ಶಾರುಖ್-ಸಲ್ಮಾನ್-ಹೃತಿಕ್​ಗೆ ಠಕ್ಕರ್ ಕೊಡಲಿದ್ದಾರೆ ಜೂ ಎನ್​ಟಿಆರ್

|

Updated on: Mar 06, 2024 | 12:39 PM

Jr NTR: ‘ಆರ್​ಆರ್​ಆರ್​’ ಸಿನಿಮಾದ ಬಳಿಕ ದೊಡ್ಡ ಸ್ಟಾರ್ ಆಗಿರುವ ಜೂ ಎನ್​ಟಿಆರ್ ಈಗ ಬಾಲಿವುಡ್​ನ ಸ್ಟಾರ್ ನಟರಾದ ಶಾರುಖ್ ಖಾನ್, ಹೃತಿಕ್ ರೋಷನ್, ಸಲ್ಮಾನ್ ಖಾನ್ ಅವರುಗಳಿಗೆ ಠಕ್ಕರ್ ಕೊಡಲು ಸಜ್ಜಾಗಿದ್ದಾರೆ.

ಶಾರುಖ್-ಸಲ್ಮಾನ್-ಹೃತಿಕ್​ಗೆ ಠಕ್ಕರ್ ಕೊಡಲಿದ್ದಾರೆ ಜೂ ಎನ್​ಟಿಆರ್
Follow us on

ಜೂ ಎನ್​ಟಿಆರ್ (Jr NTR) ಭಾರತದ ಅತ್ಯುತ್ತಮ ಕಮರ್ಶಿಯಲ್ ನಟರಲ್ಲಿ ಒಬ್ಬರು. ಕಮರ್ಶಿಯಲ್ ಸಿನಿಮಾ ನಾಯಕನಿಗೆ ಬೇಕಾದ ಎಲ್ಲ ಅರ್ಹತೆಗಳಿರುವ ಜೊತೆಗೆ ನಟನಾ ಪ್ರತಿಭೆಯನ್ನೂ ಹೊಂದಿರುವ ಕೆಲವೇ ನಟರಲ್ಲಿ ಜೂ ಎನ್​ಟಿಆರ್ ಸಹ ಒಬ್ಬರು. ಫೈಟ್-ಡ್ಯಾನ್ಸ್ ಅದ್ಭುತವಾಗಿ ಮಾಡುವ ಜೂ ಎನ್​ಟಿಆರ್ ಒಳ್ಳೆಯ ನಟರೂ ಸಹ ಹೌದು. ‘ಆರ್​ಆರ್​ಆರ್’ ಸಿನಿಮಾದ ಬಳಿಕ ಪ್ಯಾನ್ ಇಂಡಿಯಾ ಮಾತ್ರವಲ್ಲ ಪ್ಯಾನ್ ವರ್ಲ್ಡ್ ನಟರಾಗಿ ಬೆಳೆದಿರುವ ಜೂ ಎನ್​ಟಿಆರ್, ಇದೀಗ ಬಾಲಿವುಡ್​ನ ದೊಡ್ಡ ನಟರಿಗೆ ಠಕ್ಕರ್ ಕೊಡಲು ಸಜ್ಜಾಗಿದ್ದಾರೆ.

ಜೂ ಎನ್​ಟಿಆರ್, ಬಾಲಿವುಡ್​ನ ‘ವಾರ್ 2’ ಸಿನಿಮಾದಲ್ಲಿ ಹೃತಿಕ್ ರೋಷನ್ ಜೊತೆಗೆ ನಟಿಸುವುದು ಖಾತ್ರಿಯಾಗಿದೆ. ಸಿನಿಮಾವನ್ನು ಆದಿತ್ಯ ಚೋಪ್ರಾ ನಿರ್ದೇಶನ ಮಾಡಲಿದ್ದು, ಯಶ್ ರಾಜ್ ಫಿಲಮ್ಸ್​ ಬ್ಯಾನರ್​ನಡಿ ನಿರ್ಮಾಣಗೊಳ್ಳಲಿದೆ. ‘ವಾರ್ 2’ ಸಿನಿಮಾನಲ್ಲಿ ಜೂ ಎನ್​ಟಿಆರ್ ಪಾತ್ರವನ್ನು ವಿಶೇಷವಾಗಿ ಸಿದ್ಧಪಡಿಸಲಾಗಿದೆ. ಇನ್ನೊಂದು ವಿಶೇಷವೆಂದರೆ ಜೂ ಎನ್​ಟಿಆರ್ ಪಾತ್ರ ಒಂದನ್ನೇ ಪ್ರಧಾನವಾಗಿರಿಸಿಕೊಂಡು ಮತ್ತೊಂದು ಸಿನಿಮಾ ಮಾಡಲು ಸಹ ಆದಿತ್ಯ ಚೋಪ್ರಾ ಈಗಾಗಲೇ ರೆಡಿಯಾಗಿದ್ದಾರೆ.

