ಶಿವಣ್ಣ-ರಜನಿ ನಟನೆಯ ‘ಜೈಲರ್’ ಬುಕಿಂಗ್ ಶುರು; ತಮಿಳಿಗೆ 800, ಕನ್ನಡಕ್ಕೆ 4 ಶೋ

ಗಳೂರಿನಲ್ಲಿ ಈ ಚಿತ್ರಕ್ಕೆ ಮೊದಲ ದಿನ 800ಕ್ಕೂ ಅಧಿಕ ಶೋ ಸಿಕ್ಕಿದೆ. ಆ ಪೈಕಿ ತಮಿಳು ವರ್ಷನ್​​ಗೆ 806 ಶೋ ಹಾಗೂ ಕನ್ನಡಕ್ಕೆ ಕೇವಲ ನಾಲ್ಕು ಶೋ ಸಿಕ್ಕಿದೆ.

ಶಿವಣ್ಣ-ರಜನಿ ನಟನೆಯ ‘ಜೈಲರ್’ ಬುಕಿಂಗ್ ಶುರು; ತಮಿಳಿಗೆ 800, ಕನ್ನಡಕ್ಕೆ 4 ಶೋ
ಶಿವಣ್ಣ-ರಜನಿ
Follow us
|

Updated on: Aug 06, 2023 | 11:05 AM

ಇತ್ತೀಚೆಗೆ ಪ್ಯಾನ್ ಇಂಡಿಯಾ ಸಿನಿಮಾಗಳ ಸಂಖ್ಯೆ ಹೆಚ್ಚುತ್ತಿದೆ. ಪರಭಾಷೆಯ ಸಿನಿಮಾಗಳು ಕನ್ನಡಕ್ಕೆ ಡಬ್ ಆಗಿ ರಿಲೀಸ್ ಆಗುತ್ತಿದೆ. ಈಗ ಆ ಸಾಲಿಗೆ ‘ಜೈಲರ್’ ಸಿನಿಮಾ (Jailer Movie) ಕೂಡ ಸೇರ್ಪಡೆ ಆಗುತ್ತಿದೆ. ರಜನಿಕಾಂತ್, ಶಿವರಾಜ್​ಕುಮಾರ್ (Shivarajkumar), ಮೋಹನ್​ಲಾಲ್ ಮೊದಲಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಆಗಸ್ಟ್ 10ರಂದು ವಿಶ್ವಾದ್ಯಂತ ರಿಲೀಸ್ ಆಗುತ್ತಿದೆ. ಈಗ ಕನ್ನಡಿಗರಿಗೆ ಬೇಸರ ಆಗುವಂಥ ಘಟನೆ ಒಂದು ನಡೆದಿದೆ. ಇದನ್ನು ಸೋಶಿಯಲ್ ಮೀಡಿಯಾ ಮೂಲಕ ಪ್ರಶ್ನೆ ಮಾಡಲಾಗುತ್ತಿದೆ.

‘ಜೈಲರ್’ ಸಿನಿಮಾ ಆಗಸ್ಟ್ 10ರಂದು ರಿಲೀಸ್ ಆಗುತ್ತಿದ್ದು, ಈಗಾಗಲೇ ಆನ್​​ಲೈನ್​​ಲ್ಲಿ ಟಿಕೆಟ್ ಬುಕಿಂಗ್ ಶುರು ಆಗಿದೆ. ಇದು ಪ್ಯಾನ್ ಇಂಡಿಯಾ ಸಿನಿಮಾ. ತಮಿಳು ಮಾತ್ರವಲ್ಲದೆ, ಕನ್ನಡ ಮೊದಲಾದ ಭಾಷೆಗಳಲ್ಲಿ ‘ಜೈಲರ್’ ಸಿನಿಮಾ ಮೂಡಿ ಬರುತ್ತಿದೆ. ಬೆಂಗಳೂರಿನಲ್ಲಿ ಈ ಚಿತ್ರಕ್ಕೆ ಮೊದಲ ದಿನ 800ಕ್ಕೂ ಅಧಿಕ ಶೋ ಸಿಕ್ಕಿದೆ. ಆ ಪೈಕಿ ತಮಿಳು ವರ್ಷನ್​​ಗೆ 806 ಶೋ ಹಾಗೂ ಕನ್ನಡಕ್ಕೆ ಕೇವಲ ನಾಲ್ಕು ಶೋ ಸಿಕ್ಕಿದೆ. ಇದು ಅನೇಕರಿಗೆ ಬೇಸರ ಮೂಡಿಸಿದೆ.

