ಸಿನಿಮಾ ಪಾಲಿಗೆ 2022 ಎನಿಸಿಕೊಂಡಿದೆ. ಹಲವು ಸೂಪರ್ ಹಿಟ್​ ಚಿತ್ರಗಳು ಆ ವರ್ಷ ರಿಲೀಸ್ ಆಗಿವೆ. ಅತ್ಯುತ್ತಮ ನಟ ಅವಾರ್ಡ್​ಗೆ ಭರ್ಜರಿ ಪೈಪೋಟಿ ಇದೆ. ‘ಜೇಮ್ಸ್’ ಚಿತ್ರದ ನಟನೆಗೆ ಪುನೀತ್ ರಾಜ್​​ಕುಮಾರ್ ಹೆಸರು ಆಯ್ಕೆ ಆಗಿದೆ. ಹೀರೋ ಆಗಿ ನಟಿಸಿದ ಕೊನೆಯ ಸಿನಿಮಾ ಇದು ಎಂಬುದಕ್ಕೆ ಅಭಿಮಾನಿಗಳಿಗೆ ಈ ಚಿತ್ರದ ಬಗ್ಗೆ ವಿಶೇಷ ಪ್ರೀತಿ ಇದೆ. ‘777 ಚಾರ್ಲಿ’ ಚಿತ್ರದ ನಟನೆಗೆ ರಕ್ಷಿತ್ ಶೆಟ್ಟಿ ಹೆಸರು ಆಯ್ಕೆ ಆಗಿದೆ. ರಿಷಬ್ ಶೆಟ್ಟಿ ಅವರು ‘ಕಾಂತಾರ’ ಚಿತ್ರದಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದರು. ಅವರು ಹೆಸರು ಕೂಡ ಲಿಸ್ಟ್​ನಲ್ಲಿದೆ. ‘ವೇದ’ ಸಿನಿಮಾದ ನಟನೆಗೆ ಶಿವಣ್ಣ, ‘ವಿಕ್ರಾಂತ್ ರೋಣ’ ಚಿತ್ರದ ಅಭಿನಯಕ್ಕೆ ಸುದೀಪ್ ಹಾಗೂ ‘ಕೆಜಿಎಫ್ 2’ ಚಿತ್ರದಲ್ಲಿ ರಾಕಿಂಗ್ ಪರ್ಫಾರ್ಮೆನ್ಸ್ ನೀಡಿದ ಯಶ್ ಹೆಸರು ಕೂಡ ಪಟ್ಟಿಯಲ್ಲಿದೆ.

ಇದನ್ನೂ ಓದಿ:ಕೌಸಲ್ಯ ಸುಪ್ರಜಾ ರಾಮ ನನ್ನ ಈವರೆಗಿನ ಅತ್ಯುತ್ತಮ ಸಿನಿಮಾ; ಯಾಕೆಂದು ವಿವರಿಸಿದ ಡಾರ್ಲಿಂಗ್ ಕೃಷ್ಣ

ಈ ಬಾರಿ ಅತ್ಯುತ್ತಮ ನಟ ಅವಾರ್ಡ್ ಯಾರಿಗೆ ಸಿಗುತ್ತದೆ ಎಂದು ಹೇಳುವುದು ಕಷ್ಟಸಾಧ್ಯವೇ. ಎಲ್ಲಾ ಸಿನಿಮಾಗಳು ಅದ್ಭುತವಾಗಿ ಮೂಡಿ ಬಂದಿದ್ದು, ಅವಾರ್ಡ್​ ಯಾರಿಗೆ ಒಲಿಯುತ್ತದೆ ಎಂದು ಹೇಳುವುದು ಕಷ್ಟ.

ಇನ್ನು, ಅತ್ಯುತ್ತಮ ನಿರ್ದೇಶಕ ಅವಾರ್ಡ್​ಗೂ ಕಾಂಪಿಟೇಷನ್ ಇದೆ. ಅನೂಪ್ ಭಂಡಾರಿ (ವಿಕ್ರಾಂತ್ ರೋಣ), ಡಾರ್ಲಿಂಗ್ ಕೃಷ್ಣ (ಲವ್ ಮಾಕ್ಟೇಲ್ 2),  ಕಿರಣ್ ರಾಜ್ (777 ಚಾರ್ಲಿ), ಪ್ರಶಾಂತ್ ನೀಲ್ (ಕೆಜಿಎಫ್ 2), ರಿಷಬ್ ಶೆಟ್ಟಿ (ಕಾಂತಾರ) ಹೆಸರು ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 1:15 pm, Sun, 6 August 23

ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