ದೇಶದಲ್ಲಿ ಒಮಿಕ್ರಾನ್ ಪ್ರಕರಣಗಳ ಸಂಖ್ಯೆ (Omicron Cases in India) ಹೆಚ್ಚಳ ಆಗುತ್ತಿರುವುದು ಆತಂಕಕ್ಕೆ ಕಾರಣ ಆಗಿದೆ. ಹೊಸ ಹೊಸ ರೂಪದಲ್ಲಿ ಕೊರೊನಾ ವೈರಲ್ ಕಾಟ ಕೊಡುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ಸರ್ಕಾರಗಳು ಕಠಿಣ ನಿಯಮಗಳನ್ನು ಜಾರಿ ಮಾಡಿವೆ. ಇದರಿಂದ ಅನೇಕ ಉದ್ಯಮಗಳ ಮೇಲೆ ಪರಿಣಾಮ ಬೀರುತ್ತಿದೆ. ಚಿತ್ರರಂಗ ಕೂಡ ಇದರಿಂದ ತತ್ತರಿಸುತ್ತಿದೆ. ಕೋಟ್ಯಂತರ ರೂಪಾಯಿ ವಹಿವಾಟು ನಡೆಸುವ ಚಿತ್ರೋದ್ಯಮಕ್ಕೆ ಈಗಾಗಲೇ ಎರಡು ಲಾಕ್ಡೌನ್ನಿಂದ ನಷ್ಟ ಆಗಿದೆ. ಮೂರನೆ ಅಲೆಯಲ್ಲಿ ಜನರ ಪರಿಸ್ಥಿತಿ ಏನಾಗಲಿದೆಯೋ ಎಂದು ನಟಿ ಜಾನ್ವಿ ಕಪೂರ್ (Janhvi Kapoor) ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಬಾಲಿವುಡ್ನಲ್ಲಿ ಜಾನ್ವಿ ಕಪೂರ್ ಅವರು ನಿಧಾನಕ್ಕೆ ನೆಲೆ ಕಂಡುಕೊಳ್ಳುತ್ತಿದ್ದಾರೆ. ಶ್ರೀದೇವಿ ಪುತ್ರಿ ಎಂಬ ಕಾರಣಕ್ಕೆ ಅವರಿಗೆ ದೊಡ್ಡ ಮಟ್ಟದ ಜನಪ್ರಿಯತೆ ಸಿಕ್ಕಿದೆ. ಆದರೆ ನಿರೀಕ್ಷಿತ ಮಟ್ಟದಲ್ಲಿ ಗೆಲುವು ಪಡೆಯುವುದು ಇನ್ನೂ ಬಾಕಿ ಇದೆ. ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಜಾನ್ವಿ ಕಪೂರ್ ಅವರು ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಒಮಿಕ್ರಾನ್ ಪ್ರಕರಣಗಳ ಸಂಖ್ಯೆ ಹೆಚ್ಚಾದರೆ ಜನರ ಪರಿಸ್ಥಿತಿ ಏನಾಗಬಹುದು ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಒಮಿಕ್ರಾನ್ ಹರಡುವುದನ್ನು ತಪ್ಪಿಸಲು ಹಲವು ರಾಜ್ಯಗಳಲ್ಲಿ ವೀಕೆಂಡ್ ಕರ್ಫ್ಯೂ ಜಾರಿ ಮಾಡಲಾಗಿದೆ. ನೈಟ್ ಕರ್ಫ್ಯೂ ಸಹ ಜಾರಿಯಲ್ಲಿದೆ. ಕೆಲವು ಕಡೆಗಳಲ್ಲಿ ಶಾಲೆಗಳನ್ನು ಬಂದ್ ಮಾಡಲಾಗಿದೆ. ಇದರಿಂದ ಕೋಟ್ಯಂತರ ಜನರ ಉದ್ಯೋಗಕ್ಕೆ ತೊಂದರೆ ಆಗಿದೆ. ಆರ್ಥಿಕ ಪರಿಸ್ಥಿತಿ ಕಷ್ಟ ಆಗುತ್ತಿದೆ. ಮುಂದೇನಪ್ಪಾ ಗತಿ ಎಂದು ಜಾನ್ವಿ ಕಪೂರ್ ಆತಂಕ ಹೊರಹಾಕಿದ್ದಾರೆ.
ಸದ್ಯ ಜಾನ್ವಿ ಕಪೂರ್ ಕೈಯಲ್ಲಿ ಅನೇಕ ಆಫರ್ಗಳಿವೆ. ಇದೇ ಮೊದಲ ಬಾರಿಗೆ ಅವರು ತಮ್ಮ ತಂದೆ ಬೋನಿ ಕಪೂರ್ ನಿರ್ಮಾಣ ಮಾಡಲಿರುವ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಆ ಚಿತ್ರಕ್ಕೆ ‘ಮಿಲಿ’ ಎಂದು ಹೆಸರು ಇಡಲಾಗಿದೆ. ಅಪ್ಪನ ಜತೆ ಕೆಲಸ ಮಾಡಲು ಅವಕಾಶ ಸಿಕ್ಕಿರುವುದಕ್ಕೆ ಅವರು ಖುಷಿ ವ್ಯಕ್ತಪಡಿಸಿದ್ದಾರೆ. ಬಾಲಿವುಡ್ನಲ್ಲಿ ಬೇರೂರಿರುವ ನೆಪೋಟಿಸಂ ಚರ್ಚೆಯಲ್ಲೂ ಜಾನ್ವಿ ಕಪೂರ್ ಹೆಸರು ಪದೇಪದೇ ಕೇಳಿಬರುತ್ತದೆ. ಫಿಲ್ಮಿ ಕುಟುಂಬದ ಹಿನ್ನೆಲೆಯಿಂದ ಬಂದಿರುವುದರಿಂದ ಅವರಿಗೆ ಸುಲಭವಾಗಿ ಅವಕಾಶಗಳು ಸಿಗುತ್ತಿವೆ.
ಇದನ್ನೂ ಓದಿ:
‘ಏಕ್ ಲವ್ ಯಾ’ ಚಿತ್ರ ನೋಡಲು ಕಾದಿದ್ದ ಪ್ರೇಕ್ಷಕರಿಗೆ ಬೇಸರ; ರಿಲೀಸ್ ದಿನಾಂಕ ಮುಂದೂಡಿಕೆ
‘ರಾಧೆ ಶ್ಯಾಮ್’ ರಿಲೀಸ್ ದಿನಾಂಕ ಮುಂದಕ್ಕೆ; ಸಂಕ್ರಾಂತಿ ರೇಸ್ನಿಂದ ಹಿಂದೆ ಸರಿದ ಪ್ರಭಾಸ್ ಸಿನಿಮಾ