AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ಯಾನ್ ಇಂಡಿಯಾ ಸಿನಿಮಾಕ್ಕಾಗಿ ತಯಾರಿ, ಮೀನುಗಾರರೊಟ್ಟಿಗೆ ಸಮಯ ಕಳೆದ ನಾಗ ಚೈತನ್ಯ

Naga Chaitanya: ಪ್ಯಾನ್ ಇಂಡಿಯಾ ಸಿನಿಮಾಕ್ಕೆ ಕೈ ಹಾಕಿರುವ ನಟ ನಾಗ ಚೈತನ್ಯ ಸಿನಿಮಾಕ್ಕೆ ತಯಾರಾಗಲು ಮೀನುಗಾರರ ಕುಟುಂಬಗಳನ್ನು ಭೇಟಿಯಾಗಿ ಅವರೊಟ್ಟಿಗೆ ಸಮಯ ಕಳೆದಿದ್ದಾರೆ.

ಪ್ಯಾನ್ ಇಂಡಿಯಾ ಸಿನಿಮಾಕ್ಕಾಗಿ ತಯಾರಿ, ಮೀನುಗಾರರೊಟ್ಟಿಗೆ ಸಮಯ ಕಳೆದ ನಾಗ ಚೈತನ್ಯ
ನಾಗ ಚೈತನ್ಯ
Follow us
ಮಂಜುನಾಥ ಸಿ.
|

Updated on: Aug 03, 2023 | 10:43 PM

ಟಾಲಿವುಡ್ (Tollywood) ನಟ ನಾಗ ಚೈತನ್ಯ (Naga Chaitanya) ಒಂದು ಹಿಟ್ ಸಿನಿಮಾಕ್ಕಾಗಿ ಪ್ರಯತ್ನಿಸುತ್ತಿದ್ದಾರೆ. 2021 ರಲ್ಲಿ ಬಿಡುಗಡೆ ಆಗಿದ್ದ ‘ಲವ್ ಸ್ಟೋರಿ’ ಸಿನಿಮಾ ಸಾಧಾರಣ ಹಿಟ್ ಆಗಿದ್ದು ಬಿಟ್ಟರೆ ಅದಾದ ಬಳಿಕ ನಟಿಸಿದ ನಾಲ್ಕು ಸಿನಿಮಾಗಳು ಫ್ಲಾಪ್ ಆಗಿವೆ. ಅಮೀರ್ ಖಾನ್ (Aamir Khan) ಜೊತೆಗೆ ‘ಲಾಲ್ ಸಿಂಗ್ ಚಡ್ಡ’ ಸಿನಿಮಾ ಮಾಡಿದರಾದರೂ ಆ ಸಿನಿಮಾ ಸಹ ಫ್ಲಾಪ್ ಆಯ್ತು. ಸೋಲುಗಳ ನಡುವೆಯೇ ನಾಗ ಚೈತನ್ಯ ಇದೀಗ ಪ್ಯಾನ್ ಇಂಡಿಯಾ ಸಿನಿಮಾಕ್ಕೆ ಕೈ ಹಾಕಿದ್ದಾರೆ. ಇದಕ್ಕಾಗಿ ತಯಾರಿಯನ್ನೂ ಸಹ ಆರಂಭಿಸಿದ್ದಾರೆ.

ಹೊಸ ಪ್ಯಾನ್ ಇಂಡಿಯಾ ಸಿನಿಮಾಕ್ಕಾಗಿ ತಯಾರಿ ಆರಂಭಿಸಿರುವ ನಾಗ ಚೈತನ್ಯ ಅದರ ಭಾಗವಾಗಿ ಆಂಧ್ರ ಪ್ರದೇಶದ ಶ್ರೀಕಾಕುಳಂನ ಹಳ್ಳಿಯೊಂದಕ್ಕೆ ಭೇಟಿ ನೀಡಿ ಅಲ್ಲಿನ ಮೀನುಗಾರರ ಸಮುದಾಯವನ್ನು ಭೇಟಿ ಮಾಡಿ ಅವರೊಟ್ಟಿಗೆ ಕೆಲ ಸಮಯ ಕಳೆದಿದ್ದಾರೆ. ಮೀನುಗಾರರ ಸಂಸ್ಕೃತಿ, ಭಾಷೆ, ಆಚಾರ-ವಿಚಾರ, ಅವರ ಜೀವನಶೈಲಿ, ಹಾವ ಭಾವವನ್ನು ಅಧ್ಯಯನ ಮಾಡುವ ಕಾರಣಕ್ಕೆ ನಾಗ ಚೈತನ್ಯ ಈ ಭೇಟಿ ಮಾಡಿದ್ದಾರೆ.

