ಐಫಾ ಅವಾರ್ಡ್ಸ್ 2025: ಇಲ್ಲಿದೆ ಪ್ರಶಸ್ತಿ ಪಡೆದವರ ಪೂರ್ಣ ಪಟ್ಟಿ
IIFA awards 2025: ನಿನ್ನೆಯಷ್ಟೆ ರಾಜಸ್ಥಾನದ ಜೈಪುರದಲ್ಲಿ ಐಫಾ ಅವಾರ್ಡ್ಸ್ ಕಾರ್ಯಕ್ರಮ ಬಲು ಅದ್ಧೂರಿಯಾಗಿ ನಡೆದಿದೆ. ಐಫಾ ಅವಾರ್ಡ್ಸ್, ಕೇವಲ ಹಿಂದಿ ಸಿನಿಮಾಗಳಿಗೆ ಮಾತ್ರವೇ ನೀಡಲಾಗುವ ಪ್ರಶಸ್ತಿಯಾಗಿದೆ. ಈ ಬಾರಿ ಹಿಂದಿ ಸಿನಿಮಾಗಳ ಜೊತೆಗೆ ಹಿಂದಿಯ ವೆಬ್ ಸರಣಿಗಳಿಗೂ ಪ್ರಶಸ್ತಿ ನೀಡಲಾಗಿದೆ. 2024 ರಲ್ಲಿ ಬಿಡುಗಡೆ ಆದ ಅತ್ಯುತ್ತಮ ಸಿನಿಮಾ, ವೆಬ್ ಸರಣಿಗಳನ್ನು ಗುರುತಿಸಿ ಐಫಾ 2025 ನಲ್ಲಿ ಪ್ರಶಸ್ತಿ ನೀಡಲಾಗಿದೆ. ಕೃತಿ ಸನನ್, ವಿಕ್ರಾಂತ್ ಮಸ್ಸಿ, ಇಮ್ತಿಯಾಜ್ ಅಲಿ ಸೇರಿದಂತೆ ಹಲವು ಪ್ರತಿಭಾವಂತರು ಈ ವರ್ಷ ಪ್ರಶಸ್ತಿ ಗಳಿಸಿದ್ದಾರೆ. ಪ್ರಶಸ್ತಿ ವಿಜೇತ ಸಿನಿಮಾ ಹಾಗೂ ತಂತ್ರಜ್ಞರು, ನಟರ ಪೂರ್ಣ ಪಟ್ಟಿ ಇಲ್ಲಿದೆ.

ಐಫಾ (ಇಂಟರ್ನ್ಯಾಷನಲ್ ಇಂಡಿಯನ್ ಫಿಲಂ ಅಕಾಡೆಮಿ ಅವಾರ್ಡ್ಸ್) ಅವಾರ್ಡ್ಸ್ 2025 ನಿನ್ನೆಯಷ್ಟೆ ರಾಜಸ್ಥಾನದ ಜೈಪುರದಲ್ಲಿ ಬಲು ಅದ್ಧೂರಿಯಾಗಿ ನಡೆದಿದೆ. ಐಫಾ ಅವಾರ್ಡ್ಸ್, ಕೇವಲ ಹಿಂದಿ ಸಿನಿಮಾಗಳಿಗೆ ಮಾತ್ರವೇ ನೀಡಲಾಗುವ ಪ್ರಶಸ್ತಿಯಾಗಿದೆ. ಈ ಬಾರಿ ಹಿಂದಿ ಸಿನಿಮಾಗಳ ಜೊತೆಗೆ ಹಿಂದಿಯ ವೆಬ್ ಸರಣಿಗಳಿಗೂ ಪ್ರಶಸ್ತಿ ನೀಡಲಾಗಿದೆ. 2024 ರಲ್ಲಿ ಬಿಡುಗಡೆ ಆದ ಅತ್ಯುತ್ತಮ ಸಿನಿಮಾ, ವೆಬ್ ಸರಣಿಗಳನ್ನು ಗುರುತಿಸಿ ಐಫಾ 2025 ನಲ್ಲಿ ಪ್ರಶಸ್ತಿ ನೀಡಲಾಗಿದೆ. ಕೃತಿ ಸನನ್, ವಿಕ್ರಾಂತ್ ಮಸ್ಸಿ, ಇಮ್ತಿಯಾಜ್ ಅಲಿ ಸೇರಿದಂತೆ ಹಲವು ಪ್ರತಿಭಾವಂತರು ಈ ವರ್ಷ ಪ್ರಶಸ್ತಿ ಗಳಿಸಿದ್ದಾರೆ. ಪ್ರಶಸ್ತಿ ವಿಜೇತ ಸಿನಿಮಾ ಹಾಗೂ ತಂತ್ರಜ್ಞರು, ನಟರ ಪೂರ್ಣ ಪಟ್ಟಿ ಇಲ್ಲಿದೆ.
