ಶಾರುಖ್ ಖಾನ್ (Shah Rukh Khan) ನಟನೆಯ ‘ಜವಾನ್‘ (Jawan) ಸಿನಿಮಾ ಇಂದು ಬಿಡುಗಡೆ ಆಗಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಸಿನಿಮಾ ಬಿಡುಗಡೆಗೆ ಮುನ್ನವೇ 50 ಕೋಟಿಗೂ ಹೆಚ್ಚು ಮೊತ್ತದ ಅಡ್ವಾನ್ಸ್ ಬುಕಿಂಗ್ ಆಗಿತ್ತು, ಬಿಡುಗಡೆ ಆದ ದಿನ ಚಿತ್ರಮಂದಿರಗಳಲ್ಲಿ ಹಬ್ಬವೇ ಆಗಿದೆ. ಬೆಂಗಳೂರು ಸೇರಿದಂತೆ ದೇಶದ ಹಲವು ಪ್ರಮುಖ ನಗರಗಳಲ್ಲಿ ಶಾರುಖ್ ಖಾನ್ ಸಿನಿಮಾಕ್ಕೆ ಭರ್ಜರಿ ಸ್ವಾಗತ ದೊರೆತಿದೆ. ಸಿನಿಮಾದಲ್ಲಿ ಬಹುತೇಕ ಮಂದಿ ದಕ್ಷಿಣ ಭಾರತದ ನಟರು, ತಂತ್ರಜ್ಞರು ಕೆಲಸ ಮಾಡಿದ್ದಾರೆ. ಎಲ್ಲರಿಗೂ ಭರಪೂರ ಸಂಭಾವನೆಯನ್ನೇ ಶಾರುಖ್ ನೀಡಿದ್ದಾರೆ ಎನ್ನಲಾಗುತ್ತಿದೆ.
ಸಿನಿಮಾದಲ್ಲಿ ನಯನತಾರಾ, ಶಾರುಖ್ ಖಾನ್ ಎದುರು ನಾಯಕಿಯಾಗಿ ಮಿಂಚಿದ್ದಾರೆ. ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಸೇರಿದಂತೆ ಇನ್ನು ಕೆಲವು ನಟಿಯರಿದ್ದಾದೆ. ಆದರೆ ನಯನತಾರಾ ಸಿನಿಮಾದ ನಾಯಕಿ ಎಂದೇ ಪರಿಗಣಿತವಾಗಿದ್ದಾರೆ. ಶಾರುಖ್ ಖಾನ್ ಜೊತೆ ಕೆಲವು ರೊಮ್ಯಾಂಟಿಕ್ ದೃಶ್ಯಗಳು, ರೊಮ್ಯಾಂಟಿಕ್ ಹಾಡಿನಲ್ಲಿ ನಯನತಾರಾ ಕಾಣಿಸಿಕೊಂಡಿದ್ದಾರೆ. ಮೊದಲ ಬಾರಿಗೆ ಶಾರುಖ್ ಖಾನ್ ಜೊತೆ ನಟಿಸಿರುವ ನಯನತಾರಾಗೆ 10 ಕೋಟಿ ಸಂಭಾವನೆಯನ್ನು ಶಾರುಖ್ ಖಾನ್ರ ರೆಡ್ ಚಿಲ್ಲೀಸ್ ಸಂಸ್ಥೆ ನೀಡಿದೆ ಎನ್ನಲಾಗುತ್ತಿದೆ.
