‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಹಾಡು ಹುಟ್ಟಿದ್ದು ಹೇಗೆ? ಚಿತ್ರಕತೆಯಲ್ಲಿ ಇಲ್ಲದ ಹಾಡು ಸಿನಿಮಾಕ್ಕೆ ಸೇರಿದ್ದು ಹೇಗೆ?

Dr Rajkumar: 'ಆಕಸ್ಮಿಕ' ಸಿನಿಮಾದ 'ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು' ಕರ್ನಾಟಕದ ಅನಧಿಕೃತ ನಾಡಗೀತೆ. ಆದರೆ ನಿರ್ದೇಶಕ ನಾಗಾಭರಣ ಸಿನಿಮಾದ ಚಿತ್ರಕತೆ ಬರೆದಾಗ ಹಾಡು ಇರಲಿಲ್ಲ, ಆದರೆ ನಂತರ ಹಾಡು ಸೇರ್ಪಡೆ ಆಗಿದ್ದು ಹೇಗೆ? ಏಕೆ? ಯಾರಿಂದ?

'ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು' ಹಾಡು ಹುಟ್ಟಿದ್ದು ಹೇಗೆ? ಚಿತ್ರಕತೆಯಲ್ಲಿ ಇಲ್ಲದ ಹಾಡು ಸಿನಿಮಾಕ್ಕೆ ಸೇರಿದ್ದು ಹೇಗೆ?
ಆಕಸ್ಮಿಕ
Follow us
ಮಂಜುನಾಥ ಸಿ.
|

Updated on: Aug 05, 2023 | 8:23 PM

ಕನ್ನಡ ನಾಡು, ನೆಲ, ಜಲವನ್ನು ಕೊಂಕಾಡುವ ನೂರಾರು ಹಾಡುಗಳು ಕನ್ನಡ ಸಿನಿಮಾಗಳಲ್ಲಿ ಬಂದಿವೆ, ಬರುತ್ತಿವೆ, ಮುಂದೆಯೂ ಬರುತ್ತವೆ ಆದರೆ ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಹಾಡನ್ನು ಮೀರಿಸಬಲ್ಲ ಮತ್ತೊಂದು ಹಾಡು ಬರುವುದು ಬಹುತೇಕ ಅನುಮಾನ. ‘ಆಕಸ್ಮಿಕ‘ (Akasmika) ಸಿನಿಮಾದ ಈ ಹಾಡು ಅನಧಿಕೃತ ‘ನಾಡಗೀತೆ’ಯೇ ಆಗಿ ಹೋಗಿದೆ. ವಿಶೇಷವೆಂದರೆ ನಿರ್ದೇಶಕ ನಾಗಾಭರಣ, ‘ಆಕಸ್ಮಿಕ’ ಸಿನಿಮಾದ ಚಿತ್ರಕತೆ ಬರೆದಾಗ ಅದನ್ನು ಅಣ್ಣಾವ್ರ ಮುಂದೆ ಹೇಳಿದಾಗ ಈ ಹಾಡು ಇರಲಿಲ್ಲ. ಆ ಸನ್ನಿವೇಶದಲ್ಲಿ ಹಾಡಿನ ಅವಶ್ಯಕತೆ ಇದೆ ಎಂದು ನಾಗಾಭರಣ (Naghabarana) ಅವರಿಗೆ ಅನಿಸಿರಲಿಲ್ಲ. ಆದರೆ ಆ ಹಾಡು ಸೇರಿದ್ದು ಚಿತ್ರಕತೆ ಜೀನಿಯಸ್ ಒಬ್ಬರ ಸಲಹೆಯಿಂದ!

ನಾಗಾಭರಣ ಅವರ ‘ಆಕಸ್ಮಿಕ’ ಸಿನಿಮಾದ ಕತೆಯನ್ನು ಅಣ್ಣಾವ್ರ ಸಹೋದರ ವರದಣ್ಣ ಅವರ ಬಳಿ ಹೇಳಿದಾಗ ಇಲ್ಲೊಂದು ಹಾಡು ಇದ್ದರೆ ಒಳ್ಳೆಯದು ಎಂದರಂತೆ. ಆದರೆ ಅದು ನಾಗಾಭರಣ ಅವರಿಗೆ ಸರಿ ಎನಿಸಿರಲಿಲ್ಲ. ಸಿನಿಮಾ ಕ್ಲೈಮ್ಯಾಕ್ಸ್​ಗೆ ಬಂದಿದೆ ಇಲ್ಲಿ ಹಾಡು ಇಟ್ಟರೆ ಕ್ಲೈಮ್ಯಾಕ್ಸ್​ನ ರೋಚಕತೆ ಹಾಳಾಗುತ್ತದೆ, ನೋಡುಗನ ಗಮನ ಕತೆಯಿಂದ ವಿಚಲಿತವಾಗುತ್ತದೆ ಎಂಬುದು ನಾಗಾಭರಣ ವಾದ ಆದರೆ ವರದಣ್ಣ, ”ಅದೇ ಬೇಕಾಗಿರುವುದು, ನೋಡುಗ ಕತೆಯನ್ನು ಮರೆತು ಹಾಡಿನಲ್ಲಿ ಕಳೆದು ಹೋಗಿ, ನಂತರ ಶಾಕ್ ಮಾದರಿಯಲ್ಲಿ ಅವನನ್ನು ಮತ್ತೆ ಕತೆಗೆ ಎಳೆದುಕೊಂಡು ಬರಬೇಕು. ಇದು ಚೆನ್ನಾಗಿ ವರ್ಕೌಟ್ ಆಗುತ್ತದೆ” ಎಂದರಂತೆ. ಅದು ನಾಗಾಭರಣ ಅವರಿಗೂ ಸರಿ ಎನಿಸಿ ಹಾಡು ಇಡಲು ನಿಶ್ಚಯಿಸಿದರಂತೆ.

