‘ಕೆಜಿಎಫ್ 2’, ‘ಪಠಾಣ್​’ ದಾಖಲೆಗಳು ಉಡೀಸ್; ‘ಜವಾನ್’ ಸಿನಿಮಾದ ಮೊದಲ ದಿನದ ಕಲೆಕ್ಷನ್ ವಿವರ ಇಲ್ಲಿದೆ

Jawan Movie First Day Collection: ‘ಪಠಾಣ್’ ಸಿನಿಮಾ ಮೊದಲ ದಿನ 57 ಕೋಟಿ ರೂಪಾಯಿ ಬಾಚಿಕೊಂಡಿತ್ತು. ಯಶ್ ನಟನೆಯ ‘ಕೆಜಿಎಫ್ 2’ ಚಿತ್ರ (ಹಿಂದಿ ಅವತರಣಿಕೆ) 53 ಕೋಟಿ ರೂಪಾಯಿ ಬಾಚಿಕೊಂಡಿತ್ತು. ‘ಜವಾನ್’ ಸಿನಿಮಾ ಈ ದಾಖಲೆಯನ್ನು ಪುಡಿ ಮಾಡಿದೆ. ಚಿತ್ರದ ಹಿಂದಿ ಅವತರಣಿಕೆಗೆ 65 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ.

‘ಕೆಜಿಎಫ್ 2’, ‘ಪಠಾಣ್​’ ದಾಖಲೆಗಳು ಉಡೀಸ್; ‘ಜವಾನ್’ ಸಿನಿಮಾದ ಮೊದಲ ದಿನದ ಕಲೆಕ್ಷನ್ ವಿವರ ಇಲ್ಲಿದೆ
ಶಾರುಖ್

Updated on: Sep 08, 2023 | 8:42 AM

‘ಜವಾನ್’ ಸಿನಿಮಾ (Jawan Movie) ಸೆಪ್ಟೆಂಬರ್ 7ರಂದು ರಿಲೀಸ್ ಆಗಿ ಅಬ್ಬರದ ಗಳಿಕೆ ಮಾಡಿದೆ. ಹಲವು ಕಡೆಗಳಲ್ಲಿ ಈ ಚಿತ್ರ ಹೌಸ್​​ಫುಲ್ ಪ್ರದರ್ಶನ ಕಂಡಿದೆ. ಇದು ಚಿತ್ರದ ಗಳಿಕೆಗೆ ಸಹಕಾರಿ ಆಗಿದೆ. ಬಾಲಿವುಡ್ ಬಾಕ್ಸ್ ಆಫೀಸ್ ವರದಿಗಳ ಪ್ರಕಾರ ಈ ಚಿತ್ರ ಭಾರತದಲ್ಲಿ ಮೊದಲ ದಿನ ಸುಮಾರು 75 ಕೋಟಿ ರೂಪಾಯಿ ಗಳಿಕೆ ಮಾಡಿದೆ! ಹಿಂದಿ ಭಾಷೆಯಲ್ಲೇ ಈ ಚಿತ್ರಕ್ಕೆ 65 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ಈ ಮೂಲಕ ತಮ್ಮದೇ ದಾಖಲೆಯನ್ನು ಶಾರುಖ್ ಖಾನ್ (Shah Rukh Khan) ಪುಡಿ ಮಾಡಿದ್ದಾರೆ.

‘ಪಠಾಣ್’ ಸಿನಿಮಾ ಮೊದಲ ದಿನ 57 ಕೋಟಿ ರೂಪಾಯಿ ಬಾಚಿಕೊಂಡಿತ್ತು. ಯಶ್ ನಟನೆಯ ‘ಕೆಜಿಎಫ್ 2’ ಚಿತ್ರ (ಹಿಂದಿ ಅವತರಣಿಕೆ) 53 ಕೋಟಿ ರೂಪಾಯಿ ಬಾಚಿಕೊಂಡಿತ್ತು. ‘ಜವಾನ್’ ಸಿನಿಮಾ ಈ ದಾಖಲೆಯನ್ನು ಪುಡಿ ಮಾಡಿದೆ. ಚಿತ್ರದ ಹಿಂದಿ ಅವತರಣಿಕೆಗೆ 65 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ಈ ಮೂಲಕ ಹಿಂದಿ ಸಿನಿಮಾ ಮೊದಲ ದಿನ ಇಷ್ಟು ದೊಡ್ಡ ಮಟ್ಟದಲ್ಲಿ ಗಳಿಕೆ ಮಾಡಿದ್ದು ಇದೇ ಮೊದಲು. ಇನ್ನು, ತೆಲುಗು ಹಾಗೂ ತಮಿಳು ಭಾಷೆಯಿಂದ ಚಿತ್ರಕ್ಕೆ ತಲಾ 5 ಕೋಟಿ ರೂಪಾಯಿ ಸೇರ್ಪಡೆ ಆಗಿದೆ.

ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಸೆಪ್ಟೆಂಬರ್ 7ರಂದು ಕೆಲವು ಕಡೆಗಳಲ್ಲಿ ರಜೆ ಇತ್ತು. ಇದು ‘ಜವಾನ್’ಗೆ ಸಹಕಾರಿ ಆಗಿದೆ. ಇಂದು (ಸೆಪ್ಟೆಂಬರ್ 8) ಒಳ್ಳೆಯ ರೀತಿಯಲ್ಲಿ ಗಳಿಕೆ ಆಗುವ ಸಾಧ್ಯತೆ ಇದೆ. ಶನಿವಾರ (ಸೆಪ್ಟೆಂಬರ್ 9) ಹಾಗೂ ಭಾನುವಾರ (ಸೆಪ್ಟೆಂಬರ್ 10) ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಅಬ್ಬರಿಸೋದು ಪಕ್ಕಾ ಎನ್ನಲಾಗುತ್ತಿದೆ. ಗಣೇಶ ಚತುರ್ಥಿ ಕೂಡ ಆಗಮಿಸುತ್ತಿದೆ. ಇದು ಚಿತ್ರಕ್ಕೆ ಸಹಕಾರಿ ಆಗಲಿದೆ.

‘ಜವಾನ್’ ಸಿನಿಮಾ ಇಷ್ಟು ದೊಡ್ಡ ಮೊತ್ತದಲ್ಲಿ ಗಳಿಕೆ ಮಾಡಲು ದುಬಾರಿ ಟಿಕೆಟ್ ಬೆಲೆ ಕೂಡ ಕಾರಣ ಎನ್ನಲಾಗುತ್ತಿದೆ. ಬೆಂಗಳೂರು ಸೇರಿ ಹಲವು ಕಡೆಗಳಲ್ಲಿ ಟಿಕೆಟ್ ದರ ದುಬಾರಿ ಆಗಿದೆ. ಇದು ಚಿತ್ರಕ್ಕೆ ಸಹಕಾರಿ ಆಗಿದೆ. ಇಷ್ಟು ದೊಡ್ಡ ಮೊತ್ತ ನಿಗದಿ ಮಾಡಿದರೂ ಫ್ಯಾನ್ಸ್ ಚಿತ್ರವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ವೀಕೆಂಡ್​ನಲ್ಲೂ ಟಿಕೆಟ್ ದರ ದುಬಾರಿಯಾಗಿದೆ.

ಇದನ್ನೂ ಓದಿ: ಶಾರುಖ್​ ಖಾನ್​ ನಟನೆಯ ‘ಜವಾನ್​’ ಚಿತ್ರಕ್ಕೆ ಭರ್ಜರಿ ಓಪನಿಂಗ್​

ಶಾರುಖ್ ಖಾನ್ ಅವರು ದಾಖಲೆಯ ಮೇಲೆ ದಾಖಲೆ ಬರೆಯುತ್ತಿದ್ದಾರೆ. ಈ ಮೊದಲು ರಿಲೀಸ್ ಆದ ‘ಪಠಾಣ್​’ ಸಿನಿಮಾದ ಒಟ್ಟಾರೆ ಕಲೆಕ್ಷನ್ 540 ಕೋಟಿ ರೂಪಾಯಿ ಇದೆ. ‘ಜವಾನ್’ ಈ ದಾಖಲೆಯನ್ನು ಪುಡಿಗಟ್ಟಿದರೂ ಅಚ್ಚರಿ ಏನಿಲ್ಲ ಅನ್ನೋದು ಅನೇಕರ ಅಭಿಪ್ರಾಯ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 8:26 am, Fri, 8 September 23

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us