Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನೀನು ನನ್ನ ಹುಡುಗನನ್ನು ನೋಡಿದ್ರೆ ಹೊಡೆಯುತ್ತೇನೆ’; ಅನನ್ಯಾಗೆ ಬೆದರಿಕೆ ಹಾಕಿದ್ದ ಸಾರಾ ಅಲಿ ಖಾನ್​

‘ಕಾಫಿ ವಿತ್​ ಕರಣ್​‘ ಶೋನಲ್ಲಿ ಖಾಸಗಿ ವಿಷಯಗಳ ಬಗ್ಗೆ ಮುಲಾಜಿಲ್ಲದೇ ಪ್ರಶ್ನೆ ಕೇಳಲಾಗುತ್ತದೆ. ಇದರಿಂದ ಅನೇಕ ಬಾರಿ ವಿವಾದ ಆಗಿದ್ದು ಕೂಡ ಉಂಟು. ಅದೇ ಕಾರಣಕ್ಕಾಗಿ ಕೆಲವರು ಈ ಶೋಗೆ ಬರಲು ಹಿಂದೇಟು ಹಾಕುತ್ತಾರೆ. ಇದರ ಹೊಸ ಎಪಿಸೋಡ್​ನಲ್ಲಿ ಸಾರಾ ಅಲಿ ಖಾನ್​ ಮತ್ತು ಅನನ್ಯಾ ಪಾಂಡೆ ಭಾಗಿಯಾಗಿದ್ದಾರೆ.

‘ನೀನು ನನ್ನ ಹುಡುಗನನ್ನು ನೋಡಿದ್ರೆ ಹೊಡೆಯುತ್ತೇನೆ’; ಅನನ್ಯಾಗೆ ಬೆದರಿಕೆ ಹಾಕಿದ್ದ ಸಾರಾ ಅಲಿ ಖಾನ್​
ಸಾರಾ ಅಲಿ ಖಾನ್​, ಅನನ್ಯಾ ಪಾಂಡೆ
Follow us
ಮದನ್​ ಕುಮಾರ್​
|

Updated on: Nov 09, 2023 | 11:50 AM

ಬಾಲಿವುಡ್​ನಲ್ಲಿ ನಟಿಯರಾದ ಸಾರಾ ಅಲಿ ಖಾನ್ (Sara Ali Khan)​ ಮತ್ತು ಅನನ್ಯಾ ಪಾಂಡೆ ಅವರು ಬೇಡಿಕೆ ಸೃಷ್ಟಿಸಿಕೊಂಡಿದ್ದಾರೆ. ಇಬ್ಬರೂ ಕೂಡ ಸ್ಟಾರ್​ ಕಿಡ್ಸ್​. ಹಾಗಾಗಿ ಅವರಿಗೆ ಚಿತ್ರರಂಗದಲ್ಲಿ ಅವಕಾಶಗಳು ಬಹಳ ಬೇಗ ಸಿಕ್ಕಿವೆ. ಈಗ ಇಬ್ಬರೂ ಜೊತೆಯಾಗಿ ‘ಕಾಫಿ ವಿತ್​ ಕರಣ್​ ಸೀಸನ್​ 8’ (Koffee With Karan) ಶೋನಲ್ಲಿ ಅತಿಥಿಗಳಾಗಿ ಭಾಗವಹಿಸಿದ್ದಾರೆ. ನಿರೂಪಕ ಕರಣ್​ ಜೋಹರ್​ ಅವರು ಈ ನಟಿಯರಿಗೆ ಅನೇಕ ಪ್ರಶ್ನೆಗಳನ್ನು ಕೇಳಿದ್ದಾರೆ. ಈ ವೇಳೆ ಕೆಲವು ಇಂಟರೆಸ್ಟಿಂಗ್ ವಿಚಾರಗಳು ಹೊರಗೆ ಬಂದಿವೆ. ಅನನ್ಯಾ ಪಾಂಡೆ (Ananya Pandey) ಮತ್ತು ಸಾರಾ ಅಲಿ ಖಾನ್​ ಅವರು ಒಬ್ಬನೇ ಹುಡುಗನ ಮೇಲೆ ಕಣ್ಣು ಹಾಕಿದ್ದರು ಎಂಬುದು ಈಗ ಬಹಿರಂಗ ಆಗಿದೆ.

