ಮೊದಲ ಚಿತ್ರಕ್ಕೆ 100 ರೂಪಾಯಿ ಸಂಭಾವನೆ, ಈಗ ಪಡೆಯೋದು 100 ಕೋಟಿ ರೂಪಾಯಿ; ಯಾರು ಈ ಹೀರೋ?

| Updated By: ರಾಜೇಶ್ ದುಗ್ಗುಮನೆ

Updated on: Sep 19, 2023 | 12:11 PM

ರಾಕೇಶ್ ರೋಷನ್ ಅವರ ಮಗ ಹೃತಿಕ್ ರೋಷನ್. ಅವರು ಬಾಲ ಕಲಾವಿದನಾಗಿ ನಟಿಸಿದ್ದರು. ಜೆ. ಓಂ ಪ್ರಶಾಕ್ ನಿರ್ದೇಶನದ ‘ಆಶಾ’ ಸಿನಿಮಾದಲ್ಲಿ ಮೊದಲ ಬಾರಿಗೆ ಹೃತಿಕ್ ನಟಿಸಿದರು. ಈ ಚಿತ್ರ ರಿಲೀಸ್ ಆಗಿದ್ದು 1980ರಲ್ಲಿ. ಆಗ ಹೃತಿಕ್ ವಯಸ್ಸು ಕೇವಲ 6 ವರ್ಷ. ‘ಭಗ್ವಾನ್ ದಾದಾ’ ಸಿನಿಮಾದಲ್ಲಿ ರಜನಿಕಾಂತ್ ದತ್ತು ಪುತ್ರನಾಗಿ ನಟಿಸಿದ್ದರು.

ಮೊದಲ ಚಿತ್ರಕ್ಕೆ 100 ರೂಪಾಯಿ ಸಂಭಾವನೆ, ಈಗ ಪಡೆಯೋದು 100 ಕೋಟಿ ರೂಪಾಯಿ; ಯಾರು ಈ ಹೀರೋ?
ಹೃತಿಕ್ ರೋಷನ್
Follow us on

ಚಿತ್ರರಂಗದಲ್ಲಿ ಸ್ಟಾರ್​ ಹೀರೋಗಳು ಹುಟ್ಟಿಕೊಳ್ಳುತ್ತಲೇ ಇರುತ್ತಾರೆ. ಒಂದು ಸಿನಿಮಾ ಸೂಪರ್ ಹಿಟ್ ಆದ ಬಳಿಕ ಅವರ ಸಂಭಾವನೆ ಹೆಚ್ಚುತ್ತದೆ. ಶಾರುಖ್ ಖಾನ್, ಸಲ್ಮಾನ್ ಖಾನ್, ರಜನಿಕಾಂತ್ (Rajinikanth), ದಳಪತಿ ವಿಜಯ್, ಆಮಿರ್ ಖಾನ್ ಸೇರಿ ಅನೇಕರು ಪ್ರತಿ ಸಿನಿಮಾಗೆ ನೂರು ಕೋಟಿ ರೂಪಾಯಿ ಪಡೆಯುತ್ತಾರೆ. ಹಾಗಂತ ಈ ಎಲ್ಲಾ ಹೀರೋಗಳು ಮೊದಲ ಸಂಭಾವನೆ ದೊಡ್ಡ ಮೊತ್ತದಲ್ಲಿ ಇರಲಿಲ್ಲ. ಅವರು ಕಡಿಮೆ ಸಂಭಾವನೆಯಿಂದ ನೂರಾರು ಕೋಟಿ ರೂಪಾಯಿ ಪಡೆಯುವವರೆಗೆ ಬಂದು ನಿಂತಿದ್ದಾರೆ. ಈ ಸಾಲಿನಲ್ಲಿ ಹೃತಿಕ್ ರೋಷನ್ ಕೂಡ ಇದ್ದಾರೆ. ಅವರ ಮೊದಲ ಸಂಭಾವನೆ ಕೇವಲ 100 ರೂಪಾಯಿ ಆಗಿತ್ತು! ಈಗ ಪ್ರತಿ ಸಿನಿಮಾಗೆ 100 ಕೋಟಿ ರೂಪಾಯಿವರೆಗೆ ಪಡೆಯುತ್ತಾರೆ.

ರಾಕೇಶ್ ರೋಷನ್ ಅವರ ಮಗ ಹೃತಿಕ್ ರೋಷನ್. ಅವರು ಬಾಲ ಕಲಾವಿದನಾಗಿ ನಟಿಸಿದ್ದರು. ಜೆ. ಓಂ ಪ್ರಶಾಕ್ ನಿರ್ದೇಶನದ ‘ಆಶಾ’ ಸಿನಿಮಾದಲ್ಲಿ ಮೊದಲ ಬಾರಿಗೆ ಹೃತಿಕ್ ನಟಿಸಿದರು. ಈ ಚಿತ್ರ ರಿಲೀಸ್ ಆಗಿದ್ದು 1980ರಲ್ಲಿ. ಆಗ ಹೃತಿಕ್ ವಯಸ್ಸು ಕೇವಲ 6 ವರ್ಷ. ‘ಭಗ್ವಾನ್ ದಾದಾ’ ಸಿನಿಮಾದಲ್ಲಿ ರಜನಿಕಾಂತ್ ದತ್ತು ಪುತ್ರನಾಗಿ ನಟಿಸಿದ್ದರು. ಆಗ ಅವರಿಗೆ 10 ವರ್ಷ. ರಾಕೇಶ್ ರೋಶನ್ ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು ಹೃತಿಕ್ ರೋಷನ್.

