War 2 shooting: ಕಂಡು ಕೇಳರಿಯದ ಆ್ಯಕ್ಷನ್​ಗೆ ಹೃತಿಕ್​ ರೋಷನ್​ ಸಜ್ಜು

|

Updated on: Feb 15, 2024 | 6:14 PM

ಫೆ.23ರಿಂದ ‘ವಾರ್​ 2’ ಸಿನಿಮಾದ ಚಿತ್ರೀಕರಣ ಆರಂಭ ಆಗಲಿದೆ ಎಂದು ವರದಿ ಆಗಿದೆ. ಈ ಚಿತ್ರದಲ್ಲಿ ಹೃತಿಕ್​ ರೋಷನ್​ ಅವರ ಇಂಟ್ರಡಕ್ಷನ್​ ದೃಶ್ಯವೇ ಭರ್ಜರಿ ಆ್ಯಕ್ಷನ್​ನಿಂದ ಕೂಡಿರಲಿದೆ. 2 ವಾರಗಳ ಕಾಲ ಒಂದೇ ಆ್ಯಕ್ಷನ್​ ದೃಶ್ಯದ ಚಿತ್ರೀಕರಣ ನಡೆಯಲಿದೆ ಎಂಬ ಸುದ್ದಿ ಕೇಳಿ ಫ್ಯಾನ್ಸ್​ ಖುಷಿಯಾಗಿದೆ. ಅದ್ದೂರಿ ಬಜೆಟ್​ನಲ್ಲಿ ಈ ಸಿನಿಮಾ ಮೂಡಿಬರಲಿದೆ.

War 2 shooting: ಕಂಡು ಕೇಳರಿಯದ ಆ್ಯಕ್ಷನ್​ಗೆ ಹೃತಿಕ್​ ರೋಷನ್​ ಸಜ್ಜು
ಹೃತಿಕ್ ರೋಷನ್​
Follow us on

ಬಾಲಿವುಡ್​ ನಟ ಹೃತಿಕ್ ರೋಷನ್​ (Hrithik Roshan) ಅವರ ಸಿನಿಮಾಗಳಲ್ಲಿ ಅಭಿಮಾನಿಗಳು ಭರ್ಜರಿ ಆ್ಯಕ್ಷನ್​ ಬಯಸುತ್ತಾರೆ. ಫ್ಯಾನ್ಸ್​ ನಿರೀಕ್ಷೆಗೆ ತಕ್ಕಂತೆಯೇ ‘ವಾರ್​ 2’ ಸಿನಿಮಾ (War 2 Movie) ಮೂಡಿಬರಲಿದೆ. ಈ ಸಿನಿಮಾದಲ್ಲಿ ಹೃತಿಕ್​ ರೋಷನ್​ ಜೊತೆ ಜೂನಿಯರ್​ ಎನ್​ಟಿಆರ್​ ಕೂಡ ನಟಿಸಲಿರುವುದರಿಂದ ಅಭಿಮಾನಿಗಳ ಕಾತರ ಇನ್ನಷ್ಟು ಹೆಚ್ಚಾಗಿದೆ. ಈಗ ಈ ಸಿನಿಮಾದ ಶೂಟಿಂಗ್​ ಬಗ್ಗೆ ಒಂದು ಮಾಹಿತಿ ಸಿಕ್ಕಿದೆ. ವರದಿಗಳ ಪ್ರಕಾರ, ಹೃತಿಕ್​ ರೋಷನ್​ ಅವರು ಮುಂದಿನ ವಾರದಿಂದ ‘ವಾರ್​ 2’ ಸಿನಿಮಾಗೆ ಚಿತ್ರೀಕರಣ (War 2 Shooting) ಆರಂಭಿಸಲಿದ್ದಾರೆ. ವಿಶೇಷ ಏನೆಂದರೆ, ಆ್ಯಕ್ಷನ್​ ದೃಶ್ಯಗಳ ಮೂಲಕವೇ ಶೂಟಿಂಗ್​ ಪ್ರಾರಂಭಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ಆ್ಯಕ್ಷನ್​ ಸಿನಿಮಾಗಳ ಮೂಲ ಅಯಾನ್​ ಮುಖರ್ಜಿ ಫೇಮಸ್​ ಆಗಿದ್ದಾರೆ. ಈಗ ಅವರು ‘ವಾರ್​ 2’ ಸಿನಿಮಾಗೆ ಆ್ಯಕ್ಷನ್​-ಕಟ್​ ಹೇಳಲು ಸಜ್ಜಾಗಿದ್ದಾರೆ. ಈ ಸಿನಿಮಾದಲ್ಲಿ ಮಾಸ್​ ಅಭಿಮಾನಿಗಳಿಗೆ ಭರ್ಜರಿ ಮನರಂಜನೆ ನೀಡಲು ಚಿತ್ರತಂಡ ನಿರ್ಧರಿಸಿದಂತಿದೆ. ಹಾಗಾಗಿ ಶುರುವಿನಲ್ಲೇ ಸಾಹಸ ದೃಶ್ಯಗಳ ಚಿತ್ರೀಕರಣ ಮಾಡಲು ನಿರ್ಧರಿಸಲಾಗಿದೆ. ಅದಕ್ಕಾಗಿ ಹೃತಿಕ್​ ರೋಷನ್​ ಅವರು ಈಗಾಗಲೇ ಸಕಲ ತಯಾರಿ ಮಾಡಿಕೊಂಡಿದ್ದಾರೆ.