ಇನ್ನು ಸಿನಿಮಾದಲ್ಲಿ ವಿಜಯ್ ಸೇತುಪತಿ, ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಿಜಯ್ಗೂ ಸಹ ಇದು ಅವರೊಟ್ಟಿಗೆ ಮೊದಲ ಸಿನಿಮಾ. ಸ್ವತಃ ವಿಜಯ್ ಸೇತುಪತಿ ಅವರೇ ಶಾರುಖ್ ಖಾನ್ ಬಳಿ ಕೇಳಿ ಈ ಪಾತ್ರವನ್ನು ಪಡೆದುಕೊಂಡರಂತೆ. ವಿಜಯ್ ಸೇತುಪತಿ ಎರಡು ಶೇಡ್ನಲ್ಲಿ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದು, ಸಿನಿಮಾದಲ್ಲಿ ಅವರ ಪಾತ್ರದ ಹೆಸರು ಕಾಲಿ ಗಾಯಕ್ವಾಡ್. ವಿಜಯ್ ಸೇತುಪತಿಗೆ ಶಾರುಖ್ ಖಾನ್ 23 ಕೋಟಿ ಸಂಭಾವನೆ ನೀಡಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ:ತಿರುಪತಿಗೆ ಭೇಟಿ ನೀಡಲು ರೆಡಿ ಆದ ಶಾರುಖ್ ಖಾನ್; ವ್ಯಕ್ತವಾಗುತ್ತಿದೆ ಭಾರೀ ವಿರೋಧ
ಇನ್ನು ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಸಹ ಇದ್ದಾರೆ. ಆದರೆ ಅವರದ್ದು ಅತಿಥಿ ಪಾತ್ರವಷ್ಟೆ. ಹಾಗಿದ್ದರೂ ಸಹ ದೀಪಿಕಾ ಪಡುಕೋಣೆಗೆ ಐದು ಕೋಟಿ ಸಂಭಾವನೆಯನ್ನು ಶಾರುಖ್ ಖಾನ್ ನೀಡಿದ್ದಾರೆ ಎನ್ನಲಾಗುತ್ತಿದೆ. ಇನ್ನು ನಟಿ ಪ್ರಿಯಾ ಮಣಿ, ಸಾನ್ಯಾ ಮಲ್ಹೋತ್ರಾ, ರಿಧಿ ದೋಗ್ರಾ, ಸಂಗೀತ ಭಟ್ಟಾಚಾರ್ಯ ಅವರುಗಳು ಸಹ ಸಿನಿಮಾದಲ್ಲಿದ್ದು ಪ್ರಿಯಾಮಣಿ, ಸಾನ್ಯಾಗೆ 3 ಕೋಟಿ, ರಿಧಿ ದೋಗ್ರಾ, ಸಂಗೀತಾಗೆ ತಲಾ ಒಂದು ಕೋಟಿ ಸಂಭಾವನೆ ದೊರೆತಿದೆಯಂತೆ. ಇನ್ನು ಹಾಸ್ಯನಟರಾದ ಯೋಗಿ ಬಾಬು ಹಾಗೂ ಸುನಿಲ್ ಗ್ರೋವರ್ ಅವರುಗಳಿಗೆ ತಲಾ ಎರಡು ಕೋಟಿ ಸಂಭಾವನೆ ನೀಡಲಾಗಿದೆ ಎನ್ನಲಾಗುತ್ತಿದೆ.
‘ಜವಾನ್’ ಸಿನಿಮಾದಲ್ಲಿ ಶಾರುಖ್ ಖಾನ್ ಹಲವು ಶೇಡ್ನಲ್ಲಿ ಕಾಣಿಸಿಕೊಂಡಿದ್ದಾರೆ. ಸೈನ್ಯಾಧಿಕಾರಿ, ಪೊಲೀಸ್ ಅಧಿಕಾರಿ, ಪ್ರಯಾಣಿಕರನ್ನು ಒತ್ತೆಯಿಟ್ಟುಕೊಂಡಿರುವ ಅಪಹರಣಕಾರ, ಜನರಿಗಾಗಿ ಕೆಲಸ ಮಾಡುವ ರಾಬಿನ್ ಹುಡ್ ಮಾದರಿಯಲ್ಲಿಯೂ ಶಾರುಖ್ ಖಾನ್ ಕಾಣಿಸಿಕೊಂಡಿದ್ದಾರೆ. ಸಿನಿಮಾ ನೋಡಿದವರು ಫೈಟ್ಗಳು, ಹಾಡು, ಹಿನ್ನೆಲೆ ಸಂಗೀತಕ್ಕೆ ಮಾರು ಹೋಗಿದ್ದಾರೆ. ಸಿನಿಮಾವನ್ನು ತಮಿಳಿನ ಜನಪ್ರಿಯ ನಿರ್ದೇಶಕ ಅಟ್ಲಿ ನಿರ್ದೇಶನ ಮಾಡಿದ್ದಾರೆ. ಸಂಗೀತ ನೀಡಿರುವುದು ಅನಿರುದ್ಧ್ ರವಿಚಂದ್ರನ್.