ಈ ತಪ್ಪು ನಡೆದರೆ ಮಗಳ ಕೆನ್ನೆಗೆ ಹೊಡೆಯಲು ಹಿಂದೆಮುಂದೆ ನೋಡಲ್ಲ ಎಂದಿದ್ದ ಸಾರಾ ತಾಯಿ

| Updated By: ರಾಜೇಶ್ ದುಗ್ಗುಮನೆ

Updated on: Nov 24, 2023 | 12:31 PM

ಅಮೃತಾಗಿಂತ ಮುಂಚೆ ಸೈಫ್‌ ಅನೇಕರ ಜೊತೆ ಸುತ್ತಾಟ ನಡೆಸಿದ್ದರು. ಅಮೃತಾ ಅವರನ್ನು ಭೇಟಿಯಾದ ನಂತರ ಅವರು ನೇರವಾಗಿ ಮದುವೆಯಾಗಲು ನಿರ್ಧರಿಸಿದರು. ಇಬ್ಬರೂ 1991ರಲ್ಲಿ ಗುಟ್ಟಾಗಿ ಮದುವೆಯಾದರು.

ಈ ತಪ್ಪು ನಡೆದರೆ ಮಗಳ ಕೆನ್ನೆಗೆ ಹೊಡೆಯಲು ಹಿಂದೆಮುಂದೆ ನೋಡಲ್ಲ ಎಂದಿದ್ದ ಸಾರಾ ತಾಯಿ
ಅಮೃತಾ-ಸಾರಾ
Follow us on

ನಟಿ ಸಾರಾ ಅಲಿ ಖಾನ್ (Sara Ali Khan) ಅವರು ಅಮೃತಾ ಸಿಂಗ್ ಮತ್ತು ಸೈಫ್ ಅಲಿ ಖಾನ್ ಅವರ ಪುತ್ರಿ. ಸೈಫ್ ಜೊತೆಗಿನ ವಿಚ್ಛೇದನದ ನಂತರ ಅಮೃತಾ ಅವರು ಮಕ್ಕಳಾದ ಸಾರಾ ಮತ್ತು ಇಬ್ರಾಹಿಂ ಅವರನ್ನು ಬೆಳೆಸಿದರು. ಸಾರಾಗೆ ತಾಯಿ ಬಗ್ಗೆ ತುಂಬಾನೇ ಕಾಳಜಿ ಇದೆ. ಮಗಳು ನನ್ನಂತೆ ಮದುವೆ ಆದರೆ ಅವಳ ಕೆನ್ನೆಗೆ ಹೊಡೆಯುತ್ತೇನೆ ಎಂದು ಅಮೃತಾ ಸಿಂಗ್ (Amrita Singh) ಈ ಮೊದಲು ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದರು.

ಅಮೃತಾಗಿಂತ ಮುಂಚೆ ಸೈಫ್‌ ಅನೇಕರ ಜೊತೆ ಸುತ್ತಾಟ ನಡೆಸಿದ್ದರು. ಅಮೃತಾ ಅವರನ್ನು ಭೇಟಿಯಾದ ನಂತರ ಅವರು ನೇರವಾಗಿ ಮದುವೆಯಾಗಲು ನಿರ್ಧರಿಸಿದರು. ಇಬ್ಬರೂ 1991ರಲ್ಲಿ ಗುಟ್ಟಾಗಿ ಮದುವೆಯಾದರು. ಆ ಬಳಿಕ ಇವರ ಮದುವೆ ವಿಚಾರ ಹೊರಬಿತ್ತು. ಇಬ್ಬರ ಮಧ್ಯೆ 12 ವರ್ಷಗಳ ವಯಸ್ಸಿನ ಅಂತರವಿತ್ತು. ಆರಂಭದಲ್ಲಿ ಸೈಫ್-ಅಮೃತಾ ಚೆನ್ನಾಗಿಯೇ ಇದ್ದರು. ಮದುವೆಯಾಗಿ 13 ವರ್ಷಗಳ ನಂತರ ಸೈಫ್ ಮತ್ತು ಅಮೃತಾ ಬೇರ್ಪಟ್ಟರು. ಅಮೃತಾ ಸಿಂಗ್ ನಿರ್ಧಾರ ಅನೇಕರಿಗೆ ಅಚ್ಚರಿ ತಂದಿತ್ತು.

