ಡ್ರಗ್​ ಕೇಸ್​ನಲ್ಲಿ ಸಿಕ್ಕಿಬಿದ್ದ ಮಗನಿಗೆ ದೊಡ್ಡ ಪಾಠ ಕಲಿಸಿದ್ದ ಜಾಕಿ ಚಾನ್​; ಶಾರುಖ್​ಗೆ ನೋಡಿ ಕಲಿಯಿರಿ ಎಂದ ಅಭಿಮಾನಿಗಳು

ಏಷ್ಯಾದಲ್ಲೇ ಅತಿಹೆಚ್ಚು ಸಂಭಾವನೆ ಪಡೆಯುವ ನಟರ ಪೈಕಿ ಜಾಕಿ ಚಾನ್​ ಮೊದಲ ಸ್ಥಾನದಲ್ಲಿದ್ದಾರೆ. 2019ರಲ್ಲಿ ಜಾಕಿ ಚಾನ್​ ಸಿನಿಮಾವೊಂದಕ್ಕೆ ಬರೋಬ್ಬರಿ 267 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ.

ಡ್ರಗ್​ ಕೇಸ್​ನಲ್ಲಿ ಸಿಕ್ಕಿಬಿದ್ದ ಮಗನಿಗೆ ದೊಡ್ಡ ಪಾಠ ಕಲಿಸಿದ್ದ ಜಾಕಿ ಚಾನ್​; ಶಾರುಖ್​ಗೆ ನೋಡಿ ಕಲಿಯಿರಿ ಎಂದ ಅಭಿಮಾನಿಗಳು
ಶಾರುಖ್​-ಆರ್ಯನ್​ ಮತ್ತು ಜಾಕಿ ಮತ್ತು ಜೈಸಿ
Edited By:

Updated on: Oct 06, 2021 | 1:52 PM

ಬಾಲಿವುಡ್​ ನಟ ಶಾರುಖ್​ ಖಾನ್​ ಮಗ ಆರ್ಯನ್​ ಖಾನ್​ ಡ್ರಗ್​​ ಕೇಸ್​ನಲ್ಲಿ ಅರೆಸ್ಟ್​​ ಆಗಿದ್ದಾರೆ. ಐಷಾರಾಮಿ ಕ್ರೂಸ್​ ಹಡಗಿನಲ್ಲಿ ರೇವ್​ ಪಾರ್ಟಿ ಮಾಡುತ್ತಿದ್ದ ವೇಳೆ ಅರೆಸ್ಟ್​ ಆಗಿದ್ದಾರೆ. ಆರ್ಯನ್​ ಅವರನ್ನು ಜೈಲಿನಿಂದ ಹೊರಗೆ ತರೋಕೆ ಶಾರುಖ್​ ಎಲ್ಲಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ. ಆರ್ಯನ್​ ಅವರನ್ನು ಹೊರಗೆ ತರೋಕೆ ಕಾನೂನಿನಲ್ಲಿ ಏನೆಲ್ಲ ಮಾರ್ಗ ಇದೆಯೋ ಅದೆಲ್ಲವನ್ನೂ ಅನ್ವೇಷಣೆ ಮಾಡುತ್ತಿದ್ದಾರೆ. ಹೀಗಿರುವಾಗಲೇ ಖ್ಯಾತ ನಟ ಜಾಕಿ ಚಾನ್​ ಅವರ ಕುಟುಂಬ ವಿಚಾರ ಮುನ್ನೆಲೆಗೆ ಬಂದಿದೆ.

ಏಷ್ಯಾದಲ್ಲೇ ಅತಿಹೆಚ್ಚು ಸಂಭಾವನೆ ಪಡೆಯುವ ನಟರ ಪೈಕಿ ಜಾಕಿ ಚಾನ್​ ಮೊದಲ ಸ್ಥಾನದಲ್ಲಿದ್ದಾರೆ. 2019ರಲ್ಲಿ ಜಾಕಿ ಚಾನ್​ ಸಿನಿಮಾವೊಂದಕ್ಕೆ ಬರೋಬ್ಬರಿ 267 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. ಹೀಗಾಗಿ ಪ್ರತಿ ವರ್ಷ ಅವರ ಆಸ್ತಿ ಮೌಲ್ಯ ಹೆಚ್ಚುತ್ತಲೇ ಇದೆ. ಅಚ್ಚರಿ ಎಂದರೆ, ಇವರು ತಮ್ಮ 2603 ಕೋಟಿ ರೂಪಾಯಿ ಆಸ್ತಿಯನ್ನು ಮಗನ ಹೆಸರಿಗೆ ಬರೆಯದೆ ಚಾರಿಟಿಗೆ (ದತ್ತಿ) ಕೊಟ್ಟಿದ್ದಾರೆ.  ಅವರು ಹೀಗೆ ಮಾಡುವುದಕ್ಕೂ ಒಂದು ಬಲವಾದ ಕಾರಣವಿದೆ.

