ಟೆಸ್ಲಾ ಸಂಸ್ಥೆಯ ಮುಖ್ಯಸ್ಥ ಎಲಾನ್ ಮಸ್ಕ್ ಟ್ವಿಟ್ಟರ್(twitter)ನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡ ಬಳಿಕ ಅನೇಕ ಬದಲಾವಣೆಗಳನ್ನು ಮಾಡಿದ್ದಾರೆ. ಸಂಸ್ಥೆಯ ಅಧಿಕಾರಿಗಳನ್ನು ತೆಗೆದು ಹಾಕಿದ್ದಾರೆ.ಜೊತೆಗೆ ‘ಬ್ಲೂ ಟಿಕ್‘ ಪಡೆಯಲು ಪ್ರತಿ ತಿಂಗಳು ನಿಗದಿತ ಮೂತ್ತವನ್ನು ನೀಡಬೇಕು ಎನ್ನುವ ವಿಚಾರವು ಕೇಳಿಬರುತ್ತಿದೆ. ಹೀಗಿರುವಾಗ ಕಂಗನಾ ರಣಾವತ್ ಸೈದ್ಧಾಂತಿಕವಾಗಿ ಟ್ವಿಟ್ಟರ್ನ ನೂತನ ಬದಲಾವಣೆಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ. ಟ್ವಿಟ್ಟರ್ ಇದೊಂದು ‘ಅತ್ಯುತ್ತಮ ಸಾಮಾಜಿಕ ಮಾಧ್ಯಮ’ ಎಂದು ಹೇಳಿದ್ದಾರೆ. ಟ್ವಿಟ್ಟರ್ ಖಾತೆಯನ್ನು ನಿರ್ವಹಿಸಲು ನಿರ್ದಿಷ್ಟ ಮೊತ್ತವನ್ನು ಪಾವತಿಸುವುದು ಅದರ ಸಮಗ್ರತೆಯನ್ನು ನಿರ್ವಹಿಸಲು ಸಹಾಯ ಮಾಡುತ್ತದೆ ಎಂದಿದ್ದಾರೆ.
ಕಂಗನಾ ರಣಾವತ್ ಅವರ ಟ್ವಿಟರ್ ಖಾತೆಯನ್ನು ಮೇ 2021 ರಂದು ಶಾಶ್ವತವಾಗಿ ಅಮಾನತುಗೊಳಿಸಲಾಗಿತ್ತು.
ಟ್ವಿಟರ್ ಈಗ ಇರುವ ಉತ್ತಮವಾದ ಮಾಧ್ಯಮ ಬ್ಲೂ ಟಿಕ್ ಪಡೆಯಲು ಹಣ ನೀಡುವುದು ಒಳ್ಳೆಯದು. ಜಗತ್ತಿನಲ್ಲಿ ಎಲ್ಲಿ ಕೂಡ ಉಚಿತ ಊಟಗಳಿಲ್ಲ, ನೀವು ಉಚಿತವಾಗಿ ಪ್ರವೇಶಿಸುವ ಸಾಮಾಜಿಕ ಜಾಲತಾಣವು ನಮ್ಮ ಡಾಟಾವನ್ನು ತೆಗೆದುಕೊಂಡು ಮಾರಾಟ ಮಾಡುತ್ತಾದೆ. ಇದರ ಬಗ್ಗೆ ಯೋಚಿಸಿದ್ದೀರಾ? ಎಂದು ಬರೆದುಕೊಂಡಿದ್ದಾರೆ.
ಕಂಗನಾ ಪ್ರಸ್ತುತ ಅಸ್ಸಾಂನಲ್ಲಿ ತಮ್ಮ ಮುಂಬರುವ ‘ಎಮರ್ಜೆನ್ಸಿ’ ಚಿತ್ರೀಕರಣದಲ್ಲಿದ್ದಾರೆ. ಈ ಚಿತ್ರದಲ್ಲಿ ಕಂಗನಾ ಮಾಜಿ ಪ್ರಧಾನ ಮಂತ್ರಿ ಇಂದಿರಾಗಾಂಧಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದ ಫಸ್ಟ್ ಲುಕ್ ಟೀಸರ್ ಬಿಡುಗಡೆಯಾಗಿದ್ದು. ಥೇಟ್ ಇಂದಿರಾಗಾಂಧಿ ರೀತಿಯೇ ಕಾಣುತ್ತಿದ್ದಾರೆ. ಇದನ್ನು ನೋಡಿ ಕಂಗನಾ ಎಲ್ಲೆಡೆ ಜನರ ಮೆಚ್ಚುಗೆಗೆ ಪಾತ್ರವಾಗುತ್ತಿದ್ದಾರೆ.ರಿಲೀಸ್ಗೂ ಮುನ್ನವೇ ದೊಡ್ಡ ಹೈಪ್ ಕ್ರಿಯೇಟ್ ಮಾಡಿದೆ. ಈ ಸಿನಿಮಾದಿಂದ ಅವರು ಗೆಲುವಿನ ಲಯಕ್ಕೆ ಮರಳಬಹುದು. ಇನ್ನು ಈ ಸಿನಿಮಾದಲ್ಲಿ ಅನುಪಮ್ ಖೇರ್, ಮಹಿಮಾ ಚೌಧರಿ, ವಿಶಾಕ್ ನಾಯರ್ ಮತ್ತು ಶ್ರೇಯಸ್ ತಲ್ಪಾಡೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಮತ್ತಷ್ಟು ಮನರಂಜನಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ;