ಗುಟ್ಕಾ ಪ್ರಚಾರ, ಶಾರುಖ್, ಟೈಗರ್ ಶ್ರಾಫ್, ಅಜಯ್ ದೇವಗನ್ಗೆ ನೊಟೀಸು
Shah Rukh Khan: ಗುಟ್ಕಾ ಪ್ರಚಾರ ಮಾಡುವ ನಟರ ಮೇಲೆ ಹಲವು ಬಾರಿ ನ್ಯಾಯಾಲಯದಲ್ಲಿ ಅರ್ಜಿಗಳನ್ನು ಹಾಕಲಾಗಿದೆ ಆದರೆ ಈ ವರೆಗೆ ಯಾವುದೇ ಉಪಯೋಗ ಆಗಿಲ್ಲ. ಆದರೆ ಇದೀಗ ಗ್ರಾಹಕರ ವೇದಿಕೆಯು ಗುಟ್ಕಾ, ಪಾನ್ ಮಸಾಲ ಜಾಹೀರಾತಿನಲ್ಲಿ ನಟಿಸುವ ಪ್ರಮುಖ ನಟರಿಗೆ ನೊಟೀಸ್ ನೀಡಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದೆ. ಪ್ರಕರಣ ಏನು?

ಸಿನಿಮಾ ನಟರು ಗುಟ್ಕಾ, ತಂಬಾಕು, ಜೂಜು, ಮದ್ಯಗಳನ್ನು ಪ್ರಚಾರ ಮಾಡುವ ಬಗ್ಗೆ ತಕರಾರು ಮೊದಲಿನಿಂದಲೂ ಇದೆ. ಈ ಗುಟ್ಕಾ, ತಂಬಾಕು ಸಂಸ್ಥೆಗಳು ತಮ್ಮ ಬ್ರ್ಯಾಂಡ್ನ ಪ್ರಚಾರಕ್ಕೆ ಭಾರಿ ಸಂಭಾವನೆ ಕೊಟ್ಟು ದೇಶದ ಸ್ಟಾರ್ ನಟರನ್ನು ಕರೆತರುತ್ತವೆ. ಗುಟ್ಕಾ ಪ್ರಚಾರ ಮಾಡುವ ನಟರ ಮೇಲೆ ಹಲವು ಬಾರಿ ನ್ಯಾಯಾಲಯದಲ್ಲಿ ಅರ್ಜಿಗಳನ್ನು ಹಾಕಲಾಗಿದೆ ಆದರೆ ಈ ವರೆಗೆ ಯಾವುದೇ ಉಪಯೋಗ ಆಗಿಲ್ಲ. ಆದರೆ ಇದೀಗ ಗ್ರಾಹಕರ ವೇದಿಕೆಯು ಗುಟ್ಕಾ, ಪಾನ್ ಮಸಾಲ ಜಾಹೀರಾತಿನಲ್ಲಿ ನಟಿಸುವ ಪ್ರಮುಖ ನಟರಿಗೆ ನೊಟೀಸ್ ನೀಡಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದೆ.
ಜೈಪುರದ ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆಯು ಪ್ರಕರಣಕ್ಕೆ ಸಂಬಂಧಿಸಿದಂತೆ ವಿಮಲ್ ಗುಟ್ಕಾ ಜಾಹೀರಾತಿನಲ್ಲಿ ನಟಿಸುವ ಅಜಯ್ ದೇವಗನ್, ಶಾರುಖ್ ಖಾನ್ ಮತ್ತು ಟೈಗರ್ ಶ್ರಾಫ್ ಅವರುಗಳಿಗೆ ನೊಟೀಸ್ ನೀಡಿದೆ. ನಟರಿಗೆ ನೋಟೀಸ್ ನೀಡಿದಂತೆ ವಿಮಲ್ ಗುಟ್ಕಾದ ಮಾಲೀಕರಾದ ವಿಮಲ್ ಕುಮಾರ್ ಅವರಿಗೂ ನೊಟೀಸ್ ನೀಡಿದ್ದು, ಮಾರ್ಚ್ 19ರ ಒಳಗಾಗಿ ವಿಚಾರಣೆಗೆ ಹಾಜರಾಗಬೇಕು ಎಂದು ಸೂಚಿಸಿದೆ. ಮಾತ್ರವಲ್ಲದೆ ಇನ್ನು 30 ದಿನಗಳಲ್ಲಿ ನೊಟೀಸ್ ಬಗ್ಗೆ ಅಭಿಪ್ರಾಯವನ್ನು ಸಲ್ಲಿಸಬೇಕು ಎಂದು ಹೇಳಿದೆ.
