ಜಾನ್ವಿ ಕಪೂರ್ ಬಾಯ್ ಫ್ರೆಂಡ್ ಯಾರು? ವದಂತಿಗಳಿಗೆ ಬ್ರೇಕ್ ಹಾಕಿದ ನಟಿ
ನಟಿ ಜಾನ್ವಿ ಕಪೂರ್ ಅವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಓರ್ಹಾನ್ ಅವತ್ರಮಣಿ ಎಂಬ ವ್ಯಕ್ತಿ ಜೊತೆ ಹೆಚ್ಚಾಗಿ ಕಾಣಿಸಿಕೊಳ್ಳುವುದರ ಜೊತೆಗೆ ರೂಮರ್ಸ್ಗಳಿಗೆ ನಾಂದಿ ಹಾಡಿದ್ದಾರೆ. ಜಾನ್ವಿ ಕಪೂರ್ ಅವರ ಬಾಯ್ ಫ್ರೆಂಡ್ ಆಗಿರಬಹುದು ಎಂಬ ವದಂತಿಗಳು ಎಲ್ಲೆಡೆ ಕೇಳಿಬರುತ್ತಿವೆ,

ಜಾನ್ವಿ ಕಪೂರ್ ಬಾಲಿವುಡ್ನಲ್ಲಿ(bollywood)ಗುರುತಿಸಿಕೊಂಡಿದ್ದಾರೆ. ಇನ್ನು ಇವರ ನಟನೆಯ ‘ಮಿಲಿ’ ಚಿತ್ರವು ಇತ್ತಿಚೀಗೆ ರಿಲೀಸ್ ಆಗಿದ್ದು. ನಟಿ ಚಿತ್ರದ ಪ್ರಮೋಷನ್ ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ. ಈ ಸಿನಿಮಾವು ಮಲಯಾಳಂ ಬ್ಲಾಕ್ ಬಸ್ಟರ್ ‘ಹೆಲನ್’ಚಿತ್ರದ ರಿಮೇಕ್ ಆಗಿದೆ. ಇನ್ನು ಈ ಚಿತ್ರವು ನಿರೀಕ್ಷಿಸಿದಷ್ಟು ಗೆಲುವು ಕಾಣುತ್ತಿಲ್ಲ.
ಜಾನ್ವಿ ಕಪೂರ್ ಸಿನಿಮಾ ರಿಲೀಸ್ ಆದ ಬೆನ್ನಲ್ಲೇ ಸಿನಿಮಾ ಬಗ್ಗೆ ಮಾತನಾಡುತ್ತಾ ಓರ್ಹಾನ್ ಅವತ್ರಮಣಿ ಯಾರು ಎಂಬ ಪ್ರಶ್ನೆಗೆ ಉತ್ತರ ನೀಡಿದ್ದಾರೆ. ಓರ್ಹಾನ್ ನನಗೆ ಹಲವು ವರ್ಷಗಳಿಂದ ಪರಿಚಯದಲ್ಲಿದ್ದಾರೆ. ಅಗತ್ಯದ ಸಮಯದಲ್ಲಿ ನನ್ನ ಹಿಂದೆ ನಿಂತುಕೊಳ್ಳುತ್ತಾರೆ. ಇಂತಹವರನ್ನು ಹುಡುಕುವುದು ಕಷ್ಟ ಅವರೊಬ್ಬ ಮಹಾನ್ ವ್ಯಕ್ತಿ ಎಂದು ಹೇಳುವ ಮೂಲಕ ಮಾತನ್ನು ಕೊನೆಗೊಳಿಸಿದರು.
ಅಷ್ಟಕ್ಕೂ ಅವತ್ರಮಣಿ ಒಬ್ಬ ಸಾಮಾಜಿಕ ಕಾರ್ಯಕರ್ತ ಎಂದು ಹೇಳಲಾಗುತ್ತಿದೆ. ತಮ್ಮ ಇನ್ಸ್ಟಾಗ್ರಾಮ್ ಪೇಜ್ನಲ್ಲಿ ಹಲವಾರು ಬಾಲಿವುಡ್ ತಾರೆಯರೊಂದಿಗೆ ಸ್ನೇಹಿತರಾಗಿದ್ದಾರೆ ಮತ್ತು ಫಾಲೋ ಮಾಡುತ್ತಿದ್ದಾರೆ. ಜೊತೆಗೆ ಹಲವಾರು ಪಾರ್ಟಿಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ.
ನಟಿ ಜಾನ್ವಿ ಕಪೂರ್ ಹುಟ್ಟು ಹಬ್ಬದಂದು ಓರ್ಹಾನ್ ನನ್ನ ಪ್ರೀತಿಯ ಕಪೂರ್ ಜೀವನದಲ್ಲಿ ನಿನಗೆ ಅತ್ಯುತ್ತಮವಾದದನ್ನು ಬಯಸುತ್ತೇನೆ. ಪ್ರಪಂಚವು ನೀಡುವ ಎಲ್ಲಾ ಪ್ರೀತಿ ಮತ್ತು ಸಂತೋಷವನ್ನು ನಾನು ನಿನಗೆ ಬಯಸುತ್ತೇನೆ. ದೇವರು ನಿನಗಾಗಿ ನೀಡಿರುವ ಅವಕಾಶದ ಬಾಗಿಲನ್ನು ಯಾರಿಂದಲೂ ಮುಚ್ಚಲು ಸಾಧ್ಯವಿಲ್ಲ. ನಿನ್ನನ್ನು ತುಂಬಾ ಪ್ರೀತಿಸುತ್ತೇನೆ . ‘ಲೈವ್, ಲಾಫ್, ಲವ್-ಓರಿ’ ಎಂದು ಓರ್ಹಾನ್ ಅವತ್ರಮಣಿ ಪೋಸ್ಟ್ ಮಾಡಿದ್ದಾರೆ.
ಮತ್ತಷ್ಟು ಮನರಂಜನಾ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:40 am, Mon, 7 November 22