ಅವರಾಗಿಯೇ ಮೇಲೆ ಬಂದ್ರೆ ನಾವು ಎದುರಿಸುತ್ತೇವೆ; ಮಹಾರಾಷ್ಟ್ರಕ್ಕೆ ಟಾಂಗ್​ ಕೊಟ್ಟ ಟಿ.ಎಸ್.ನಾಗಾಭರಣ

ಕನ್ನಡಿಗರು ಇನ್ನೊಬ್ಬರ ಮೇಲೆ ಏರಿ ಹೋದವರಲ್ಲ. ಸಮಸ್ಯೆಗಳು ಬಂದಾಗ ಅದಕ್ಕೆ ಎದೆಗೊಟ್ಟು ನಿಲ್ಲುವವನೆ ಹೊರತು ಯಾವತ್ತೂ ಏರಿ ಹೋದವನಲ್ಲ.

ಅವರಾಗಿಯೇ ಮೇಲೆ ಬಂದ್ರೆ ನಾವು ಎದುರಿಸುತ್ತೇವೆ; ಮಹಾರಾಷ್ಟ್ರಕ್ಕೆ ಟಾಂಗ್​ ಕೊಟ್ಟ ಟಿ.ಎಸ್.ನಾಗಾಭರಣ
ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಟಿ.ಎಸ್. ನಾಗಾಭರಣ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Dec 11, 2022 | 5:36 PM

ಚಿಕ್ಕೋಡಿ: ಕನ್ನಡಿಗರು ಇನ್ನೊಬ್ಬರ ಮೇಲೆ ಏರಿ ಹೋದವರಲ್ಲ. ಸಮಸ್ಯೆಗಳು ಬಂದಾಗ ಅದಕ್ಕೆ ಎದೆಗೊಟ್ಟು ನಿಲ್ಲುವವನೆ ಹೊರತು ಯಾವತ್ತೂ ಏರಿ ಹೋದವನಲ್ಲ. ಬೆಳವಡಿ ಮಲ್ಲಮ್ಮ ಶಿವಾಜಿಯ ಸೈನ್ಯವನ್ನ 6 ತಿಂಗಳ ಕಾಲ‌ ತಡೆಯುತ್ತಾಳೆ ಅದೂ ಸಹ ಸ್ತ್ರೀ ಸೈನ್ಯದ ಮೂಲಕ. ಇದರ‌ ಮೇಲೆ‌ ನೀವೆ ಲೆಕ್ಕ ಹಾಕಿ ನಮ್ಮ ನಮ್ಮ ಸಂಯಮ ಎಂಥದ್ದು ಅಂತ. ಅವರಾಗೆ ಅವರೇ ನಮ್ಮ ಮೇಲೆ ಬಂದಾಗ ನಾವು ಅವರನ್ನ ಎದುರಿಸುತ್ತೇವೆ ಎಂದು ಕಸಾಪ ಅಧ್ಯಕ್ಷ ಟಿ.ಎಸ್.ನಾಗಾಭರಣ (T.S. Nagabharana) ಹೇಳಿದರು. ಬೆಳಗಾವಿ ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ರಾಜಕೀಯ ನಾಯಕರ ಮೌನ ವಿಚಾರವಾಗಿ ಅವರು ಮಾತನಾಡಿದರು. ಭಾವನಾತ್ಮಕವಾಗಿ ಎದುರಿಸಿದರೆ ಸಾಕಾ ಅಥವಾ ಅದನ್ನ ಕಾನೂನಾತ್ಮಕವಾಗಿ ಎದುರಿಸಬೇಕಾ ಎಂದು ಪ್ರಶ್ನಿಸಿದರು. ಕಾನೂನಾತ್ಮಕವಾಗಿ ಸಮಸ್ಯೆಗಳನ್ನು ಎದುರಿಸಿದಾಗ ಮಾತ್ರ ಅದು ಪರಿಹಾರ. ಮಹಾರಾಷ್ಟ್ರದಿಂದ ಬರ್ತಿನಿ ಎನ್ನುವವರ ಉದ್ದೇಶವೇ ರಾಜಕೀಯ. ಅದರಲ್ಲೂ ರಾಜಕೀಯ ಬೆರೆತ ಕೂಡಲೇ ಕ್ಲಿಷ್ಟವಾಗುತ್ತೆ ಎಂದರು.

