ಖ್ಯಾತ ನಟಿ ಕಾಜೋಲ್ (Kajol) ಅವರು ಬಾಲಿವುಡ್ನಲ್ಲಿ ಸಕ್ರಿಯರಾಗಿದ್ದಾರೆ. ಇಂದು (ಆಗಸ್ಟ್ 5) ಅವರಿಗೆ ಜನ್ಮದಿನದ (Kajol Birthday) ಸಂಭ್ರಮ. ಆ ಪ್ರಯುಕ್ತ ಎಲ್ಲರೂ ಶುಭ ಕೋರುತ್ತಿದ್ದಾರೆ. ಅಭಿಮಾನಿಗಳು ತಮ್ಮ ನೆಚ್ಚಿನ ನಟಿಯ ಹುಟ್ಟುಹಬ್ಬವನ್ನು ಸೆಲೆಬ್ರೇಟ್ ಮಾಡುತ್ತಿದ್ದಾರೆ. ಹಲವು ವರ್ಷಗಳಿಂದ ಆ್ಯಕ್ಟೀವ್ ಆಗಿರುವ ಕಾಜೋಲ್ ಅವರು ಇತ್ತೀಚೆಗೆ ಚ್ಯೂಸಿ ಆಗಿದ್ದಾರೆ. ತಮಗೆ ಸರಿಹೊಂದುವ ಪ್ರಾಜೆಕ್ಟ್ಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳುತ್ತಾರೆ. ಡಿಫರೆಂಟ್ ಆದಂತಹ ಪಾತ್ರಗಳಿಗೆ ಅವರು ಬಣ್ಣ ಹಚ್ಚುತ್ತಿದ್ದಾರೆ. ಅಂದಹಾಗೆ, ಈಗ ಕಾಜೋಲ್ ಅವರಿಗೆ ವಯಸ್ಸು (Kajol Age) ಎಷ್ಟು? 49 ವರ್ಷ. ಈಗಲೂ ಕೂಡ ಕಾಜೋಲ್ ಅವರು ಹದಿಹರೆಯದ ಯುವತಿಯರಂತೆ ಮಿಂಚುತ್ತಿದ್ದಾರೆ. ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ನೂರಾರು ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಅವರು ಹೊಂದಿದ್ದಾರೆ.
ಕಾಜೋಲ್ ಅವರು ಚಿತ್ರರಂಗಕ್ಕೆ ಕಾಲಿಟ್ಟಿದ್ದು 1992ರಲ್ಲಿ. ಶಾರುಖ್ ಖಾನ್ ಜೊತೆ ಅವರು ತೆರೆ ಹಂಚಿಕೊಂಡ ಸಿನಿಮಾಗಳು ಎಂದರೆ ಅಭಿಮಾನಿಗಳಿಗೆ ಸಖತ್ ಇಷ್ಟ. ‘ಬಾಜಿಗರ್’, ‘ಡಿಡಿಎಲ್ಜೆ’ ಮುಂತಾದ ಸಿನಿಮಾಗಳ ಮೂಲಕ ಕಾಜೋಲ್ ಮನೆಮಾತಾದರು. ಇಂದಿಗೂ ಬಾಲಿವುಡ್ನಲ್ಲಿ ಕಾಜೋಲ್ ಅವರಿಗೆ ಅಷ್ಟೇ ಬೇಡಿಕೆ ಇದೆ. ಈ ವರ್ಷ ಬಿಡುಗಡೆ ಆದ ‘ಲಸ್ಟ್ ಸ್ಟೋರೀಸ್ 2’ ಸಿನಿಮಾದಲ್ಲಿ ಅವರು ನಟಿಸಿ ಗಮನ ಸೆಳೆದಿದ್ದಾರೆ.
ಇದನ್ನೂ ಓದಿ: Kajol: ‘ಪಠಾಣ್’ ಕಲೆಕ್ಷನ್ ಬಗ್ಗೆ ಬಹಿರಂಗವಾಗಿ ಅನುಮಾನ ವ್ಯಕ್ತಪಡಿಸಿದ ಕಾಜೋಲ್; ಶಾರುಖ್ ಅಭಿಮಾನಿಗಳು ಗರಂ
ಪ್ರತಿ ಸಿನಿಮಾಗಳಿಗೂ ಕಾಜೋಲ್ ಅವರು ಕೋಟ್ಯಂತರ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಹಲವು ಕ್ಷೇತ್ರಗಳಲ್ಲಿ ಅವರು ಹೂಡಿಕೆ ಮಾಡಿದ್ದಾರೆ. ಪ್ರತಿ ವರ್ಷ ಅವರು ಸಿನಿಮಾ, ಜಾಹೀರಾತು ಮುಂತಾದ ಕೆಲಸಗಳಿಗೆ ಅಂದಾಜು 12 ಕೋಟಿ ರೂಪಾಯಿ ಸಂಬಳ ಪಡೆಯುತ್ತಾರೆ. 2023ರಲ್ಲಿ ಅವರ ಒಟ್ಟು ಆಸ್ತಿ ಮೊತ್ತ ಅಂದಾಜು 200 ಕೋಟಿ ರೂಪಾಯಿ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ.
ಇದನ್ನೂ ಓದಿ: Nysa Devgan: ಪಾಪರಾಜಿಗಳ ಜೊತೆ ನಿಸಾ ದೇವಗನ್ ನಡೆದುಕೊಂಡಿದ್ದು ಹೇಗೆ? ಮಗಳ ವರ್ತನೆ ಬಗ್ಗೆ ಕಾಜೋಲ್ ಪ್ರತಿಕ್ರಿಯೆ
ಇತ್ತೀಚೆಗೆ ಕಾಜೋಲ್ ಅವರು ಒಂದಷ್ಟು ವಿವಾದಗಳ ಮೂಲಕ ಸುದ್ದಿಯಾದರು. ತಾವು ನಟಿಸಿದ ‘ದಿ ಟ್ರಯಲ್’ ವೆಬ್ ಸರಣಿಯ ಪ್ರಚಾರಕ್ಕಾಗಿ ಅವರು ಸೋಶಿಯಲ್ ಮೀಡಿಯಾದಲ್ಲಿ ಗಿಮಿಕ್ ಮಾಡಿದ್ದು ಜನರಿಗೆ ಇಷ್ಟ ಆಗಲಿಲ್ಲ. ‘ಶಿಕ್ಷಣ ಪಡೆಯದ ರಾಜಕಾರಣಿಗಳು ನಮ್ಮನ್ನು ಆಳುತ್ತಿದ್ದಾರೆ’ ಎಂದು ಕಾಜೋಲ್ ಹೇಳಿಕೆ ನೀಡಿದ್ದು ಕೂಡ ವಿವಾದಕ್ಕೆ ಕಾರಣ ಆಗಿತ್ತು. ಹಳೆಯ ವಿಡಿಯೋವೊಂದರಲ್ಲಿ ಅವರು ಜನಾಂಗೀಯ ನಿಂದನೆ ಮಾಡುವಂತಹ ಪದ ಬಳಸಿದ್ದು, ಆ ವಿಡಿಯೋ ಮತ್ತೆ ವೈರಲ್ ಆಗಿದ್ದರಿಂದ ಭಾರಿ ಆಕ್ಷೇಪ ವ್ಯಕ್ತವಾಗಿತ್ತು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:57 am, Sat, 5 August 23