‘ನಾನು ಅಪ್ಪ ಆಗಿದ್ದೇನೆ’; ಸಾರ್ವಜನಿಕವಾಗಿ ಖುಷಿಯಿಂದ ಸಂಭ್ರಮಿಸಿದ ರಣವೀರ್ ಸಿಂಗ್
ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ 2018ರಲ್ಲಿ ಮದುವೆ ಆದರು. ವಿವಾಹ ಆದ ಆರು ವರ್ಷಗಳ ಬಳಿಕ ಇವರು ಹೆಣ್ಣು ಮಗುವನ್ನು ಸ್ವಾಗತಿಸಿದ್ದಾರೆ. ಸೆಪ್ಟೆಂಬರ್ 8ರಂದು ಇವರ ಮದುವೆ ನಡೆದಿದೆ. ‘ಹೆಣ್ಣು ಮಗು ಜನಿಸಿದೆ. 8-9-2024’ ಎಂದು ಬರೆಯಲಾಗಿತ್ತು. ಈಗ ಅವರು ತಂದೆ ಆದ ಖುಷಿಯನ್ನು ಹೊರಹಾಕಿದ್ದಾರೆ.
ಬಾಲಿವುಡ್ ನಟಿ ದೀಪಿಕಾ ಪಡುಕೋಣೆಗೆ ಇತ್ತೀಚೆಗೆ ಹೆಣ್ಣು ಮಗು ಜನಿಸಿದೆ. ಈ ಮೂಲಕ ರಣವೀರ್ ಸಿಂಗ್ ತಂದೆ ಆಗಿದ್ದಾರೆ. ಅವರು ಮಗು ಜನಿಸಿದ ಬಳಿಕ ಸಾರ್ವಜನಿಕವಾಗಿ ಕಾಣಿಸಿಕೊಂಡಿರಲಿಲ್ಲ. ಈಗ ಅವರು ಮಗುವಿನ ಆಗಮನವನ್ನು ಸಂಭ್ರಮಿಸಿದ್ದಾರೆ. ಸಾರ್ವಜನಿಕವಾಗಿ ಕಾಣಿಸಿಕೊಂಡ ಅವರು ‘ತಂದೆ ಆಗಿದ್ದೇನೆ’ ಎಂದಿದ್ದಾರೆ.
ರಿಲೈನ್ಸ್ ಫೌಂಡೇಷನ್ ಹಾಗೂ ನೀತಾ ಅಂಬಾನಿ ಅವರು ಇತ್ತೀಚೆಗೆ ಕಾರ್ಯಕ್ರಮ ಒಂದನ್ನು ಹಮ್ಮಿಕೊಂಡಿದ್ದಾರೆ. ಪ್ಯಾರಾಒಲಂಪಿಕ್ನಲ್ಲಿ ಪದಕ ತಂದವರನ್ನು ಗೌರವಿಸಲು ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಅವರು ಈ ಕಾರ್ಯಕ್ರಮದಲ್ಲಿ ಭಾಗಿ ಆಗಿ ಆದರು. ಈ ವೇಳೆ ಪಾಪರಾಜಿಗಳನ್ನು ನೋಡುತ್ತಿದ್ದಂತೆ ಎಗ್ಸೈಟ್ ಆದ ರಣವೀರ್ ತಂದೆ ಆದ ಖುಷಿಯನ್ನು ಎಲ್ಲರ ಎದುರು ವ್ಯಕ್ತಪಡಿಸಿದ್ದಾರೆ.
ಪಾಪರಾಜಿಗಳ ಕಡೆಗೆ ನಡೆದ ರಣವೀರ್ ಸಿಂಗ್ ಅವರು, ‘ನಾನು ತಂದೆ ಆಗಿದ್ದೇನೆ’ ಎಂದು ಹೆಮ್ಮೆಯಿಂದ ಹೇಳಿಕೊಂಡರು. ಅವರಿಗೆ ಎಲ್ಲರೂ ಶುಭಾಶಯ ತಿಳಿಸಿದರು. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗುತ್ತಿದೆ. ‘ಎಷ್ಟು ವಿನಮ್ರವಾಗಿ ನಡೆದುಕೊಂಡಿದ್ದಾರೆ’ ಎಂದು ಕೆಲವರು ಬರೆದುಕೊಂಡಿದ್ದಾರೆ. ಇನ್ನೂ ಕೆಲವರು ‘ಈಗತಾನೇ ಅಪ್ಪ ಆದ ಖುಷಿ ನೋಡಿ’ ಎಂದು ಬರೆದುಕೊಂಡಿದ್ದಾರೆ.
View this post on Instagram
ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ 2018ರಲ್ಲಿ ಮದುವೆ ಆದರು. ವಿವಾಹ ಆದ ಆರು ವರ್ಷಗಳ ಬಳಿಕ ಇವರು ಹೆಣ್ಣು ಮಗುವನ್ನು ಸ್ವಾಗತಿಸಿದ್ದಾರೆ. ಸೆಪ್ಟೆಂಬರ್ 8ರಂದು ಇವರ ಮದುವೆ ನಡೆದಿದೆ. ‘ಹೆಣ್ಣು ಮಗು ಜನಿಸಿದೆ. 8-9-2024’ ಎಂದು ಬರೆಯಲಾಗಿತ್ತು.
ಇದನ್ನೂ ಓದಿ: ಕನ್ನಡದಲ್ಲೇ ದೀಪಿಕಾ ಎದುರು ಪ್ರೀತಿ ವ್ಯಕ್ತಪಡಿಸಿದ್ದ ರಣವೀರ್ ಸಿಂಗ್
ರಣವೀರ್ ಸಿಂಗ್ ಅವರು ರೋಹಿತ್ ಶೆಟ್ಟಿ ನಿರ್ದೇಶನದ ‘ಸಿಂಗಂ ಅಗೇನ್’ ಸಿನಿಮಾದಲ್ಲಿ ರಣವೀರ್ ಸಿಂಗ್ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಅಜಯ್ ದೇವಗನ್, ಕರೀನಾ ಕಪೂರ್, ದೀಪಿಕಾ ಪಡುಕೋಣೆ, ಅಕ್ಷಯ್ ಕುಮಾರ್ ಮೊದಲಾದ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ ಇದರ ಜೊತೆಗೆ ಆದಿತ್ಯ ಧಾರ್ ನಿರ್ದೇಶನ ಮಾಡುತ್ತಿರುವ ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಅಕ್ಷಯ್ ಕುಮಾರ್, ಆರ್. ಮಾಧವನ್ ಮತ್ತು ಅರ್ಜುನ್ ರಾಂಪಾಲ್ ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ಈ ಚಿತ್ರಕ್ಕಾಗಿ 15 ಕೆಜಿ ತೂಕ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಅವರು ಕೊನೆಯದಾಗಿ ನಟಿಸಿದ್ದು ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸಿನಿಮಾದಲ್ಲಿ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 2:26 pm, Mon, 30 September 24