ಜೈಪುರದ ವಕೀಲ ಯೋಗೇಂದ್ರ ಸಿಂಗ್ ಬುಧಿಯಾಲ್ ಎಂಬುವರು ದಾಖಲಿಸಿರುವ ದೂರಿದ ಆಧಾರದಲ್ಲಿ ಗ್ರಾಹಕರ ವೇದಿಕೆಯು ನಟರಿಗೆ ಮತ್ತು ಪಾನ್ ಮಸಾಲ ಸಂಸ್ಥೆಗೆ ನೊಟೀಸ್ ವಿತರಣೆ ಮಾಡಿದೆ. ‘ವಿಮಲ್ ಜಾಹೀರಾತಿನಲ್ಲಿ ಧಾನೆ, ಧಾನೆಯಲ್ಲೂ ಕೇಸರಿ (ಕಣ ಕಣದಲ್ಲೂ ಕೇಸರಿ) ಇದೆ ಎಂದು ತೋರಿಸಲಾಗಿದೆ. ಆದರೆ ಆ ಉತ್ಪನ್ನದಲ್ಲಿ ಕೇಸರಿ ಇಲ್ಲ. ಗ್ರಾಹಕರಿಗೆ ಸುಳ್ಳು ಹೇಳಿ ಉತ್ಪವನ್ನು ಮಾರಾಟ ಮಾಡಲಾಗುತ್ತಿದೆ. ಹೀಗೆ ಸುಳ್ಳು ಹೇಳಿ ಕೋಟ್ಯಂತರ ರೂಪಾಯಿ ಆದಾಯವನ್ನು ಸಂಸ್ಥೆ ಗಳಿಸುತ್ತಿದೆ’ ಎಂದು ವಕೀಲ ಯೋಗೇಂದ್ರ ಸಿಂಗ್ ಬುಧಿಯಾಲ್ ಆರೋಪ ಮಾಡಿದ್ದರು. ಇದೇ ಕಾರಣಕ್ಕೆ ಇದೀಗ ಜಾಹೀರಾತಿನಲ್ಲಿ ನಟಿಸಿರುವ ನಟರು ಮತ್ತು ಸಂಸ್ಥೆಯ ಮಾಲೀಕರಿಗೆ ನೊಟೀಸ್ ನೀಡಲಾಗಿದೆ.
ಇದನ್ನೂ ಓದಿ:ಶಾರುಖ್ ಖಾನ್ ಪುತ್ರಿಯ ಹೊಸ ಸಿನಿಮಾ, ನಿರ್ಮಾಣ ಅಪ್ಪನ ಗೆಳೆಯನದ್ದೇ
ಸಿನಿಮಾ ನಟರು ಪಾನ್ ಮಸಾಲ ಜಾಹೀರಾತುಗಳಲ್ಲಿ ನಟಿಸುವ ಬಗ್ಗೆ ಈ ಹಿಂದೆ ಹಲವಾರು ಬಾರಿ ಆಕ್ರೋಶ ವ್ಯಕ್ತವಾಗಿದೆ. ವಿಮಲ್ ಜಾಹೀರಾತಿನಲ್ಲಿ ನಟ ಅಕ್ಷಯ್ ಕುಮಾರ್ ಕಾಣಿಸಿಕೊಂಡಿದ್ದರು. ಅದಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಕೊನೆಗೆ ಅಕ್ಷಯ್ ಕುಮಾರ್, ತಾವು ಇನ್ನು ಮುಂದೆ ಗುಟ್ಕಾ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದಿದ್ದರು. ನಟ ಅಮಿತಾಬ್ ಬಚ್ಚನ್ ಸಹ ರಜನೀಗಂಧ ಗುಟ್ಕಾ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು. ಈ ಬಗ್ಗೆಯೂ ಸಹ ಸಾಕಷ್ಟು ನಿಂದನೆ, ಟೀಕೆಗಳು ವ್ಯಕ್ತವಾಗಿದ್ದವು. ನಟರಾದ ಹೃತಿಕ್ ರೋಷನ್, ರಣ್ವೀರ್ ಸಿಂಗ್ ಇನ್ನೂ ಹಲವಾರು ಖ್ಯಾತನಾಮ ನಟರು ಗುಟ್ಕಾ ಜಾಹೀರಾತುಗಳಲ್ಲಿ ನಟಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