‘ಆಶಾ’ ಸಿನಿಮಾದಲ್ಲಿ ನಟಿಸಲು ಹೃತಿಕ್ ರೋಷನ್ ಅವರು ಪಡೆದಿದ್ದು ಕೇವಲ 100 ರೂಪಾಯಿ ಮಾತ್ರ. ಇದು ಅವರ ಮೊದಲ ಸಂಭಾವನೆ. ಆ ಬಳಿಕ ಅವರು ಹಲವು ಸಿನಿಮಾಗಳಲ್ಲಿ ಬಾಲ ಕಲಾವಿದನಾಗಿ ನಟಿಸಿದರು. ಸಿನಿಮಾ ಹೀರೋ ಆಗಬೇಕು ಎಂಬುದು ಅವರ ಕನಸಾಗಿತ್ತು. ಆದರೆ, ಹೃತಿಕ್ ಶಿಕ್ಷಣ ಮೊದಲು ಪೂರ್ಣಗೊಳಿಸಲಿ ಎಂಬುದು ರಾಕೇಶ್ ಅವರ ಆಸೆ ಆಗಿತ್ತು. ಹೀಗಾಗಿ, ಶಿಕ್ಷಣ ಪಡೆದು ನಂತರ ನಟನೆಗೆ ಬರುವಂತೆ ಸೂಚಿಸಿದರು.

ಕೆಲವು ಸಿನಿಮಾಗಳಲ್ಲಿ ಹೃತಿಕ್ ಅವರು ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದರು. 2000ನೇ ಇಸವಿಯಲ್ಲಿ ರಿಲೀಸ್ ಆದ ‘ಕಹೋ ನಾ ಪ್ಯಾರ್ ಹೈ’ ಚಿತ್ರದಲ್ಲಿ ಅವರು ಮೊದಲ ಬಾರಿಗೆ ಹೀರೋ ಆದರು. ಈ ಚಿತ್ರದ ಮೂಲಕ ಅವರು ಫೇಮಸ್ ಆದರು.  2003ರಲ್ಲಿ ರಿಲೀಸ್ ಆದ ‘ಕೊಯಿ ಮಿಲ್ ಗಯಾ’ ಸಿನಿಮಾದಿಂದ ಹೃತಿಕ್ ವೃತ್ತಿ ಬದುಕೇ ಬದಲಾಯಿತು. ಎರಡು ಶೇಡ್​ನ ಪಾತ್ರದಲ್ಲಿ ಗಮನ ಸೆಳೆದರು. ಈ ಚಿತ್ರವನ್ನು ಅವರ ತಂದೆ ರಾಕೇಶ್ ಅವರೇ ನಿರ್ದೇಶನ ಮಾಡಿದ್ದರು.

ಆ ಬಳಿಕ ಹೃತಿಕ್ ‘ಧೂಮ್ 2’, ‘ಕ್ರಿಶ್’, ‘ಕ್ರಿಶ್ 3’, ‘ವಾರ್’ ಮೊದಲಾದ ಸೂಪರ್ ಹಿಟ್  ಸಿನಿಮಾಗಳನ್ನು ಹೃತಿಕ್ ರೋಷನ್ ನೀಡಿದ್ದಾರೆ. ಹೃತಿಕ್ ರೋಷನ್ ಅವರು ಪ್ರತಿ ಚಿತ್ರಕ್ಕೆ 85-100 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಇವರು ಬ್ರ್ಯಾಂಡ್​ಗಳ ಪ್ರಚಾರಕ್ಕೆ 10-12 ಕೋಟಿ ರೂಪಾಯಿ ಪಡೆಯುತ್ತಾರೆ. ಅವರು ಸೋಶಿಯಲ್ ಮೀಡಿಯಾದಲ್ಲಿ ಬ್ರ್ಯಾಂಡ್​ಗಳ ಪ್ರಚಾರಕ್ಕೆ 2ರಿಂದ 3 ಕೋಟಿ ರೂಪಾಯಿ ಹಣ ಪಡೆಯುತ್ತಾರೆ. HRX ಹೆಸರಿನ ಸ್ಪೋರ್ಟ್ಸ್​ ಬಟ್ಟೆ ಬ್ರ್ಯಾಂಡ್ ಹೊಂದಿದ್ದಾರೆ.

ಇದನ್ನೂ ಓದಿ: ಏಳು ತಿಂಗಳ ಬಳಿಕ ಒಟಿಟಿಗೆ ಬಂದ ಹೃತಿಕ್ ರೋಷನ್ ಸಿನಿಮಾ ತಲುಪಲಿದೆ 40 ಕೋಟಿ ಜನರಿಗೆ

ಸದ್ಯ ಹೃತಿಕ್ ರೋಷನ್ ಅವರು ‘ಫೈಟರ್’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಮಾಸ್ ಆ್ಯಕ್ಷನ್ ಸಿನಿಮಾಗಳನ್ನು ನೀಡಿರುವ ಸಿದ್ದಾರ್ಥ್ ಆನಂದ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ದೀಪಿಕಾ ಪಡುಕೋಣೆ ಈ ಚಿತ್ರಕ್ಕೆ ನಾಯಕಿ. ಮುಂದಿನ ವರ್ಷ ಜನವರಿ 25ರಂದು ಸಿನಿಮಾ ರಿಲೀಸ್ ಆಗಲಿದೆ. ಜೂನಿಯರ್ ಎನ್​ಟಿಆರ್ ಜೊತೆ ‘ವಾರ್ 2’ ಸಿನಿಮಾದಲ್ಲಿ ಹೃತಿಕ್ ನಟಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