ರಿಲೀಸ್​ಗೂ ಮೊದಲೇ ‘ಫೈಟರ್​’ಗೆ ಶಾಕ್; ಈ ದೇಶಗಳಲ್ಲಿ ಸಿನಿಮಾ ಬ್ಯಾನ್

| Updated By: ರಾಜೇಶ್ ದುಗ್ಗುಮನೆ

Updated on: Jan 24, 2024 | 10:43 AM

ಸಿದ್ದಾರ್ಥ್ ಆನಂದ್ ಅವರು ‘ಫೈಟರ್’ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಈ ಸಿನಿಮಾದ ಟ್ರೇಲರ್ ಇತ್ತೀಚೆಗೆ ರಿಲೀಸ್ ಆಗಿ ಸದ್ದು ಮಾಡಿದೆ. ಈಗ ರಿಲೀಸ್​ಗೆ ಒಂದು ದಿನ ಇರುವಾಗ ಸಿನಿಮಾ ಮೇಲೆ ಬ್ಯಾನ್ ಹೇರಲಾಗಿದೆ.  

ರಿಲೀಸ್​ಗೂ ಮೊದಲೇ ‘ಫೈಟರ್​’ಗೆ ಶಾಕ್; ಈ ದೇಶಗಳಲ್ಲಿ ಸಿನಿಮಾ ಬ್ಯಾನ್
ಫೈಟರ್ ಪೋಸ್ಟರ್
Follow us on

ಹೃತಿಕ್ ರೋಷನ್ ಹಾಗೂ ದೀಪಿಕಾ ಪಡುಕೋಣೆ (Deepiaka Padukone) ನಟನೆಯ ‘ಫೈಟರ್’ ಸಿನಿಮಾ ಜನವರಿ 25ರಂದು ರಿಲೀಸ್ ಆಗಲಿದೆ. ಈ ಸಿನಿಮಾ ಬಗ್ಗೆ ಅಭಿಮಾನಿಗಳಲ್ಲಿ ಸಾಕಷ್ಟು ನಿರೀಕ್ಷೆ ಇದೆ. ಈ ಚಿತ್ರದಲ್ಲಿ ಸಾಕಷ್ಟು ಆ್ಯಕ್ಷನ್ ದೃಶ್ಯಗಳು ಇರಲಿವೆ ಎಂಬುದಕ್ಕೆ ಟ್ರೇಲರ್​ನಲ್ಲಿ ಸಾಕ್ಷಿ ಸಿಕ್ಕಿದೆ. ಹಾಗಂತ ಈ ಸಿನಿಮಾದಲ್ಲಿ ಇರೋದು ಭೂಮಿಯಲ್ಲಿ ನಡೆಯೋ ಕಾದಾಟ ಇಲ್ಲ. ಫೈಟರ್​ ಜೆಟ್​ಗಳ ಮೂಲಕ ಆಗಸದಲ್ಲಿ ಕಿತ್ತಾಡಿಕೊಳ್ಳುತ್ತಾರೆ. ಈ ಸಿನಿಮಾಗೆ ಹಿನ್ನಡೆ ಆಗಿದೆ. ಸಿದ್ದಾರ್ಥ್ ಆನಂದ್ ನಟನೆಯ ಈ ಸಿನಿಮಾ ಯುಎಇ ಹೊರತುಪಡಿಸಿ ಗಲ್ಫ್ ರಾಷ್ಟ್ರಗಳಲ್ಲಿ ಬ್ಯಾನ್ ಆಗಿದೆ.

ನಿರ್ಮಾಪಕ ಹಾಗೂ ಸಿನಿಮಾ ಎಕ್ಸ್​ಪರ್ಟ್​ ಗಿರೀಶ್ ಜೋಹರ್ ಅವರು ಈ ಬಗ್ಗೆ ಬರೆದುಕೊಂಡಿದ್ದಾರೆ. ಸಿನಿಮಾದಲ್ಲಿ ಆ್ಯಕ್ಷೇಪಾರ್ಹ ವಿಚಾರ ಇರುವ ಕಾರಣದಿಂದಲೇ ರಿಲೀಸ್​ಗೆ ತಡೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಯಾವುದನ್ನು ಅಲ್ಲಿನ ಸೆನ್ಸಾರ್ ಮಂಡಳಿಯವರು ಆಕ್ಷೇಪಾರ್ಹ ಎಂದು ಪರಿಗಣಿಸಿದ್ದಾರೆ ಎಂಬುದು ಇನ್ನಷ್ಟೇ ತಿಳಿಯಬೇಕಿದೆ.