ಮಗಳ ಕೆನ್ನೆಗೆ ಬಾರಿಸುತ್ತೇನೆ..

ಸಂದರ್ಶನವೊಂದರಲ್ಲಿ ಅಮೃತಾ ಅವರು ಮಗಳು ಸಾರಾ ಮದುವೆ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು. ‘ನನ್ನಂತೆ ನನ್ನ ಮಗಳು ಗುಟ್ಟಾಗಿ, ಸಣ್ಣ ವಯಸ್ಸಿನಲ್ಲಿ ಮದುವೆಯಾಗುವ ತಪ್ಪು ಮಾಡಿದರೆ ನಾನು ಅವಳ ಕೆನ್ನೆಗೆ ಹೊಡೆಯುತ್ತೇನೆ. ನನ್ನ ಮಕ್ಕಳು ಅದೇ ತಪ್ಪನ್ನು ಪುನರಾವರ್ತಿಸುವುದು ನನಗೆ ಇಷ್ಟವಿಲ್ಲ’ ಎಂದು ಅಮೃತಾ ಹೇಳಿದ್ದರು. ವಿಚ್ಛೇದನದ ಬಳಿಕ ಅಮೃತಾ ಮರುಮದುವೆಯಾಗಲಿಲ್ಲ. ಆದರೆ ಸೈಫ್ ಅಲಿ ಖಾನ್ ಅವರು ನಟಿ ಕರೀನಾ ಕಪೂರ್ ಜೊತೆ ಮದುವೆ ಆದರು. ಕರೀನಾ ಮತ್ತು ಸೈಫ್‌ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.

ಇದನ್ನೂ ಓದಿ: ‘ಪ್ರತೀ ಬಾರಿ ಇದೇ ಡ್ರಾಮಾ’; ಹೊಡೆದಾಟದ ಹಂತಕ್ಕೆ ಹೋಯ್ತು ಬಿಗ್ ಬಾಸ್ ಟಾಸ್ಕ್​

ವಿಚ್ಛೇದನಕ್ಕೆ ಕಾರಣ ಏನು?

ಇಟಾಲಿಯನ್ ಮಾಡೆಲ್ ಮತ್ತು ನಟಿ ರೋಸಾ ಕ್ಯಾಟಲಾನೊ ಅವರೊಂದಿಗೆ ಸೈಫ್ ಅವರ ಸಂಬಂಧ ಹೊಂದಿದ್ದರು ಎನ್ನಲಾಗಿದೆ. ಈ ಕಾರಣದಿಂದಲೇ ಸೈಫ್ ಹಾಗೂ ಅಮೃತಾ ವಿಚ್ಛೇದನ ಪಡೆದರು ಎನ್ನುವ ಮಾತಿದೆ. ಆದರೆ ಇದನ್ನು ಸೈಫ್ ಅಲ್ಲ ಗಳೆಯುತ್ತಾರೆ. ‘ಅಮೃತಾಳ ಸ್ವಭಾವ ಬದಲಾಯಿತು. ಹೀಗಾಗಿ ನಮ್ಮ ಸಂಬಂಧ ಮುರಿದುಬಿತ್ತು’ ಎಂದು ಸೈಫ್ ವಿವರಿಸಿದ್ದರು.

ಸಾರಾ ಹೇಳೋದೇನು?

‘ನನ್ನ ತಾಯಿ ನಗುವುದನ್ನು ಮರೆತಿದ್ದರು. ಅವರ ದಾಂಪತ್ಯದಲ್ಲಿ ಸಂತೋಷ ಇರಲಿಲ್ಲ. ಒಟ್ಟಿಗೆ ಅತೃಪ್ತರಾಗುವುದಕ್ಕಿಂತ ಬೇರ್ಪಡುವುದು ಉತ್ತಮ ಎಂದು ಅವರು ಭಾವಿಸಿದರು. ತಂದೆಗೆ ವಿಚ್ಛೇದನ ನೀಡಿದ್ದು ಅವರ ಅತ್ಯುತ್ತಮ ನಿರ್ಧಾರದಲ್ಲಿ ಒಂದು. ಬಹಳ ವರ್ಷಗಳ ನಂತರ ಇಬ್ಬರೂ ತಮ್ಮ ಜೀವನದಲ್ಲಿ ಸಂತೋಷವಾಗಿದ್ದೇವೆ’ ಎಂದಿದ್ದರು ಸಾರಾ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