‘ವಾರ್ 2’ ಸಿನಿಮಾನಲ್ಲಿನ ಜೂ ಎನ್​ಟಿಆರ್ ಪಾತ್ರವನ್ನಷ್ಟೆ ಇರಿಸಿಕೊಂಡು ಆದಿತ್ಯ ಚೋಪ್ರಾ ಈಗಾಗಲೇ ಕತೆಯನ್ನು ತಯಾರು ಮಾಡಿದ್ದು ಚಿತ್ರಕತೆಗೆ ಅಂತಿಮ ರೂಪು-ರೇಷೆಯನ್ನಷ್ಟೆ ನೀಡಬೇಕಿದೆ. ಈ ಕಾರ್ಯದಲ್ಲಿ ಆದಿತ್ಯ ಚೋಪ್ರ ನಿರತರಾಗಿದ್ದಾರೆ. ‘ವಾರ್ 2’ ಸಿನಿಮಾದ ಚಿತ್ರೀಕರಣ ಮುಗಿಯುತ್ತಲೇ ಜೂ ಎನ್​ಟಿಆರ್ ಸ್ಪಿನ್ ಆಫ್ ಸಿನಿಮಾದ ಚಿತ್ರೀಕರಣವನ್ನು ಪ್ರಾರಂಭ ಮಾಡಲಿದ್ದಾರೆ. ಅಲ್ಲಿಗೆ ಯಶ್ ರಾಜ್ ಫಿಲಮ್ಸ್​ನ ‘ಸ್ಪೈ ಯೂನಿವರ್ಸ್​’ಗೆ ಜೂ ಎನ್​ಟಿಆರ್ ಅಧಿಕೃತವಾಗಿ ಸೇರ್ಪಡೆಗೊಂಡಂತಾಗುತ್ತದೆ.

ಇದನ್ನೂ ಓದಿ:ಜೂ ಎನ್​ಟಿಆರ್​ಗೆ ಇಬ್ಬರು ನಾಯಕಿಯರು, ‘ದೇವರ’ ತಂಡಕ್ಕೆ ಮತ್ತೊಬ್ಬ ನಟಿ ಎಂಟ್ರಿ

‘ಪಠಾಣ್’, ‘ಟೈಗರ್’ ‘ವಾರ್’ ಸಿನಿಮಾದ ಮನೋಜ್ ಕಬೀರ್ ಪಾತ್ರಗಳನ್ನು ಯಶ್ ರಾಜ್ ಫಿಲಮ್ಸ್​ ಈಗಾಗಲೇ ಗೂಢಚಾರಿಗಳಾಗಿ ಪರಿಚಯಿಸಿವೆ. ಇದೀಗ ಈ ಗೂಢಚಾರಿಗಳ ಗುಂಪಿಗೆ ಜೂ ಎನ್​ಟಿಆರ್ ಸಹ ಸೇರ್ಪಡೆಗೊಳ್ಳಲಿದ್ದಾರೆ. ವಿಶೇಷವೆಂದರೆ ‘ವಾರ್ 2’ ಸಿನಿಮಾನಲ್ಲಿ ಜೂ ಎನ್​ಟಿಆರ್ ದಕ್ಷಿಣ ಭಾರತದ ವ್ಯಕ್ತಿಯ ಪಾತ್ರದಲ್ಲಿ ಅಥವಾ ಗೂಢಚಾರಿಯ ಪಾತ್ರದಲ್ಲಿ ನಟಿಸಲಿದ್ದಾರೆ. ಅದೇ ಪಾತ್ರದ ಸ್ಪಿನ್​ ಆಫ್​ನಲ್ಲಿಯೂ ನಟಿಸಲಿದ್ದಾರೆ.

ಜೂ ಎನ್​ಟಿಆರ್ ಪ್ರಸ್ತುತ ‘ದೇವರ’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಸಿನಿಮಾವನ್ನು ಕೊರಟಾಲ ಶಿವ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾಕ್ಕೆ ಜೂ ಎನ್​ಟಿಆರ್​ರ ಸಹೋದರ ಸೇರಿದಂತೆ ಇನ್ನೂ ಕೆಲವರು ಬಂಡವಾಳ ಹೂಡಿದ್ದು, ಸಿನಿಮಾದಲ್ಲಿ ಬಾಲಿವುಡ್ ಬೆಡಗಿ ಜಾನ್ಹವಿ ಕಪೂರ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಸಿನಿಮಾಕ್ಕಾಗಿ ಕೆಲವು ಹಾಲಿವುಡ್ ತಂತ್ರಜ್ಞರನ್ನು ಕರೆತರಲಾಗಿದೆ. ಸಿನಿಮಾದ ಚಿತ್ರೀಕರಣ ಭರದಿಂದ ಸಾಗಿದೆ. ಈ ಸಿನಿಮಾದ ಬಳಿಕ ‘ವಾರ್ 2’ನಲ್ಲಿ ಜೂ ಎನ್​ಟಿಆರ್ ತೊಡಗಿಕೊಳ್ಳಲಿದ್ದಾರೆ. ಅದಾದ ಬಳಿಕ ಪ್ರಶಾಂತ್ ನೀಲ್ ಸಿನಿಮಾದಲ್ಲಿ ಜೂ ಎನ್​ಟಿಆರ್ ನಟಿಸಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