ಮದುವೆ ಬಳಿಕ ನಟನೆ ತೊರೆದು ತಿರುಪತಿಯಲ್ಲಿ ಸೆಟಲ್ ಆಗಲಿದ್ದಾರೆ ಜಾನ್ವಿ ಕಪೂರ್

| Updated By: ರಾಜೇಶ್ ದುಗ್ಗುಮನೆ

Updated on: Jan 23, 2025 | 8:04 AM

ಜಾನ್ವಿ ಕಪೂರ್ ಅವರು ತಿರುಪತಿಯ ಬಗ್ಗೆ ತಮ್ಮ ಅಪಾರ ಪ್ರೀತಿಯನ್ನು ಬಹಿರಂಗಪಡಿಸಿದ್ದಾರೆ. ಅವರು ತಮ್ಮ ಭವಿಷ್ಯದ ಪತಿಯೊಂದಿಗೆ ತಿರುಪತಿಯಲ್ಲಿ ನೆಲೆಸುವ ಮತ್ತು ಅಲ್ಲಿಯೇ ಮದುವೆಯಾಗುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ. ನಟನೆಯಿಂದ ನಿವೃತ್ತರಾಗುವ ಯೋಚನೆಯೂ ಅವರಿಗಿದೆ. ಆದರೆ, ಈ ಯೋಜನೆಗಳ ಬಗ್ಗೆ ಅವರ ಸಹೋದ್ಯೋಗಿ ಕರಣ್ ಜೋಹರ್ ಅಚ್ಚರಿಗೊಂಡಿದ್ದಾರೆ.

ಮದುವೆ ಬಳಿಕ ನಟನೆ ತೊರೆದು ತಿರುಪತಿಯಲ್ಲಿ ಸೆಟಲ್ ಆಗಲಿದ್ದಾರೆ ಜಾನ್ವಿ ಕಪೂರ್
ಜಾನ್ವಿ-ಶಿಖರ್
Follow us on

ಜಾನ್ವಿ ಕಪೂರ್ ಅವರಿಗೆ ತಿರುಪತಿ ಬಗ್ಗೆ ವಿಶೇಷ ಪ್ರೀತಿ ಇದೆ. ಇದನ್ನು ಅವರು ಆಗಾಗ ರಿವೀಲ್ ಮಾಡುತ್ತಲೇ ಇರುತ್ತಾರೆ. ತಿರುಪತಿಯಲ್ಲೇ ಅವರಿಗೆ ಮದುವೆ ಆಗುವ ಆಲೋಚನೆ ಕೂಡ ಇದೆ. ಇದನ್ನು ಕೇಳಿ ಅನೇಕರಿಗೆ ಅಚ್ಚರಿ ಆಗಿತ್ತು. ಅವರಿಗೆ ತಿರುಪತಿಯಲ್ಲೇ ಸೆಟಲ್ ಆಗುವ ಆಲೋಚನೆ ಕೂಡ ಇದೆ. ಅವರು ಮದುವೆ ಬಳಿಕ ನಟನೆ ತೊರೆಯುವ ಆಲೋಚನೆ ಇದೆ. ಈ ಬಗ್ಗೆ ಅವರು ಈ ಮೊದಲು ಹೇಳಿಕೊಂಡಿದ್ದರು. ಆ ಬಗ್ಗೆ ಇಲ್ಲಿದೆ ವಿವರ.

