AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಾರಾ ಅಲಿ ಖಾನ್ ಓಪನ್ ಟಾಕ್ ಬಗ್ಗೆ ಅಪ್ಸೆಟ್ ಆದ ಕಾರ್ತಿಕ್ ಆರ್ಯನ್?

ಕಾರ್ತಿಕ್ ಆಡಿದ ಮಾತುಗಳು ಸಾಕಷ್ಟು ಅರ್ಥಗಳನ್ನು ಹೊಂದಿದೆ ಎಂದು ಅನೇಕರು ಮಾತನಾಡಿಕೊಳ್ಳುತ್ತಿದ್ದಾರೆ. ಇವುಗಳು ನೇರವಾಗಿ ಸಾರಾ ಹಾಗೂ ಅನನ್ಯಾ ಅವರನ್ನು ಉದ್ದೇಶಿಸಿ ಹೇಳಿದ ಮಾತು ಎಂದು ಕೂಡ ಹೇಳಲಾಗುತ್ತಿದೆ.

ಸಾರಾ ಅಲಿ ಖಾನ್ ಓಪನ್ ಟಾಕ್ ಬಗ್ಗೆ ಅಪ್ಸೆಟ್ ಆದ ಕಾರ್ತಿಕ್ ಆರ್ಯನ್?
ಸಾರಾ-ಕಾರ್ತಿಕ್
Follow us
ರಾಜೇಶ್ ದುಗ್ಗುಮನೆ
|

Updated on: Nov 23, 2023 | 10:29 AM

‘ಕಾಫಿ ವಿತ್ ಕರಣ್’ ಶೋನಲ್ಲಿ ಎದುರಾಗುವ ಬಹುತೇಕ ವಿಚಾರಗಳು ಕಾಂಟ್ರವರ್ಸಿ ಹುಟ್ಟುಹಾಕುತ್ತವೆ. ಲವ್​, ಅಫೇರ್ ಕುರಿತು ಹೆಚ್ಚಿನ ಪ್ರಶ್ನೆ ಕೇಳಲಾಗುತ್ತದೆ. ಬಂದ ಅತಿಥಿಗಳು ನೀಡುವ ಉತ್ತರ ಮತ್ತೊಬ್ಬರ ಬದುಕಿನ ಮೇಲೆ ಪ್ರಭಾವ ಬೀರುತ್ತವೆ. ಇತ್ತೀಚೆಗೆ ಬಾಲಿವುಡ್ ನಟಿ ಸಾರಾ ಅಲಿ ಖಾನ್ (Sara Ali Khan) ಹಾಗೂ ಅನನ್ಯಾ ಪಾಂಡೆ ಅವರು ಈ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಈ ವೇಳೆ ಕಾರ್ತಿಕ್ ಆರ್ಯನ್ ವಿಚಾರ ಚರ್ಚೆಗೆ ಬಂದಿದೆ. ಈ ಸಂದರ್ಭದಲ್ಲಿ ಅವರು ಆಡಿದ ಮಾತುಗಳಿಂದ ಕಾರ್ತಿಕ್ ಅಪ್ಸೆಟ್ ಆಗಿದ್ದಾರೆ.

ಕಾರ್ತಿಕ್ ಆರ್ಯನ್ ಜೊತೆ ಅನನ್ಯಾ ಹಾಗೂ ಸಾರಾ ಇಬ್ಬರೂ ಡೇಟ್ ಮಾಡಿದ್ದಾರೆ ಎನ್ನಲಾಗಿದೆ. ಕರಣ್ ಜೋಹರ್ ಈ ಬಗ್ಗೆ ಕೇಳಿದಾಗ ಸಾರಾ ಹಾಗೂ ಅನನ್ಯಾ ನೋ ಎಂದು ಹೇಳಿಲ್ಲ. ಇನ್ನು, ಎಕ್ಸ್ ಜೊತೆ ಫ್ರೆಂಡ್ ಆಗಿರುವುದು ಎಷ್ಟು ಕಷ್ಟ ಎಂಬುದನ್ನು ಸಾರಾ ವಿವರಿಸಿದ್ದರು. ಈ ಎಲ್ಲಾ ಮಾತುಗಳು ಕಾರ್ತಿಕ್ ಅವರ ಅಸಮಾಧಾನಕ್ಕೆ ಕಾರಣ ಆಗಿದೆ. ಅವರು ಸಂದರ್ಶನ ಒಂದರಲ್ಲಿ ಹೇಳಿದ ಮಾತು ಸಾರಾಗೆ ಹೇಳಿದ ರೀತಿಯಲ್ಲಿ ಇದೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.