ರಿಲೀಸ್​ಗೆ ಇನ್ನೂ ನಾಲ್ಕೈದು ದಿನ ಬಾಕಿ ಇದೆ. ಕನ್ನಡಕ್ಕೆ ಇನ್ನೂ ಹೆಚ್ಚಿನ ಶೋ ಸೇರ್ಪಡೆ ಆಗಬಹುದು. ಆದರೆ, ತಮಿಳು ವರ್ಷನ್​ಗೆ ಕೊಟ್ಟಷ್ಟು ಶೋಗಳನ್ನು ಕನ್ನಡಕ್ಕೆ ನೀಡುವುದಿಲ್ಲ. ಹೀಗಾಗಿ, ಅನೇಕರು ಶಿವರಾಜ್​ಕುಮಾರ್ ವಿರುದ್ಧ ಬೇಸರಗೊಂಡಿದ್ದಾರೆ. ಅವರು ಕರ್ನಾಟಕದಲ್ಲಿ ಕನ್ನಡಕ್ಕೆ ಹೆಚ್ಚಿನ ಶೋ ಕೊಡಿಸಬಹುದಿತ್ತು ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.

‘ಜೈಲರ್’ ಸಿನಿಮಾದ ಟ್ರೇಲರ್ ಇತ್ತೀಚೆಗೆ ರಿಲೀಸ್ ಆಗಿದೆ. ಟ್ರೇಲರ್ ನೋಡಿದ ಅನೇಕರು ಮೆಚ್ಚಿಕೊಂಡಿದ್ದಾರೆ. ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಿದೆ. ಈ ಚಿತ್ರ ಸೂಪರ್ ಹಿಟ್ ಆಗುವ ಸೂಚನೆ ಸಿಕ್ಕಿದೆ. ಈ ಚಿತ್ರದ ಮೂಲಕ ರಜನಿಕಾಂತ್ ಮತ್ತೊಂದು ದೊಡ್ಡ ಗೆಲುವು ಕಾಣುವ ಭರವಸೆಯಲ್ಲಿದ್ದಾರೆ. ಈ ಚಿತ್ರಕ್ಕೆ ನೆಲ್ಸನ್ ದಿಲೀಪ್ ಕುಮಾರ್ ಅವರು ನಿರ್ದೇಶನ ಮಾಡಿದ್ದಾರೆ.

ಇದನ್ನೂ ಓದಿ: ಜ‘ಜೈಲರ್​’ ಎದುರು ಪೈಪೋಟಿ ನೀಡಲಿರುವ ‘ತೋತಾಪುರಿ 2’; ಆಗಸ್ಟ್​ 11ರಂದು ಅದ್ದೂರಿಯಾಗಿ ಬಿಡುಗಡೆ

