‘ಚಿತ್ರರಂಗ ಬಿಟ್ಟು ಹೋಗು ಅಂದಿದ್ದರು’: ಕರಣ್ ಜೋಹರ್, ಕೇತನ್ ಮೆಹ್ತಾ ಮೇಲೆ ಕಂಗನಾ ಆರೋಪ

|

Updated on: Aug 26, 2024 | 7:01 PM

ಅನೇಕ ಸಮಸ್ಯೆಗಳನ್ನು ಎದುರಿಸಿ ಸ್ಟಾರ್​ ನಟಿ ಆದವರು ಕಂಗನಾ ರಣಾವತ್​. ಈಗ ಅವರು ಸಂಸದೆ ಆಗಿಯೂ ಹೆಸರು ಮಾಡಿದ್ದಾರೆ. ಚಿತ್ರರಂಗಕ್ಕೆ ಕಾಲಿಟ್ಟ ಆರಂಭದಲ್ಲಿ ಕಂಗನಾಗೆ ಹಲವರ ವಿರೋಧ ಇತ್ತು. ಆ ಪೈಕಿ ಕೇತನ್​ ಮೆಹ್ತಾ, ಕರಣ್​ ಜೋಹರ್​ ಅವರ ಹೆಸರನ್ನು ಕಂಗನಾ ಈಗ ಹೇಳಿದ್ದಾರೆ. ಇದಕ್ಕೆ ಕೇತನ್​ ಮತ್ತು ಕರಣ್ ಅವರು ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಕಾದುನೋಡಬೇಕು.

‘ಚಿತ್ರರಂಗ ಬಿಟ್ಟು ಹೋಗು ಅಂದಿದ್ದರು’: ಕರಣ್ ಜೋಹರ್, ಕೇತನ್ ಮೆಹ್ತಾ ಮೇಲೆ ಕಂಗನಾ ಆರೋಪ
ಕರಣ್​ ಜೋಹರ್​, ಕಂಗನಾ ರಣಾವತ್​
Follow us on

ನಟಿ ಕಂಗನಾ ರಣಾವತ್​ ಅವರು ಈಗಾಗಲೇ ಅನೇಕ ಸೆಲೆಬ್ರಿಟಿಗಳನ್ನು ಎದುರುಹಾಕಿಕೊಂಡಿದ್ದಾರೆ. ಸಿನಿಮಾ ಫ್ಯಾಮಿಲಿಯ ಹಿನ್ನೆಲೆ ಇಲ್ಲದೇ ಬಂದ ಕಂಗನಾ ಚಿತ್ರರಂಗದಲ್ಲಿ ಸಾಕಷ್ಟು ಕಷ್ಟದ ದಿನಗಳನ್ನು ಕಂಡಿದ್ದಾರೆ. ಅವರಿಗೆ ಸರಿಯಾದ ಸಕ್ಸಸ್​ ಸಿಗಲು ಹಲವು ವರ್ಷಗಳೇ ಬೇಕಾದವು. ಆರಂಭದಲ್ಲಿ ಅವರಿಗೆ ಕೆಲವರು ಬೆದರಿಕೆ ಹಾಕಿದ್ದರು. ಚಿತ್ರರಂಗ ಬಿಟ್ಟು ಹೋಗುವಂತೆ ಸೂಚಿಸಿದ್ದರು. ಅದನ್ನೆಲ್ಲ ಈಗ ಕಂಗನಾ ರಣಾವತ್​ ನೆನಪಿಸಿಕೊಂಡಿದ್ದಾರೆ. ಕರಣ್​ ಜೋಹರ್​, ಕೇತನ್​ ಮೆಹ್ತಾ ಬಗ್ಗೆ ಕಂಗನಾ ಮಾತನಾಡಿದ್ದಾರೆ. ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನಲ್ಲಿ ಈ ವಿಚಾರಗಳ ಬಗ್ಗೆ ಅವರು ಮಾತಾಡಿದ್ದಾರೆ.