ಸಿದ್ದಾರ್ಥ್ ಆನಂದ್ ಅವರು ‘ಫೈಟರ್’ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಈ ಚಿತ್ರವನ್ನು ‘ವಯಕಾಮ್ 18  ಸ್ಟುಡಿಯೋಸ್’ ಹಾಗೂ ‘ಮಾರ್ಲಿಫ್ಲಿಕ್ಸ್ ಪಿಕ್ಚರ್ಸ್’ ನಿರ್ಮಾಣ ಮಾಡಿದೆ. ಈ ಸಿನಿಮಾದ ಟ್ರೇಲರ್ ಇತ್ತೀಚೆಗೆ ರಿಲೀಸ್ ಆಗಿ ಸದ್ದು ಮಾಡಿತ್ತು. ಈಗ ರಿಲೀಸ್​ಗೆ ಒಂದು ದಿನ ಇರುವಾಗ ಸಿನಿಮಾ ಮೇಲೆ ಬ್ಯಾನ್ ಹೇರಲಾಗಿದೆ.

ಇದನ್ನೂ ಓದಿ: ‘ಫೈಟರ್​’ ಸಿನಿಮಾದಲ್ಲಿ ಯುದ್ಧ ವಿಮಾನಗಳ ಸೆಣೆಸಾಟ; ಹೇಗಿದೆ ನೋಡಿ ಟ್ರೇಲರ್​..

‘ಫೈಟರ್’ ಚಿತ್ರಕ್ಕೆ ಭಾರತದಲ್ಲಿ ‘U/A’ ಪ್ರಮಾಣ ಪತ್ರ ನೀಡಲಾಗಿದೆ. ಸಿನಿಮಾಗೆ ಎರಡು ಕಡೆ ಕತ್ತರಿ ಹಾಕುವಂತೆ ಸೂಚಿಸಿದೆ. ಫೈಟರ್ ಸಿನಿಮಾದ ಅವಧಿ 2 ಗಂಟೆ 46 ನಿಮಿಷ ಇದೆ.  ಈ ಚಿತ್ರ 3ಡಿಯಲ್ಲೂ ಮೂಡಿ ಬಂದಿದೆ ಅನ್ನೋದು ವಿಶೇಷ. ಈ ಚಿತ್ರವನ್ನು ಕಣ್ತುಂಬಿಕೊಳ್ಳಲು ಕಾದಿದ್ದಾರೆ.

‘ಫೈಟರ್’ ಬಗ್ಗೆ

ಕಳೆದ ವರ್ಷ ನಿರ್ದೇಶಕ ಸಿದ್ದಾರ್ಥ್ ಆನಂದ್ ಅವರು ‘ಪಠಾಣ್’ ನಿರ್ಮಾಣ ಮಾಡಿ ಗೆಲುವು ಕಂಡಿದ್ದರು. ಈ ಚಿತ್ರದಲ್ಲಿ ಶಾರುಖ್ ಖಾನ್ ನಟಿಸಿದ್ದರು. ಈ ಬಾರಿ ಅವರು ‘ಫೈಟರ್’ ಸಿನಿಮಾ ಮೂಲಕ ಬರುತ್ತಿದ್ದಾರೆ. ಸಿದ್ದಾರ್ಥ್ ಆನಂದ್ ಅವರು ಈ ಬಾರಿ ಬೇರೆ ರೀತಿಯ ಆ್ಯಕ್ಷನ್ ತರುತ್ತಿದ್ದಾರೆ. ಗಾಳಿಯಲ್ಲಿ ನಡೆಯೋ ಫೈಟ್​ ನೋಡಲು ಫ್ಯಾನ್ಸ್ ಕಾದಿದ್ದಾರೆ. ಹೃತಿಕ್ ರೋಷನ್ ಹಾಗೂ ದೀಪಿಕಾ ಪಡುಕೋಣೆ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