Jawan Twitter Review: ‘ಜವಾನ್​’ ಮೊದಲ ಶೋ ನೋಡಿ ಬ್ಲಾಕ್​ ಬಸ್ಟರ್​ ಎಂದು ಘೋಷಿಸಿದ ಪ್ರೇಕ್ಷಕರು

ಮೊದಲ ದಿನ ‘ಜವಾನ್​’ ಸಿನಿಮಾಗೆ ಅತ್ಯುತ್ತಮ ರೆಸ್ಪಾನ್ಸ್​ ಸಿಕ್ಕಿದೆ. ‘ಶಾರುಖ್​ ಖಾನ್​ ಅವರಿಂದಾಗಿ ಚಿತ್ರಮಂದಿರಗಳಲ್ಲಿ ಮತ್ತೆ ಹಬ್ಬದ ವಾತಾವರಣ ನಿರ್ಮಾಣ ಆಗಿದೆ’ ಎಂದು ನೆಟ್ಟಿಗರು ಪೋಸ್ಟ್​ ಮಾಡಿದ್ದಾರೆ. ‘ಇಂಥ ಸಿನಿಮಾಗಾಗಿಯೇ ನಾವು ಇಷ್ಟು ದಿನ ಕಾದಿದ್ದೆವು. ಇದು ಪೈಸಾ ವಸೂಲ್​ ಸಿನಿಮಾ’ ಎಂದು ಅಭಿಮಾನಿಗಳು ಟ್ವೀಟ್​ ಮಾಡಿದ್ದಾರೆ.

Jawan Twitter Review: ‘ಜವಾನ್​’ ಮೊದಲ ಶೋ ನೋಡಿ ಬ್ಲಾಕ್​ ಬಸ್ಟರ್​ ಎಂದು ಘೋಷಿಸಿದ ಪ್ರೇಕ್ಷಕರು
ಶಾರುಖ್​ ಖಾನ್​
Follow us
ಮದನ್​ ಕುಮಾರ್​
|

Updated on: Sep 07, 2023 | 1:34 PM

ಅಟ್ಲಿ ನಿರ್ದೇಶನದ ‘ಜವಾನ್​’ ಸಿನಿಮಾ (Jawan Movie) ಇಂದು (ಸೆಪ್ಟೆಂಬರ್​ 7) ಭರ್ಜರಿ ಓಪನಿಂಗ್ ಪಡೆದುಕೊಂಡಿದೆ. ಶಾರುಖ್​ ಖಾನ್​ ಅಭಿಮಾನಿಗಳು ಈ ಸಿನಿಮಾವನ್ನು ಗ್ರ್ಯಾಂಡ್ ಆಗಿ ಬರಮಾಡಿಕೊಂಡಿದ್ದಾರೆ. ಅನೇಕ ಕಡೆಗಳಲ್ಲಿ ಮುಂಜಾನೆ 6.30ಕ್ಕೆ ಶೋ ಆರಂಭ ಆಗಿದೆ. ಫಸ್ಟ್​ ಡೇ ಫಸ್ಟ್​ ಶೋ ನೋಡಿ ಬಂದ ಪ್ರೇಕ್ಷಕರು ಸೋಶಿಯಲ್​ ಮೀಡಿಯಾ ಮೂಲಕ ತಮ್ಮ ಅನಿಸಿಕೆ ಹಂಚಿಕೊಳ್ಳುತ್ತಿದ್ದಾರೆ. ಶಾರುಖ್​ ಖಾನ್​ (Shah Rukh Khan) ಫ್ಯಾನ್ಸ್​ಗೆ ಈ ಸಿನಿಮಾ ತುಂಬ ಇಷ್ಟ ಆಗಿದೆ. ಚಿತ್ರಮಂದಿರದಿಂದ ಹೊರಬರುತ್ತಿದ್ದಂತೆಯೇ ‘ಜವಾನ್​’ ಸಿನಿಮಾವನ್ನು ಬ್ಲಾಕ್​ ಬಸ್ಟರ್​ ಎಂದು ಅಭಿಮಾನಿಗಳು ಘೋಷಿಸುತ್ತಿದ್ದಾರೆ. ಶಾರುಖ್​ ಖಾನ್​, ದೀಪಿಕಾ ಪಡುಕೋಣೆ, ವಿಜಯ್​ ಸೇತುಪತಿ, ನಯನತಾರಾ ಮುಂತಾದ ಕಲಾವಿದರ ನಟನೆಗೆ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಟ್ವಿಟರ್​ ಮೂಲಕ ಜನರು ತಮ್ಮ ವಿಮರ್ಶೆ (Jawan Twitter Review) ತಿಳಿಸಿದ್ದಾರೆ.

ನಿರ್ದೇಶಕ ಅಟ್ಲಿ ಅವರಿಗೆ ಪ್ರೇಕ್ಷಕರಿಂದ ಮೆಚ್ಚುಗೆ ಸಿಕ್ಕಿದೆ. ಆ್ಯಕ್ಷನ್​ ಮತ್ತು ಎಮೋಷನ್​ ಮಿಶ್ರಣ ಮಾಡಿರುವ ನಿರ್ದೇಶಕರ ಶೈಲಿಯನ್ನು ಫ್ಯಾನ್ಸ್​ ಇಷ್ಟಪಟ್ಟಿದ್ದಾರೆ. ‘ಈ ಇಡೀ ವರ್ಷ ಶಾರುಖ್​ ಖಾನ್​ ಅವರಿಗೆ ಸೇರಿದ್ದು. ಜವಾನ್​ ಸಿನಿಮಾವನ್ನು ಮಿಸ್​ ಮಾಡಿಕೊಳ್ಳಬೇಡಿ’ ಎಂದು ಅಭಿಮಾನಿಯೊಬ್ಬರು ಟ್ವೀಟ್​ ಮಾಡಿದ್ದಾರೆ. ಚಿತ್ರಮಂದಿರದಲ್ಲಿ ಜನರು ಹುಚ್ಚೆದ್ದು ಕುಣಿಯುತ್ತಿರುವ ವಿಡಿಯೋವನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ.

