Aryan Khan: ಕ್ರೂಸ್ ಶಿಪ್ ಪ್ರಕರಣದಲ್ಲಿ ಆರ್ಯನ್ ಖಾನ್ ವಿರುದ್ಧ ಯಾವುದೇ ಪುರಾವೆ ಇಲ್ಲ ಎಂಬ ವರದಿ ಅಲ್ಲಗಳೆದ ಎಸ್​ಐಟಿ

| Updated By: shivaprasad.hs

Updated on: Mar 02, 2022 | 1:59 PM

Cordelia cruise ship drug case: ಬಾಲಿವುಡ್​ನ ಖ್ಯಾತ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ವಿರುದ್ಧ ಮುಂಬೈ ಕ್ರೂಸ್ ಶಿಪ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಯಾವುದೇ ಪುರಾವೆಗಳಿಲ್ಲ ಎಂಬ ವರದಿಗಳನ್ನು ಎಸ್​ಐಟಿ ತಿರಸ್ಕರಿಸಿದೆ.

Aryan Khan: ಕ್ರೂಸ್ ಶಿಪ್ ಪ್ರಕರಣದಲ್ಲಿ ಆರ್ಯನ್ ಖಾನ್ ವಿರುದ್ಧ ಯಾವುದೇ ಪುರಾವೆ ಇಲ್ಲ ಎಂಬ ವರದಿ ಅಲ್ಲಗಳೆದ ಎಸ್​ಐಟಿ
ಆರ್ಯನ್ ಖಾನ್
Follow us on

ಭಾರತದಲ್ಲಿ ದೊಡ್ಡ ಸುದ್ದಿಯಾಗಿದ್ದ, ಮುಂಬೈ ಕ್ರೂಸ್ ಶಿಪ್ ಡ್ರಗ್ಸ್ ಪ್ರಕರಣದಲ್ಲಿ ಆರ್ಯನ್ ಖಾನ್ (Aryan Khan) ವಿರುದ್ಧ ಯಾವುದೇ ಪುರಾವೆಗಳಿಲ್ಲ ಎಂದು ಹಲವು ಮಾಧ್ಯಮ ವರದಿಗಳು ವರದಿ ಮಾಡಿದ್ದವು. ಇದಕ್ಕೆ ಎಸ್​ಐಟಿ ಹಾಗೂ ಎನ್​ಸಿಬಿಯ ಮೂಲಗಳನ್ನು ಉಲ್ಲೇಖಿಸಿದ್ದವು. ಆದರೆ ಈ ವರದಿಗಳನ್ನು ಅಲ್ಲಗಳೆದಿರುವ ವಿಶೇಷ ತನಿಖಾ ತಂಡ (ಎಸ್​ಐಟಿ), ‘ಆರ್ಯನ್ ಖಾನ್ ವಿರುದ್ಧ ಯಾವುದೇ ಪುರಾವೆಗಳಿಲ್ಲ ಎನ್ನುವ ತೀರ್ಮಾನಕ್ಕೆ ಬರಲಾಗಿಲ್ಲ’ ಎಂದು ಹೇಳಿದೆ. ಅರ್ಥಾತ್, ಕ್ರೂಸ್ ಶಿಪ್ ಡ್ರಗ್ಸ್ ಪ್ರಕರಣದ ತನಿಖೆ ಇನ್ನೂ ನಡೆಯುತ್ತಿದೆ. ಈಗಲೇ ಯಾವುದೇ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ. ಅವರಿಂದ ಹೇಳಿಕೆಗಳನ್ನು ಪಡೆಯಲಾಗಿದೆ. ಆದರೆ ಯಾವುದೇ ತೀರ್ಮಾನಕ್ಕೆ ಇನ್ನೂ ಬಂದಿಲ್ಲ’ ಎಂದು ಎನ್​ಸಿಬಿಯ ವಿಶೇಷ ತನಿಖಾ ತಂಡದ ಮುಖ್ಯಸ್ಥ ಸಂಜಯ್ ಸಿಂಗ್ ಹೇಳಿದ್ದಾರೆ ಎಂದು ಎಎನ್​ಐ ವರದಿ ಮಾಡಿದೆ.

ಈ ಹಿಂದೆ ಹಿಂದೂಸ್ತಾನ್ ಟೈಮ್ಸ್ ಆರ್ಯನ್ ಖಾನ್ ವಿರುದ್ಧ ಯಾವುದೇ ಪುರಾವೆಯನ್ನು ಎಸ್​ಐಟಿ ಹೊಂದಿಲ್ಲ ಎಂದು ಮಂಗಳವಾರ ವರದಿ ಮಾಡಿತ್ತು. ಮುಂಬೈ ಡ್ರಗ್ಸ್ ಪ್ರಕರಣದಲ್ಲಿ ಆರ್ಯನ್ ವಿರುದ್ಧ ಸಾಕ್ಷ್ಯಗಳಿಲ್ಲ ಎಂದು ಅದು ಹೇಳಿತ್ತು. ಅಲ್ಲದೇ ಶಾರುಖ್ ಪುತ್ರ ಆರ್ಯನ್ ಅವರನ್ನು ಬಂಧಿಸಿದ್ದ ಕಾರ್ಡೆಲಿಯಾ ಕ್ರೂಸ್ ಶಿಪ್ ಮೇಲಿನ ದಾಳಿ ಪ್ರಕರಣದಲ್ಲಿ ಹಲವು ಅಕ್ರಮಗಳು ಕಂಡುಬಂದಿವೆ ಎಂದು ವರದಿಯಲ್ಲಿ ಹೇಳಲಾಗಿತ್ತು. ಎಸ್​ಐಟಿ ಇದಕ್ಕೆ ಪ್ರತಿಕ್ರಿಯಿಸಿ, ಆರ್ಯನ್ ವಿರುದ್ಧ ಸಾಕ್ಷ್ಯಗಳಿಲ್ಲ ಎನ್ನುವುದನ್ನು ಅಲ್ಲಗಳೆದಿದೆ. ಮತ್ತು ಈಗಲೇ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ ಎಂದು ಹೇಳಿದೆ.