‘ನಾನು ನಂಬುವ ಒಂದು ವಿಚಾರ ಎಂದರೆ ರಿಲೇಶನ್​ಶಿಪ್ ಇಬ್ಬರ ಮಧ್ಯೆ ಇದ್ದಾಗ ಇನ್ನೊಬ್ಬ ವ್ಯಕ್ತಿ ಅದರ ಬಗ್ಗೆ ಮಾತನಾಡಬಾರದು. ನಾವೆಲ್ಲರೂ ನಮ್ಮ ಸಂಬಂಧಗಳನ್ನು ಗೌರವಿಸಬೇಕು. ನನ್ನ ಸಂಗಾತಿಯಿಂದ ನಾನು ನಿರೀಕ್ಷಿಸುವುದು ಅದನ್ನೇ. ರಿಲೇಶನ್​ಶಿಪ್​ ಬಗ್ಗೆ ಯಾರ್ಯಾರೋ ಮಾತನಾಡುವುದು ಸರಿಯಲ್ಲ. ನೀವು ಯಾರೊಂದಿಗಾದರೂ ಇದ್ದಾಗ ಆ ಸಂಬಂಧ ಕೊನೆಗೊಳ್ಳುತ್ತದೆ ಎಂದು ನೀವು ಊಹಿಸುವುದಿಲ್ಲ’ ಎಂದಿದ್ದಾರೆ ಕಾರ್ತಿಕ್ ಆರ್ಯನ್.

ಕಾರ್ತಿಕ್ ಆಡಿದ ಮಾತುಗಳು ಸಾಕಷ್ಟು ಅರ್ಥಗಳನ್ನು ಹೊಂದಿದೆ ಎಂದು ಅನೇಕರು ಮಾತನಾಡಿಕೊಳ್ಳುತ್ತಿದ್ದಾರೆ. ಇವುಗಳು ನೇರವಾಗಿ ಸಾರಾ ಹಾಗೂ ಅನನ್ಯಾ ಅವರನ್ನು ಉದ್ದೇಶಿಸಿ ಹೇಳಿದ ಮಾತು ಎಂದು ಕೂಡ ಹೇಳಲಾಗುತ್ತಿದೆ.

ಇದನ್ನೂ ಓದಿ: ‘ನೀನು ನನ್ನ ಹುಡುಗನನ್ನು ನೋಡಿದ್ರೆ ಹೊಡೆಯುತ್ತೇನೆ’; ಅನನ್ಯಾಗೆ ಬೆದರಿಕೆ ಹಾಕಿದ್ದ ಸಾರಾ ಅಲಿ ಖಾನ್​

