AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಣ್ಮುಚ್ಚಿದ ಜಾಹೀರಾತು ಕ್ಷೇತ್ರದ ಬಚ್ಚನ್: ಪಿಯೂಷ್ ಪಾಂಡೆ ಯಾರು?

Who is Piyush Pandey: ಪಿಯೂಷ್ ಪಾಂಡೆ ಎಂದರೆ ಯಾರೆಂದು ಬಹುತೇಕರಿಗೆ ಗೊತ್ತಿಲ್ಲ. ಆದರೆ ಅವರು ನೀಡಿರುವ ಜಾಹೀರಾತನ್ನು 80-90 ದಶಕದವರು ಮರೆಯಲು ಸಾಧ್ಯವೇ ಇಲ್ಲ. ಈಗಲೂ ಸಹ ಆ ಜಾಹೀರಾತಲ್ಲ, ಅದರ ಸಂಗೀತ ಕಿವಿಗೆ ಬಿದ್ದರೂ ಸಹ ಬಾಲ್ಯದ ನೆನಪಾಗುತ್ತದೆ. ಪಿಯೂಷ್ ಅಗಲಿಕೆಗೆ ಪ್ರಧಾನಿ ಮೋದಿ ಸೇರಿದಂತೆ ಹಲವರು ಕಂಬನಿ ಮಿಡಿದಿದ್ದಾರೆ. ಯಾರು ಈ ಪಿಯೂಷ್ ಪಾಂಡೆ.

ಕಣ್ಮುಚ್ಚಿದ ಜಾಹೀರಾತು ಕ್ಷೇತ್ರದ ಬಚ್ಚನ್: ಪಿಯೂಷ್ ಪಾಂಡೆ ಯಾರು?
Piyush Pandey
ಮಂಜುನಾಥ ಸಿ.
|

Updated on:Oct 25, 2025 | 5:18 PM

Share

ಇಂದು (ಶನಿವಾರ) ಕೆಲ ಆಂಗ್ಲ ಪತ್ರಿಕೆಗಳ ಮುಖ ಪುಟದಲ್ಲಿ ಫೆವಿಕಾಲ್ ಜಾಹೀರಾತೊಂದನ್ನು ನೀಡಿದೆ. ಫೆವಿಕಾಲ್ ತನ್ನ ಉತ್ಪನ್ನಗಳ ಜಾಹೀರಾತು ನೀಡುವುದು ಸಾಮಾನ್ಯ. ಆದರೆ ಇಂದು ನೀಡಿರುವ ಜಾಹೀರಾತು ಬಲು ಭಿನ್ನ, ಫೆವಿಕಾಲ್, ಕೇವಲ ಒಂದು ಮೀಸೆಯ ಚಿತ್ರವಿರುವ ಇಡೀ ಪುಟದ ಜಾಹೀರಾತು ನೀಡಿದೆ. ಅಡಿಯಲ್ಲಿ ‘ಪಿಯೂಷ್ ಪಾಂಡೆ’ ಎಂಬ ಹೆಸರಿದೆ. ಫೆವಿಕಾಲ್ ಹೆಸರು ಸಹ ಕಪ್ಪು ಬಣ್ಣದಲ್ಲಿದೆ. ಭಾರತೀಯ ಜಾಹೀರಾತು ಕ್ಷೇತ್ರದ ದಿಗ್ಗಜ ಪಿಯೂಷ್ ಪಾಂಡೆ ನಿಧನಕ್ಕೆ ಫೆವಿಕಾಲ್ ಸಂಸ್ಥೆ ನೀಡಿದ ಜಾಹೀರಾತದು.

ಪಿಯೂಷ್ ಪಾಂಡೆ ಎಂದರೆ ಯಾರೆಂದು ಬಹುತೇಕರಿಗೆ ಗೊತ್ತಿಲ್ಲ. ಆದರೆ ಅವರು ನೀಡಿರುವ ಜಾಹೀರಾತನ್ನು 80-90 ದಶಕದವರು ಮರೆಯಲು ಸಾಧ್ಯವೇ ಇಲ್ಲ. ಈಗಲೂ ಸಹ ಆ ಜಾಹೀರಾತಲ್ಲ, ಅದರ ಸಂಗೀತ ಕಿವಿಗೆ ಬಿದ್ದರೂ ಸಹ ಬಾಲ್ಯದ ನೆನಪಾಗುತ್ತದೆ. ‘ಕ್ಯಾಡ್ಬರೀಸ್​’ ‘ಕ್ಯಾ ಬಾತ್ ಹೇ ಜಿಂದಗೀ ಕಾ’ ಜಾಹೀರಾತು ನೆನಪಿದೆಯೇ, ಯುವತಿಯೊಬ್ಬಾಕೆ ಡ್ಯಾನ್ಸ್ ಮಾಡುತ್ತಾ ಕ್ರಿಕೆಟ್ ಗ್ರೌಂಡ್​​ಗೆ ಬಂದು ಬ್ಯಾಟ್ಸ್​​ಮ್ಯಾನ್​​ಗೆ ಚಾಕಲೇಟ್ ತಿನ್ನಿಸುವ ಜಾಹೀರಾತು ಅದರ ಸೃಷ್ಟಿಕರ್ತ ಪಿಯೂಷ್ ಪಾಂಡೆ. ಅದು ಮಾತ್ರವಲ್ಲ ಫೆವಿಕೋಲ್​​ನ ಮೊಟ್ಟೆ ಜಾಹೀರಾತು, ಕಡ್ಡಿಗೆ ಫೆವಿಕಾಲ್ ಮೆತ್ತಿ ಮೀನು ಹಿಡಿಯುವ ಜಾಹೀರಾತು, ‘ಶರ್ಮಾ ಕಿ ದುಲ್ಹನ್’ ಹಾಡಿದ್ದ ಆ ಕುರ್ಚಿಯ ಜಾಹೀರಾತು ಅದರ ಹಿಂದೆಯೂ ಇದ್ದಿದ್ದ ಪಿಯೂಷ್ ಪಾಂಡೆ.