ಜನ ಸೇವಕರಾಗಿ ಜನ ಸೇವೆಯ ಆಯಾಮ ಇದ್ರೆ ಅದನ್ನ ಮೆಚ್ಚಬಹುದು. ಇಲ್ಲಿ ನೈತಿಕತೆಯ ಹೋರಾಟ ಇಲ್ಲವೇ ಇಲ್ಲ. ಆನೆ ನಡೆದಿದ್ದೆ ದಾರಿ ನಾಯಿ ಬೊಗಳತಾನೇ ಇರುತ್ತೆ. ನಿಪ್ಪಾಣಿ ನಗರ ಸಭೆಯ ಮೇಲೆ ಭಗ್ವಾ ಧ್ವಜ ಹಾರಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ್ದು, ಇನ್ನೂ ಎರಡ್ಮೂರು ವರ್ಷ ಕಾಯಿರಿ ಇಲ್ಲಿಯದ್ದು ತೆಗೆಯಬಹದು. ಯಾಕೆಂದರೆ ಮನಸುಗಳು ಬಹಳ ಮುಖ್ಯ. ಮನಸುಗಳನ್ನು ಒಗ್ಗೂಡಿಸಿಬೇಕು, ಕಾನೂನಾತ್ಮಕಾವಾಗಿ ಅದನ್ನ ನೋಡಬೇಕು ಎಂದು ಟಿ.ಎಸ್.ನಾಗಾಭರಣ ಹೇಳಿದರು.

ಇದನ್ನೂ ಓದಿ: ಸಹಜ ಸ್ಥಿತಿಗೆ ಕರ್ನಾಟಕ-ಮಹಾರಾಷ್ಟ್ರ ಗಡಿ: ಎಂದಿನಂತೆ ಬಸ್ ಸಂಚಾರ ಆರಂಭ

ಯಾರೂ ಸಹ ಮೌನಕ್ಕೆ‌ ಜಾರಿಲ್ಲ: ಶಶಿಕಲಾ ಜೊಲ್ಲೆ

ಇನ್ನು ಗಡಿ ವಿಚಾರದಲ್ಲಿ ಬೆಳಗಾವಿ ಜನಪ್ರತಿನಿಧಿಗಳು ಮೌನ ಆರೋಪಕ್ಕೆ ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಪ್ರತಿಕ್ರಿಯೆ ನೀಡಿದ್ದು, ಯಾರೂ ಸಹ ಮೌನಕ್ಕೆ‌ ಜಾರಿಲ್ಲ, ನಾವು ಯಾಕೆ ಮಾತಾಡ್ತಿಲ್ಲ ಅಂದ್ರೆ. ನಮ್ಮೆಲ್ಲರ ಪರವಾಗಿ ಸಿಎಂ ಬೊಮ್ಮಾಯಿ ಉತ್ತರ ಕೊಟ್ಟಿದ್ದಾರೆ. ಹಿರಿಯರು ಉತ್ತರಿಸಿದ ಮೇಲೆ ನಾವು ಮಾತಾಡುವುದು ಸರಿಯಲ್ಲ. ಸಿಎಂ ಬೆಂಬಲದಲ್ಲಿದ್ದೇವೆ, ಯಾವುದೇ ಅನಾಹುತ ಆಗಲು ಬಿಡಲ್ಲ. ಸಿಎಂ ಉತ್ತರ ಕೊಟ್ಟಿದ್ದಾರೆ ಅಂದ್ರೆ ಅದಕ್ಕೆ ನಮ್ಮ ಸಹಮತ ಇರುತ್ತೆ ಎಂದರು.

ಇದನ್ನೂ ಓದಿ: ಬೆಳಗಾವಿ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ: ಸವದತ್ತಿಗೆ ಬಂದಿದ್ದ 145 ಮಹಾರಾಷ್ಟ್ರ ಬಸ್‌ಗಳು ವಾಪಸ್

ಭಗವಾಧ್ವಜ ಹಾರಾಟ ಪ್ರಕರಣ: ಚರ್ಚೆ ಮಾಡಿ ಕ್ರಮಕೈಗೊಳ್ಳುವೆ

ನಿಪ್ಪಾಣಿ ನಗರಸಭೆ ಕಚೇರಿ ಮೇಲೆ ಭಗವಾಧ್ವಜ ಹಾರಾಟ ಪ್ರಕರಣಕ್ಕೆ ಪ್ರತಿಕ್ರಿಯೆ ನೀಡಿದ್ದು, ಅದು ಮುಂಚೆಯಿಂದಲೂ ಸಹ ಆ ರೀತಿ ನಡೆದುಕೊಂಡು ಬಂದಿತ್ತು. ಮಧ್ಯದಲ್ಲಿ ಅದನ್ನ ತೆರವು ಮಾಡಲಾಗಿತ್ತು. ಆದರೆ ಪುನಃ ಅದನ್ನ ಯಾವಾಗ ಹಾಕಿದ್ದಾರೋ ಗೊತ್ತಿಲ್ಲ. ಈ ಬಗ್ಗೆ ನಗರಸಭೆ ಆಯುಕ್ತರ ಜೊತೆಗೂ ನಾನು ಚರ್ಚೆ ಮಾಡ್ತೇನೆ. ನಗರಸಭೆ ಆಯುಕ್ತರಿಂದ ಮಾಹಿತಿ ಪಡೆದು ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.