ಬಾಕ್ಸ್​ ಆಫೀಸ್​ನಲ್ಲಿ ಆಲಿಯಾ ಕಮಾಲ್​; ನಾಲ್ಕೇ ದಿನಕ್ಕೆ 50 ಕೋಟಿ ಸಮೀಪಿಸಿದ ‘ಗಂಗೂಬಾಯಿ..’ ಕಲೆಕ್ಷನ್

ಬಾಕ್ಸ್​ ಆಫೀಸ್​ನಲ್ಲಿ ಆಲಿಯಾ ಕಮಾಲ್​; ನಾಲ್ಕೇ ದಿನಕ್ಕೆ 50 ಕೋಟಿ ಸಮೀಪಿಸಿದ ‘ಗಂಗೂಬಾಯಿ..’ ಕಲೆಕ್ಷನ್
ಆಲಿಯಾ

ಫೆಬ್ರವರಿ 25ರಂದು ‘ಗಂಗೂಬಾಯಿ ಕಾಠಿಯಾವಾಡಿ’ ಸಿನಿಮಾ ಬಿಡುಗಡೆ ಆಗಿತ್ತು. ಈ ಚಿತ್ರ ಮೊದಲ ದಿನ 7 ಕೋಟಿ ರೂಪಾಯಿ ಗಳಿಸಬಹುದು ಎನ್ನುವ ಲೆಕ್ಕಾಚಾರ ಇತ್ತು. ಅಚ್ಚರಿ ಎಂಬಂತೆ ಈ ಸಿನಿಮಾ 10.50 ಕೋಟಿ ರೂಪಾಯಿ ಬಾಚಿಕೊಂಡಿತ್ತು.

TV9kannada Web Team

| Edited By: Rajesh Duggumane

Mar 01, 2022 | 5:11 PM

ನಟಿ ಆಲಿಯಾ ಭಟ್ (Alia Bhatt) ​ ಅವರು ಮತ್ತೊಂದು ಗೆಲುವು ಕಂಡಿದ್ದಾರೆ. ಅವರ ನಟನೆಯ ‘ಗಂಗೂಬಾಯಿ ಕಾಠಿಯಾವಾಡಿ’ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ಗೆದ್ದು ಬೀಗಿದೆ. ಈ ಸಿನಿಮಾಗೆ ಎಲ್ಲ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ಒಳ್ಳೆಯ ಕಮಾಯಿ ಮಾಡುತ್ತಿದೆ. ‘ಗಂಗೂಬಾಯಿ ಕಾಠಿಯಾವಾಡಿ’ (Gangubai Kathiawadi) ಸಿನಿಮಾ ನಾಲ್ಕು ದಿನಕ್ಕೆ ಸುಮಾರು 48 ಕೋಟಿ ಗಳಿಕೆ ಮಾಡಿದೆ. ಸೋಮವಾರವೂ ಚಿತ್ರ ಒಳ್ಳೆಯ ಗಳಿಕೆ ಮಾಡಿರುವುದು ಚಿತ್ರತಂಡದ ಖುಷಿ ಹೆಚ್ಚಿಸಿದೆ. ಇಂದು ಶಿವರಾತ್ರಿ (Shivaratri) ಪ್ರಯುಕ್ತ ರಜೆ ಇರುವುದರಿಂದ ಸಿನಿಮಾದ ಗಳಿಕೆ ಹೆಚ್ಚಬಹುದು ಎನ್ನುವ ಅಭಿಪ್ರಾಯ ಸಿನಿಪಂಡಿತರಿಂದ ವ್ಯಕ್ತವಾಗಿದೆ.