ಫೆಬ್ರವರಿ 23ರಿಂದ ‘ವಾರ್​ 2’ ಶೂಟಿಂಗ್​ ಶುರುವಾಗಲಿದೆ. ಈ ಸಿನಿಮಾದಲ್ಲಿನ ಹೀರೋ ಇಂಟ್ರಡಕ್ಷನ್​ ದೃಶ್ಯವೇ ಆ್ಯಕ್ಷನ್​ಮಯವಾಗಿ ಇರಲಿದೆ. ಎರಡು ವಾರಗಳ ಕಾಲ ಒಂದೇ ಫೈಟಿಂಗ್​ ದೃಶ್ಯದ ಶೂಟಿಂಗ್ ನಡೆಯಲಿದೆ. ಅಂದರೆ, ಈ ಸಿನಿಮಾದಲ್ಲಿ ಕಂಡು ಕೇಳರಿಯದಂತಹ ಸಾಹಸ ಸನ್ನಿವೇಶಗಳನ್ನು ಪ್ರೇಕ್ಷಕರಿಗೆ ತೋರಿಸಲು ಚಿತ್ರತಂಡ ಪ್ಲ್ಯಾನ್​ ಮಾಡಿಕೊಂಡಿದೆ.

ಇದನ್ನೂ ಓದಿ: ‘ವಾರ್​ 2’ ಚಿತ್ರಕ್ಕಾಗಿ ಬಾಲಿವುಡ್ ಹೀರೋಗಳಿಗಿಂತಲೂ ಹೆಚ್ಚು ಸಂಭಾವನೆ ಪಡೆದ ಜೂನಿಯರ್ ಎನ್​ಟಿಆರ್

‘ವಾರ್​ 2’ ಸಿನಿಮಾಗಾಗಿ ಹೃತಿಕ್​ ರೋಷನ್​ ಅವರು ತಮ್ಮ ದೇಹಕ್ಕೆ ನಿರ್ದಿಷ್ಟ ಶೇಪ್​ ನೀಡುತ್ತಿದ್ದಾರೆ. ಅದರ ಸಲುವಾಗಿ ಜಿಮ್​ನಲ್ಲಿ ಕಸರತ್ತು ನಡೆಯುವಾಗ ಇತ್ತೀಚೆಗೆ ಅವರಿಗೆ ಪೆಟ್ಟಾಗಿತ್ತು. ಆದರೆ ಅದು ಗಂಭೀರವಾಗಿ ಗಾಯ ಅಲ್ಲದ ಕಾರಣ ಅವರು ಬಹಳ ಬೇಗ ಸುಧಾರಿಸಿಕೊಂಡಿದ್ದಾರೆ. ಸಖತ್​ ವರ್ಕೌಟ್​ ಮಾಡಿ ‘ವಾರ್ 2’ ಸಿನಿಮಾದ ಶೂಟಿಂಗ್​ಗೆ ಅವರು ಸಜ್ಜಾಗಿದ್ದಾರೆ.

ಈವರೆಗೂ ಯಶ್​ರಾಜ್​ ಫಿಲ್ಮ್ಸ್​ ಸ್ಪೈ ಯೂನಿವರ್ಸ್​ನಲ್ಲಿ ಮೂಡಿಬಂದ ಸಿನಿಮಾಗಳಿಗಿಂತಲೂ ಸಂಪೂರ್ಣ ಭಿನ್ನವಾಗಿ ‘ವಾರ್​ 2’ ಸಿನಿಮಾ ಮೂಡಿಬರಬೇಕು ಎಂಬುದು ನಿರ್ದೇಶಕ ಅಯಾನ್​ ಮುಖರ್ಜಿ ಮತ್ತು ನಿರ್ಮಾಪಕ ಆದಿತ್ಯ ಚೋಪ್ರಾ ಅವರ ಉದ್ದೇಶ. ಅದಕ್ಕಾಗಿ ಅವರು ಸ್ಕ್ರಿಪ್ಟ್​ ಬಗ್ಗೆ ಸಾಕಷ್ಟು ಕಾಳಜಿ ವಹಿಸಿದ್ದಾರೆ. 2025ರ ಆಗಸ್ಟ್​ 14ರಂದು ಈ ಸಿನಿಮಾ ಬಿಡುಗಡೆ ಆಗಲಿದೆ. ಹೃತಿಕ್​ ರೋಷನ್​ ಮತ್ತು ಜೂನಿಯರ್​ ಎನ್​ಟಿಆರ್​ ಅವರು ಇದೇ ಮೊದಲ ಬಾರಿಗೆ ತೆರೆಹಂಚಿಕೊಳ್ಳುತ್ತಿರುವುದರಿಂದ ನಿರೀಕ್ಷೆ ಮುಗಿಲು ಮುಟ್ಟಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.