‘ಚಿತ್ರರಂಗದಲ್ಲಿ ಯಾರ ಮೇಲೂ ನಾನು ಅಸಹಜವಾದ ನಿರೀಕ್ಷೆಗಳನ್ನು ಇಟ್ಟುಕೊಂಡಿಲ್ಲ. ನೀನು ಇಷ್ಟಪಡುವ ಹುಡುಗನನ್ನು ನಾನು ನೋಡುವುದಿಲ್ಲ ಅಥವಾ ಆತನ ಜೊತೆ ನಾನು ಸಿನಿಮಾ ಮಾಡುವುದಿಲ್ಲ ಅಂತ ಬೇರೆಯವರು ಹೇಳಲಿ ಅಂತ ನಾನು ನಿರೀಕ್ಷಿಸಿಲ್ಲ’ ಎಂದು ಸಾರಾ ಅಲಿ ಖಾನ್​ ಅವರು ಹೇಳಿದರು. ಆಗಲೇ ಅನನ್ಯಾ ಪಾಂಡೆ ಅವರು ಅಸಲಿ ವಿಚಾರ ಬಾಯಿ ಬಿಟ್ಟರು. ‘ಆ ಹುಡುಗನನ್ನು ನೋಡಿದರೆ ಹೊಡೆಯುತ್ತೇನೆ ಅಂತ ಸಾರಾ ನನಗೆ ಅನೇಕ ಬಾರಿ ಹೇಳಿದ್ದಾಳೆ’ ಎಂದರು ಅನನ್ಯಾ ಪಾಂಡೆ. ಆದರೆ ಈ ಹುಡುಗ ಯಾರು ಎಂಬುದನ್ನು ಮಾತ್ರ ಅವರು ಬಾಯಿ ಬಿಡಲಿಲ್ಲ.

‘ನನಗೆ ಆ ಹುಡುಗನ ಮೇಲೆ ಏನೂ ಇಂಟರೆಸ್ಟ್​ ಇರಲಿಲ್ಲ. ಆದರೂ ಇವಳು ಬೆದರಿಕೆ ಹಾಕಿದಳು’ ಎಂದು ಅನನ್ಯಾ ಪಾಂಡೆ ಹೇಳಿದ್ದಾರೆ. ನಟ ಕಾರ್ತಿಕ್​ ಆರ್ಯನ್​ ಜೊತೆ ಅನನ್ಯಾ ಪಾಂಡೆ ಅವರು ‘ಪತಿ ಪತ್ನಿ ಔರ್​ ವೋ’ ಸಿನಿಮಾದಲ್ಲಿ ನಟಿಸಿದ್ದರು. ಸಾರಾ ಅಲಿ ಖಾನ್​ ಮತ್ತು ಕಾರ್ತಿಕ್​ ಆರ್ಯನ್​ ಅವರು ‘ಲವ್​ ಆಜ್​ ಕಲ್​’ ಸಿನಿಮಾದಲ್ಲಿ ಅಭಿನಯಿಸಿದ್ದರು. ಕಾರ್ತಿಕ್​ ಆರ್ಯನ್​ ಜೊತೆ ಅನನ್ಯಾ ಹಾಗೂ ಸಾರಾ ಅಲಿ ಖಾನ್​ ಇಬ್ಬರೂ ಡೇಟಿಂಗ್​ ಮಾಡಿದ್ದರು ಎಂಬ ಗಾಸಿಪ್​ ಇದೆ. ಹಾಗಾಗಿ ‘ಕಾಫಿ ವಿತ್​ ಕರಣ್​’ ಶೋನಲ್ಲಿ ಈ ನಟಿಯರಿಬ್ಬರು ಪರೋಕ್ಷವಾಗಿ ಪ್ರಸ್ತಾಪ ಮಾಡಿದ್ದು ಕಾರ್ತಿಕ್​ ಆರ್ಯನ್​ ಬಗ್ಗೆಯೇ ಎಂದು ನೆಟ್ಟಿಗರು ಊಹಿಸಿದ್ದಾರೆ.