‘ಶಾರುಖ್​ ಖಾನ್​ ಅವರಿಂದಾಗಿ ಚಿತ್ರಮಂದಿರಗಳಲ್ಲಿ ಮತ್ತೆ ಹಬ್ಬದ ವಾತಾವರಣ ನಿರ್ಮಾಣ ಆಗಿದೆ’ ಎಂದು ನೆಟ್ಟಿಗರು ಪೋಸ್ಟ್​ ಮಾಡಿದ್ದಾರೆ. ‘ಇಂಥ ಸಿನಿಮಾಗಾಗಿಯೇ ನಾವು ಇಷ್ಟು ದಿನ ಕಾದಿದ್ದೆವು. ಆ್ಯಕ್ಷನ್​, ಡ್ರಾಮಾ, ಸೆಂಟಿಮೆಂಟ್​, ನಗು, ಅಳು, ಅತಿಥಿ ಪಾತ್ರ… ಹೀಗೆ ಎಲ್ಲವೂ ಚೆನ್ನಾಗಿವೆ’ ಎಂದು ಪ್ರೇಕ್ಷಕರೊಬ್ಬರು ಟ್ವೀಟ್​ ಮಾಡಿದ್ದಾರೆ. ಸಂಗೀತ ನಿರ್ದೇಶಕ ಅನಿರುದ್ಧ್​ ರವಿಚಂದರ್​ ಅವರ ಕೆಲಸಕ್ಕೂ ಜನರು ಭೇಷ್​ ಎಂದಿದ್ದಾರೆ. ಆ್ಯಕ್ಷನ್​ ದೃಶ್ಯಗಳಿಗೆ ಶಾರುಖ್​ ಖಾನ್​ ಅಭಿಮಾನಿಗಳು ಫಿದಾ ಆಗಿದ್ದಾರೆ.

‘ಉತ್ತರ ಭಾರತದಲ್ಲಿ ಹಿಂದಿ ಸಿನಿಮಾಗಳಿಗೆ ಜನರು ಈ ರೀತಿ ಪ್ರತಿಕ್ರಿಯೆ ನೀಡಿದ್ದನ್ನು ನಾನು ಕಂಡಿರಲಿಲ್ಲ. ನಿರ್ದೇಶಕರು ಅಟ್ಲಿ ಅವರು ಹಿಂದಿ ಸಿನಿಮಾಗಳ ಕಮರ್ಷಿಯಲ್​ ಸೂತ್ರವನ್ನು ಹೊಸದಾಗಿ ಬರೆದಿದ್ದಾರೆ’ ಎಂಬ ಅಭಿಪ್ರಾಯ ಪ್ರೇಕ್ಷಕರಿಂದ ವ್ಯಕ್ತವಾಗಿದೆ.

ಇಷ್ಟು ದಿನಗಳ ಕಾಲ ಚಿತ್ರಮಂದಿರದಲ್ಲಿ ‘ಗದರ್​ 2’ ಸಿನಿಮಾ ಅಬ್ಬರಿಸುತ್ತಿತ್ತು. ಈಗ ‘ಜವಾನ್​’ ಹವಾ ಶುರುವಾಗಿದೆ. ‘ಗದರ್​ 2’ ಚಿತ್ರದ ನಿರ್ದೇಶಕ ಅನಿಲ್​ ಶರ್ಮಾ ಅವರು ಟ್ವಿಟರ್​ ಮೂಲಕ ಶಾರುಖ್​ ಖಾನ್​ಗೆ ಶುಭ ಕೋರಿದ್ದಾರೆ.

ಇದನ್ನೂ ಓದಿ: Jawan Movie Review: ಶಾರುಖ್​ ಖಾನ್​ ಅಭಿಮಾನಿಗಳಿಗಾಗಿ ಅಟ್ಲಿ ಮಾಡಿದ ಮಿಕ್ಸ್​ ಮಸಾಲಾ ಸಿನಿಮಾ

‘ಈ ಚಿತ್ರದ ಮೂಲಕ ಶಾರುಖ್​ ಖಾನ್​ ಅವರು ತಮ್ಮ ಮೌನ ಮುರಿದಿದ್ದಾರೆ. ಬಾಲಿವುಡ್​ಗೆ ಚೈತನ್ಯ ನೀಡುವಂತಹ ಸಿನಿಮಾ ಬರಬೇಕು ಅಂತ ನಾವು ಕಾದಿದ್ದೆವು. ಜವಾನ್​ ಸಿನಿಮಾದಿಂದ ಸಾಧ್ಯವಾಗುತ್ತಿದೆ’ ಎಂದು ಜನರು ಟ್ವೀಟ್​ ಮಾಡಿದ್ದಾರೆ.

‘ಈ ಸಿನಿಮಾ ಸಾರ್ವಕಾಲಿಕ ಹಿಟ್​ ಆಗಲಿದೆ. ನಿರ್ದೇಶಕ ಅಟ್ಲಿ ಅವರು ಮನರಂಜನೆಯ ಜೊತೆಗೆ ಬಹಳ ಮುಖ್ಯವಾದ ಸೋಶಿಯಲ್​ ಮೆಸೇಜ್​ ನೀಡಿದ್ದಾರೆ’ ಎಂಬ ಅಭಿಪ್ರಾಯ ಪ್ರೇಕ್ಷಕರಿಂದ ವ್ಯಕ್ತವಾಗುತ್ತಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್