‘ಮದುವೆ ಆಗಬೇಕು ತಿರುಮಲಾದಲ್ಲಿ ಪತಿಯ ಜೊತೆ ಸೆಟಲ್ ಆಗಬೇಕು. ಬಾಳೆ ಎಲೆಯಲ್ಲಿ ದಿನವೂ ಊಟ ಮಾಡಬೇಕು. ಗೋವಿಂದ ಗೋವಿಂದ ಕೇಳಬೇಕು. ಮಣಿರತ್ನಂ ಮ್ಯೂಸಿಕ್ ಕೇಳುತ್ತಾ ಕೂರಬೇಕು’ ಎಂದು ಜಾನ್ವಿ ಕಪೂರ್ ಅವರು ಹೇಳಿಕೊಂಡರು. ಆದರೆ, ಇದರಲ್ಲಿ ರೊಮ್ಯಾಂಟಿಕ್ ವಿಚಾರ ಏನಿದೆ ಎಂಬುದು ಪಕ್ಕದಲ್ಲಿ ಕುಳಿತ ಕರಣ್ ಜೋಹರ್ ಅವರಿಗೆ ಗೊತ್ತಾಗಲೇ ಇಲ್ಲ.

ಜಾನ್ವಿ ಕಪೂರ್ ಅವರು ತಿರುಪತಿ ಬಗ್ಗೆ ವಿಶೇಷ ಪ್ರೀತಿ ಹೊಂದಿರುವುದು ಗೊತ್ತೇ ಇದೆ. ಅವರು ತಮ್ಮ ಬಾಯ್​ಫ್ರೆಂಡ್ ಶಿಖರ್ ಪಹಾರಿಯಾ ಜೊತೆ ಇಲ್ಲಿಯೇ ಮದುವೆ ಆಗುವ ಆಲೋಚನೆ ಹೊಂದಿದ್ದಾರೆ. ಈ ಮೊದಲು ಅವರು ನಡೆದುಕೊಂಡೇ ತಿರುಪತಿ ದೇವಸ್ಥಾನವನ್ನು ಹತ್ತಿ ಗಮನ ಸೆಳೆದಿದ್ದರು. ಈ ಮೂಲಕ ಅವರು ಸಾಕಷ್ಟು ಸುದ್ದಿ ಆಗಿದ್ದರು.

ಇದನ್ನೂ ಓದಿ: ಸೀರೆಗೆ ಗ್ಲಾಮರ್ ಸ್ಪರ್ಶ ನೀಡಿದ ಪ್ಯಾನ್ ಇಂಡಿಯಾ ನಟಿ ಜಾನ್ವಿ ಕಪೂರ್

ಸಿನಿಮಾ ವಿಚಾರಕ್ಕೆ ಬರೋದಾದರೆ ಜಾನ್ವಿ ಕಪೂರ್ ಅವರಿಗೆ ದೊಡ್ಡ ಯಶಸ್ಸು ಸಿಗಲೇ ಇಲ್ಲ. 2018ರಲ್ಲಿ ಬಂದ ಅವರ ಮೊದಲ ಸಿನಿಮಾ ‘ಧಾಕಡ್’ ಹೆಸರು ಮಾಡಿದ್ದು ಬಿಟ್ಟರೆ ಮತ್ಯಾವ ಚಿತ್ರವೂ ಕಲೆಕ್ಷನ್ ಮಾಡಲೇ ಇಲ್ಲ. ಕಳೆದ ವರ್ಷ ರಿಲೀಸ್ ಆದ ‘ದೇವರ’ ಸಿನಿಮಾದಲ್ಲಿ ಜಾನ್ವಿ ಕಪೂರ್ ನಟಿಸಿದ್ದರು. ಆದರೆ, ಕೆಲವೇ ಕೆಲವು ದೃಶ್ಯಕ್ಕೆ ಅವರು ಸೀಮಿತ ಆದರು. ಸದ್ಯ ಅವರು ಕೆಲವು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ರಾಮ್ ಚರಣ್ ನಟನೆಯ ಮುಂದಿನ ಚಿತ್ರಕ್ಕೆ ಅವರು ನಾಯಕಿ. ಈ ಮೊದಲು ‘ದೇವರ’ ಚಿತ್ರದ ರೀತಿಯಲ್ಲಿ ಅವರಿಗೆ ಕೊಟ್ಟ ಪಾತ್ರದ ರೀತಿ ಇದು ಇರದಿರಲಿ ಎಂದು ಕೋರಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:02 am, Thu, 23 January 25