ಇದನ್ನೂ ಓದಿ: ಹಾಟ್​​ ಅವತಾರದಲ್ಲಿ ಕಾಣಿಸಿಕೊಂಡ ಸಾರಾ ಅಲಿ ಖಾನ್

‘ಕಾಫಿ ವಿತ್​ ಕರಣ್​‘ ಶೋನಲ್ಲಿ ಖಾಸಗಿ ವಿಷಯಗಳ ಬಗ್ಗೆ ಮುಲಾಜಿಲ್ಲದೇ ಪ್ರಶ್ನೆ ಕೇಳಲಾಗುತ್ತದೆ. ಇದರಿಂದ ಅನೇಕ ಬಾರಿ ವಿವಾದ ಆಗಿದ್ದು ಕೂಡ ಉಂಟು. ಅದೇ ಕಾರಣಕ್ಕಾಗಿ ಕೆಲವರು ಈ ಶೋಗೆ ಬರಲು ಹಿಂದೇಟು ಹಾಕುತ್ತಾರೆ. ಇತ್ತೀಚೆಗೆ ದೀಪಿಕಾ ಪಡುಕೋಣೆ ಮತ್ತು ರಣವೀರ್​ ಸಿಂಗ್ ಅವರು ಕಾಣಿಸಿಕೊಂಡ ಎಪಿಸೋಡ್​ ಕೂಡ ಸಾಕಷ್ಟು ಟ್ರೋಲ್​ಗೆ ಒಳಗಾಗಿತ್ತು. ರಣವೀರ್​ ಸಿಂಗ್​ ಜೊತೆ ರಿಲೇಷನ್​ಶಿಪ್​ನಲ್ಲಿ ಇದ್ದಾಗಲೇ ಬೇರೆ ವ್ಯಕ್ತಿಗಳ ಜೊತೆ ಡೇಟಿಂಗ್​ ಮಾಡಿದ್ದನ್ನು ದೀಪಿಕಾ ಪಡುಕೋಣೆ ಒಪ್ಪಿಕೊಂಡಿದ್ದರು. ಅದಕ್ಕಾಗಿ ಅವರನ್ನು ಸಖತ್​ ಟ್ರೋಲ್​ ಮಾಡಲಾಗಿತ್ತು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ದೆಹಲಿ ವಿಮಾನ ನಿಲ್ದಾಣಕ್ಕೆ ತೆರಳಿ ಕತಾರ್ ರಾಜನನ್ನು ಬರಮಾಡಿಕೊಂಡ ಮೋದಿ
ದೆಹಲಿ ವಿಮಾನ ನಿಲ್ದಾಣಕ್ಕೆ ತೆರಳಿ ಕತಾರ್ ರಾಜನನ್ನು ಬರಮಾಡಿಕೊಂಡ ಮೋದಿ
ದಿನಕ್ಕೊಂದು ಸಾವಿರ ದುಡಿಯುವವನಿಗೆ ₹12,000 ದಂಡ ಹಾಕಿದರೆ ಹೇಗೆ? ಕುಲಕರ್ಣಿ
ದಿನಕ್ಕೊಂದು ಸಾವಿರ ದುಡಿಯುವವನಿಗೆ ₹12,000 ದಂಡ ಹಾಕಿದರೆ ಹೇಗೆ? ಕುಲಕರ್ಣಿ
ನಾನು ಸುದ್ದಿಯಲ್ಲಿ ಇರೋದ್ರಿಂದ ಟಾರ್ಗೆಟ್ ಮಾಡಲಾಗುತ್ತಿದೆ: ಐಶ್ವರ್ಯ ಗೌಡ
ನಾನು ಸುದ್ದಿಯಲ್ಲಿ ಇರೋದ್ರಿಂದ ಟಾರ್ಗೆಟ್ ಮಾಡಲಾಗುತ್ತಿದೆ: ಐಶ್ವರ್ಯ ಗೌಡ