ಇದನ್ನೂ ಓದಿ:ಬಿಗ್ ಬಾಸ್​ನಲ್ಲಿ ದರ್ಶನ್ ನೆನಪಿಸಿದ ಗಿಲ್ಲಿ ಡೈಲಾಗ್; ಡಿ ಬಾಸ್ ಫ್ಯಾನ್ಸ್​ಗೆ ಖುಷಿಯೋ ಖುಷಿ

ಇವಷ್ಟೆ ಅಲ್ಲ, ‘ಮೆಂಟಾಸ್​’ ದಿಮಾಗ್​ ಕಿ ಬತ್ತಿ ಜಲಾದೆ, ಸೆಂಟರ್ ಫ್ರೆಸ್: ಕೈಸಿ ಜೀಬ್ ಲಪ್ ಕಪಾಯಿ, ಸೆಲೊ ಬಟರ್​ಫ್ಲೋ ಪೆನ್​​ನ ಜಾಹೀರಾತು, ಅಮಿತಾಬ್ ಬಚ್ಚನ್ ಅವರಿದ್ದ ‘ಕುಚ್ ದಿನ್ ಗುಜಾರೊ ಗುಜರಾತ್​​ ಮೇ’ ಡೈಲಾಗ್ ಇದ್ದ ಗುಜರಾತ್ ಟೂರಿಸಂ ಜಾಹೀರಾತು, ಪಲ್ಸ್ ಪೋಲಿಯೋದ ‘ದೋ ಬೂಂದ್ ಜಿಂದಗೀ ಕಾ’ ಜಾಹೀರಾತು. ಬಣ್ಣಗಳಿಂದ ತುಂಬಿದ್ದ ಏಷಿಯನ್ ಪೇಂಟ್ಸ್ ಜಾಹೀರಾತು, ಲೂನಾ ಗಾಡಿಯ ಜಾಹೀರಾತು, ಬಜಾಜ್ ಚೇತಕ್ ಜಾಹೀರಾತು, ಎಂ ಸೀಲ್ ಜಾಹೀರಾತು ಇನ್ನೂ ಹಲವಾರು ನೆನಪುಳಿಯುವ ಜಾಹೀರಾತುಗಳನ್ನು ಅವರು ನೀಡಿದ್ದಾರೆ.

ಫೆವಿಕಾಲ್, ಕ್ಯಾಡ್ಬರೀಸ್, ಏಷಿಯನ್ ಪೇಯಿಂಟ್​ ಇನ್ನೂ ಕೆಲವು ಬ್ರ್ಯಾಂಡ್​​ಗಳು ಭಾರತೀಯ ಜನರ ಸ್ಮೃತಿಯಲ್ಲಿ ಉಳಿದು ಹೋಗುವಂತೆ ಮಾಡಿದ್ದು ಪಿಯೂಷ್ ಪಾಂಡೆಯವರು. ಭಾರತೀಯ ಜಾಹೀರಾತು ಕ್ಷೇತ್ರದ ಪಿತಾಮಹ ಆಗಿದ್ದ ಪಿಯೂಷ್ ಪಾಂಡೆ ನಿನ್ನೆ (ಅಕ್ಟೋಬರ್ 25) ನಿಧನ ಹೊಂದಿದ್ದಾರೆ. ಪಿಯೂಷ್ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಚಿತ್ರರಂಗದ, ಉದ್ಯಮ ಕ್ಷೇತ್ರದ ಹಲವಾರು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. ಅಮಿತಾಬ್ ಬಚ್ಚನ್ ಸೇರಿದಂತೆ ಹಲವಾರು ದಿಗ್ಗಜರು ಇಂದು ಪಿಯೂಷ್ ಪಾಂಡೆ ಅವರ ಅಂತಿಮ ದರ್ಶನವನ್ನು ಪಡೆದುಕೊಂಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:17 pm, Sat, 25 October 25