ಕರಣ್​ ಜೋಹರ್​ ಅವರನ್ನು ಕಂಗನಾ ಮೊದಲಿನಿಂದಲೂ ವಿರೋಧಿಸುತ್ತಲೇ ಬಂದಿದ್ದಾರೆ. ಹಿಂದಿ ಚಿತ್ರರಂಗದಲ್ಲಿ ನೆಪೋಟಿಸಂ ಹೆಚ್ಚಾಗಲೂ ಕರಣ್​ ಜೋಹರ್​ ಕಾರಣ ಎಂಬುದು ಕಂಗನಾ ಅವರ ವಾದ. ಅದು ನಿಜ ಕೂಡ ಹೌದು. ಅನೇಕ ಸ್ಟಾರ್​ ಕಿಡ್​ಗಳನ್ನು ಕರಣ್​ ಜೋಹರ್​ ಅವರು ಲಾಂಚ್ ಮಾಡಿದ್ದಾರೆ. ಹಾಗಾಗಿ ಅವರನ್ನು ಕಂಡರೆ ಕಂಗನಾ ರಣಾವತ್​ ಉರಿದು ಬೀಳುತ್ತಾರೆ.

ಇದನ್ನೂ ಓದಿ: ‘ಟೀಕೆಗೆಳಿಗೆ ತಕ್ಕ ಉತ್ತರ ಕೊಟ್ಟರು’; ಇಂದಿರಾ ಗಾಂಧಿ ಬಗ್ಗೆ ಮೆಚ್ಚುಗೆ ಸೂಚಿಸಿದ ಕಂಗನಾ ರಣಾವತ್

ಬಾಲಿವುಡ್​ನ ಖ್ಯಾತ ನಿರ್ದೇಶಕ ಕೇತನ್​ ಮೆಹ್ತಾ, ಕರಣ್​ ಜೋಹರ್​ ಮಂತಾದವರು ಕಂಗನಾ ರಣಾವತ್​ಗೆ ಚಿತ್ರರಂಗ ಬಿಟ್ಟುಹೋಗುವಂತೆ ಸೂಚಿಸಿದ್ದರಂತೆ. ಆ ವಿಚಾರವನ್ನು ಅವರು ‘ದೈನಿಕ್ ಭಾಸ್ಕರ್​’ಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಈಗ ಕಂಗನಾ ಅವರ ಇಮೇಜ್​ ಬದಲಾಗಿದೆ. ರಾಜಕೀಯದಲ್ಲಿ ಅವರು ಗೆಲುವು ಕಂಡಿದ್ದಾರೆ. ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಿಂದ ಸಂಸದೆಯಾಗಿ ಆಯ್ಕೆಯಾಗಿ ಕೆಲಸ ಮಾಡುತ್ತಿದ್ದಾರೆ.

ಇದನ್ನೂ ಓದಿ:  ‘ಎಮರ್ಜೆನ್ಸಿ’ ಟ್ರೇಲರ್: ಇಂದಿರಾ ಗಾಂಧಿ ಪಾತ್ರ ಮಾಡಿದ ಕಂಗನಾಗೆ ರಾಷ್ಟ್ರ ಪ್ರಶಸ್ತಿ ನಿರೀಕ್ಷಿಸಿದ ಫ್ಯಾನ್ಸ್

ವಿವಾದಗಳು ಕಂಗನಾ ರಣಾವತ್​ ಅವರಿಗೆ ಹೊಸದೇನೂ ಅಲ್ಲ. ಅವರು ಹೆಚ್ಚು ಹೆಚ್ಚು ವಿವಾದ ಮಾಡಿಕೊಂಡಷ್ಟೂ ಅವರ ವೃತ್ತಿಬದುಕು ಹಳ್ಳ ಹಿಡಿಯಿತು. ಕಳೆದ ಒಂದಷ್ಟು ವರ್ಷಗಳಿಂದ ಕಂಗನಾ ರಣಾವತ್​ ನಟಿಸಿದ ಯಾವುದೇ ಸಿನಿಮಾ ಕೂಡ ಗೆದ್ದಿಲ್ಲ. ಇನ್ನೇನು ಚಿತ್ರರಂಗದಲ್ಲಿ ಆಶಾದಾಯಕ ವಾತಾವರಣ ಇಲ್ಲ ಎನ್ನುವಾಗಲೇ ಅವರು ರಾಜಕೀಯಕ್ಕೆ ಕಾಲಿಟ್ಟರು. ಸದ್ಯಕ್ಕೆ ಕಂಗನಾ ನಟಿಸಿ, ನಿರ್ದೇಶಿಸಿದ ‘ಎಮರ್ಜೆನ್ಸಿ’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ಸಿನಿಮಾದಲ್ಲಿ ಕೂಡ ರಾಜಕೀಯ ಕಥಾಹಂದರ ಇದೆ. ಇಂದಿರಾ ಗಾಂಧಿ ಹೇರಿದ್ದ ತುರ್ತು ಪರಿಸ್ಥಿತಿ ಕುರಿತು ಈ ಸಿನಿಮಾ ಮೂಡಿಬಂದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.