‘ರಾಜಕೀಯ ವಿಚಾರಗಳ ಸಿನಿಮಾ ಮಾಡಲ್ಲ‘: ‘ಎಮರ್ಜೆನ್ಸಿ’ ಚಿತ್ರ ಮಾಡಿ ಸುಸ್ತಾದ ಕಂಗನಾ

| Updated By: ಮಂಜುನಾಥ ಸಿ.

Updated on: Jan 09, 2025 | 7:00 PM

Kangana Ranaut: ಕಂಗನಾ ರಣಾವತ್ ನಿರ್ದೇಶಿಸಿ ನಟಿಸಿರುವ "ಎಮರ್ಜೆನ್ಸಿ" ಚಿತ್ರದ ಟ್ರೇಲರ್ ಅಪಾರ ಜನಪ್ರಿಯತೆ ಗಳಿಸಿದೆ. ಚಿತ್ರದ ಬಿಡುಗಡೆಗೆ ಅವರು ಎದುರಿಸಿದ ಸವಾಲುಗಳು ಮತ್ತು ರಾಜಕೀಯ ವಿವಾದಗಳ ಬಗ್ಗೆ ಚರ್ಚಿಸಲಾಗಿದೆ. ಚಿತ್ರದ ಯಶಸ್ಸಿನ ಹೊರತಾಗಿಯೂ, ಭವಿಷ್ಯದಲ್ಲಿ ರಾಜಕೀಯ ಕಥಾವಸ್ತುಗಳನ್ನು ಆಧರಿಸಿದ ಚಿತ್ರಗಳನ್ನು ನಿರ್ಮಿಸದಿರಲು ಅವರು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ. ರಾಜಕೀಯ ಗೆಲುವಿನ ನಂತರ ಅವರ ಸಿನಿಮಾ ವೃತ್ತಿಜೀವನದ ಮೇಲೆ ಏನಾಗಲಿದೆ ಎಂಬುದು ಕುತೂಹಲಕಾರಿ.

‘ರಾಜಕೀಯ ವಿಚಾರಗಳ ಸಿನಿಮಾ ಮಾಡಲ್ಲ‘: ‘ಎಮರ್ಜೆನ್ಸಿ’ ಚಿತ್ರ ಮಾಡಿ ಸುಸ್ತಾದ ಕಂಗನಾ
Kangana Ranaut
Follow us on

ಕಂಗನಾ ರಣಾವತ್ ನಿರ್ದೇಶಿಸಿ, ನಟಿಸಿರುವ, ‘ಎಮರ್ಜೆನ್ಸಿ’ ಚಿತ್ರದ ಟ್ರೇಲರ್ ಇತ್ತೀಚೆಗೆ ರಿಲೀಸ್ ಆಗಿದೆ. ಇದು ಅನೇಕರಿಗೆ ಇಷ್ಟ ಆಗಿದೆ. ಪ್ರಿಯಾಂಕಾ ಗಾಂಧಿ ಕೂಡ ಈ ಟ್ರೇಲರ್ನ ಮೆಚ್ಚಿಕೊಂಡಿದ್ದಾರೆ. ಈ ಚಿತ್ರ ಪಕ್ಕಾ ರಾಜಕೀಯದ ಕಥೆ. ಈ ಚಿತ್ರವನ್ನು ಬಿಡುಗಡೆ ಮಾಡಲು ಕಂಗನಾ ಸಾಕಷ್ಟು ಸಂಕಷ್ಟ ಎದುರಿಸಬೇಕಾಯಿತು. ಈ ಕಾರಣಕ್ಕೆ ಅವರು ಮುಂದಿನ ದಿನಗಳಲ್ಲಿ ರಾಜಕೀಯದ ಬಗ್ಗೆ ಕಥೆ ಮಾಡದಿರಲು ನಿರ್ಧರಿಸಿದ್ದಾರೆ.

‘ಎಮರ್ಜೆನ್ಸಿ’ ಚಿತ್ರಕ್ಕೆ ಸೆನ್ಸಾರ್ ಮಂಡಳಿಯವರು ತಕರಾರರು ತೆಗೆದರು. ಸೆನ್ಸಾರ್ ಪ್ರಮಾಣಪತ್ರ ನೀಡಲು ಸಾಕಷ್ಟು ಆಟ ಆಡಿಸಿದರು. ಅತ್ತ ಪಂಜಾಬಿನ ಶಿರೋಮಣಿ ಅಕಾಲಿ ದಳದವರು ಕೂಡ ಈ ಚಿತ್ರದ ಬಗ್ಗೆ ವಿರೋಧ ಹೊರಹಾಕಿದರು. ಸಿಖ್ ಸಮುದಾಯಕ್ಕೆ ಚಿತ್ರದಿಂದ ಅವಮಾನ ಆಗಿದೆ ಎಂದು ಆರೋಪಿಸಿದರು. ಈಗ ಕಂಗನಾ ಮುಂದಿನ ಯೋಜನೆಗಳ ಬಗ್ಗೆ ಮಾತನಾಡಿದ್ದಾರೆ.