ಹಾಗಾದರೆ ಯಾವ ರೀತಿಯ ಹಾಡು ಸೂಕ್ತ ಎಂದು ಚರ್ಚಿಸಿದಾಗ, ಅಣ್ಣಾವ್ರು ಬಹಳ ದಿನಗಳಿಂದ ಕನ್ನಡದ ಬಗೆಗಿನ ಹಾಡು ಹಾಡಿಲ್ಲ ಅದನ್ನೇ ಇಡಿ ಎಂಬ ಸಲಹೆಯನ್ನೂ ವರದಣ್ಣನೇ ನೀಡಿದರಂತೆ. ಆಗ ನಾಗಾಭರಣ ಅವರು ಕುವೆಂಪು ಇನ್ನಿತರೆ ಸಾಹಿತಿಗಳ ಕವಿತೆಗಳ ಪುಸ್ತಕವನ್ನೆಲ್ಲ ತೆಗೆದುಕೊಂಡು ರೆಫೆರೆನ್ಸ್​ಗಾಗಿ ಹಂಸಲೇಖ ಅವರಿಗೆ ಕೊಟ್ಟರಂತೆ. ಆಗಲೂ ಹಂಸಲೇಖ ಬೇಸರ ಮಾಡಿಕೊಂಡು, ನೀವು ರಾಶಿ-ರಾಶಿ ಪುಸ್ತಕಗಳನ್ನು ತರಬೇಡಿ ಓದಲು ಸಮಯವಿಲ್ಲ ಎನ್ನುತ್ತಿದ್ದರಂತೆ.

ಇದನ್ನೂ ಓದಿ:ಶಿವಣ್ಣ ನಟಿಸಬೇಕಿದ್ದ ಆಕಸ್ಮಿಕ ಸಿನಿಮಾದಲ್ಲಿ ಅಣ್ಣಾವ್ರು ನಟಿಸಿದ್ದು ಹೇಗೆ?

ಹಂಸಲೇಖ ಅವರು, ಡಿವಿಜಿ ಅವರ ‘ಬದುಕು ಜಟಕಾ ಬಂಡಿ ವಿಧಿ ಅದರ ಸಾಹೇಬ’ ಸಾಲಿನಿಂದ ಪ್ರೇರಣೆ ಪಡೆದು ‘ಬದುಕಿದು ಜಟಕಾ ಬಂಡಿ, ವಿಧಿ ಓಡಿಸುವಾ ಬಂಡಿ’ ಸಾಲು ಮಾಡಿಕೊಂಡು ಅದಕ್ಕೆ ಇನ್ನೊಂದಿಷ್ಟು ಸಾಲುಗಳನ್ನು ಸೇರಿಸಿ ಅಣ್ಣಾವ್ರ ಮನೆಗೆ ಹೋಗಿ ಅದನ್ನು ಹಾಡಿ ತೋರಿಸಿದರಂತೆ. ಹಾಡಿನ ಸಾಲುಗಳು ಇಷ್ಟವಾಗಿ ಅದರ ಬಗ್ಗೆ ಚರ್ಚೆ ಮಾಡುತ್ತಾ ಮಾಡುತ್ತಾ ‘ಹುಟ್ಟಿದರೆ ಕನ್ನಡ ನಾಡಲಿ ಹುಟ್ಟಬೇಕು’ ಸಾಲು ಬಂತಂತೆ. ಅದನ್ನೇ ಪಲ್ಲವಿ ಮಾಡಿಕೊಂಡು ಇತರೆ ಸಾಲುಗಳನ್ನು ಸೇರಿಸಿ ಬೆಳೆಸಿ ಹಂಸಲೇಖ ಅವರು ಕನ್ನಡಿಗರು ಎಂದೂ ಮರೆಯಲಾಗದ ಹಾಡು ಕೊಟ್ಟುಬಿಟ್ಟಿದ್ದು ಈಗ ಇತಿಹಾಸ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