‘ಜೈಲರ್​’ ಸಿನಿಮಾದಲ್ಲಿ ಶಿವರಾಜ್​ಕುಮಾರ್ ಅವರ ಪಾತ್ರ ಕೇವಲ 10 ನಿಮಿಷ ಬರಲಿದೆ. ಈ ವಿಚಾರವನ್ನು ಅವರು ಈ ಮೊದಲೇ ಹೇಳಿಕೊಂಡಿದ್ದರು. ಈ ಚಿತ್ರದ ಟ್ರೇಲರ್​ನಲ್ಲಿ ಅವರು ಕಾಣಿಸಲಿದ್ದಾರೆ ಎಂದು ಅನೇಕರು ಭಾವಿಸಿದ್ದರು. ಆದರೆ, ಅದು ಸುಳ್ಳಾಗಿದೆ. ಈ ಚಿತ್ರದ ‘ಕಾವಾಲ’ ಹಾಡು ಸೂಪರ್ ಹಿಟ್ ಎನಿಸಿಕೊಂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ತಾಜಾ ಸುದ್ದಿ
ಅಧಿಕಾರಿಗೆ ಅವಾಚ್ಯ ಶಬ್ದಗಳಿಂದ ಬೈಯ್ಯುವ ಬಿಜೆಪಿ ಶಾಸಕ ಹರೀಶ್ ವಿಡಿಯೋ ವೈರಲ್
ಅಧಿಕಾರಿಗೆ ಅವಾಚ್ಯ ಶಬ್ದಗಳಿಂದ ಬೈಯ್ಯುವ ಬಿಜೆಪಿ ಶಾಸಕ ಹರೀಶ್ ವಿಡಿಯೋ ವೈರಲ್
ಪ್ರತಾಪ್ ಪರಿಸ್ಥಿತಿ ನೋಡಿ ತಪ್ಪಿತಸ್ಥ ಭಾವನೆ ಕಾಡಿದ್ದು ವರ್ತೂರಿಗೆ ಮಾತ್ರ​
ಪ್ರತಾಪ್ ಪರಿಸ್ಥಿತಿ ನೋಡಿ ತಪ್ಪಿತಸ್ಥ ಭಾವನೆ ಕಾಡಿದ್ದು ವರ್ತೂರಿಗೆ ಮಾತ್ರ​
ತುಕಾಲಿಯ ಡ್ಯಾನ್ಸ್​ ನೋಡಿ ಬೆಚ್ಚಿ ಬಿದ್ದ ಮನೆ ಮಂದಿ
ತುಕಾಲಿಯ ಡ್ಯಾನ್ಸ್​ ನೋಡಿ ಬೆಚ್ಚಿ ಬಿದ್ದ ಮನೆ ಮಂದಿ
ಕಾಮಸಮುದ್ರ ಅರಣ್ಯದತ್ತ ಆಗಮಿಸಿದ 50ಕ್ಕೂ ಹೆಚ್ಚು ಕಾಡಾನೆಗಳು
ಕಾಮಸಮುದ್ರ ಅರಣ್ಯದತ್ತ ಆಗಮಿಸಿದ 50ಕ್ಕೂ ಹೆಚ್ಚು ಕಾಡಾನೆಗಳು
ಬಸವಣ್ಣನ ವಚನ ಹೇಳಿ ನೆರೆದವರಿಗೆ ಶಾಕ್ ನೀಡಿದ ಪೂಜಾ ಗಾಂಧಿ
ಬಸವಣ್ಣನ ವಚನ ಹೇಳಿ ನೆರೆದವರಿಗೆ ಶಾಕ್ ನೀಡಿದ ಪೂಜಾ ಗಾಂಧಿ
ಕರುಳಿ‌ನ ಕುಡಿ ರಕ್ಷಣೆಗೆ ತಾಯಿ ಆಕಳು ಹೋರಾಟ; ಇಲ್ಲಿದೆ ಮನಕಲುಕುವ ದೃಶ್ಯ
ಕರುಳಿ‌ನ ಕುಡಿ ರಕ್ಷಣೆಗೆ ತಾಯಿ ಆಕಳು ಹೋರಾಟ; ಇಲ್ಲಿದೆ ಮನಕಲುಕುವ ದೃಶ್ಯ
ಕರಿಬಸವೇಶ್ವರ ಜಾತ್ರೆಯಲ್ಲಿದೆ ವಿಶೇಷ; ಮಹಿಳೆಯರೇ ರಥ ಎಳೆಯುವ ಸಂಪ್ರದಾಯ
ಕರಿಬಸವೇಶ್ವರ ಜಾತ್ರೆಯಲ್ಲಿದೆ ವಿಶೇಷ; ಮಹಿಳೆಯರೇ ರಥ ಎಳೆಯುವ ಸಂಪ್ರದಾಯ
1 ಆಧಾರ್​ ಕಾರ್ಡ್​ನ 2 ಪ್ರತಿ ತೋರಿಸಿ KSRTCಯಲ್ಲಿ ಇಬ್ಬರು ಮಹಿಳೆಯರ ಪ್ರಯಾಣ
1 ಆಧಾರ್​ ಕಾರ್ಡ್​ನ 2 ಪ್ರತಿ ತೋರಿಸಿ KSRTCಯಲ್ಲಿ ಇಬ್ಬರು ಮಹಿಳೆಯರ ಪ್ರಯಾಣ
ಭಾರತ-ಆಫ್ರಿಕಾ ಟಿ20 ಟ್ರೋಫಿ ಫೋಟೋ ಶೂಟ್​ನಲ್ಲಿ ಮಿಂಚಿದ ಸೂರ್ಯ: ವಿಡಿಯೋ
ಭಾರತ-ಆಫ್ರಿಕಾ ಟಿ20 ಟ್ರೋಫಿ ಫೋಟೋ ಶೂಟ್​ನಲ್ಲಿ ಮಿಂಚಿದ ಸೂರ್ಯ: ವಿಡಿಯೋ
‘ನನಗೆ ಯುವರಾಜ್​ ಅಂತ ಅವರೇ ಹೆಸರು ಇಟ್ಟಿದ್ದು’: ಲೀಲಾವತಿ ಮೊಮ್ಮಗನ ಮಾತು
‘ನನಗೆ ಯುವರಾಜ್​ ಅಂತ ಅವರೇ ಹೆಸರು ಇಟ್ಟಿದ್ದು’: ಲೀಲಾವತಿ ಮೊಮ್ಮಗನ ಮಾತು