ಎಎನ್​ಐ ಮಾಹಿತಿ ಇಲ್ಲಿದೆ:

ಹಿಂದೂಸ್ತಾನ್ ಟೈಮ್ಸ್ ತನ್ನ ವರದಿಯಲ್ಲಿ ಎಸ್​ಐಟಿ ಅಧಿಕಾರಿಗಳ ಮಾಹಿತಿಯನ್ನು ಉಲ್ಲೇಖಿಸಿ ತನಿಖೆಯ ಬಗ್ಗೆ ಬೆಳಕು ಚೆಲ್ಲಿತ್ತು. ಅಂದಿನ ಎನ್​ಸಿಬಿ ಮುಖ್ಯಸ್ಥ ಸಮೀರ್ ವಾಂಖೆಡೆ ಆರ್ಯನ್ ವಿರುದ್ಧ ಮಾಡಿದ ಆರೋಪಿಗಳಿಗೆ ವ್ಯತಿರಿಕ್ತವಾಗಿ ತನಿಖೆಯ ಅಂಶಗಳಿವೆ. ಅಲ್ಲದೇ ತನಿಖೆಯಲ್ಲಿ ಆರ್ಯನ್ ಡ್ರಗ್ಸ್ ಹೊಂದಿರಲಿಲ್ಲ ಎನ್ನುವುದು ತಿಳಿದುಬಂದಿದೆ. ಇದರಿಂದ ಅವರ ಫೋನ್ ಹಾಗೂ ಚಾಟ್​ಗಳ ತನಿಖೆ ಅನಗತ್ಯವಾಗಿತ್ತು. ದಾಳಿಯ ಸಂದರ್ಭದಲ್ಲಿ ಕಡ್ಡಾಯ ವಿಡಿಯೋ ರೆಕಾರ್ಡಿಂಗ್ ಮಾಡಬೇಕು ಎನ್ನುವ ಅಂಶವನ್ನೇ ಪಾಲಿಸದಿದ್ದುದು, ಅಕ್ರಮ ನಡೆದಿವೆ ಎನ್ನುವುದಕ್ಕೆ ಪುಷ್ಠಿ ನೀಡಿದೆ ಎಂದು ವರದಿಯಲ್ಲಿ ಹೆಳಲಾಗಿತ್ತು.

ಅಲ್ಲದೇ ಅರ್ಬಾಜ್ ಮರ್ಚಂಟ್ ಬಳಿ ಆರ್ಯನ್ ಖಾನ್ ಡ್ರಗ್ಸ್ ತರಲು ತಿಳಿಸಿರಲಿಲ್ಲ. ಇದನ್ನು ಅರ್ಬಾಜ್ ತನಿಖೆಯ ವೇಳೆ ಬಹಿರಂಗಪಡಿಸಿದ್ದ ಎಂದು ತನಿಖೆಯಿಂದ ಬಹಿರಂಗವಾಗಿದೆ. ಅಲ್ಲದೇ ತನಿಖೆ ಇನ್ನೂ ಪೂರ್ಣಗೊಂಡಿಲ್ಲ. ಕೆಲವು ತಿಂಗಳುಗಳಲ್ಲಿ ಪೂರ್ಣ ವರದಿಯನ್ನು ಎನ್​ಸಿಬಿಯ ಡೈರೆಕ್ಟರ್ ಜನರಲ್ ಎಸ್ ಎನ್ ಪ್ರಧಾನ್ ಅವರಿಗೆ ಸಲ್ಲಿಸಬಹುದು ಎಂದು ಹೆಚ್​ಟಿ ತನ್ನ ವರದಿಯಲ್ಲಿ ಹೇಳಿತ್ತು. ಆದರೆ ಇದೀಗ ಆರ್ಯನ್ ಖಾನ್ ವಿರುದ್ಧ ಈಗಲೇ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ ಎಂದು ಎಸ್​ಐಟಿ ಈ ವರದಿಗಳಿಗೆ ಪ್ರತಿಕ್ರಿಯಿಸಿದೆ.

ಇದನ್ನೂ ಓದಿ:

Aryan Khan: ಸದ್ದಿಲ್ಲದೇ ಚಿತ್ರರಂಗದಲ್ಲಿ ಕೆಲಸ ಶುರು ಮಾಡಿದ್ದಾರಂತೆ ಆರ್ಯನ್ ಖಾನ್; ಆದರೆ ನಾಯಕನಾಗಿ ಅಲ್ಲ!

ಬೆಂಗಳೂರಿನಲ್ಲಿ ಕಾಣಿಸಿಕೊಂಡ ಆರ್ಯನ್​ ಖಾನ್​; ಮಗನ ಹೆಗಲಿಗೆ ದೊಡ್ಡ ಜವಾಬ್ದಾರಿ ಹೊರಿಸಿದ ಶಾರುಖ್​?

Published On - 1:43 pm, Wed, 2 March 22