ಶಿಲ್ಪಾ ಶೆಟ್ಟಿ ಫಿಟ್ ಆಗಿರಲು ಕಾರಣವೇನು? ಬೆಳಿಗ್ಗೆ ಎದ್ದ ತಕ್ಷಣ ಅವರು ಹೀಗೆ ಮಾಡ್ತಾರೆ
ಶಿಲ್ಪಾ ಬೆಳಿಗ್ಗೆ ಎದ್ದ ನಂತರ ಬೆಚ್ಚಗಿನ ನೀರನ್ನು ಕುಡಿಯುತ್ತಾರೆ . ಬೆಚ್ಚಗಿನ ನೀರು ದೇಹದಿಂದ ವಿಷವನ್ನು ಹೊರಹಾಕುತ್ತದೆ. ಇದು ಚರ್ಮವನ್ನು ಸ್ವಚ್ಛಗೊಳಿಸುತ್ತದೆ. ಶಿಲ್ಪಾ ಕೂಡ ನೀರಿನಲ್ಲಿ ಆಮ್ಲಾ ಜ್ಯೂಸ್ ಕುಡಿಯುತ್ತಾರೆ. ಆಮ್ಲಾ ವಿಟಮಿನ್ ಸಿ ಯಲ್ಲಿ ಸಮೃದ್ಧವಾಗಿದೆ.
ನಟಿ ಶಿಲ್ಪಾ ಶೆಟ್ಟಿಯ ಪರಿಚಯದ ಬಗ್ಗೆ ಮತ್ತೆ ಹೊಸದಾಗಿ ಹೇಳಬೇಕಿಲ್ಲ. ಹಲವು ಸಿನಿಮಾಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಅನೇಕ ಬೋಲ್ಡ್ ಮತ್ತು ಗ್ಲಾಮರಸ್ ಪಾತ್ರಗಳಲ್ಲಿ ಅವರು ಮಿಂಚಿದ್ದಾರೆ. ಶಿಲ್ಪಾ ಅವರ ಮೇಲಿನ ಅಭಿಮಾನ ಇಂದಿಗೂ ಕಡಿಮೆಯಾಗಿಲ್ಲ. ಇಂದು ಶಿಲ್ಪಾ ಬಾಲಿವುಡ್‌ನಲ್ಲಿ ಮೊದಲಿನಷ್ಟು ಆ್ಯಕ್ಟೀವ್ ಆಗಿಲ್ಲವಾದರೂ ಒಂದಿಲ್ಲೊಂದು ಕಾರಣಕ್ಕೆ ಸದಾ ಸುದ್ದಿಯಲ್ಲಿರುತ್ತಾರೆ. ನಟಿಯ ಫಿಟ್ನೆಸ್ ಮತ್ತು ಸೌಂದರ್ಯದ ಬಗ್ಗೆ ನಿರಂತರ ಚರ್ಚೆ ಇರುತ್ತದೆ. ಇಂದಿನ ನಟಿಯರು ಕೂಡ ಶಿಲ್ಪಾ ಅವರ ಸೌಂದರ್ಯ ನೋಡಿ ನಾಚುತ್ತಾರೆ. ಅವರ ಅಭ್ಯಾಸಗಳ ಬಗ್ಗೆ ಇಲ್ಲಿದೆ ವಿವರ.
49ರ ಹರೆಯದಲ್ಲೂ ಶಿಲ್ಪಾ ಸೌಂದರ್ಯ ಕಡಿಮೆಯಾಗಿಲ್ಲ. ಇಂದಿಗೂ ಶಿಲ್ಪಾ 90ರ ದಶಕದಲ್ಲಿ ಎಷ್ಟು ಫಿಟ್ ಆ್ಯಂಡ್ ಬ್ಯೂಟಿಫುಲ್ ಆಗಿ ಕಾಣಿಸಿಕೊಂಡಿದ್ದರೋ ಹಾಗೆಯೇ ಇದ್ದಾರೆ. ಹಾಗಾದರೆ ಶಿಲ್ಪಾ ಸೌಂದರ್ಯದ ಹಿಂದಿನ ರಹಸ್ಯವೇನು ಎಂದು ತಿಳಿಯೋಣ. ಶಿಲ್ಪಾ ಶೆಟ್ಟಿ ದೊಡ್ಡ ಫಿಟ್‌ನೆಸ್ ಫ್ರೀಕ್ ಮತ್ತು ನಟಿ ತಮ್ಮ ಬಗ್ಗೆ ತುಂಬಾ ಕಾಳಜಿ ವಹಿಸುತ್ತಾರೆ.
ಫಿಟ್ ಆಗಿರಲು ಶಿಲ್ಪಾ ಏನು ಮಾಡುತ್ತಾರೆ?