ಜಾಕಿ ಚಾನ್​ ಮಗನ ಹೆಸರು ಜೈಸಿ ಚಾನ್​. ವೃತ್ತಿಯಲ್ಲಿ ಮ್ಯೂಸಿಷಿಯನ್​ ಹಾಗೂ ನಟ. 2014ರಲ್ಲಿ ಇವರು ಡ್ರಗ್​ ಪ್ರಕರಣವೊಂದಲ್ಲಿ ಸಿಲುಕಿದ್ದರು. ಅರೆಸ್ಟ್​ ಕೂಡ ಆದರು. ಆ ಸಮಯದಲ್ಲಿ ಮಗನ ಪರವಾಗಿ ಜಾಕಿ ಚಾನ್​ ಕ್ಷಮೆ ಕೇಳಿದ್ದರು. ಅಲ್ಲದೆ, ಮಗನನ್ನು ಬಿಡಿಸುವ ಗೋಜಿಗೂ ಅವರು ಹೋಗಿರಲಿಲ್ಲ. ‘ಡ್ರಗ್​ ಪ್ರಕರಣದಲ್ಲಿ ಜೈಸಿ ಜೈಲು ಸೇರಿದ್ದಾನೆ. ನನ್ನ ಮಗನನ್ನು ಡ್ರಗ್ಸ್​ನಿಂದ ರಕ್ಷಣೆ ಮಾಡಲು ಆಗಿಲ್ಲ. ನನ್ನ ಮಗನನ್ನು ಉತ್ತಮವಾಗಿ ಬೆಳೆಸಲು ನನ್ನಿಂದ ಸಾಧ್ಯವಾಗಿಲ್ಲ’ ಎಂದು ಜಾಕಿ ಚಾನ್ ಬೇಸರ ಹೊರ ಹಾಕಿದ್ದರು.

‘ನನ್ನ ಮಗ ಸಮರ್ಥನಾಗಿದ್ದರೆ ಸ್ವಂತ ಹಣವನ್ನು ಸಂಪಾದಿಸುತ್ತಾನೆ. ಇಲ್ಲದಿದ್ದರೆ, ಅವನು ನನ್ನ ಹಣವನ್ನು ವ್ಯರ್ಥ ಮಾಡುತ್ತಾನೆ’ ಎಂದು ಜಾಕಿ ಚಾನ್​ ಹೇಳಿಕೊಂಡಿದ್ದರು. ಮಗ ತಪ್ಪು ಹಾದಿ ಹಿಡಿದಿದ್ದಾನೆ ಎನ್ನುವ ಕಾರಣಕ್ಕೆ ಜಾಕಿ ಚಾನ್ ತಮ್ಮ ಆಸ್ತಿಯನ್ನು ​ ಚಾರಿಟಿಗೆ ನೀಡಿದ್ದಾರೆ. ಈ ವಿಚಾರ ಈಗ ಮುನ್ನೆಲೆಗೆ ಬಂದಿದೆ. ಎಲ್ಲರೂ ಜಾಕಿಯನ್ನು ಹೊಗಳುತ್ತಿದ್ದಾರೆ. ಅಲ್ಲದೆ, ಶಾರುಖ್​ಗೆ ಕಿವಿ ಮಾತು ಹೇಳುತ್ತಿದ್ದಾರೆ. ‘ಅವರನ್ನು ನೋಡಿ ನೀವು ಕಲಿಯಬೇಕಿದೆ’ ಎಂದು ಕಿವಿಮಾತು ಹೇಳುತ್ತಿದ್ದಾರೆ.

ಇದನ್ನೂ ಓದಿ:  ಶಾರುಖ್​ ಪುತ್ರನಿಗೆ ಎನ್​ಸಿಬಿ ಫುಲ್​ ಗ್ರಿಲ್​; ಆರ್ಯನ್​ ಖಾನ್​ಗೆ ಕೇಳಲಾಗ್ತಿವೆ ಅತೀ ಮುಖ್ಯ ಪ್ರಶ್ನೆಗಳು

We Stand with Aryan Khan: ಆರ್ಯನ್ ಖಾನ್​, ಶಾರುಖ್ ಖಾನ್​ಗೆ ಟ್ವಿಟರ್ ಮೂಲಕ ಬೆಂಬಲ ಸೂಚಿಸಿದ ಫ್ಯಾನ್ಸ್!