ಫೆಬ್ರವರಿ 25ರಂದು ‘ಗಂಗೂಬಾಯಿ ಕಾಠಿಯಾವಾಡಿ’ ಸಿನಿಮಾ ಬಿಡುಗಡೆ ಆಗಿತ್ತು. ಈ ಚಿತ್ರ ಮೊದಲ ದಿನ 7 ಕೋಟಿ ರೂಪಾಯಿ ಗಳಿಸಬಹುದು ಎನ್ನುವ ಲೆಕ್ಕಾಚಾರ ಇತ್ತು. ಅಚ್ಚರಿ ಎಂಬಂತೆ ಈ ಸಿನಿಮಾ 10.50 ಕೋಟಿ ರೂಪಾಯಿ ಬಾಚಿಕೊಂಡಿತ್ತು. ಶನಿವಾರ (ಫೆಬ್ರವರಿ 26), 13.32 ಕೋಟಿ ರೂಪಾಯಿ, ಭಾನುವಾರ (ಫೆಬ್ರವರಿ 27) 15.30 ಕೋಟಿ ರೂಪಾಯಿ ಗಳಿಸಿತ್ತು. ಈ ಮೂಲಕ ಚಿತ್ರದ ಕಲೆಕ್ಷನ್​ 39.12 ಕೋಟಿ ರುಪಾಯಿ ಆಗಿತ್ತು. ಸೋಮವಾರವೂ ಚಿತ್ರದ ಕಲೆಕ್ಷನ್​ ಕುಗ್ಗಲಿಲ್ಲ. ವಾರದ ಮೊದಲ ದಿನ ಆದರೂ 8.20 ಕೋಟಿ ರೂಪಾಯಿಯನ್ನು ಸಿನಿಮಾ ಗಳಿಸಿದೆ. ಈ ಮೂಲಕ ಚಿತ್ರದ ಕಲೆಕ್ಷನ್​ 47+ ಕೋಟಿ ರೂಪಾಯಿ ಆಗಿದೆ.

ಇಂದು (ಮಾರ್ಚ್​ 1) ಮಹಾ ಶಿವರಾತ್ರಿ. ದೇಶಾದ್ಯಂತ ಈ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಈ ಹಬ್ಬಕ್ಕೆ ಸರ್ಕಾರಿ ರಜೆ ಇದೆ. ಈ ಕಾರಣಕ್ಕೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಚಿತ್ರಮಂದಿರದತ್ತ ಹೆಜ್ಜೆ ಹಾಕಬಹುದು. ಹೀಗಾಗಿ, ಇಂದು ಈ ಸಿನಿಮಾ 10 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಸಾಧ್ಯತೆ ಇದೆ. ಇದರಿಂದ ಸಿನಿಮಾದ ಕಲೆಕ್ಷನ್​ 57 ಕೋಟಿ ದಾಟಬಹುದು ಎಂದು ಊಹಿಸಲಾಗಿದೆ. ಸಿನಿಮಾದ ಕಲೆಕ್ಷನ್​ ಹೀಗೆಯೇ ಮುಂದುವರಿದರೆ ಈ ವಾರಾಂತ್ಯಕ್ಕೆ ಸಿನಿಮಾ 100 ಕೋಟಿ ಕಲೆಕ್ಷನ್​ ಮಾಡಲಿದೆ.

ಆಲಿಯಾಗೆ ಕಂಗನಾ ಮೆಚ್ಚುಗೆ:

ಆಲಿಯಾ ಭಟ್​ ಅವರು ನೆಪೋಟಿಸಂ ಫಲಾಭವಿ ಎಂದು ಕಂಗನಾ ಯಾವಾಗಲೂ ಟೀಕೆ ಮಾಡುತ್ತಾರೆ. ಆ ಕಾರಣಕ್ಕಾಗಿ ಅವರು ಆಲಿಯಾ ನಟನೆಯ ಸಿನಿಮಾಗಳೆಂದರೆ ಮೂಗು ಮುರಿಯುತ್ತಾರೆ. ಆದರೆ ಈ ಬಾರಿ ‘ಗಂಗೂಬಾಯಿ ಕಾಠಿಯಾವಾಡಿ’ ಸಿನಿಮಾಗೆ ಜನರಿಂದ ಸಿಗುತ್ತಿರುವ ಪ್ರತಿಕ್ರಿಯೆ ಕಂಡು ಕಂಗನಾ ಬೆರಗಾಗಿದ್ದಾರೆ. ಹಾಗಾಗಿ ಅವರು ಈ ಚಿತ್ರವನ್ನು ಮನಸಾರೆ ಹೊಗಳಿದ್ದರು. ಇನ್​ಸ್ಟಾಗ್ರಾಮ್​ ಸ್ಟೋರಿ ಮೂಲಕ ತಮ್ಮ ಅನಿಸಿಕೆ ಹಂಚಿಕೊಂಡಿದ್ದರು.