ಕಾರ್ತಿಕ್ ಆರ್ಯನ್ ನಟನೆಯ ‘ಶೆಹಜಾದ’ ಹಾಗೂ ‘ಸತ್ಯಪ್ರೇಮ್​ ಕಿ ಕಥಾ’ ಈ ವರ್ಷ ರಿಲೀಸ್ ಆಯಿತು. ‘ಶೆಹಜಾದ’ ಸಿನಿಮಾ ಹೀನಾಯವಾಗಿ ಸೋತರೆ, ‘ಸತ್ಯಪ್ರೇಮ್ ಕಿ ಕಥಾ’ ಸಾಧಾರಣ ಹಿಟ್ ಎನಿಸಿಕೊಂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಜೈನ ಮುನಿಗಳಿಂದ ಪ್ರಧಾನಿ ಮೋದಿಗೆ ಧರ್ಮ ಚಕ್ರವರ್ತಿ ಬಿರುದು ಪ್ರದಾನ
ಜೈನ ಮುನಿಗಳಿಂದ ಪ್ರಧಾನಿ ಮೋದಿಗೆ ಧರ್ಮ ಚಕ್ರವರ್ತಿ ಬಿರುದು ಪ್ರದಾನ
ಧೂಮಪಾನ ಮತ್ತು ಡ್ರಗ್ಸ್ ಸೇವನೆ ಅಪಾಯಕಾರಿಯಾಗಿ ಪರಿಣಮಿಸುತ್ತಿದೆ: ಡಾ ಸದಾನಂದ
ಧೂಮಪಾನ ಮತ್ತು ಡ್ರಗ್ಸ್ ಸೇವನೆ ಅಪಾಯಕಾರಿಯಾಗಿ ಪರಿಣಮಿಸುತ್ತಿದೆ: ಡಾ ಸದಾನಂದ
ಮಳೆಯಿಂದ ಚಾರ್ ಧಾಮ್ ಯಾತ್ರೆಗೆ ಅಡ್ಡಿ; ಕೇದಾರನಾಥ ಮಾರ್ಗದಲ್ಲಿ ಭೂಕುಸಿತ
ಮಳೆಯಿಂದ ಚಾರ್ ಧಾಮ್ ಯಾತ್ರೆಗೆ ಅಡ್ಡಿ; ಕೇದಾರನಾಥ ಮಾರ್ಗದಲ್ಲಿ ಭೂಕುಸಿತ
ಸ್ಕಂದಗಿರಿ ಮತ್ತು ಬಹುನಂದೀಶ್ವವರ ದೇವಸ್ಥಾನಕ್ಕೂ ನೋ ಎಂಟ್ರಿ: ಜಿಲ್ಲಾಡಳಿತ
ಸ್ಕಂದಗಿರಿ ಮತ್ತು ಬಹುನಂದೀಶ್ವವರ ದೇವಸ್ಥಾನಕ್ಕೂ ನೋ ಎಂಟ್ರಿ: ಜಿಲ್ಲಾಡಳಿತ
ಬೌಲಿಂಗ್ ಕೋಚ್ ಜೊತೆ WWE ಆಡಿ ಸೋತ ಅರ್ಷದೀಪ್, ಆಕಾಶ್
ಬೌಲಿಂಗ್ ಕೋಚ್ ಜೊತೆ WWE ಆಡಿ ಸೋತ ಅರ್ಷದೀಪ್, ಆಕಾಶ್
ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಮುಖಾಮುಖಿಯಾಗುವುದನ್ನು ತಪ್ಪಿಸಿದ ಪೊಲೀಸ್
ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಮುಖಾಮುಖಿಯಾಗುವುದನ್ನು ತಪ್ಪಿಸಿದ ಪೊಲೀಸ್
ಪುರಿ ಜಗನ್ನಾಥ ರಥಯಾತ್ರೆಯಲ್ಲಿ ಭಕ್ತರಿಗೆ ಪ್ರಸಾದ ತಯಾರಿಸಿದ ಗೌತಮ್ ಅದಾನಿ
ಪುರಿ ಜಗನ್ನಾಥ ರಥಯಾತ್ರೆಯಲ್ಲಿ ಭಕ್ತರಿಗೆ ಪ್ರಸಾದ ತಯಾರಿಸಿದ ಗೌತಮ್ ಅದಾನಿ
ಅಂಬೇಡ್ಕರ್​ ಅವರನ್ನು ಕಾಂಗ್ರೆಸ್ ಯಾವತ್ತೂ ಗೌರವಿಸಲಿಲ್ಲ: ಸಿಟಿ ರವಿ
ಅಂಬೇಡ್ಕರ್​ ಅವರನ್ನು ಕಾಂಗ್ರೆಸ್ ಯಾವತ್ತೂ ಗೌರವಿಸಲಿಲ್ಲ: ಸಿಟಿ ರವಿ
ಅಧಿಕಾರಕ್ಕಾಗಿ ಆಸೆಪಟ್ಟವನಲ್ಲ, 50 ವರ್ಷಗಳಿಂದ ರಾಜಕೀಯದಲ್ಲಿದ್ದೇವೆ: ಶಾಸಕ
ಅಧಿಕಾರಕ್ಕಾಗಿ ಆಸೆಪಟ್ಟವನಲ್ಲ, 50 ವರ್ಷಗಳಿಂದ ರಾಜಕೀಯದಲ್ಲಿದ್ದೇವೆ: ಶಾಸಕ
ವಿನಯ್ ರಾಜ್​ಕುಮಾರ್ ಹೃದಯದಲ್ಲಿ ಯಾರ ಹೆಸರಿದೆ? ಅವರೇ ಕೊಟ್ಟ ಉತ್ತರ
ವಿನಯ್ ರಾಜ್​ಕುಮಾರ್ ಹೃದಯದಲ್ಲಿ ಯಾರ ಹೆಸರಿದೆ? ಅವರೇ ಕೊಟ್ಟ ಉತ್ತರ