ನಟಿ ಜಾಕ್ವೆಲಿನ್ ಫರ್ನಾಂಡಿಸ್ಗೆ (Jacqueline Fernandez) ಸಾಕಷ್ಟು ಸಂಕಷ್ಟ ಎದುರಾಗುತ್ತಿದೆ. ಅವರ ವರ್ಚಸ್ಸಿಗೆ ಹಾನಿ ಆಗುವಂತಹ ಘಟನೆ ನಡೆಯುತ್ತಿದೆ. ಉದ್ಯಮಿಗಳಿಗೆ 200 ಕೋಟಿ ರೂಪಾಯಿ ವಂಚನೆ ಹಾಗೂ ಅಕ್ರಮ ಹಣ ವರ್ಗಾವಣೆ ಪ್ರಕರಣದ ಕಿಂಗ್ಪಿನ್ ಸುಕೇಶ್ ಚಂದ್ರಶೇಖರ್ ಅವರು ಜಾಕ್ವೆಲಿನ್ ಜತೆಗಿನ ಫೋಟೋಗಳನ್ನು ವೈರಲ್ ಮಾಡುತ್ತಿದ್ದಾರೆ. ಇದರಿಂದ ಜಾಕ್ವೆಲಿನ್ಗೆ ಸಮಾಜದಲ್ಲಿ ಇರುವ ಗೌರವ ಕಡಿಮೆ ಆಗುತ್ತಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಅವರು ಪ್ರಕಟಣೆ ಒಂದನ್ನು ಬಿಡುಗಡೆ ಮಾಡಿದ್ದಾರೆ. ಅಲ್ಲದೆ, ವಿಶೇಷ ಮನವಿ ಮಾಡಿಕೊಂಡಿದ್ದಾರೆ.
‘ಈ ದೇಶ ಮತ್ತು ಇಲ್ಲಿನ ಜನರು ಯಾವಾಗಲೂ ನನಗೆ ಅಪಾರ ಪ್ರೀತಿ ಮತ್ತು ಗೌರವವನ್ನು ನೀಡಿದ್ದಾರೆ. ಇದರಲ್ಲಿ ಮಾಧ್ಯಮದ ಸ್ನೇಹಿತರೂ ಸೇರಿದ್ದಾರೆ. ಅವರಲ್ಲಿ ನಾನು ಬಹಳಷ್ಟು ಕಲಿತಿದ್ದೇನೆ. ಪ್ರಸ್ತುತ ಕಷ್ಟದ ದಿನಗಳನ್ನು ನೋಡುತ್ತಿದ್ದೇನೆ. ನನ್ನ ಸ್ನೇಹಿತರು ಮತ್ತು ಅಭಿಮಾನಿಗಳಿಗೂ ಇದು ಅರ್ಥವಾಗುತ್ತದೆ ಎಂದುಕೊಂಡಿದ್ದೇನೆ. ನನ್ನ ವೈಯಕ್ತಿಕ ಫೋಟೋಗಳನ್ನು ಪ್ರಸಾರ ಮಾಡದಂತೆ ನಾನು ಕೋರುತ್ತಿದ್ದೇನೆ. ನಿಮ್ಮ ಪ್ರೀತಿಪಾತ್ರರಿಗೆ ಈ ರೀತಿ ಮಾಡುವುದಿಲ್ಲ, ಅದೇ ರೀತಿ ನನಗೂ ಈ ರೀತಿ ಮಾಡುವುದಿಲ್ಲ ಎಂದು ನನಗೆ ಖಾತ್ರಿಯಿದೆ. ನ್ಯಾಯ ಮತ್ತು ಒಳ್ಳೆಯ ಪ್ರಜ್ಞೆಯು ಮೇಲುಗೈ ಸಾಧಿಸುತ್ತದೆ ಎಂದು ಆಶಿಸುತ್ತೇವೆ. ಧನ್ಯವಾದಗಳು’ ಎಂದು ಜಾಕ್ವೆಲಿನ್ ಬರೆದುಕೊಂಡಿದ್ದಾರೆ.
ಉದ್ಯಮಿಗಳಿಗೆ 200 ಕೋಟಿ ರೂಪಾಯಿ ವಂಚನೆ ಹಾಗೂ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾಕ್ವೆಲಿನ್ ಫರ್ನಾಂಡಿಸ್ ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ರಕರಣದ ಕಿಂಗ್ಪಿನ್ ಸುಕೇಶ್ ಚಂದ್ರಶೇಖರ್ ಜತೆ ಅವರು ಲಿಂಕ್ ಹೊಂದಿದ್ದರು ಎನ್ನಲಾಗಿದೆ. ಅವರ ಜೊತೆ ಸಂಪರ್ಕದಲ್ಲಿ ಇದ್ದರು ಎಂಬ ಕಾರಣಕ್ಕೆ ಜಾಕ್ವೆಲಿನ್ ಫರ್ನಾಂಡಿಸ್ ಮೇಲೂ ಅನುಮಾನ ಮೂಡಿದೆ. ಇತ್ತೀಚೆಗೆ ಇಬ್ಬರೂ ಆಪ್ತವಾಗಿದ್ದ ಫೋಟೋ ವೈರಲ್ ಆಗಿತ್ತು. ಈಗ ಮತ್ತೊಂದು ಹೊಸ ಫೋಟೋ ಹೊರಬಿದ್ದಿದೆ. ಜಾಕ್ವೆಲಿನ್ ಫರ್ನಾಂಡಿಸ್ ಮತ್ತು ಸುಕೇಶ್ ಚಂದ್ರಶೇಖರ್ ಇಬ್ಬರ ನಡುವಿನ ಹೊಸ ರೊಮ್ಯಾಂಟಿಕ್ ಪೋಟೋ ಬಿಡುಗಡೆ ಆಗಿದೆ. ಜಾಕ್ವೆಲಿನ್ಗೆ ಸುಕೇಶ್ ಕಿಸ್ ಮಾಡುತ್ತಿದ್ದಾರೆ. ಜಾಕ್ವೆಲಿನ್ ಕತ್ತಿನಲ್ಲಿ ಒಂದು ಕಲೆ ಕಂಡಿದೆ. ಸುಕೇಶ್ ಅವರೇ ಈ ಕಲೆ ಮಾಡಿದ್ದಾರೆ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಕೆಲ ತಿಂಗಳ ಹಿಂದಷ್ಟೇ ಈ ಫೋಟೋ ತೆಗೆಯಲಾಗಿದೆ ಎನ್ನಲಾಗಿದೆ.
ಇದನ್ನೂ ಓದಿ: ‘ಜಾಕ್ವೆಲಿನ್ ಜತೆ ಸಂಬಂಧ ಇದ್ದಿದ್ದು ನಿಜ; ಆದರೆ ನಾನು ವಂಚಕ ಅಲ್ಲ’: ಸುಕೇಶ್ ಚಂದ್ರಶೇಖರ್ ಹೊಸ ಪುರಾಣ
ಸುಕೇಶ್ ಚಂದ್ರಶೇಖರ್ ಜತೆಗಿನ ಜಾಕ್ವೆಲಿನ್ ಹೊಸ ಫೋಟೋ ವೈರಲ್; ಕತ್ತಿನ ಮೇಲಿರುವ ಅಚ್ಚೇನು?