‘ದಕ್ಷಿಣ ಭಾರತದ ಸಿನಿಮಾಗಳ ದಾಖಲೆಯ ಕಲೆಕ್ಷನ್​ನಿಂದಾಗಿ ಚಿತ್ರಮಂದಿರಗಳಲ್ಲಿ ಮತ್ತೆ ಕಳೆ ಬಂದಿದೆ ಎಂಬುದನ್ನು ಕೇಳಿ ಖುಷಿ ಆಯಿತು. ಸೂಪರ್​ ಸ್ಟಾರ್​ ಡೈರೆಕ್ಟರ್​, ಸ್ಟಾರ್​ ಹೀರೋ ಇರುವ ಒಂದು ಮಹಿಳಾ ಪ್ರಧಾನ ಸಿನಿಮಾದಿಂದ ಹಿಂದಿ ಚಿತ್ರರಂಗ ಕೂಡ ಪುಟ್ಟ ಹೆಜ್ಜೆಗಳನ್ನು ಇಡುತ್ತಿದೆ. ಪುಟ್ಟ ಹೆಜ್ಜೆಗಳೇ ಆಗಿರಬಹುದು, ಆದರೆ ಅವು ಮಹತ್ವವಾದವು. ಕಷ್ಟದ ಪರಿಸ್ಥಿತಿಯಲ್ಲಿ ಇರುವ ಚಿತ್ರಮಂದಿರಗಳಿಗೆ ಈ ಬೆಳವಣಿಗೆ ತುಂಬ ಮುಖ್ಯ. ಗ್ರೇಟ್​! ಇಂಥ ಸಂದರ್ಭದಲ್ಲಿ ಮೂವೀ ಮಾಫಿಯಾದವರು ಒಳ್ಳೆಯ ಕೆಲಸ ಮಾಡ್ತಾರೆ ಅಂಥ ನಾನು ನಿರೀಕ್ಷಿಸಿರಲಿಲ್ಲ. ಅವರು ಒಳ್ಳೆಯದು ಮಾಡಿದಾಗ ನಾನು ಖಂಡಿತಾ ಹೊಗಳುತ್ತೇನೆ. ಇನ್ನೂ ಒಳ್ಳೆಯದನ್ನು ನಿರೀಕ್ಷಿಸುತ್ತೇನೆ’ ಎಂದು ಕಂಗನಾ ರಣಾವತ್​ ಅವರು ಬರೆದುಕೊಂಡಿದ್ದರು.

ಇದನ್ನೂ ಓದಿ: ಮದುವೆ ಯಾವಾಗ ಎಂದು ಪದೇಪದೇ ಕೇಳಿದ್ದಕ್ಕೆ ಆಲಿಯಾ ಕೊಟ್ಟ ಉತ್ತರ ಏನು?

ಹೊಸ ಹಾಡಿನಲ್ಲಿ ಸಖತ್ ರೊಮ್ಯಾಂಟಿಕ್​ ಆಗಿ ಕಾಣಿಸಿಕೊಂಡ ಆಲಿಯಾ ಭಟ್​; ಆದರೂ ಮಿತಿ ತಪ್ಪದ ನಟಿ

Follow us on

Related Stories

Most Read Stories

Click on your DTH Provider to Add TV9 Kannada