ಅತ್ಯುತ್ತಮ ಸಿನಿಮಾ: ಅಮರ್ಸಿಂಗ್ ಚಮ್ಕೀಲಾ
ಅತ್ಯುತ್ತಮ ನಿರ್ದೇಶಕ: ಇಮ್ತಿಯಾಜ್ ಅಲಿ (ಅಮರ್ಸಿಂಗ್ ಚಮ್ಕೀಲಾ)
ಅತ್ಯುತ್ತಮ ನಟ: ವಿಕ್ರಾಂತ್ ಮೆಸ್ಸಿ (ಸೆಕ್ಟರ್ 36)
ಅತ್ಯುತ್ತಮ ನಾಯಕಿ: ಕೃತಿ ಸನನ್ (ದೋ ಪತ್ತಿ)
ಅತ್ಯುತ್ತಮ ಪೋಷಕ ನಟಿ: ಅನುಪ್ರಿಯಾ ಗೋಯೆಂಕಾ (ಬರ್ಲಿನ್)
ಅತ್ಯುತ್ತಮ ಪೋಷಕ ನಟ: ದೀಪಕ್ ದೋಬ್ರಿಯಾಲ್ (ಸೆಕ್ಟರ್ 36)
ಅತ್ಯುತ್ತಮ ಕತೆ: ಕನ್ನಿಕಾ ದಿಲ್ಲೋನ್ (ದೋ ಪತ್ತಿ)
ವೆಬ್ ಸರಣಿಗಳ ವಿಭಾಗ
ಅತ್ಯುತ್ತಮ ವೆಬ್ ಸರಣಿ: ಪಂಚಾಯತ್ ಸೀಸನ್ 3
ಅತ್ಯುತ್ತಮ ನಟಿ: ಶ್ರೆಯಾ ಚೌಧರಿ (ಬಂದಿಶ್ ಬ್ಯಾಂಡಿಟ್ಸ್ 3)
ಅತ್ಯುತ್ತಮ ನಟ: ಜಿತೇಂದ್ರ ಕುಮಾರ್ (ಪಂಚಾಯತ್ ಸೀಸನ್ 3)
ಅತ್ಯುತ್ತಮ ನಿರ್ದೇಶಕ: ದೀಪಕ್ ಮಿಶ್ರಾ (ಪಂಚಾಯತ್ ಸೀಸನ್ 3)
ಅತ್ಯುತ್ತಮ ಪೋಷಕ ನಟಿ: ಸಂಜೀದಾ ಷೇಖ್ (ಹೀರಾಮಂಡಿ)
ಅತ್ಯುತ್ತಮ ಪೋಷಕ ನಟ: ಫೈಸಲ್ ಮಲ್ಲಿಕ್ (ಪಂಚಾಯತ್ ಸೀಸನ್ 3)
ಅತ್ಯುತ್ತಮ ಕತೆ: ಕೋಟಾ ಫ್ಯಾಟ್ರಿ ಸೀಸನ್ 3
ಅತ್ಯುತ್ತಮ ರಿಯಾಲಿಟಿ ಶೋ: ಫ್ಯಾಬ್ಯುಲಸ್ ಲೈವ್ಸ್ vs ಬಾಲಿವುಡ್ ವೈವ್ಸ್
ಅತ್ಯುತ್ತಮ ಡಾಕ್ಯು ಸೀರೀಸ್: ಯೋ ಯೋ ಹನಿ ಸಿಂಗ್
ಅತ್ಯುತ್ತಮ ಟೈಟಲ್ ಟ್ರ್ಯಾಕ್: ಮಿಸ್ ಮ್ಯಾಚ್ಡ್
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