ನಾಗ ಚೈತನ್ಯ ಇದೀಗ ನಟಿಸಲಿರುವ ಪ್ಯಾನ್ ಇಂಡಿಯಾ ಸಿನಿಮಾವು ನೈಜ ಘಟನೆಗಳನ್ನು ಆಧರಿಸಿದ ಕತೆಯನ್ನು ಹೊಂದಿದೆ. ಸಿನಿಮಾವು ಮೀನುಗಾರ ಸಮುದಾಯದ ಕುರಿತಾದ ಕತೆಯನ್ನು ಒಳಗೊಂಡಿದ್ದು, ಬಹುತೇಕ ಚಿತ್ರೀಕರಣ ಸಮುದ್ರ ತಟದಲ್ಲಿಯೇ ನಡೆಯಲಿದೆ. ಭಾರಿ ಬಜೆಟ್​ನ ಸಿನಿಮಾ ಇದಾಗಿರಲಿದ್ದು, ಸಿನಿಮಾ ಚಿತ್ರೀಕರಣಕ್ಕೆ ಮುನ್ನ ಪಾತ್ರಕ್ಕಾಗಿ ತಯಾರುವ ಗುರಿಯನ್ನು ನಾಗ ಚೈತನ್ಯ ಹೊಂದಿದ್ದಾರೆ. ಇದು ನಾಗ ಚೈತನ್ಯ ಅವರು 23ನೇ ಸಿನಿಮಾ ಆಗಿರಲಿದೆ.

ಇದನ್ನೂ ಓದಿ:Naga Chaitanya: ಸಾಲು ಸಾಲು ಸೋಲು; ಮುಂದಿನ ಸಿನಿಮಾ ಬಗ್ಗೆ ನಾಗ ಚೈತನ್ಯಗೆ ಕಾಡಿದೆ ಗೊಂದಲ

ಪ್ಯಾನ್ ಇಂಡಿಯಾ ಬ್ಲಾಕ್ ಬಸ್ಟರ್ ಹಿಟ್ ಎನಿಸಿಕೊಂಡಿರುವ ‘ಕಾರ್ತಿಕೇಯ-2’ ಸಿನಿಮಾ ನಿರ್ದೇಶನ ಮಾಡಿರುವ ಚಂದು ಮೊಂಡೇಟಿ ಈ ಸಿನಿಮಾದ ನಿರ್ದೇಶನ ಮಾಡಲಿದ್ದಾರೆ. ಸಿನಿಮಾಕ್ಕೆ ಪ್ರಸ್ತುತ ಯಾವುದೇ ಹೆಸರು ಇಡಲಾಗಿಲ್ಲ. ತಾತ್ಕಾಲಿಕವಾಗಿ ಎನ್​ಸಿ23 ಎಂದು ಸಿನಿಮಾವನ್ನು ಕರೆಯಲಾಗುತ್ತಿದೆ. ಸಿನಿಮಾದ ಪ್ರೀ ಪ್ರೊಡಕ್ಷನ್ ಕಾರ್ಯಗಳು ಸದ್ಯಕ್ಕೆ ಚಾಲ್ತಿಯಲ್ಲಿದ್ದು ಶೀಘ್ರದಲ್ಲಿಯೇ ಈ ಸಿನಿಮಾ ಸೆಟ್ಟೇರಲಿದೆ. ತೆಲುಗಿನ ಜನಪ್ರಿಯ ಹಾಗೂ ಯಶಸ್ವಿ ನಿರ್ಮಾಪಕ ಆಗಿರುವ ಅಲ್ಲು ಅರವಿಂದ್ ಈ ಸಿನಿಮಾವನ್ನು ಪ್ರೆಸೆಂಟ್ ಮಾಡುತ್ತಿದ್ದಾರೆ. ಬನ್ನಿ ವಾಸು ಹಾಗೂ ಗೀತಾ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ ಈ ಸಿನಿಮಾದ ನಿರ್ಮಾಣ ಆಗುತ್ತಿದೆ.