ಸಂದರ್ಶನವೊಂದರಲ್ಲಿ ಈ ಬಗ್ಗೆ ಶಿಲ್ಪಾ ಹೇಳಿಕೊಂಡಿದ್ದರು. ‘ನಾನು ಬೆಳಿಗ್ಗೆ ಎದ್ದ ನಂತರ ಬೆಚ್ಚಗಿನ ನೀರನ್ನು ಕುಡಿಯುತ್ತೇನೆ. ಇದರಿಂದ ನೀರು ದೇಹದಿಂದ ವಿಷವನ್ನು ಹೊರಹಾಕುತ್ತದೆ. ಇದು ಚರ್ಮವನ್ನು ಸ್ವಚ್ಛಗೊಳಿಸುತ್ತದೆ. ಆಮ್ಲಾ ಜ್ಯೂಸ್ ಕುಡಿಯುತ್ತೇನೆ. ಇದರಲ್ಲಿ ವಿಟಾಮಿನ್ ಸಿ ಸಮೃದ್ಧವಾಗಿರುತ್ತದೆ. ಇದು ಚರ್ಮದ ಕಾಂತಿ ಹೆಚ್ಚಿಸಲು ಸಹಾಯ ಮಾಡುತ್ತದೆ’ ಎಂದಿದ್ದರು ಅವರು.
ಶಿಲ್ಪಾ ತಮ್ಮ ಮುಖವನ್ನು ತೇವಗೊಳಿಸುವುದನ್ನು ಮರೆಯುವುದಿಲ್ಲ. ಅವರು ಚರ್ಮವನ್ನು ಮಾಯ್ಚರೈಸ್ ಮಾಡುತ್ತಾರೆ. ಇದು ಚರ್ಮವು ಮೃದುವಾಗಿ ಇರಿಸುತ್ತದೆ. ಇದು ಮುಖದ ಮೇಲೆ ಸುಕ್ಕುಗಳನ್ನು ಉಂಟುಮಾಡುವುದಿಲ್ಲ. ಶಿಲ್ಪಾ ನಿಯಮಿತವಾಗಿ ಯೋಗ ಮತ್ತು ಧ್ಯಾನವನ್ನು ಮಾಡುತ್ತಾರೆ. ಇದು ನಟಿಯ ದೇಹ ಮತ್ತು ಚರ್ಮ ಎರಡನ್ನೂ ಆರೋಗ್ಯವಾಗಿರಿಸುತ್ತದೆ.
ಶಿಲ್ಪಾ ಶೆಟ್ಟಿ ಯಾವಾಗಲೂ ತಮ್ಮ ವರ್ಕೌಟ್‌ಗಳ ಚಿತ್ರಗಳು ಮತ್ತು ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುತ್ತಾರೆ. ಇದಲ್ಲದೇ ಅಭಿಮಾನಿಗಳಿಗೆ ವರ್ಕೌಟ್ ಟಿಪ್ಸ್ ಕೂಡ ನೀಡುತ್ತಾರೆ. ಶಿಲ್ಪಾ ಅವರ ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಸದ್ಯ ಶಿಲ್ಪಾ ಅವರ ಫಿಟ್ನೆಸ್ ಬಗ್ಗೆ ಮಾತ್ರ ಎಲ್ಲೆಡೆ ಚರ್ಚೆಯಾಗುತ್ತಿದೆ.
ಇದನ್ನೂ ಓದಿ: ಆಸ್ತಿ ಸೀಜ್ ಆದರೂ ಇಲ್ಲ ಚಿಂತೆ; 3 ಕೋಟಿ ರೂ. ಕೊಟ್ಟು ವಿದೇಶಿ ಕಾರು ಖರೀದಿಸಿದ ಶಿಲ್ಪಾ ಶೆಟ್ಟಿ
ಶಿಲ್ಪಾ ಅವರು ಮೊದಲಿನಂತೆ ಬಾಲಿವುಡ್‌ನಲ್ಲಿ ಸಕ್ರಿಯವಾಗಿಲ್ಲದಿದ್ದರೂ, ಅವರು ಯಾವಾಗಲೂ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲೂ ಅವರಿಗೆ ಅಪಾರ ಅಭಿಮಾನಿಗಳಿದ್ದಾರೆ. ನಟಿ ತಮ್ಮ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿರಲು ಬಯಸುತ್ತಾರೆ. ನಟಿಯ ಪ್ರತಿ ಪೋಸ್ಟ್‌ಗೆ ಅಭಿಮಾನಿಗಳು ಲೈಕ್‌ಗಳು ಮತ್ತು ಕಾಮೆಂಟ್‌ಗಳನ್ನು ಸುರಿಸುತ್ತಿದ್ದಾರೆ. ಅವರು ಕನ್ನಡದ ‘ಕೆಡಿ’ ಚಿತ್ರದಲ್ಲಿ ನಟಿಸಿದ್ದಾರೆ. ಧ್ರುವ ಸರ್ಜಾ ಈ ಚಿತ್ರಕ್ಕೆ ಹೀರೋ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.