‘ನಾನು ಮತ್ತೊಮ್ಮೆ ರಾಜಕೀಯ ವಿಚಾರಗಳನ್ನು ಇಟ್ಟುಕೊಂಡು ಸಿನಿಮಾ ಮಾಡಲ್ಲ. ಒಂದು ಸಿನಿಮಾ ಮಾಡಲು ಸಾಕಷ್ಟು ಕಷ್ಟವಾಯಿತು. ಇದರಿಂದ ನನಗೆ ಯಾವುದೇ ಮೋಟಿವೇಷನ್ ಸಿಕ್ಕಿಲ್ಲ. ನಡೆದ ಕಥೆಯನ್ನು ಅದರಲ್ಲೂ ವ್ಯಕ್ತಗಳ ಬಗ್ಗೆ ಜನರು ಏಕೆ ಹೆಚ್ಚು ಸಿನಿಮಾ ಮಾಡಲ್ಲ ಅನ್ನೋದು ಈಗ ಗೊತ್ತಾಯಿತು. ಅನುಮಪ್ ಖೇರ್ ಅವರು ಆ್ಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್ ಸಿನಿಮಾ ಮಾಡಿದರು. ಇದು ಅವರ ಅತ್ಯುತ್ತಮ ಸಿನಿಮಾ. ಆದರೆ, ನಾನು ಈ ರೀತಿಯ ಸಿನಿಮಾಗಳನ್ನು ಮತ್ತೆ ಮಾಡಲ್ಲ’ ಎಂದಿದ್ದಾರೆ ಅವರು.

ಇದನ್ನೂ ಓದಿ:ಆಲಿಯಾ, ಕರಣ್ ವಿರುದ್ಧ ಸಿಟ್ಟು ಹೊರಹಾಕಿದ ನಟಿ, ಸಂಸದೆ ಕಂಗನಾ ರನೌತ್

‘ನಾನು ಎಂದಿಗೂ ಸೆಟ್ನಲ್ಲಿ ಟೆಂಪರ್ ಕಳೆದುಕೊಂಡಿಲ್ಲ. ನೀವೇ ನಿರ್ಮಾಪಕರಾದಾಗ ಸೆಟ್ನಲ್ಲಿ ತಾಳ್ಮೆ ಕಳೆದುಕೊಳ್ಳುತ್ತೀರಾ? ನಿರ್ದೇಶಕರಾದವರು ನಿರ್ಮಾಪಕರ ಜೊತೆ ಕಿತ್ತಾಡುತ್ತಾರೆ. ಆದರೆ, ಎರಡೂ ಕಾರ್ಯವನ್ನು ನೀವೇ ನಿರ್ವಹಿಸುತ್ತಿರುವಾಗ ಕೂಗಾಡಲು ಆಗಲ್ಲ’ ಎಂದಿದ್ದಾರೆ ಅವರು. ಈ ಚಿತ್ರಕ್ಕೆ ಕಂಗನಾ ಬಂಡವಾಳ ಕೂಡ ಹೂಡಿದ್ದಾರೆ.

ಕಂಗನಾ ರಣಾವತ್ ಅವರು ಈಗ ಸಂಸದೆ ಆಗಿದ್ದಾರೆ. ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಪರವಾಗಿ ನಿಂತು ಗೆಲುವು ಕಂಡಿದ್ದಾರೆ. ರಾಜಕೀಯದಲ್ಲಿ ಯಶಸ್ಸು ಕಂಡರೆ ಸಿನಿಮಾ ರಂಗ ಬಿಡೋದಾಗಿ ಹೇಳಿದ್ದರು. ಅದು ನಿಜವಾಗಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ. ಸದ್ಯ ಕಂಗನಾ ಅವರು ಯಾವುದೇ ಹೊಸ ಸಿನಿಮಾ ಘೋಷಣೆ ಮಾಡಿಲ್ಲ. ಇದು ಕೂಡ ಸಾಕಷ್ಟು ಅನುಮಾನ ಮೂಡಿಸಿದೆ. ‘ಎಮರ್ಜೆನ್ಸಿ’ ರಿಲೀಸ್ ಬಳಿಕ ಅವರ ಮುಂದಿನ ನಿರ್ಧಾರಗಳ ಬಗ್ಗೆ ತಿಳಿಯಲಿದೆ. ದಿಮ್ರಿ ಸಿನಿಮಾಗಳು, ತೃಪ್ತಿ ದಿಮ್ರಿ ವಿಡಿಯೋ, ತೃಪ್ತಿ ದಿಮ್ರಿ ಚಿತ್ರಗಳು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