ಪೊಲೀಸರಿಗೆ ಉದ್ಯೋಗವೇ ಇಲ್ಲ, ಬರೀ ವಸೂಲಿ ಮಾಡೋದು: ಶಾಸಕ ವಿನಯ್​ ಕುಲಕರ್ಣಿ
ಪೊಲೀಸರಿಗೆ ಉದ್ಯೋಗವೇ ಇಲ್ಲ, ಬರೀ ವಸೂಲಿ ಮಾಡೋದು: ಶಾಸಕ ವಿನಯ್​ ಕುಲಕರ್ಣಿ
ಕೇವಲ ಎರಡು ತಿಂಗಳ ಅಕ್ಕಿ ಹಣ ಮಾತ್ರ ಟ್ರಾನ್ಸ್​ಫರ್ ಮಾಡೋದು ಬಾಕಿ: ಸಚಿವ
ಕೇವಲ ಎರಡು ತಿಂಗಳ ಅಕ್ಕಿ ಹಣ ಮಾತ್ರ ಟ್ರಾನ್ಸ್​ಫರ್ ಮಾಡೋದು ಬಾಕಿ: ಸಚಿವ
ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯೂ ನಿಷ್ಕ್ರಿಯ, ಮಹಿಳೆಯರು ಅಸಹಾಯಕ
ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯೂ ನಿಷ್ಕ್ರಿಯ, ಮಹಿಳೆಯರು ಅಸಹಾಯಕ
ರಾಜಣ್ಣಗೆ ಯಾರ ಮೇಲೂ ಸಿಟ್ಟಿಲ್ಲ, ಅವರು ಮಾತಾಡೋ ಶೈಲಿಯೇ ಹಾಗೆ: ಜಾರಕಿಹೊಳಿ
ರಾಜಣ್ಣಗೆ ಯಾರ ಮೇಲೂ ಸಿಟ್ಟಿಲ್ಲ, ಅವರು ಮಾತಾಡೋ ಶೈಲಿಯೇ ಹಾಗೆ: ಜಾರಕಿಹೊಳಿ
ಚೇತನ್ ದುಡುಕಿನ ನಿರ್ಧಾರ ತೆಗೆದುಕೊಂಡು ಘೋರ ಅಪರಾಧವೆಸಗಿದ್ದಾನೆ: ಸೋಮಶೇಖರ್
ಚೇತನ್ ದುಡುಕಿನ ನಿರ್ಧಾರ ತೆಗೆದುಕೊಂಡು ಘೋರ ಅಪರಾಧವೆಸಗಿದ್ದಾನೆ: ಸೋಮಶೇಖರ್
ಪಿಂಕ್​​ ಲೈನ್​ ಮೆಟ್ರೋ ಟನಲ್​ ಕಾಮಗಾರಿ ಬಗ್ಗೆ ಮಾಹಿತಿ ನೀಡಿದ ಇಂಜಿನಿಯರ್
ಪಿಂಕ್​​ ಲೈನ್​ ಮೆಟ್ರೋ ಟನಲ್​ ಕಾಮಗಾರಿ ಬಗ್ಗೆ ಮಾಹಿತಿ ನೀಡಿದ ಇಂಜಿನಿಯರ್
ಸಿಎಂ ಮತ್ತು ಕೆಪಿಸಿಸಿ ಬದಲಾವಣೆ ಬಿಟ್ಟು ಕೆಲ ಸಚಿವರು ಬೇರೇನೂ ಮಾತಾಡಲಾರರು!
ಸಿಎಂ ಮತ್ತು ಕೆಪಿಸಿಸಿ ಬದಲಾವಣೆ ಬಿಟ್ಟು ಕೆಲ ಸಚಿವರು ಬೇರೇನೂ ಮಾತಾಡಲಾರರು!