ಶ್ರೀಕಾಕುಳಂನ ಮೀನುಗಾರರ ಸಮುದಾಯವನ್ನು ಭೇಟಿ ಮಾಡಿ ಮಾಧ್ಯಮಗಳೊಟ್ಟಿಗೆ ಮಾತನಾಡಿದ ನಾಗ ಚೈತನ್ಯ, ”ಚಂದು ಆರು ತಿಂಗಳ ಮುಂಚೆಯೇ ಕತೆ ಹೇಳಿದ್ದರು. ಕತೆ ಬಹಳ ಇಷ್ಟವಾಯಿತು, ಸಿನಿಮಾದಲ್ಲಿ ನಟಿಸಲು ಉತ್ಸುಕನಾಗಿದ್ದೇನೆ. ನಿಜವಾದ ಘಟನೆಗಳನ್ನು ಆಧರಿಸಿ ಚಂದು ಈ ಕತೆಯನ್ನು ರಚಿಸಿದ್ದಾರೆ. ವಾಸ್ ಮತ್ತು ಚಂದೂ ಎರಡು ವರ್ಷಗಳಿಂದ ಕಥೆಯ ಮೇಲೆ ಕೆಲಸ ಮಾಡುತ್ತಿದ್ದಾರೆ. ಮೀನುಗಾರರ ಜೀವನಶೈಲಿ, ಅವರ ಭಾಷೆ ಮತ್ತು ಹಳ್ಳಿಯ ಸೊಬಗನ್ನು ಅರಿತುಕೊಳ್ಳಲು ನಾವು ಇಲ್ಲಿಗೆ ಬಂದಿದ್ದೇವೆ” ಎಂದರು.

ನಿರ್ದೇಶಕ ಚಂದೂ ಮೊಂಡೇಟಿ ಮಾತನಾಡಿ, “ಕಾರ್ತಿಕ್ ಎಂಬ ಸ್ಥಳೀಯ ವ್ಯಕ್ತಿ 2018 ರಲ್ಲಿ ನಡೆದ ನೈಜ ಘಟನೆಯೊಂದನ್ನು ಆಧರಿಸಿ ಸಿನಿಮಾದ ಕಥೆಯನ್ನು ಸಿದ್ಧಪಡಿಸಿದ್ದಾರೆ. ಅವರು ಆರಂಭದಲ್ಲಿ ಅರವಿಂದ್ ಮತ್ತು ಬನ್ನಿ ವಾಸ್ ಅವರಿಗೆ ಕಥೆ ಹೇಳಿದರು. ಕಥೆ ಕೇಳಿದಾಗ ನನಗೆ ಬಹಳ ಖುಷಿ ಆಯ್ತು. ನಾವು ಕಳೆದ 2 ವರ್ಷಗಳಿಂದ ಕತೆಗೆ ಚಿತ್ರಕತೆ ಸಿದ್ಧಪಡಿಸುತ್ತಿದ್ದೇವೆ. ಇದೀಗ ಚಿತ್ರಕತೆ ಅಂತಿಮವಾಗಿದೆ. ನಾಗ ಚೈತನ್ಯ ಕತೆ ಕೇಳಿ ಎಗ್ಸೈಟ್ ಆಗಿದ್ದಾರೆ. ನೈಜ ಘಟನೆಗಳು ನಡೆದ ಸ್ಥಳದಲ್ಲಿಯೇ ಸಿನಿಮಾದ ಪ್ರೀ-ಪ್ರೊಡಕ್ಷನ್‌ ಆರಂಭಿಸಲು ನಾವು ಬಯಸಿದ್ದೆವು ಹಾಗಾಗಿ ಇಲ್ಲಿಗೆ ಬಂದೆವು” ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